ಕವಲುದಾರಿ ಸಿನೆಮಾದ ವಿಶೇಷತೆಗಳು,ಏಕೆ ನೀವು ಕವಲುದಾರಿ ಸಿನೆಮಾ ನೋಡಲೇಬೇಕು?

0
973
punith production house

ಕನ್ನಡ ಸಿನೆಮಾಗಳ ಅಬ್ಬರ ಇತ್ತೀಚಿನ ದಿನಗಳಲ್ಲಿ ಜೋರಾಗಿದೆ, ಹೊಸ ಪ್ರತಿಭೆಯ ಕಲಾವಿದರು ಕನ್ನಡ ಸಿನೆಮಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ, ಉದಾಹರೆನೆಗೆ ಭಟ್ಟರ ಪಂಚತಂತ್ರ ಸಿನೆಮಾ. ಕೇವಲ ನಟ-ನಟಿಯರಲ್ಲದೆ ನಿರ್ದೇಶಕರ ಸರದಿಯಲ್ಲೂ ಹೊಸಬ್ಬರು ನಿಂತಿದ್ದಾರೆ. ಹೌದೂ ಸ್ವಲ್ಪ ದಿನಗಳ ಕೆಳಗೆ ಬಿಡುಗಡೆ ಆದ ಗೋಧಿ ಬಣ್ಣ ಸಾಧಾರಣ ಮೈ ಕಟ್ಟು ಚಿತ್ರವೂ ಹಿಟ್ ಆಗಿತ್ತು, ಈ ಚಿತ್ರದ ನಿರ್ದೇಶಕರಾದ ಹೇಮಂತ್ ರಾವ್ ಅವರು ಈಗ ಮತ್ತೊಂದು ಸಿನೆಮಾ ನಿರ್ದೇಶಿಸಿದ್ದಾರೆ ಯಾವ ಚಿತ್ರವೆಂದು ಆಲೋಚಿಸುತ್ತಿದ್ದೀರಾ? ಆ ಚಿತ್ರದ ಹೆಸರು ಕವಲುದಾರಿ.

ಸಿನೆಮಾದ ಟ್ರೇಲರ್ ಇಂದಾನೆ ಕವಲುದಾರಿ ಸಿನೆಮಾ ಜನರಲ್ಲಿ ಕುತೂಹಲ ಹುಟ್ಟುಹಾಕಿದೆ

ಕವಲುದಾರಿ ಚಿತ್ರದ ಶೀರ್ಷಿಕೆಯೇ ವಿಚಿತ್ರವಾಗಿದೆ, ಸಿನೆಮಾದ ಟ್ರೇಲರ್ ಇಂದಾನೆ ಜನರಲ್ಲಿ ಕುತೂಹಲ ಹುಟ್ಟು ಹಾಕಿದೆ. ಹೆಚ್ಚಿನ ಸಂಖೆಯಲ್ಲಿ ಟ್ರೇಲರ್ ವೀಕ್ಷಣೆ ಆಗಿದೆ. ಅನಂತ್ ನಾಗ್, ಆಪರೇಷನ್ ಆಳಮೇಳಮ್ಮ ಚಿತ್ರದ ನಾಯಕ ರಿಷಿ, ಅಚ್ಯುತ್ ರಾವ್, ಸುಮನ್ ರಂಗನಾಥನ್, ರೋಷಿಣಿ ಪ್ರಕಾಶ್ ಮುಖ್ಯ ಭೂಮಿಕೆಯಲ್ಲಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕ್ರೈಮ್ ಹಾಗೂ ಸುಸ್ಪೆನ್ಸ್ ಆದರಿತವಾದ ಕಥೆಯ ಚಿತ್ರ ಸಾಗುತ್ತದೆ ಅಂತಾ ಸಿನೆಮಾದ ಟ್ರೇಲರ್ ನೋಡಿದ ನಂತರ ನಮ್ಮಗೆ ಅನಿಸುತ್ತದೆ, ಹೇಮಂತ್ ರಾವ್ ಅವರು ಡಿಫರೆಂಟ್ ಆಗಿರುವ ಒಂದು ಕ್ರೈಮ್- ತ್ರಿಲ್ಲಿಂಗ್ ಕಥೆ ಹೇಳಲು ಹೊರಟಿದ್ದಾರೆ.

kavaludaari

ಮೊಟ್ಟ ಮೊದಲನೇ ಬಾರಿಗೆ ಪುನೀತ್ ರಾಜ್ ಕುಮರ್ ಪ್ರೊಡಕ್ಷನ್ ಬ್ಯಾನರ್ ಅಲ್ಲಿ ತಯಾರಾದ ಚಲನಚಿತ್ರ

ಪವರ್ ಸ್ಟಾರ್ ಎಂದೇ ಗುರುತಿಸಿಕೊಂಡ ಪುನೀತ್ ರಾಜ್ ಕುಮರ್ ಅವರು ಮೊದಲನೇ ಬಾರಿಗೆ ಚಿತ್ರವೊಂದನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಹೌದೂ ಕವಲುದಾರಿ ಸಿನೆಮಾ ಪುನೀತ್ ರಾಜ್ ಕುಮರ್ ಪ್ರೊಡಕ್ಷನ್ ಅಲ್ಲಿ ನಿರ್ಮಾಣವಾಗುತ್ತಿದೆ ಇದೂ ಚಿತ್ರದ ಇನ್ನೊಂದು ವಿಶೇಷತೆ. ಅಪ್ಪು ಬ್ಯಾನರ್ ಅಲ್ಲಿ ಮೂಡಿ ಬರುತ್ತಿರುವ ಮೊಟ್ಟ ಮೊದಲನೇ ಸಿನೆಮಾ ಇದಾಗಿದೆ. ಪುಷ್ಪಕವಿಮಾನ, ಗೋಧಿ ಬಣ್ಣ ಸಾಧಾರಣ ಮೈ ಕಟ್ಟು, ಟಗರು ಚಿತ್ರಗಳಿಗೆ ಸಂಗೀತ ನೀಡಿರುವ ಜಾದುಗಾರ ಚರಣ್ ರಾಜ್ ಅವರ ಸಂಗೀತ ಈ ಚಿತ್ರಕ್ಕಿದೆ. ಸಸ್ಪೆಂಸ್ ಹಾಗೂ ತ್ರಿಲ್ಲಿಂಗ್ ಕಥೆಗಳನ್ನು ಇಷ್ಟ ಪಡುವ ಜನರಿಗೆ ಇದೂ ಹೇಳಿ ಮಾಡಿಸಿದ ಸಿನೆಮಾ ಅಂತಾ ಚಿತ್ರದ ನಿರ್ದೇಶಕರು ತಿಳಿಸಿದ್ದಾರೆ.

punith production house

ಜನರ ಮನಸ್ಸಿನ ಮೇಲೆ ಪ್ರಭಾವ ಭೀರುವ ಸಂದೇಶ ಈ ಚಿತ್ರದಲ್ಲಿದೆ ಅಂತಾ ಚಿತ್ರದ ನಿರ್ದೇಶಕ ಹೇಮಂತ್ ರಾವ್ ಅವರು ಮಾತನಾಡಿದ್ದಾರೆ

ಜನರ ಮನಸ್ಸಿನ ಮೇಲೆ ಪ್ರಭಾವ ಬೇರುವಂತಹ ಸಂದೇಶ ಈ ಚಿತ್ರದಲ್ಲಿದೆ, ಸಮಾಜದ ಬಗ್ಗೆ, ಬ್ರಷ್ಟ ರಾಜಕಾರಣಿಗಳ ಬಗ್ಗೆ, ಜನರು ಯಾವ ರೀತಿ ಚುನಾವಣೆ ಹಂತದಲ್ಲಿ ಮೋಸ ಹೋಗುತ್ತಾರೆ, ಕೇವಲ ದುಡ್ಡಿನ ಆಸೆಗಾಗಿ  ಹೇಗೆ ಬ್ರಷ್ಟ ರಾಜಕಾರಣಿಯರ ಪರ ಮತ ಯಾಚನೆ ಮಾಡಿ ತಾವೇ ತೋಡಿಕೊಂಡಿದ್ದ ಹಳ್ಳದಲ್ಲಿ ಬೀಳುತ್ತಾರೆ ಎನ್ನುವುದು ಚಿತ್ರದಲ್ಲಿ ನೀವು ನೋಡಬಹುದು ಅಂತಾ ನಿರ್ದೇಶಕರೂ ಚಿತ್ರದ ಕುರಿತು ಮಾತನಾಡಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಆಗಲಿದ್ದು, ಮತದಾರರಿಗೆ ಒಳ್ಳೆಯ ಸಂದೇಶವನ್ನು ಈ ಚಿತ್ರದ ಮೂಲಕ ನಾವು ನೀಡಿದ್ದೇವೆ ಎಂದು ಹೇಮಂತ್ ರಾವ್ ತಿಳಿಸಿದ್ದಾರೆ.

ಅನಂತ್ ನಾಗ್ ಅವರು ಒಬ್ಬ ರಾಜಕಾರಣಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ, ಅನಂತ್ ನಾಗ್ ಅವರು ಒಬ್ಬ ಪೊಲೀಸ್ ಅಧಿಕಾರಿಯನ್ನು ಹೇಗೆಲ್ಲಾ ಉಪಯೋಗಿಸಿಕೊಂಡು, ಅಪರಾಧದಿಂದ ಪಾರಾಗುತ್ತಾರೆ ಈ ವಿಷಯಗಳ ಕುರಿತು ಸಿನೆಮಾ ಹೇಳುತ್ತದೆ, ಸುಮಾರು 500 ಪೊಲೀಸ್ ಅಧಿಕಾರಿಗಳು ಯಾವ ಕಾರಣದಿಂದಾಗಿ ಸಾಯುತ್ತಿದ್ದಾರೆ ಇದರ ಹಿಂದೆ ಯಾರ್ ಯಾರ ಕೈವಾಡ ಇದೆ ಅಂತಾ ಜನಕ್ಕೆ ಚಿತ್ರ ನೋಡಿದ ಮೇಲೆ ಅರ್ಥವಾಗುತ್ತದೆ ಎಂದಿದ್ದಾರೆ ಚಿತ್ರದ ನಿರ್ದೇಶಕರು.

hemanth rao

ನನ್ನ ಸಿನಿವೃತ್ತಿಯಲ್ಲಿ ಬಹಳ ವರ್ಷಗಳಿಂದ ಇಂತಹದೊಂದು ಪಾತ್ರಕ್ಕಾಗಿ ನಾನು ಕಾಯುತ್ತಿದೆ ಅಂತಾ ಅನಂತ್ ನಾಗ್ ಅವರು ಚಿತ್ರದ ಕುರಿತು ಹೇಳಿದ್ದಾರೆ

ಪುನೀತ್ ರಾಜ್ ಕುಮರ್ ಪ್ರೊಡಕ್ಷನ್ ಹೌಸ್ ಅಲ್ಲಿ ತಯಾರಾಗಿರುವ ಮೊದಲನೇ ಸಿನೆಮಾದಲ್ಲಿಯೇ, ಸಮಾಜ ಸುಧಾರಣೆಯ ಕಥಾ ಹಂದರ ಹೊಂದಿರುವುದು ವಿಶೇಷ. ನನ್ನ ಸಿನಿವೃತ್ತಿಯಲ್ಲಿ ಬಹಳ ವರ್ಷಗಳಿಂದ ಇಂತಹದೊಂದು ಪಾತ್ರಕ್ಕಾಗಿ ನಾನು ಕಾಯುತ್ತಿದೆ, ಈ ಸಿನೆಮಾದ ಮೂಲಕ ಅದೂ ನೆರೆವೇರಿದೆ ಇದರ ಕ್ರೆಡಿಟ್ಸ್ ನಾನು ಹೇಮಂತ್ ಕುಮರ್ ಅವರಿಗೆ ಕೊಡುತ್ತೇನೆ ಅಂತಾ ಚಿತ್ರದ ಕುರಿತು ಅನಂತ್ ನಾಗ್ ಅವರು ಮಾತನಾಡಿದ್ದಾರೆ.

anantnaag

LEAVE A REPLY

Please enter your comment!
Please enter your name here