ಎಲ್ಲವನ್ನು ಮೀರಿ ನಾನು ಶಬರಿಮಲೆಗೆ ಭೇಟಿ ನೀಡುತ್ತೇನೆ – ತೃಪ್ತಿ ದೇಸಾಯಿ

0
280
trupti desayi

ನವಂಬರ್-ಡಿಸಂಬರ್ ಬಂತು ಅಂದ್ರೆ ಸಾಕು ಅಯ್ಯಪ್ಪನ ನಾದಮಯ ಕೇಳುತ್ತಲೇ ಇರುತ್ತದೆ. ಹೌದು. ನವಂಬರ್ ನಿಂದ ಜನವರಿಯವರೆಗೂ ಅಯ್ಯಪ್ಪ ಸ್ವಾಮಿಯ ಭಕ್ತರು ಮಾಲೆ ಹಾಕಿ, ಸ್ವಾಮಿ ಅಯ್ಯಪ್ಪನ ದರ್ಶನ ಪಡೆಯುತ್ತಾರೆ. ಇನ್ನು ಕೆಲವರು ಮಕರ ಜ್ಯೋತಿ ವರೆಗೂ ಕಾದು, ನಂತರ ತಮ್ಮ ಮಾಲೆಯನ್ನು ತೆಗೆಯುತ್ತಾರೆ. ಈ ರೀತಿ ಅನೇಕ ವರ್ಷಗಳಿಂದಲೂ ಶಾಂತಿಯಿಂದ ನಡೆದುಕೊಂಡು ಬರುತ್ತಿರುವ ಆಚರಣೆಯಲ್ಲಿ ಕಳೆದ ವರ್ಷದಿಂದ ಬೆಂಕಿ ಎದ್ದಿದೆ. ಆ ಬೆಂಕಿಗೆ ಈಗ ಮತ್ತಷ್ಟು ಪುಷ್ಟಿ ನೀಡಲು ಕೆಲವು ಮಹಿಳೆಯರು ಸಿದ್ಧರಾಗಿದ್ದಾರೆ. ಅವರಲ್ಲಿ ತೃಪ್ತಿ ದೇಸಾಯಿ ಕೂಡ ಒಬ್ಬರಾಗಿದ್ದಾರೆ. ಹೌದು. ನಾನು ಶಬರಿಮಲೆಗೆ ಭೇಟಿ ನೀಡುತ್ತೇನೆ ಎಂದು ಮಹಿಳಾ ಹಕ್ಕುಗಳ ಹೋರಾಟಗಾರ್ತಿಯಾದ ತೃಪ್ತಿ ದೇಸಾಯಿ ತಿಳಿಸಿದ್ದಾರೆ.

ನಾನು ಶಬರಿಮಲೆಗೆ ಭೇಟಿ ನೀಡುತ್ತೇನೆ – ತೃಪ್ತಿ ದೇಸಾಯಿ

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲುಗಳು ಇವತ್ತಿನಿಂದ ತೆರೆಯುತ್ತಿವೆ. ಇನ್ನು ಅಯ್ಯಪ್ಪನ ಭಕ್ತರು ವರ್ಷಪೂರ್ತಿ ಈ ಸಮಯಕ್ಕಾಗಿ ಕಾದು, ಮಾಲೆ ಧರಿಸಿ, ಅಯ್ಯಪ್ಪನ ದರ್ಶನ ಪಡೆಯುತ್ತಾರೆ. ಆದರೆ ಕಳೆದ ವರ್ಷದಿಂದ ಅಯ್ಯಪ್ಪ ಸ್ವಾಮಿ ದರ್ಶನದ ವಿಚಾರಾಗಿ ಅನೇಕ ಗಲಭೆಗಳು ನಡೆಯುತ್ತಿವೆ. ಹೌದು. ಹೆಣ್ಣುಮಕ್ಕಳಿಗೂ ಸಹ ದೇಗುಲದ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಆಗ ಒಂದು ಬಾರಿ ಗಲಭೆ ನಡೆದಿತ್ತು. ಆದರೆ ಈ ಬಾರಿ ಶಾಂತಿಯುತವಾಗಿರುತ್ತದೆ ಎನ್ನುವಷ್ಟರಲ್ಲಿ, ಅದಕ್ಕೆ ತೃಪ್ತಿ ದೇಸಾಯಿ ಕೆಲವು ಹೇಳಿಕೆಗಳನ್ನು ನೀಡಿದ್ದಾರೆ. ಹೌದು. ನಾನು ಈ ಬಾರಿ ಅಯ್ಯಪ್ಪನ ದರ್ಶನ ಮಾಡೇ ಮಾಡುತ್ತೇನೆ. ಅದನ್ನು ಯಾರಿಂದವು ತಡೆಯಲು ಸಾಧ್ಯವಿಲ್ಲ. ಎಲ್ಲವನ್ನು ಮೀರಿ ನಾನು ಹೋಗಲು ಸಿದ್ಧಳಿದ್ದೇನೆ ಎಂದು ತೃಪ್ತಿ ದೇಸಾಯಿ ತಿಳಿಸಿದ್ದಾರೆ.

ಸರ್ಕಾರ ರಕ್ಷಣೆ ಕೊಡದಿದ್ದರೂ ನಾನು ಹೋಗುತ್ತೇನೆ

ಇನ್ನು ತೃಪ್ತಿ ಸರ್ಕಾರದ ವಿಚಾರವಾಗಿಯೂ ಸಹ ಕೆಲವೊಂದು ಮಾತುಗಳನ್ನಾಡಿದ್ದಾರೆ. ನಾನು ಶಬರಿಮಲೆಗೆ ಹೋಗುವುದು ಖಂಡಿತ. ಇದರ ವಿಚಾರವಾಗಿ ನನಗೆ ಸರ್ಕಾರ ರಕ್ಷಣೆ ಕೊಡಲಿ ಅಥವಾ ಬಿಡಲಿ ನಾನು ಹೋಗೆ ಹೋಗುತ್ತೇನೆ. ಅಲ್ಲದೆ. ನಾನು ಸರ್ಕಾರಕ್ಕೆ ಈಗಾಗಲೇ ತಿಳಿಸಿದ್ದೇನೆ. ನಾನು ಶಬರಿಮಲೆಗೆ ಬರುತ್ತೀದ್ದೇನೆ. ನನಗೆ ರಕ್ಷಣೆ ಕೊಡಿ ಎಂದು ಕೇಳಿದ್ದಾನೆ. ಆದರೆ ಅದಕ್ಕೆ ಕೇರಳ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸರ್ಕಾರ ನನಗೆ ರಕ್ಷಣೆ ಕೊಡಲಿ ಅಥವಾ ಬಿಡಲಿ ನಾನು ದೇಗುಲ ಪ್ರವೇಶ ಮಾಡುತ್ತೇನೆ ಎಂದು ತೃಪ್ತಿ ದೇಸಾಯಿ ಹೇಳಿದ್ದಾರೆ.

ಕಳೆದ ಬಾರಿಯ ಗಲಭೆಗೆ ಮತ್ತಷ್ಟು ಪುಷ್ಟಿ

ಶಬರಿಮಲೆಗೆ ಮಹಿಳೆಯರ ಪ್ರವೇಶದ ವಿಚಾರವಾಗಿ ಸುಪ್ರೀಂ ಕೋರ್ಟ್ ಕಳೆದ ವರ್ಷ ನೀಡಿದ ತೀರ್ಪಿನಿಂದ ಬಹಳಷ್ಟು ಗಲಭೆಗಳು ನಡೆದಿದ್ದವು. ಹೌದು. ಕಳೆದ ವರ್ಷ ಇಬ್ಬರು ಮಹಿಳೆಯರು, ಯಾರಿಗೂ ಸಣ್ಣ ಸೂಚನೆಯು ಬಾರದಂತೆ, ಪೋಲೀಸರ ರಕ್ಷಣೆಯಲ್ಲಿ ಅಯ್ಯಪ್ಪನ ದರ್ಶನ ಮಾಡಿದ್ದರು. ಆಗಲೇ ದೊಡ್ಡ ಗಲಭೆ ನಡೆದಿತ್ತು. ಜೊತೆಗೆ ಭಕ್ತರಿಗೂ ಹಾಗು ಪೊಲೀಸರಿಗೂ ಮಾರಾಮಾರಿ ನಡೆದು, ಎಲ್ಲರು ಕೇರಳ ಸರ್ಕಾರದ ವಿರುದ್ಧ ನಿಂತಿದ್ದರು. ಈಗ ಅದೇ ರೀತಿ ಸಂಭವ ಎದುರಾಗಬಹುದು ಎನ್ನುವ ನಿಟ್ಟಿನಲ್ಲಿ, ಕೇರಳ ಸರ್ಕಾರ ಒಂದು ನಿರ್ಧಾರ ತೆಗೆದುಕೊಂಡಿದೆ. ಹೌದು. ಈ ಬಾರಿಯ ಅಯ್ಯಪ್ಪ ದೇಗುಲದ ಮಹಿಳಾ ಪ್ರವೇಶದ ವಿಚಾರದಲ್ಲಿ ನಾವು ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದೆ.

ಒಟ್ಟಿನಲ್ಲಿ ಕಳೆದ ವರ್ಷದ ಗಲಭೆಗೆ ಮತ್ತಷ್ಟು ಪುಷ್ಟಿ ನೀಡಲು ತೃಪ್ತಿ ದೇಸಾಯಿ ಮುಂದಾಗಿದ್ದಾರೆ. ಹಾಗಾಗಿ ನಾನು ಶಬರಿಮಲೆಗೆ ಹೋಗೆ ಹೋಗುತ್ತೇನೆ ಎಂದು ಇವರು ಹೇಳಿದ್ದಾರೆ. ಆದರೆ ಇವರ ಪ್ರವೇಶವನ್ನು ಜನರು ಹೇಗೆ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here