ತಿರುಪತಿ ತಿಮ್ಮಪ್ಪನ ಭಕ್ತರಿಗೆ ಸಿಹಿ ಸುದ್ದಿ. ಏನದು?

0
1001
thimmappana laddu

ಗೋವಿಂದ……… ಗೋವಿಂದ…… ತಿರುಪತಿಗೆ ಕಾಲಿಟ್ಟರೆ ಸಾಕು ಎತ್ತ ನೋಡಿದರೂ ಹಾಗು ಎತ್ತ ಕಿವಿ ಕೊಟ್ಟರೂ ಕೇವಲ ಗೋವಿಂದನ ನಾಮ ಸ್ಮರಣೆ ಬಿಟ್ಟರೆ ಬೇರೇನೂ ಕೇಳುವುದಿಲ್ಲ. ಯಾಕಂದ್ರೆ ತಿರುಪತಿ ತಿಮ್ಮಪ್ಪ ಭಕ್ತರ ಮನಸಲ್ಲಿ ಅಷ್ಟು ಆಳವಾಗಿ ಉಳಿದಿದ್ದಾನೆ. ಇನ್ನು ತೀಮ್ಮಪ್ಪನ ದರ್ಶನ ಪಡೆಯುವ ಭಕ್ತರ ಸಂಖ್ಯೆಯೇನು ಕಡಿಮೆಯಿಲ್ಲ. ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೌದು. 7 ಬೆಟ್ಟಗಳ ಮೇಲಿರುವ ತಿಮ್ಮಪ್ಪನ ದರ್ಶನ ಪಡೆಯಲು ದೇಶದ ಮೂಲೆ ಮೂಲೆಗಳಿಂದಲೂ ಭಕ್ತರು ಬರುತ್ತಾರೆ. ಇನ್ನು ತಿಮ್ಮಪ್ಪನ ಸನ್ನಿಧಿಯಲ್ಲಿ ಭಕ್ತರಿಗೆ ಇಷ್ಟವಾದ ಖಾದ್ಯ ಎಂದರೆ ಅದು ಲಡ್ಡು. ಹೌದು. ಘಮ ಘಮಿಸುವ ಲಡ್ಡಿನ ರುಚಿ ಎಲ್ಲ ಸಿಹಿಗಿಂತಲೂ ಮೀರಿದ್ದು. ಹಾಗಾಗಿ ಈಗ ಲಡ್ಡು ವಿಚಾರದಲ್ಲಿ ಮಂಡಳಿ ಹೊಸ ನಿರ್ಧಾರವನ್ನು ಕೈಗೊಂಡಿದೆ.

ದೇಗುಲಕ್ಕೆ ಬರುವ ಪ್ರತಿಯೊಬ್ಬರಿಗೂ ಉಚಿತ ಲಡ್ಡು

ತಿರುಪತಿಯ ಲಡ್ಡು ಅಂದ್ರೆ ಸಿಹಿ ತಿನ್ನದವರು ಸಹ ತಿನ್ನಲು ಬಯಸುತ್ತಾರೆ. ಯಾಕಂದ್ರೆ ಅಷ್ಟೊಂದು ರುಚಿಯಾಗಿ ಇಲ್ಲಿನ ಲಡ್ಡು ತಯಾರಾಗಿರುತ್ತದೆ. ಆದರೆ ಅದಕ್ಕೆ ಬೆಲೆ ಜಾಸ್ತಿ ಎಂದು ಕೆಲವರು ಒಂದೇ ಲಡ್ಡುವಿಗೆ ಸುಮ್ಮನಾಗುತ್ತಾರೆ. ಆದರೆ ಈಗ ಭಕ್ತರಿಗೆ ಹೊಸದೊಂದು ಸುದ್ದಿಯನ್ನು ಟಿಟಿಡಿ ನೀಡಿದೆ. ಹೌದು. ಇನ್ಮುಂದೆ ಬೆಟ್ಟಕ್ಕೆ ಬರುವ ಪ್ರತಿಯೊಬ್ಬರಿಗೂ ಒಂದು ಲಡ್ಡು ಉಚಿತವಾಗಿ ಸಿಗುತ್ತದೆ. ಹೌದು. ಅನೇಕ ಮಾತುಕತೆಗಳ ನಂತರ ಟಿಟಿಡಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಯಾಕಂದ್ರೆ ಲಕ್ಷಾಂತರ ಲಡ್ಡುಗಳು ಇಲ್ಲಿ ತಯಾರಾಗುತ್ತಿದೆ. ಆದರೆ ಅದೆಲ್ಲ ಎಲ್ಲಿಗೆ ಹೋಗುತ್ತಿದೆ ಎನ್ನುವುದು ಸಹ ಕೆಲವರಿಗೆ ಅನುಮಾನವಿತ್ತು. ಹಾಗಾಗಿ ಆ ಅನುಮಾನವನ್ನು ಬಗೆಹರಿಸುವ ದಾರಿಯೂ ಸಹ ಇದಾಗಿದೆಯಂತೆ.

ವೈಕುಂಠ ಏಕಾದಶಿಯಿಂದ ನಿಯಮ ಜಾರಿಗೆ

ಇನ್ನು ಉಚಿತ ಲಡ್ಡು ವಿತರಣೆಯ ನಿಯಮವನ್ನು ಇದೆ ವೈಕುಂಠ ಏಕಾದಶಿಯಿಂದ ಆಚರಿಸಲಾಗುತ್ತದೆ. ಹೌದು. ಪ್ರತಿದಿನ ದೇಗುಲಕ್ಕೆ ಲಕ್ಷಾಂತರ ಭಕ್ತರು ಬರುತ್ತಾರೆ. ಹಾಗಾಗಿ ದೇಗುಲದಲ್ಲಿ ಸುಮಾರು 3 ಲಕ್ಷದಷ್ಟು ಲಡ್ಡುಗಳನ್ನು ತಯಾರಿಸುತ್ತಾರೆ. ಒಂದು ವೇಳೆ ಭಕ್ತರು ಹೆಚ್ಚಾದ ಸಮಯದಲ್ಲಿ ಲಡ್ಡುಗಳ ತಯಾರಿಕೆ ಇನ್ನು ಹೆಚ್ಚಾಗುತ್ತದೆ. ಇನ್ನು ಇಷ್ಟುದಿನ ಬೆಟ್ಟ ಹತ್ತಿ ಬರುವ ಭಕ್ತರಿಗೆ ಮಾತ್ರ ಒಂದು ಉಚಿತ ಲಡ್ಡು ನೀಡಲಾಗುತ್ತಿತ್ತು. ಆದ್ರೆ ಈಗ ಎಲ್ಲರಿಗು ಒಂದು ಉಚಿತ ಲಡ್ಡು ನೀಡುತ್ತಿರುವ ಸಂತಸದ ವಿಷಯ. ಒಟ್ಟಿನಲ್ಲಿ ಈ ವೈಕುಂಠ ಏಕಾದಶಿಗೆ ತಿಮ್ಮಪ್ಪನ ಭಕ್ತರಿಗೆ ಸಿಹಿ ಸುದ್ದಿ ಸಿಕ್ಕಿರುವುದಂತೂ ನಿಜ.

ನಿಜಕ್ಕೂ ಟಿಟಿಡಿಯ ಈ ನಿರ್ಧಾರ ತಿಮ್ಮಪ್ಪನ ಭಕ್ತರಿಗೆ ಸಂತಸ ತರುವುದಂತೂ ನಿಜ. ಯಾಕಂದ್ರೆ ಲಡ್ಡುವಿನ ರುಚಿ ಬಲ್ಲವರಿಗೆ ಮಾತ್ರ ಅದರ ಬೆಲೆ ತಿಳಿದಿದೆ. ಅಂತಹ ಲಡ್ಡುವನ್ನು ಉಚಿತವಾಗಿ ನೀಡಲು ಮುಂದಾಗಿರುವುದು ನಿಜಕ್ಕೂ ಸಂತೋಷದ ವಿಷಯ.

LEAVE A REPLY

Please enter your comment!
Please enter your name here