ಟ್ರಾಫಿಕ್ ನಿಯಮದ ಬದಲಾವಣೆ ಬಗ್ಗೆ ಕುರಿತು ಒಂದೇ ರೀತಿ ವರ್ತಿಸಿದ ನಟ ಉಪೇಂದ್ರ. ಅದರ ಅರ್ಥವೇನು?

0
756

ಇತ್ತೀಚಿಗೆ ಸರ್ಕಾರ ಹೊಸ ಹೊಸ ಯೋಜನೆ ಹಾಗು ಬದಲಾವಣೆಗಳನ್ನು ಜಾರಿಗೆ ತರುತ್ತಿದೆ. ಅದರಲ್ಲಿ ಮುಖ್ಯವಾದದ್ದು ಅಂದ್ರೆ ಟ್ರಾಫಿಕ್ ರೂಲ್ಸ್. ಹೌದು. ಇತ್ತೀಚಿನ ದಿನಗಳಲ್ಲಿ ವಾಹನ ಸವಾರರಿಗೆ ರಸ್ತೆಯಲ್ಲಿ ಓಡಾಡಲು ಆಗುತ್ತಿಲ್ಲ. ಯಾಕಂದ್ರೆ ಇಲ್ಲ ಸಲ್ಲದ ವಿಷಯಗಳಿಗೆ ದಂಡ ಹಾಕುತ್ತಿದ್ದಾರೆ. ಅದು ಮಿತಿ ಮೀರಿದ ಹಣವನ್ನು ದಂಡದ ರೂಪದಲ್ಲಿ ಕೇಳುತ್ತಿದ್ದಾರೆ. ಇದರಿಂದ ವಾಹನ ಸವಾರರೆಲ್ಲಾ ಬಹಳಷ್ಟು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಎಷ್ಟೋ ಜನ ಇದರ ವಿಚಾರವಾಗಿ ಮಾತನಾಡಲು ಹೋದರೆ, ಅವರ ಮೇಲೆ ಇನ್ನಷ್ಟು ದಂಡವನ್ನು ವಿಧಿಸುತ್ತಿದ್ದಾರಂತೆ. ಹಾಗಾಗಿ ಎಲ್ಲರು ಸರ್ಕಾರದ ಈ ಕೆಲಸಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಇದೇ ವಿಚಾರವಾಗಿ ಸಿನಿಮಾ ಕಲಾವಿದರು ಹಾಗು ಇತರ ಮುಖ್ಯ ವ್ಯಕ್ತಿಗಳು ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದ್ರೆ ನಟ ಉಪೇಂದ್ರ ಮಾತ್ರ ಯಾವುದೇ ರೀತಿ ಪ್ರತಿಕ್ರಿಯಿಸಿಲ್ಲ. ಬದಲಿಗೆ ಎಲ್ಲದಕ್ಕೂ ಚಪ್ಪಾಳೆ ಬಡಿಯುತ್ತಿರುವ ಚಿತ್ರವನ್ನು ಪೋಸ್ಟ್ ಮಾಡುತ್ತಿದ್ದಾರೆ.

ಎಲ್ಲ ಸುದ್ದಿಗೂ ಚಪ್ಪಾಳೆ ಬಡಿಯುತ್ತಿರುವ ಚಿಹ್ನೆ ಹಾಕಿರುವ ಉಪೇಂದ್ರ

ರಾಜ್ಯದಲ್ಲಿ ಟ್ರಾಫಿಕ್ ಬಗ್ಗೆ ಸಿಎಂ ಯಡಿಯೂರಪ್ಪ ಅವರು ತಂದಿರುವ ಬದಲಾವಣೆಯನ್ನು ಎಲ್ಲರು ವಿರೋಧಿಸುತ್ತಿದ್ದಾರೆ. ಇದರ ಬಗ್ಗೆ ನಟಿ ಸೋನು ಗೌಡ ಅವರು ಸಹ ಸಿಎಂ ಅನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದ್ರೆ ರಾಜ್ಯದಲ್ಲಿ ಏನೇ ಬೆಳವಣಿಗೆ ಅಥವಾ ಬದಲಾವಣೆಯಾದರೂ ಕೆಲವು ಮುಖ್ಯ ವ್ಯಕ್ತಿಗಳು ತಮ್ಮ ಹೇಳಿಕೆಯನ್ನು ನೀಡಿದಾಗಲೇ ಜನರಿಗೂ ಒಂದು ರೀತಿ ಸಮಾಧಾನವಾಗುತ್ತದೆ. ಅದರಲ್ಲಿ ನಟ ಉಪೇಂದ್ರ ಅವರು ಕೂಡ ಒಬ್ಬರು. ಹೌದು. ಯಾವುದೇ ವಿಚಾರಕ್ಕಾದರೂ ಉಪೇಂದ್ರ ಅವರ ಒಂದು ಅನಿಸಿಕೆ ಇರಲೇಬೇಕು. ಆದರೆ ಟ್ರಾಫಿಕ್ ಬಗ್ಗೆ ಉಪೇಂದ್ರ ಅವರು ಯಾವುದೇ ರೀತಿ ಪ್ರತಿಕ್ರಿಯೆ ನೀಡುತ್ತಿಲ್ಲ. ಬದಲಿಗೆ ಎಲ್ಲ ವಿಷಯಗಳಿಗೂ ಚಪ್ಪಾಳೆ ಬಡಿಯುತ್ತಿರುವ ಚಿಹ್ನೆ ಹಾಕಿ, ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದ್ದಾರೆ.

ಯಾವ ಹೇಳಿಕೆಗೂ ಪ್ರತಿಕ್ರಿಯೆ ನೀಡದ ಉಪೇಂದ್ರ

ಇನ್ನು ಸಿಎಂ ಬಗ್ಗೆ ಯಾರೇ, ಏನೇ ಹೇಳಿದರು ಅವೆಲ್ಲವೂ ಸಹ ಈಗ ಟ್ರೋಲ್ ಆಗುತ್ತಿವೆ. ಅಂತಹ ಕೆಲವು ಟ್ರೋಲ್ ಗಳನ್ನು ಜನರು ಇನ್ಸ್ಟಾಗ್ರಾಮ್ ಹಾಗು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಎಲ್ಲರು ಸಹ ತಮಗನಿಸಿದ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸುತ್ತಿದ್ದಾರೆ. ಆದರೆ ಉಪೇಂದ್ರ ಅವರು ಮಾತ್ರ ಯಾವುದೇ ರೀತಿ ಕಮೆಂಟ್ ಮಾಡುತ್ತಿಲ್ಲ. ಬದಲಿಗೆ ಎಲ್ಲ ಟ್ರೋಲ್ ಗಳಿಗೂ ಚಪ್ಪಾಳೆ ಬಡಿಯುತ್ತಿರುವ ಫೋಟೋವನ್ನು ಮಾತ್ರ ಹಾಕುತ್ತಿದ್ದಾರೆ. ಇದರಿಂದ ಜನರಿಗೆ ಗೊಂದಲವಾಗಿದೆ. ಯಾಕಂದ್ರೆ ಅವರ ಈ ಚಪ್ಪಾಳೆಯ ಅರ್ಥವೇನು ಎಂಬುದನ್ನು ಕೇಳುತ್ತಿದ್ದಾರೆ. ಜೊತೆಗೆ ಚಪ್ಪಾಳೆ ಬಿಟ್ಟು, ಬೇರೆ ಏನನ್ನಾದರೂ ಹೇಳಿ ಎಂದು ಹೇಳುತ್ತಿದ್ದಾರೆ. ಆದರೆ ಉಪೇಂದ್ರ ಅವರು ಮಾತ್ರ ಯಾವುದಕ್ಕೂ ಪ್ರತಿಕ್ರಿಯೆ ನೀಡುತ್ತಿಲ್ಲ.

ಸಂಪರ್ಕಕ್ಕೆ ಸಿಗದ ನಟ ಉಪೇಂದ್ರ

ಇನ್ನು ಉಪೇಂದ್ರ ಅವರ ಈ ರೀತಿಯ ಪ್ರತಿಕ್ರಿಯೆಯನ್ನು ನೋಡಿದ ಜನರು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ ಉಪೇಂದ್ರ ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಅಲ್ಲದೆ ಫೋನ್ ಮಾಡಿದರು ಸಹ ಯಾರ ಕರೆಯನ್ನು ಸಹ ಸ್ವೀಕರಿಸುತ್ತಿಲ್ಲವಂತೆ. ಹಾಗಾಗಿ ಅಭಿಮಾನಿಗಳು ಈ ವಿಚಾರವಾಗಿ ಬಹಳಷ್ಟು ಬೇಸರ ವ್ಯಕ್ತಪಡಿಸಿದ್ದಾರೆ. ಯಾಕಂದ್ರೆ ಪ್ರಜಾಕೀಯ ಎನ್ನುವ ಪಕ್ಷದ ಮೂಲಕ ಇಡೀ ರಾಜ್ಯವನ್ನೇ ಬದಲಾಯಿಸಬೇಕು ಎಂದು ಉಪೇಂದ್ರ ಅವರು ಬಯಸಿದ್ದರು. ಆದರೆ ಅದು ಆಗಲಿಲ್ಲ. ಆದರೆ ಇಂತಹ ವಿಚಾರಗಳಿಗೆಲ್ಲಾ ಉಪೇಂದ್ರ ಅವರು ಯಾವಾಗಲು ಮೊದಲು ಪ್ರತಿಕ್ರಿಯೆ ನೀಡುತ್ತಿದ್ದರು. ಆದರೆ ಈ ಬಾರಿ ಯಾವುದೇ ಪ್ರತಿಕ್ರಿಯೆ ನೀಡದಿದ್ದದ್ದಕ್ಕೆ ಅಭಿಮಾನಿಗಳು ಬೇಸರವಾಗಿದ್ದಾರೆ.

ನಿಜಕ್ಕೂ ಕೆಲವು ಬದಲಾವಣೆ ಹಾಗೂ ಬೆಳವಣಿಗೆಗಳಿಗೆ ಕೆಲವರ ಅನಿಸಿಕೆ ಬಹಳ ಮುಖ್ಯವಾಗುತ್ತದೆ. ಆ ಸಾಲಿನಲ್ಲಿ ನಟ ಉಪೇಂದ್ರ ಅವರು ಸಹ ಸೇರಿದ್ದಾರೆ. ಆದರೆ ಈ ಟ್ರಾಫಿಕ್ ನಿಯಮದ ಬಗ್ಗೆ ಉಪೇಂದ್ರ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಿರುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.

 

LEAVE A REPLY

Please enter your comment!
Please enter your name here