ಉಪೇಂದ್ರ ಹಾಗೂ ಬಿರಾದರ್ ನಡುವೆ ಆಗಿದ್ದಂತಹ ಒಪ್ಪಂದವಾದ್ರೂ ಏನು?

0
980
upendra and biradar

ಕನ್ನಡದ ಕಿರುತೆರೆ ಕಾರ್ಯಕ್ರಮಗಳನ್ನ ಇತ್ತೀಚಿಗೆ ಎಲ್ಲರೂ ತುಂಬಾ ಇಷ್ಟ ಪಡ್ತಾರೆ. ಯಾಕಂದ್ರೆ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನ ನೀಡುತ್ತಿದ್ದಾರೆ. ಅದರಲ್ಲೂ ಶನಿವಾರ ಹಾಗೂ ಭಾನುವಾರ ಜೀ ವಾಹಿನಿಯಲ್ಲಿ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಅಂತೂ ಎಲ್ಲರ ಮನೆ ಮಾತಾಗಿದೆ. ಹೌದು. ವಾರದ ಕೊನೆ ಎರಡು ದಿನ ಬಂದ್ರೆ ಸಾಕು, ಎಲ್ಲರೂ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ನೋಡೋದ್ರಲ್ಲಿ ಬ್ಯುಸಿಯಾಗ್ಬಿಡ್ತಾರೆ. ಯಾಕಂದ್ರೆ ರಮೇಶ್, ಈ ಕಾರ್ಯಕ್ರಮಕ್ಕೆ ಸಾಧಕರನ್ನ ಕರೆಸಿ, ಅವರ ಬಗ್ಗೆ ಹಾಗೂ ಅವರು ಜೀವನದಲ್ಲಿ ಪಟ್ಟಿರುವ ಕಷ್ಟಗಳ ಬಗ್ಗೆ ಎಲ್ಲರ ಮುಂದೆ ತಿಳಿಸುತ್ತಾರೆ. ಹಾಗಾಗಿ ಜನರು ಈ ಕಾರ್ಯಕ್ರಮ ನೋಡಲು ವಾರಾಂತ್ಯದಲ್ಲಿ ಕಾಯುತ್ತಿರುತ್ತಾರೆ. ಅದರಂತೆ, ಕಳೆದ ಶನಿವಾರ ಕಾರ್ಯಕ್ರಮಕ್ಕೆ ಬಿರಾದರ್ ಬಂದಿದ್ದರು. ಅವರು ಕಾರ್ಯಕ್ರಮದಲ್ಲಿ  ತಮ್ಮ ನೋವು ಹಾಗೂ ನಲಿವುಗಳನ್ನ ಹಂಚಿಕೊಂಡರು. ಜೊತೆಗೆ ಉಪೇಂದ್ರ ಅವರ ಬಗೆಗಿನ ಕೆಲವು ಮಾತುಗಳನ್ನ ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪೇಂದ್ರ ಬಗ್ಗೆ ತಿಳಿಸಿದ ಬಿರಾದರ್

ಕಳೆದ ಶನಿವಾರ ವೀಕೆಂಡ್ ಟೆಂಟ್ ನ ಸಾಧಕರ ಆಸನದಲ್ಲಿ ವೈಜ್ಯನಾಥ್ ಬಿರಾದರ್ ಅವರು ಕುಳಿತಿದ್ದರು. ಕಾರ್ಯಕ್ರಮದಲ್ಲಿ ಅವರು ತಮ್ಮ ಜೀವನದಲ್ಲಿ ತಾವು ಅನುಭವಿಸಿದ ಸಂತಸದ ಕ್ಷಣ ಹಾಗೂ ನೋವಿನ ಕ್ಷಣಗಳನ್ನ ಎಲ್ಲರೊಂದಿಗೆ ಹಂಚಿಕೊಂಡರು. ಅದೇ ಸಮಯದಲ್ಲಿ ಉಪೇಂದ್ರ ಅವರ ಜೊತೆಗಿದ್ದ ಇವರ ಒಡನಾಟವನ್ನ ತಿಳಿಸಿದರು. ಹೌದು. ಒಂದು ಕಾಲದಲ್ಲಿ ಸಿನಿಮಾ ರಂಗಕ್ಕೆ ಇವರಿಬ್ಬರು ಹೊಸಬರು. ಆಗ ಉಪೇಂದ್ರ ಅವರು ಕಥೆ ಸಂಭಾಷಣೆ ಅಂತ ಓಡಾಡುತ್ತಿದ್ದರು. ಇತ್ತ ಬಿರಾದರ್ ಅವರು ಸಿನಿಮಾದಲ್ಲಿ ಯಾವುದಾದರು ಸಣ್ಣ ಪಾತ್ರ ಸಿಗಬಹುದಾ ಎಂದು ನೋಡುತ್ತಿದ್ದರು. ಇದೇ ಸಮಯದಲ್ಲಿ ಇವರು ಒಬ್ಬೊರಿಗೊಬ್ಬರು ಭೇಟಿಯಾಗುತ್ತಾರೆ. ನಂತರ ಇವರ ಭೇಟಿ ಸ್ನೇಹವಾಗಿ ಬದಲಾಗುತ್ತದೆ. ನಂತರ ಇವರು ಒಬ್ಬೊರಿಗೊಬ್ಬರು ಸಹಾಯದ ಬಗ್ಗೆ ಮಾತು ಕಥೆ ನಡೆಸುತ್ತಾರೆ.

ಒಬ್ಬೊರಿಗೊಬ್ಬರು ಸಹಾಯ ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದರು

ಒಮ್ಮೆ ಸಂಕೇತ್ ಸ್ಟುಡಿಯೋದಲ್ಲಿ ಭೇಟಿಯಾದ ಇವರಿಬ್ಬರ ನಡುವೆ ಸ್ನೇಹ ಬೆಳೆದು, ನಂತರ ಒಪ್ಪಂದ ಮಾಡಿಕೊಳ್ಳುವ ವರೆಗೂ ಬರುತ್ತದೆ. ಹೌದು. ಉಪೇಂದ್ರ ಅವರು ಬಿರಾದರ್ ಬಳಿ, ಒಂದು ಸಹಾಯ ಕೇಳುತ್ತಾರೆ. ಹೌದು. ನೀವು ನಟಿಸುವ ಯಾವುದಾದರು ಸಿನಿಮಾಗಳಿಗೆ ಬರಗಾರರು ಬೇಕಾದರೆ, ನನಗೆ ತಿಳಿಸಿ ಎಂದು ಕೇಳುತ್ತಾರೆ. ಅದೇ ಸಮಯಕ್ಕೆ ಬಿರಾದರ್ ಕೂಡ ಒಂದು ಸಹಾಯ ಕೇಳುತ್ತಾರೆ. ನಾನು ನಾಟಕಗಳಲ್ಲಿ ಅಭಿನಯಿಸುತ್ತೀದ್ದೇನೆ. ಹಾಗಾಗಿ ಯಾವುದಾದರು ಸಿನಿಮಾಗೆ ಹಾಸ್ಯ ನಟನ ಅವಶ್ಯಕತೆ ಇದ್ದರೆ ನನಗೆ ಹೇಳಿ ಎಂದು ಮನವಿ ಮಾಡಿಕೊಂಡರಂತೆ. ಈ ರೀತಿ ಒಬ್ಬೊರಿಗೊಬ್ಬರು ಒಪ್ಪಂದ ಮಾಡಿಕೊಂಡಿದ್ದರಂತೆ.

ತಮ್ಮ ಗುರುಗಳನ್ನ ಭೇಟಿ ಮಾಡಿದ ಉಪೇಂದ್ರ ಹಾಗೂ ಬಿರಾದರ್

ಉಪೇಂದ್ರ ಹಾಗೂ ಬಿರಾದರ್ ನಡುವೆ ಒಪ್ಪಂದ ಆದ ನಂತರ ಇವರಿಬ್ಬರ ಮೇಲೆ ಕಾಶೀನಾಥ್ ಅವರ ಕಣ್ಣು ಬೀಳುತ್ತದೆ. ಹೌದು. ಕಾಶೀನಾಥ್ ಅವರು ಇವರಿಬ್ಬರ ಕೈ ಹಿಡಿಯುತ್ತಾರೆ. ತಮ್ಮ ಸಿನಿಮಾದ ಕಥೆಗೆ ಹಾಗೂ ಸಂಗೀತಕ್ಕೆ ಉಪೇಂದ್ರ ಅವರಿಗೆ ಅವಕಾಶ ಮಾಡಿಕೊಟ್ಟರೆ, ಇತ್ತ ಅದೇ ಸಿನಿಮಾದಲ್ಲಿ ನಟಿಸಲು ಬಿರಾದರ್ ಅವರಿಗೆ ಅವಕಾಶ ಮಾಡಿಕೊಡುತ್ತಾರೆ. ಇದರಿಂದ ಆ ಒಂದು ಸಿನಿಮಾ ಮೂಲಕ, ತಮ್ಮ ಜೀವನದ ದಿಕ್ಕನ್ನೇ ಇವರಿಬ್ಬರು ಬದಲಾಯಿಸಿಕೊಳ್ಳುತ್ತಾರೆ. ಈ ರೀತಿಯಾಗಿ ತಮ್ಮ ಒಪ್ಪಂದವನ್ನ ಇವರು ಉಳಿಸಿಕೊಂಡೆವು ಎಂದು ಕಾರ್ಯಕ್ರಮದಲ್ಲಿ ಬಿರಾದರ್ ತಮ್ಮ ಮನದಾಳದ ಮಾತನ್ನ ಎಲ್ಲರೊಂದಿಗೆ ಹಂಚಿಕೊಂಡರು.

ಒಟ್ಟಿನಲ್ಲಿ ಇವರಿಬ್ಬರು ಯಾರಿಗೂ ಪರಿಚಯವೇ ಇಲ್ಲದಂತ ಸಮಯದಲ್ಲಿ ಮಾಡಿಕೊಂಡ ಒಪ್ಪಂದ ಹಾಗೂ ಸಹಾಯ ಈಗ ಅವರನ್ನ ಇಲ್ಲಿಯವರೆಗೂ ತಂದು ನಿಲ್ಲಿಸದೆ. ಒಂದು ಕಾಲದಲ್ಲಿ ಅವಕಾಶಕ್ಕಾಗಿ ಅಲೆಯುತ್ತಿದ್ದ ಇವರನ್ನ ಈಗ ಅವಕಾಶಗಳೇ ಹುಡುಕಿಕೊಂಡು ಬರುವಂತೆ ಆಗಿದೆ. ಇದನ್ನೇ ಸಾಧನೆ ಅನ್ನೋದು.

LEAVE A REPLY

Please enter your comment!
Please enter your name here