ಪ್ರವಾಹ ಪೀಡಿತ ಜನರ ಕಷ್ಟಕ್ಕೆ ನೆರವಾದ ಮಂಗಳ ಮುಖಿಯರು

0
784

ಜನರು ಮಂಗಳ ಮುಖಿಯರನ್ನು ಬೇರೆ ಒಂದು ರೀತಿಯಲ್ಲಿ ನೋಡುತ್ತಾರೆ. ಹಾಗೆ ಹುಟ್ಟಿರುವುದು ಅವರ ತಪ್ಪಲ್ಲ. ಸೃಷ್ಟಿಕರ್ತನ ತಪ್ಪೋ ಅಥವಾ ವಿಧಿಯ ಕೈವಾಡವೊ ಒಂದು ಗೊತ್ತಿಲ್ಲ. ಪರಿವಾರ ಮತ್ತು ಜನರಿಂದ ದೂರ ಉಳಿದರು ತಮ್ಮ ಜೀವನವನ್ನು ಕಷ್ಟ ಪಟ್ಟು ನಡೆಸುತ್ತಿದ್ದಾರೆ. ಟ್ರಾಫಿಕ್ ಸಿಗ್ನಲ್ ನಲ್ಲಿ, ರೈಲ್ವೆ ಸ್ಟೇಷನ್ ನಲ್ಲಿ ಜನರ ಹತ್ತಿರ ದುಡ್ಡನ್ನು ಸಂಗ್ರಹಣೆ ಮಾಡಿ ತಮ್ಮದೆಯಾದ ಗುಂಪನ್ನು ಕಟ್ಟಿಕೊಂಡು ಜೀವನದಲ್ಲಿ ಹೋರಾಡುತ್ತಿದ್ದಾರೆ. ದಾವಣಗೆರೆ ಊರಿನಲ್ಲಿ ನೆಲಸಿರುವ ಮಂಗಳ ಮುಖಿಯರು ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ.

ಪ್ರವಾಹ ಪೀಡಿತ ಜನರ ಕಷ್ಟಕ್ಕೆ ನಿಂತ ಮಂಗಳ ಮುಖಿಯರು

ಮಂಗಳಮುಖಿಯರು ಪ್ರವಾಹ ಪೀಡಿತ ಜನರ ಕಷ್ಟವನ್ನು ನೋಡಲಾರದೆ ಸಹಾಯಕ್ಕೆ ನೆರವಾಗಿದ್ದಾರೆ. ಇಂದು ದಾವಣಗೆರೆಯ ಮಹಾನಗರ ಪಾಲಿಕೆಯ ಮುಂಭಾಗದ ಪ್ರದೇಶದಲ್ಲಿ ದೇಣಿಗೆ ಡಬ್ಬಿಗಳನ್ನು ಇಟ್ಟುಕೊಂಡು ಉತ್ತರ ಕರ್ನಾಟಕದ ಜನರ ಕಷ್ಟಕ್ಕೆ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಮಂಗಳ ಮುಖಿಯರು ತಮ್ಮ ಜೀವನವನ್ನು ನಡೆಸುವುದೆ ಕಠಿಣವಾಗಿದೆ. ಅಂತಹದರಲ್ಲಿ ಇವರು ನೆರಸಂತ್ರಸ್ತರ ನೆರವಿಗೆ ನಿಂತಿದ್ದಾರೆ, ಎಂದರೆ ಇವರಲ್ಲಿ ಮಾನವೀಯತೆ ಮತ್ತು ರಾಜ್ಯದ ಬಗ್ಗೆ ಇರುವ ಕಾಳಜಿ, ಅನುಕಂಪ, ಪ್ರೀತಿ ಎಷ್ಟು ಇದೆ ಎಂಬುದು ಇದರಿಂದಾನೆ ನಮಗೆ ಗೊತ್ತಾಗುತ್ತದೆ. ಮಾನವೀಯತೆ ಇರದ ಮನುಷ್ಯ ಬದುಕಿದ್ದರು ಸತ್ತಂತೆಯೆ. ರಾಜ್ಯದ ಜನತೆಯು ಸಹ ಇವರ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ.

ಪ್ರವಾಹದ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟು ವಸ್ತುಗಳನ್ನು ವಿತರಿಸಲಿದ್ದಾರೆ

ಎರಡು ದಿನಗಳ ಕಾಲ ದೇಣಿಗೆ ಸಂಗ್ರಹಿಸಲಿದ್ದು, ಇದರಲ್ಲಿ ಬಂದ ಹಣದಿಂದ ಸಂತ್ರಸ್ತರಿಗೆ ಬೇಕಾಗುವ ಅಗತ್ಯವಾದ ವಸ್ತುಗಳನ್ನ ಖರೀದಿಸಿ ಸ್ವತಃ ತಾವೆ ಪ್ರವಾಹದ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟು ವಸ್ತುಗಳನ್ನು ವಿತರಿಸಲಿದ್ದಾರೆ. ಕರ್ನಾಟಕದಲ್ಲಿ ಧಾರಾಕಾರವಾದ ಮಳೆ ಸುರಿದ ಕಾರಣದಿಂದಾಗಿ ಜನರು ಪರದಾಡುತ್ತಿದ್ದಾರೆ. ಇನ್ನು ಪ್ರವಾಹ ಪೀಡಿತ ಪ್ರದೇಶದ ಜನರ ಕಷ್ಟ ಊಹಿಸಿಕೊಳ್ಳುವುದಕ್ಕು ಸಾಧ್ಯವಿಲ್ಲ. ಮಲೆನಾಡು ಮತ್ತು ಇನ್ನಿತರ ರಾಜ್ಯಗಳಲ್ಲಿ ವರುಣನ ಆರ್ಭಟ ಜೋರಾಗಿದೆ.

ಗಣ್ಯ ವ್ಯಕ್ತಿಗಳಿಂದ ಸಹಾಯ

ಮಳೆಯಿಂದಾಗಿ ಜನರು ಸರಿಯಾಗಿ ರಸ್ತೆಯಲ್ಲಿ ಹೋಗಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಗಳಲ್ಲಿ ನೀರು ನುಗ್ಗಿದ್ದು, ಜನರು ಅಪಾಯದಲ್ಲಿ ಸಿಲುಕಿಕೊಂಡಿದ್ದರು. ಬೆಳಗಾವಿ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಹಾವೇರಿ, ಕೊಡಗು, ಬಾಗಲಕೋಟೆ, ಹಾಸನ ಮತ್ತು ರಾಯಚೂರು ಜಿಲ್ಲೆಗಳಲ್ಲಿ ನದಿಗಳು ತುಂಬಿ ಹರಿಯುತ್ತಿದೆ. ಅನೇಕ ಸ್ಟಾರ್ ನಟರು ಮತ್ತು ರಾಜ್ಯದ ಗಣ್ಯ ವ್ಯಕ್ತಿಗಳು ನೆರವಿಗೆ ನಿಂತಿದ್ದು, ಆರ್ಥಿಕ ಸಹಾಯವನ್ನು ಮಾಡಿದ್ದರು. ಅನೇಕ ಸಂಘ ಸಂಸ್ಥೆಗಳು ಪರಿಹಾರ ನಿಧಿಗೆ ಹಣವನ್ನು ತಲುಪಿಸಿದ್ದು, ಇದರಿಂದ ಜನರಿಗೆ ಬಹಳ ಉಪಯೋಗವಾಗಿದೆ.

LEAVE A REPLY

Please enter your comment!
Please enter your name here