ಸರ್ಕಾರದ ಮುಂದಿನ ನಡೆ ಬಗ್ಗೆ ಹೇಳಲು ನಾನು ಜ್ಯೋತಿಷ್ಯ ಓದಿಲ್ಲ ಎಂದು ಹೇಳಿದ ಉಪೇಂದ್ರ

0
546
upendra jyothishya

ಎಲ್ಲರ ಕಾಲು ಎಳೆಯುತ್ತದೆ ಕಾಲ. ಈ ಡೈಲಾಗ್ ನ ನಾವು ಉಪೇಂದ್ರ ಅವರ ಸಿನಿಮಾದಲ್ಲಿ ಕೇಳಿದ್ವಿ. ಹೌದು. ಮನುಷ್ಯ ಹೆಚ್ಚಾಗಿ ಯಾವತ್ತೂ ಮೆರೆಯಬಾರದು. ಆ ರೀತಿ ಮೆರೆದರೆ, ಒಂದಲ್ಲಾ ಒಂದು ದಿನ ಕೆಳಗೆ ಕುಸಿಯಬೇಕಾಗುತ್ತದೆ. ಯಾಕಂದ್ರೆ ಸಮಯ ಒಂದೇ ರೀತಿ ಇರುವುದಿಲ್ಲ. ಎಲ್ಲರ ಕಾಲು ಎಳೆಯುತ್ತದೆ ಕಾಲ ಎಂದು ಅವರೇ ಹೇಳಿದ್ದಾರೆ. ಈ ಮಾತನ್ನ ಕೇವಲ ಸಿನಿಮಾ ನೋಡುವ ಜನರು ಅರ್ಥ ಮಾಡಿಕೊಳ್ಳುವುದಕ್ಕೆ ಬಳಸಿದ್ದಾರೆ ಅಂತ ಎಲ್ಲರು ತಿಳಿದಿದ್ದರು. ಆದ್ರೆ ಇದರ ಬಗ್ಗೆ ಈಗ ಅರಿವಾಗುತ್ತದೆ. ಹೌದು. ಲೋಕಸಭಾ ಚುನಾವಣೆಯಲ್ಲಿ ಪ್ರಜಾಕೀಯ ಪಕ್ಷದಿಂದ ಸ್ಪರ್ಧಿಸಿದ್ದ ಉಪೇಂದ್ರ ಅವರನ್ನ ಜನರು ಕೈ ಬಿಟ್ಟರು. ಅದಾದ ನಂತರ ಅವರು, ತಮ್ಮ ಪಕ್ಷದ ಬಗ್ಗೆ ಎಲ್ಲೂ, ಏನು ಮಾತಾಡಲಿಲ್ಲ. ಆದ್ರೆ ಈಗ ಜನರು ಕೇಳುವ ಪ್ರಶ್ನೆಗೆ ಉತ್ತರ ನೀಡುತ್ತಿದ್ದಾರೆ. ಹೌದು. ಭವಿಷ್ಯ ನುಡಿಯಲು ನಾನು ಜ್ಯೋತಿಷ್ಯ ಓದಿಲ್ಲ ಎಂದು ಹೇಳುತ್ತಿದ್ದಾರೆ.

ಭವಿಷ್ಯ ನುಡಿಯಲು ನಾನು ಜ್ಯೋತಿಷ್ಯ ಓದಿಲ್ಲ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉಪೇಂದ್ರ ಅವರು ಸೋತ ಮೇಲೆ, ಅವರು ತಮ್ಮ ಪಕ್ಷದ ಕುರಿತು ಅಥವಾ ರಾಜಕೀಯದ ಕುರಿತು ಏನು ಮಾತಾಡಿರಲಿಲ್ಲ. ಆದ್ರೆ ಫಲಿತಾಂಶದ ಮರು ದಿನ ಒಂದು ಹೇಳಿಕೆ ಮಾತ್ರ ನೀಡಿದ್ದರು. ಹೌದು. ನಾವು ಗೆಲ್ಲೋದು ಮುಖ್ಯವಲ್ಲ. ಆದ್ರೆ ಜನರು ನಮ್ಮನ್ನು ಗುರುತಿಸಿದ್ದಾರೆ ಅನ್ನೋದು ಮುಖ್ಯ. ಅಷ್ಟು ಸಾಕು ನನಗೆ ಎಂದು ಹೇಳಿದ್ದರು. ಆದ್ರೆ ಈಗ ಜನರು ಕೇಳುವ ಪ್ರಶ್ನೆಗಳಿಗೆ ಉಪೇಂದ್ರ ಅವರು ತಮ್ಮ ಸಿನಿಮಾ ಡೈಲಾಗ್ ಗಳ ರೀತಿಯೇ ಉತ್ತರ ನೀಡುತ್ತಿದ್ದಾರೆ. ಹೌದು. ಈಗ ಸಿನಿಮಾದಲ್ಲಿ ಬ್ಯುಸಿಯಾಗಿರುವ ಉಪೇಂದ್ರ ಅವರನ್ನ ಜನರು , ಪ್ರಶ್ನೆ ಮಾಡಿದ್ದಾರೆ. ನಿಮ್ಮ ಪಕ್ಷದ ಸೋಲಿನ ಬಗ್ಗೆ ಹೇಳಿ, ಹಾಗೆ ಮುಂದೆ ಯಾವ ಪಕ್ಷ ಉಳಿಯಲಿದೆ ಎನ್ನುವದನ್ನ ತಿಳಿಸಿ ಎಂದಾಗ, ಉಪೇಂದ್ರ ಅವರು ನನ್ನ ಪಕ್ಷದ ಬಗ್ಗೆ ನಾನು ಹೇಳುತ್ತೇನೆ. ಆದ್ರೆ ಬೇರೆ ಪಕ್ಷದ ಬಗ್ಗೆ ಹೇಳಲು ನಾನು ಜ್ಯೋತಿಷ್ಯ ಓದಿಲ್ಲ ಎಂದು ಹೇಳಿದ್ದಾರೆ.

ಪಕ್ಷ ಮುಖ್ಯವಲ್ಲ, ದೇಶ ಅಭಿವೃದ್ಧಿಯಾಗುವುದು ಮುಖ್ಯ

ಜನರು ಕೇಳುವ ಪ್ರಶ್ನೆಗೆ ಸರಳವಾಗಿ ಉತ್ತರ ನೀಡಿದ ಉಪೇಂದ್ರ ಅವರು ಇನ್ನೂ ಕೆಲವು ಹೇಳಿಕೆಗಳನ್ನು ನೀಡಿದ್ದಾರೆ. ಹೌದು. ನಾನು ನನ್ನ ಪಕ್ಷದ ಬಗ್ಗೆ ಹೇಳಬಹುದು. ಆದ್ರೆ ಮುಂದೆ ಯಾವ ಸರ್ಕಾರ ಉಳಿಯಲಿದೆ ಎಂಬುದನ್ನ ಹೇಳುವುದಕ್ಕೆ ಆಗುವುದಿಲ್ಲ. ಯಾಕಂದ್ರೆ ನಾನು ಜ್ಯೋತಿಷ್ಯ ಓದಿಲ್ಲ. ಹಾಗಾಗಿ ಇದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಜೊತೆಗೆ, ನಮಗೆ ಯಾವ ಪಕ್ಷವು ಮುಖ್ಯವಲ್ಲ. ಯಾಕಂದ್ರೆ ನಮಗೆ ದೇಶ ಹಾಗೂ ರಾಜ್ಯ ಅಭಿವೃದ್ಧಿಯಾಗುವುದು ಮುಖ್ಯವಷ್ಟೆ. ಹೌದು. ಈಗ ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಆಡಳಿತ ನಡೆಸುತ್ತಿದೆ. 37 ಸ್ಥಾನ ಪಡೆದ ಪಕ್ಷ ಮೈತ್ರಿ ಮಾಡಿಕೊಂಡು ಸಂವಿಧಾನ ಬದ್ಧವಾಗಿಯೇ ಬಹುಮತ ಸ್ಪಷ್ಟಪಡಿಸಿ ಅಧಿಕಾರದ ಗದ್ದುಗೆ ಏರಿದೆ. ಹಾಗಾಗಿ ರಾಜ್ಯದ ಬಗ್ಗೆ ಸಂಪೂರ್ಣ ಜವಾಬ್ದಾರಿ ಅವರ ಮೇಲಿದೆ. ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರಾ, ಅಥವಾ ಇಲ್ಲವಾ ಎಂದು ನಾನು ಹೇಳುವುದಿಲ್ಲ. ಬದಲಿಗೆ ಜನರು, ಮತ್ತು ಮಾಧ್ಯಮದವರು ಹೇಳಬೇಕು ಎಂದು ತಿಳಿಸಿದ್ದಾರೆ.

ಪ್ರಜಾಕೀಯ ಕುರಿತು ಸಿನಿಮಾ ಮಾಡುವುದಿಲ್ಲ

ಇನ್ನೂ ಜನರು ಹಾಗೂ ಮಾಧ್ಯಮದವರು ಉಪೇಂದ್ರ ಅವರನ್ನ ಕೇಳಿದ ಪ್ರಶ್ನೆಗೆ ಅವರು ಕೆಲವು ಹೇಳಿಕೆಗಳ ಮೂಲಕ ಉತ್ತರ ನೀಡಿದ್ದಾರೆ. ಹೌದು. ನಿಮ್ಮ ಪ್ರಜಾಕೀಯ ಪಕ್ಷದ ಕುರಿತು ಸಿನಿಮಾ ಮಾಡುವ ಪ್ಲಾನ್ ಇದೆಯಾ ಎಂದು ಕೇಳಲಾಗಿದೆ. ಆದ್ರೆ ಉಪೇಂದ್ರ ಅವರು, ಯಾವುದೇ ಕಾರಣಕ್ಕೂ ನಾನು ಪ್ರಜಾಕೀಯ ಪಕ್ಷ ಕುರಿತು ಸಿನಿಮಾ ಮಾಡುವುದಿಲ್ಲ. ಯಾಕಂದ್ರೆ ಈಗಾಗಲೇ ವೈಯಕ್ತಿಕ ಧ್ಯೇಯೋದ್ದೇಶಗಳನ್ನು ನನ್ನ ಸಿನಿಮಾಗಳಲ್ಲಿ ತೋರಿಸಿದ್ದೇನೆ. ಆದರೆ ಪ್ರಜಾಕೀಯ ಪಕ್ಷದಲ್ಲಿ ಇದ್ದದ್ದು, ಬೇರೆಯೇ ಸಿದ್ದಂತಾಗಳು. ಅದನ್ನ ಮಾಡಿಯೇ ತೋರಿಸಬೇಕು. ಐನಿಮಾದಲ್ಲಿ ತೋರಿಸುವುದರಿಂದ ಯಾವ ಪ್ರಯೋಜನವಿಲ್ಲ. ಅಂತ ಸಮಯಕ್ಕಾಗಿ ನಾನು ಕಾಯುತ್ತಿದ್ದೇನೆ. ಸಮಯ ಬಂದರೆ, ನಾನು ನೇರವಾಗಿಯೇ ಆ ಕೆಲಸಗಳನ್ನ ಮಾಡಿ ತೋರಿಸುತ್ತೇನೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಉಪೇಂದ್ರ ಅವರು ಬುದ್ದಿವಂತ ಎನ್ನುವುದನ್ನ ಸಿನಿಮಾಗಳಲ್ಲಿ ಮಾತ್ರ ನೋಡಿ ನಾವು ತಿಳಿಯುವುದಕ್ಕಿಂತ, ನಿಜ ಜೀವನದಲ್ಲೂ ಅವರ ಮಾತುಗಳಿಂದ ತಿಳಿಯುತ್ತೇವೆ. ಯಾರೇ, ಎಷ್ಟೇ ಪ್ರಶ್ನೆಗಳನ್ನ ಕೇಳಿದರು, ಕೇವಲ ಒಂದೇ ಸಾಲಿನಲ್ಲಿ ಉತ್ತರ ಕೊಟ್ಟು ಮುಗಿಸುತ್ತಾರೆ.

LEAVE A REPLY

Please enter your comment!
Please enter your name here