ವಾಹನ ಚಾಲಕರ ಕಷ್ಟಕ್ಕೆ ಸ್ಪಂದಿಸಿದ ಸಂಚಾರಿ ಪೊಲೀಸ್ ಅಧಿಕಾರಿಗಳು

0
749

ಪ್ರವಾಹದಿಂದ ಉತ್ತರ ಕರ್ನಾಟಕ ಸೇರಿದಂತೆ ಮಲೆನಾಡಿನ ಪ್ರದೇಶದ ಜನರು ತತ್ತರಿಸಿ ಹೋಗಿದ್ದಾರೆ. ಮಳೆಯಿಂದಾಗಿ ಸೇತುವೆಗಳು, ರಸ್ತೆಗಳು ರದ್ದಾಗಿ ಹೋಗಿದೆ. ವಾಹನಗಳು ಚಲಿಸಬೇಕಾದ ಮಾರ್ಗಗಳು ಹದಗೆಟ್ಟಿದೆ. ಊರಿನ ಜನರು ಸಹ ಊಟಕ್ಕಾಗಿ ಮತ್ತು ವಾಸಿಸುವುದಕ್ಕೆ ಸರಿಯಾದ ಜಾಗ ಸಿಗದೆ ಪರದಾಡುತ್ತಿದ್ದಾರೆ. ಇಡಿ ರಾಜ್ಯದ ಜನತೆ ಪ್ರವಾಹ ಪೀಡಿತ ಜನರ ಕಷ್ಟಕ್ಕೆ ನೆರವಾಗಿ ನಿಂತಿದ್ದು, ಜನರು ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಪರಿಸ್ಥಿತಿ ಸಹಜವಾಗಿ ಎಂದಿನಂತೆ ರೂಪಗೊಂಡಿದೆ. ಆದರೂ ವರುಣನ ಆರ್ಭಟ ಮಾತ್ರ ಕಡಿಮೆಯಾಗಿಲ್ಲ. ರಸ್ತೆಗಳು ಬ್ಲಾಕ್ ಆಗಿವೆ, ಜನರಿಂದ ವಾಹನಗಳು ಚಲಿಸುವುದಕ್ಕು ಆಗುತ್ತಿಲ್ಲ. ಬಹಳ ಕಠಿಣವಾದ ಸಂದರ್ಭವನ್ನು ಜನರು ಎದುರಿಸುತ್ತಿದ್ದಾರೆ.

ಗುಂಡಿಗಳನ್ನ ಮುಚ್ಚಿಸಿದ ಸಂಚಾರಿ ಪೊಲೀಸ್ ಅಧಿಕಾರಿಗಳು

ಪೊಲೀಸ್ ಅಧಿಕಾರಿಗಳು ಸಮಾಜದ ಹಿತದೃಷ್ಟಿಗಾಗಿ ತಮ್ಮ ಕರ್ತವ್ಯದ ಜೊತೆಗೆ ಸಮಾಜ ಸೇವೆಯನ್ನು ಸಹ ಮಾಡಿದ್ದಾರೆ. ವಿಪರೀತ ಮಳೆಯಿಂದಾಗಿ ರಸ್ತೆಯಲ್ಲಿ ಗುಂಡಿಗಳ ಸಂಖ್ಯೆ ವ್ಯಾಪಕವಾಗುತ್ತ ಹೋಗುತ್ತಿದೆ. ಗುಂಡಿಗಳಿಂದ ವಾಹನ ಚಾಲಕರಿಗೆ ಸರಿಯಾಗಿ ವಾಹನವನ್ನು ಓಡಿಸಲು ಸಾಧ್ಯವಾಗುತ್ತಿರಲಿಲ್ಲ. ನಗರಸಭೆಯ ಅಧಿಕಾರಿಗಳು ಸಹ ಗುಂಡಿಗಳನ್ನು ಮುಚ್ಚಿಸಲು ಮುಂದಾಗಿರಲಿಲ್ಲ. ಇದರಿಂದ ಬೇಸತ್ತ ಪೊಲೀಸ್ ಅಧಿಕಾರಿಗಳು ಸ್ವತಃ ತಾವೆ ಜೆಸಿಬಿಯನ್ನು ಬಳಸಿಕೊಂಡು ಗುಂಡಿಗಳನ್ನು ತೆಗೆಸಿದ್ದಾರೆ. ಇನ್ನು ರಸ್ತೆಯಲ್ಲಿ ಗುಂಡಿಗಳು ಬಿದ್ದು ತಿಂಗಳುಗಳು ಕಳೆದಿದ್ದರು ಯಾವ ಅಧಿಕಾರಿಯು ಸರಿ ಮಾಡಲು ಮುಂದೆ ಬಂದಿರಲಿಲ್ಲ. ಹಾಗಾಗಿ ಸಂಚಾರಿ ಪೊಲೀಸ್ ಅಧಿಕಾರಿಗಳು ಉತ್ತಮವಾದ ಕಾರ್ಯವನ್ನು ಮಾಡಿದ್ದಾರೆ.

ನಗರಸಭಾ ಅಧಿಕಾರಿಗಳ ವಿರುದ್ಧ ಆಕ್ರೋಶವನ್ನ ವ್ಯಕ್ತ ಪಡಿಸಿದ್ದಾರೆ

ಪೊಲೀಸ್ ಅಧಿಕಾರಿಗಳು ಮಾಡಿದ ಕೆಲಸಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಾಹನ ಸವಾರರು ಮತ್ತು ನಾಗರಿಕರು ನಗರಸಭಾ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶವನ್ನ ವ್ಯಕ್ತ ಪಡಿಸಿದ್ದಾರೆ. ಹಾಳಾದ ರಸ್ತೆಯನ್ನು ನಿರ್ಮಾಣ ಮಾಡುವುದರ ಕಡೆಗೆ ಸರ್ಕಾರ ಗಮನ ಹರಿಸಬೇಕಾಗಿದೆ. ಮಳೆ ಸಿಕ್ಕಾಪಟ್ಟೆ ಬಂದಿರುವದರಿಂದ ನೀರು, ರಸ್ತೆಯನ್ನು ಆವರಿಸಿಕೊಂಡಿದೆ. ಇದರಿಂದಾಗಿ ಟ್ರಾಫಿಕ್ ಸಮಸ್ಯೆ ಸಹ ಅಧಿಕವಾಗುತ್ತಿದೆ. ಸರ್ಕಾರ ರಸ್ತೆಯ ಪರಿಹಾರಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ.

ಪೊಲೀಸರಿಂದ ಬಚಾವ್

ಹೆಚ್ಚಿನ ದಂಡವನ್ನು ಕಟ್ಟಬೇಕೆನ್ನುವ ಸಲುವಾಗಿ, ಇದರಿಂದ ತಪ್ಪಿಸಿಕೊಳ್ಳುವ ಜನರು ಸಹ ಇದ್ದಾರೆ. ಒಬ್ಬ ಪೊಲೀಸ್ ಅಧಿಕಾರಿ ಒಂದು ವಿಡಿಯೋವನ್ನು ಹಂಚಿಕೊಂಡಿದ್ದು, ವಾಹನ ಚಾಲಕರು ಬಹಳ ಸುಲಭವಾಗಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಮಾರ್ಗವನ್ನು ಕಂಡು ಹಿಡಿದಿದ್ದಾರೆ. ಈ ಘಟನೆ ವಿಡಿಯೋದಲ್ಲಿ ಕಾಣಿಸುತ್ತದೆ.

ದೂರದಿಂದಾನೆ ಪೊಲೀಸರು ಬೇರೆ ವಾಹನಗಳನ್ನು ಹಿಡಿದಾಗ, ಬೇರೆ ವಾಹನ ಚಾಲಕರು ಇದನ್ನು ಗಮನಿಸಿ ಮೆಲ್ಲಗೆ ತಮ್ಮ ಗಾಡಿಯನ್ನು ತಳ್ಳಿಕೊಂಡು ಹೋಗುವ ಒಂದು ದೃಶ್ಯ  ವಿಡಿಯೋ ದಲ್ಲಿ ಕಾಣುತ್ತದೆ. ಇನ್ನು ಅನೇಕ ಮಾರ್ಗಗಳನ್ನು ವಾಹನ ಸವಾರರು ಹುಡುಕಿಕೊಂಡಿದ್ದು, ಇವರನ್ನು ಹಿಡಿಯುವ ಪ್ರಯತ್ನದಲ್ಲಿ ಪೊಲೀಸರು ಸುಸ್ತಾಗಿ ಹೋಗಿದ್ದಾರೆ.

LEAVE A REPLY

Please enter your comment!
Please enter your name here