ಸಿಗಂಧೂರು ಸೇತುವೆ ನಿರ್ಮಾಣಕ್ಕಾಗಿ ಒಪ್ಪಿದ ಎರಡು ಸಂಸ್ಥೆಗಳು ಖರ್ಚಾದ ದುಡ್ಡಾದ್ರು ಎಷ್ಟು?

0
665

ಸಿಗಂದೂರು ಚೌಡೇಶ್ವರಿ ದೇವಾಲಯ ಅತ್ಯಂತ ಶಕ್ತಿಯುತವಾದ ದೇಗುಲ ಎನ್ನುವುದು ನಿಮಗೆಲ್ಲ ಗೊತ್ತೆ ಇದೆ. ಸಿಗಂದೂರು ಎನ್ನುವ ಗ್ರಾಮ ಮೂರು ಕಡೆಯಿಂದ ಹರಡುವ ನದಿಯಿಂದ ರೂಪಗೊಂಡಿದೆ. ಲಿಂಗಮಕ್ಕಿ ಡ್ಯಾಮ್ ಮತ್ತು ಶರಾವತಿ ನದಿ ಈ ಸಿಗಂದೂರಿನ ಮುಖ್ಯ ಸ್ಥಳಗಳಾಗಿವೆ. ಸಾಗರದಿಂದ ಸಿಗಂದೂರು 40 ಕಿಮಿ ದೂರದಲ್ಲಿದೆ. ಮೂರು ಕಡೆಯಲ್ಲಿ ನೀರಿನಿಂದ ಸಿಗಂದೂರು ಎನ್ನುವ ಊರು ತುಂಬಿಕೊಂಡಿದ್ದು, ಒಂದು ಜಾಗದಿಂದ ಮಾತ್ರ ರಸ್ತೆ ಸಾಗುತ್ತದೆ. ಶ್ರೀ ಚೌಡೇಶ್ವರಿ ದೇವಾಲಯವನ್ನು ಸಿಗಂದೂರು ಎಂದು ನಾಮಕರಿಸಲಾಗಿತ್ತು. ಈ ದೇವಸ್ಥಾನ 18 ನೆ ಶತಮಾನದಲ್ಲಿ ನಿರ್ಮಾಣವಾಗಿತ್ತು. ಸಿಗಂದೂರು ಕ್ಷೇತ್ರ ತುಮಾರಿ ಪ್ರದೇಶದ ಹತ್ತಿರ ಇದೆ. ತಾಯಿ ಚೌಡೇಶ್ವರಿಯನ್ನು ಸಿಗಂದೂರೇಶ್ವರಿ ಎಂದು ಕರೆಯುತ್ತಾರೆ. ಕಳ್ಳ-ಕಾಕರ ತೊಂದರೆಯಿಲ್ಲದೆ ಇಲ್ಲಿಯ ಜನ ಆರಾಮವಾಗಿ ಇರಬಹುದಾಗಿದೆ. ಕಳ್ಳರು ಬೇರೆಯವರ ಮನೆಯಿಂದ ವಸ್ತುವನ್ನು ಅಥವಾ ಹಣವನ್ನು ಕದ್ದರೆ. ದೇವಿ ಅವರನ್ನು ಸುಮ್ಮನೆ ಬಿಡುವುದಿಲ್ಲ ಕಳ್ಳರಿಗೆ ಸರಿಯಾದ ಶಿಕ್ಷೆ ಆ ದೇವಿ ನೀಡುತ್ತಾರೆ ಎನ್ನುವ ಪ್ರತೀತಿ ಇದೆ.

360 ಕೋಟಿಯಷ್ಟು ಹಣವನ್ನು ಸೇತುವೆ ನಿರ್ಮಾಣಕ್ಕಾಗಿ ಮೀಸಲಿಟ್ಟಿದ್ದಾರೆ

ದೇವಸ್ಥಾನದ ಒಂದು ಆವರಣದಲ್ಲಿ ಇಲ್ಲಿ ದೇವಿಯ ರಕ್ಷಣೆ ಇದೆ ಎನ್ನುವ ಫಲಕ ನಿಮಗೆ ಕಾಣುತ್ತದೆ. ಈ ಫಲಕ ಸುತ್ತ ಮುತ್ತ ಏನಾದರು ದರೋಡೆಯಾದರೆ ಆ ಕಳ್ಳನಿಗೆ ತಕ್ಕ ಶಾಸ್ತಿ ಆಗೇ ಆಗುತ್ತದೆ. ಶ್ರೀ ಶ್ರೀಧರ ಸ್ವಾಮಿ ಒಂದು ಬಾರಿ ಸಿಗಂದೂರಿಗೆ ಭೇಟಿ ನೀಡಿದ್ದು, ಉಗ್ರ ಸ್ವರೂಪಿಯಿಂದ ಮೃಧು ಸ್ವರೂಪಿ ಮತ್ತು ಸೌಮ್ಯಸ್ವರೂಪಿಗೆ ಬದಲಾಗುವ ಹಾಗೆ ದೇವಿಯಲ್ಲಿ ಪ್ರಾರ್ಥಿಸಿಕೊಳ್ಳುತ್ತಾರೆ. ಭಕ್ತಾದಿಗಳನ್ನು ನೀನೆ ಕಾಪಾಡಬೇಕು ದೇವಿ ಎಂದು ದೇವಿಯನ್ನು ಆರಾಧಿಸಿದ್ದರು. ವೀರಭದ್ರ ಘಾಟ್ಸ್, ಶನೇಶ್ವರ ಮತ್ತು ರಕ್ತೇಶ್ವರಿ ದೇವಾಲಯವನ್ನು ನೀವು ನೋಡಬಹುದಾಗಿದೆ. ಈಗ ಸಿಗಂದೂರು ಸೇತುವೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಸುಮಾರು 360 ಕೋಟಿಯಷ್ಟು ಹಣವನ್ನು ಸೇತುವೆ ನಿರ್ಮಾಣಕ್ಕಾಗಿ ಮೀಸಲಿಟ್ಟಿದ್ದಾರೆ. ಹಣದ ಖರ್ಚನ್ನು ನೋಡಿಕೊಳ್ಳಲು ಮಧ್ಯಪ್ರದೇಶದ ದಿಲೀಪ್ ಬಿಲ್ಡ್ ಖಾನ್ ಲಿಮಿಟೆಡ್ ಮತ್ತು ಚೀನಾ ದೇಶದ ರೋಡ್ ಬ್ರಿಡ್ಜ್ ಸಂಸ್ಥೆಯವರು ಒಪ್ಪಿಕೊಂಡಿದ್ದಾರೆ.

ಮೂಲ ಸೌಕರ್ಯದ ಕೊರತೆಯಿಂದ ಮುಕ್ತರಾಗುತ್ತಾರೆ

ಈ ಕಂಪನಿಗಳಿಗೆ ರಾಷ್ತ್ರೀಯ ಹೆದ್ದಾರಿ ಹಾಗು ಒಳನಾಡು ಜಲಸಾರಿಗೆ ಇಲಾಖೆಯಿಂದ ಹಸಿರು ಚಿಹ್ನೆ ಸಿಗಬೇಕಿದೆ. ಈ ಹಿಂದೆ ಸಿಗಂದೂರು ಸೇತುವೆ ನಿರ್ಮಾಣ ಮಾಡಬೇಕೆಂದು ಯಡಿಯೂರಪ್ಪ 2009 ರಲ್ಲಿ ಆದೇಶವನ್ನು ನೀಡಿದ್ದರು. ಆದರೆ ಸರ್ಕಾರ ಬದಲಾದ ಕಾರಣದಿಂದಾಗಿ ಅದು ಕಾರ್ಯರೂಪಕ್ಕೆ ಬರಲಿಲ್ಲ.

2018 ಫೆಬ್ರವರಿ 19 ರಂದು ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರು ಕಾಮಗಾರಿಕೆಗೆ ಚಾಲನೆಯನ್ನು ನೀಡಿದ್ದರು. ವರ್ಷದ ಕೊನೆಯಲ್ಲಿ ಕಾಮಗಾರಿ ಶುರುವಾಗುವ ಎಲ್ಲ ಲಕ್ಷಣಗಳು ಇವೆ. ಇದರಿಂದ ಬಹಳ ಜನರಿಗೆ ಉಪಯೋಗವಾಗುತ್ತದೆ. ಈ ಕ್ಷೇತ್ರದ ಹಲವು ಭಾಗದ ಜನರಿಗೆ ಮೂಲ ಸೌಕರ್ಯದ ಕೊರತೆಯಿಂದ ಮುಕ್ತರಾಗುತ್ತಾರೆ. ಇನ್ನು ಹಲವಾರು ಸಮಸ್ಯೆಯಿಂದ ಪಾರಾಗುತ್ತಾರೆ.

LEAVE A REPLY

Please enter your comment!
Please enter your name here