ಕೆಲಸದ ಒತ್ತಡದಲ್ಲು ಸಮಾಜ ಸೇವೆ ಮಾಡಿದ ಸಂಚಾರಿ ಪೊಲೀಸರು

0
525

ಬೆಳಗಾವಿಯಲ್ಲಿ ಮಳೆಯಿಂದಾಗಿ ರಸ್ತೆಗಳು ಹಾಳಾಗಿ ಹೋಗಿದ್ದು, ರಸ್ತೆಗಳಲ್ಲಿ ಗುಂಡಿಗಳು ಆವರಿಸಿದೆ. ವಾಹನ ಚಾಲಕರಿಗೆ ಮತ್ತು ನಾಗರಿಕರಿಗೆ ಇದರಿಂದ ಬಹಳ ತೊಂದರೆಯಾಗುತ್ತಿದೆ. ಪ್ರಾಣಕ್ಕು ಕುತ್ತು ತರುವಂತಿದೆ ಗುಂಡಿಗಳು. ಗುಂಡಿಗಳಿಂದ ಅದೆಷ್ಟೋ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿರುವವರು ಸಾಕಷ್ಟು ಜನರಿದ್ದಾರೆ. ಅದೆಷ್ಟೊ ಜನರ ಪಾಲಿಗೆ ಗುಂಡಿಗಳೇ ಮೃತ್ಯುದೇವತೆಯಾಗಿದೆ. ಗುಂಡಿಗಳನ್ನು ಮುಚ್ಚುವುದಕ್ಕೆ ಯಾರು ಸಹ ನೆರವಿಗೆ ಬಂದಿರಲಿಲ್ಲ. ಇವುಗಳನ್ನು ಹೀಗೆ ಬಿಟ್ಟರೆ ತೊಂದರೆಯನ್ನು ಅನುಭವಿಸೋದು ಜನರೇ ಹೊರತು ಬೇರೆಯವರಲ್ಲ. ರಾಜಕಾರಣಿಗಳನ್ನು ಬೈದುಕೊಂಡು ಜನರು ಓಡಾಡುತ್ತಿದ್ದರು.

ಸಂಚಾರಿ ಪೊಲೀಸರಿಂದ ಸಮಾಜ ಸೇವೆ

ಇದರಿಂದ ಸಂಚಾರಿ ಪೊಲೀಸರು ಕಂಗೆಟ್ಟು ಹೋಗಿದ್ದರು. ಆದ್ದರಿಂದ ಸ್ವತಃ ತಾವೇ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸವನ್ನು ಮಾಡುತ್ತಿದ್ದಾರೆ. ಮಣ್ಣನ್ನು ತರಿಸಿ ಗುಂಡಿಗಳನ್ನು ಮುಚ್ಚುವ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಉತ್ತರ ಕರ್ನಾಟಕದ ನಗರದ ಸಂಚಾರಿ ಪೊಲೀಸರಾದ ಪಿ ಎಸ್ ಕೊಲ್ಕಾರ್, ಹವಾಲ್ದಾರ್ ಎಸ್ ವಿ ಹಾದಿಮುನಿ, ಪಿ ಬಿ ನಾಯಕ್ ಇನ್ನು ಕೆಲ ಪೊಲೀಸರು ಗುಂಡಿ ಮುಚ್ಚುವ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಸಂಚಾರಿ ಪೋಲೀಸರ ಸಮಾಜ ಸೇವೆಯನ್ನು ಜನರು ಮೆಚ್ಚಿಕೊಂಡಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ಸಂಚಾರಿ ಪೊಲೀಸರನ್ನು ಹಾಡಿ ಹೊಗಳುತ್ತಿದ್ದಾರೆ. ಜನರನ್ನು ಇವರು ದೊಡ್ಡ ವಿಪತ್ತಿನಿಂದ ಪಾರು ಮಾಡಿದ್ದಾರೆ.

ಕಠಿಣವಾದ ಸಂದರ್ಭವನ್ನು ಜನರು ಎದುರಿಸುತ್ತಿದ್ದಾರೆ

ಪ್ರವಾಹದಿಂದ ಉತ್ತರ ಕರ್ನಾಟಕ ಸೇರಿದಂತೆ ಮಲೆನಾಡಿನ ಪ್ರದೇಶದ ಜನರು ತತ್ತರಿಸಿ ಹೋಗಿದ್ದಾರೆ. ಮಳೆಯಿಂದಾಗಿ ಸೇತುವೆಗಳು, ರಸ್ತೆಗಳು ರದ್ದಾಗಿ ಹೋಗಿದೆ. ವಾಹನಗಳು ಚಲಿಸಬೇಕಾದ ಮಾರ್ಗಗಳು ಹದಗೆಟ್ಟಿದೆ. ಊರಿನ ಜನರು ಸಹ ಊಟಕ್ಕಾಗಿ ಮತ್ತು ವಾಸಿಸುವುದಕ್ಕೆ ಸರಿಯಾದ ಜಾಗ ಸಿಗದೆ ಪರದಾಡುತ್ತಿದ್ದಾರೆ. ಇಡಿ ರಾಜ್ಯದ ಜನತೆ ಪ್ರವಾಹ ಪೀಡಿತ ಜನರ ಕಷ್ಟಕ್ಕೆ ನೆರವಾಗಿ ನಿಂತಿದ್ದು, ಜನರು ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಪರಿಸ್ಥಿತಿ ಸಹಜವಾಗಿ ಎಂದಿನಂತೆ ರೂಪಗೊಂಡಿದೆ. ಆದರೂ ವರುಣನ ಆರ್ಭಟ ಮಾತ್ರ ಕಡಿಮೆಯಾಗಿಲ್ಲ. ರಸ್ತೆಗಳು ಬ್ಲಾಕ್ ಆಗಿವೆ, ಜನರಿಂದ ವಾಹನಗಳು ಚಲಿಸುವುದಕ್ಕು ಆಗುತ್ತಿಲ್ಲ. ಬಹಳ ಕಠಿಣವಾದ ಸಂದರ್ಭವನ್ನು ಜನರು ಎದುರಿಸುತ್ತಿದ್ದಾರೆ.

ಸರ್ಕಾರ ರಸ್ತೆಯ ಪರಿಹಾರಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ

ಹಾಳಾದ ರಸ್ತೆಯನ್ನು ನಿರ್ಮಾಣ ಮಾಡುವುದರ ಕಡೆಗೆ ಸರ್ಕಾರ ಗಮನ ಹರಿಸಬೇಕಾಗಿದೆ. ಮಳೆ ಸಿಕ್ಕಾಪಟ್ಟೆ ಬಂದಿರುವದರಿಂದ ನೀರು, ರಸ್ತೆಯನ್ನು ಆವರಿಸಿಕೊಂಡಿದೆ. ಇದರಿಂದಾಗಿ ಟ್ರಾಫಿಕ್ ಸಮಸ್ಯೆ ಸಹ ಅಧಿಕವಾಗುತ್ತಿದೆ. ಸರ್ಕಾರ ರಸ್ತೆಯ ಪರಿಹಾರಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ. ಇದು ಕೇವಲ ಬೆಳಗಾವಿ ನಗರದ ಕಥೆಯಾಗಿದೆ. ಬೇರೆ ಊರುಗಳಲ್ಲೂ ಗುಂಡಿಗಳಿಂದ ಜನರು ಅಪಘಾತಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ.

LEAVE A REPLY

Please enter your comment!
Please enter your name here