ಸಕ್ಕರೆ ಖಾರ್ಕಾನೆಯ ಮಾಲೀಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು

0
574

ನರೇಂದ್ರ ಮೋದಿ ಅವರು ಜನರ ಕಷ್ಟವನ್ನು ನೀಗಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರು. ಲೋಕಸಭಾ ಚುನಾವಣೆಯಲ್ಲಿ ಗೆದ್ದ ನಂತರ ಮತ್ತಷ್ಟು ದೇಶದ ಅಭಿವೃದ್ಧಿಯ ಕಡೆಗೆ ಗಮನ ಕೊಡುತ್ತಿದ್ದಾರೆ. ಕಬ್ಬಿಣ ಕಾರ್ಖಾನೆಗಳ ವಿಷಯದಲ್ಲಿ ರೈತರಿಗೆ ಬಹಳ ಮೋಸವಾಗುತ್ತಿದೆ. ರೈತ ಕಷ್ಟ ಪಟ್ಟು ಹಗಲು ರಾತ್ರಿ ಬೆವರನ್ನು ಹರಿಸಿ ಕಬ್ಬನ್ನು ಬೆಳೆದಿರುತ್ತಾನೆ. ಬೆಳೆದ ಕಬ್ಬುಗಳಿಗೆ ಸರಿಯಾದ ಬೆಲೆ ಸಿಗಲು ಕಬ್ಬುಗಳನ್ನು ಸಕ್ಕರೆ ಖಾರ್ಕಾನೆಗಳಿಗೆ ಮಾರಾಟ ಮಾಡುತ್ತಾನೆ. ಆದರೆ ಮಾರಾಟವಾದ ಕಬ್ಬುಗಳ ಬಾಕಿ ಹಣವನ್ನು ಖಾರ್ಕಾನೆಯ ಮಾಲೀಕರು ಒಮೊಮ್ಮೆ ಕೊಡುವುದಿಲ್ಲ, ಆದ್ದರಿಂದ ಅದು ಸಾಲ ಆಗಿಯೇ ಉಳಿಯುತ್ತದೆ. ಹಳೆ ಬಾಕಿ ಮುಂದಿನ ವರ್ಷ ಕಬ್ಬು ಹೊಡೆದಾಗ ಕೊಡುತ್ತೇನೆ ಎಂದು ಹೇಳಿ ರೈತರಿಗೆ ಮಾಲೀಕರು ಮೋಸ ಮಾಡುತ್ತಿದ್ದಾರೆ.

ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು

ರೈತರ ಕಬ್ಬಿಣ ಬಾಕಿ ಹಣವನ್ನು ಕೊಡಲು ನಿರಾಕರಿಸುವ ಕಾರ್ಖಾನೆಯ ಮಾಲೀಕರನ್ನು ಜೈಲಿಗೆ ಹಾಕುವ ಅಧಿಕಾರವನ್ನು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ನೀಡಿದೆ , 2017-18 ರಲ್ಲಿ ಕಬ್ಬು ಬೆಳೆಯುವ ರೈತರಿಗೆ ನೀಡಬೇಕಾಗಿದ್ದ ಮೊತ್ತದ ಬಾಕಿ 85,179 ಕೋಟಿ ಅಷ್ಟಿತ್ತು ಆದರೆ ನಂತರ ಅದು 303 ಕೋಟಿಗೆ ಬಂದು ನಿಂತಿತ್ತು ಎಂದು ಸಚಿವರಾದ ರಾಮ್ ವಿಲಾಸ್ ಪಾಸ್ವನ್ ಅವರು ಲೋಕಸಭೆಯಲ್ಲಿ ಹೇಳಿದ್ದಾರೆ. ಪ್ರಾರಂಭದ ದಿನಗಳಲ್ಲಿ ರೈತರಿಗೆ ಕೊಡಬೇಕಿದ್ದ 85,355 ಕೋಟಿ ಹಣದಲ್ಲಿ ಈಗಾಗಲೇ 67,706 ಮೊತ್ತದ ಹಣವನ್ನು ಕೊಟ್ಟಿದ್ದಾರೆ. ಬಾಕಿ ಇರುವ ಹಣವನ್ನು ಈ ವರ್ಷದ ಅಂತ್ಯಕ್ಕೆ ಎಲ್ಲಾ ರೈತರಿಗೆ ಪಾವತಿಯಾಗುವಂತೆ ಖಚಿತ ಪಡಿಸಲಾಗುವುದು ಎಂದು ಹೇಳಿದ್ದಾರೆ. ಇದನ್ನು ಮೀರಿಯೂ ಮಾಲೀಕರು ರೈತರಿಗೆ ಸಲ್ಲಬೇಕಾದ ಹಣವನ್ನು ನೀಡದಿದ್ದರೆ, ರಾಜ್ಯ ಸರ್ಕಾರ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ರೈತರಿಗೆ ಸರಿಯಾದ ನ್ಯಾಯವನ್ನು ಒದಗಿಸಬಹುದಾಗಿದೆ

ರೈತರ ಬಾಕಿ ಹಣವನ್ನು ಸಕ್ಕರೆ ಖಾರ್ಕಾನೆಯ ಮಾಲೀಕರು ಕೊಡದಿದ್ದರೆ ಕೂಡಲೇ ಅವರನ್ನು ಬಂಧಿಸಿ ಜೈಲಿಗೆ ಹಾಕುವ ಒಂದು ಸಂಪೂರ್ಣ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. ರೈತರ ವಿಷಯದಲ್ಲಿ ರಾಮ್ ವಿಲಾಸ್ ಪಾಸ್ವನ್ ಅವರು ಒಳ್ಳೆಯ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅದೇ ಒಂದು ಕ್ರಮದ ಪವರ್ ರಾಜ್ಯ ಸರ್ಕಾರಕ್ಕೆ ನೀಡಿದ್ದಾರೆ. ಮೋಸ ಮಾಡುವ ಕಾರ್ಖಾನೆಯ ಮಾಲೀಕರಿಗೆ ತಕ್ಕ ಪಾಠ ಕಲಿಸಿದಂತೆ ಆಗುತ್ತದೆ. ಈ ಮೂಲಕ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಬಹುದು, ಅವರಿಗೆ ಸರಿಯಾದ ನ್ಯಾಯವನ್ನು ಒದಗಿಸಬಹುದಾಗಿದೆ.

LEAVE A REPLY

Please enter your comment!
Please enter your name here