ಒಬ್ಬ ಸಾಧಕನ ಕಥೆಯೆ ಈಗ ‘ಸೂಪರ್ 30’ ಚಿತ್ರವಾಗಲಿದೆ

0
224

ಸದ್ಯಕ್ಕೆ ಬಾಲಿವುಡ್ ಅಂಗಳದಲ್ಲಿ ಸೂಪರ್ 30 ಎನ್ನುವ ಚಿತ್ರ ಬಹಳ ಜನಪ್ರಿಯತೆ ಪಡೆಯುತ್ತಿದೆ. ಹೌದು, ಹೃತಿಕ್ ರೋಷನ್ ವಿಚಿತ್ರವಾದ ವೇಷಬೂಷಣವನ್ನು ಧರಿಸಿ ಸಿನಿಪ್ರಿಯರ ಗಮನವನ್ನು ಸೆಳೆಯುತ್ತಿದ್ದಾರೆ. ಸಿನಿಮಾದ ಪೋಸ್ಟರ್ ನೋಡುತ್ತಿದ್ದರೆ, ಚಿತ್ರದ ಕಥೆ ಬಹಳ ಕುತೂಹಲಕಾರಿಯಾಗಿದೆ ಎಂದು ಭಾಸವಾಗುತ್ತದೆ. ಸೂಪರ್ 30 ಚಿತ್ರದ ಟ್ರೇಲರ್ ಮತ್ತು ಹಾಡುಗಳು ಈಗ ಹಿಟ್ ಆಗಿದ್ದು, ಪ್ರೇಕ್ಷಕರು ಸಿನಿಮಾ ಬಿಡುಗಡೆಗಾಗಿ ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಈ ವರ್ಷದಲ್ಲಿ ಇದು ಒಂದು ಅದ್ಭುತವಾದ ಸಿನಿಮಾ ಆಗುವುದರಲ್ಲಿ ಸಂಶಯವೆ ಇಲ್ಲ ಎಂದು ಅನಿಸುತ್ತಿದೆ. ಈ ಹಿಂದೆ ಕ್ವೀನ್ ಚಿತ್ರವನ್ನು ವಿಕಾಸ್ ಬಹಲ್ ಎನ್ನುವವರು ನಿರ್ದೇಶನ ಮಾಡಿದ್ದು, ಈಗ ಸೂಪರ್ 3o ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

ಸೂಪರ್ 30 ಕಾರ್ಯಕ್ರಮದ ಮೂಲಕ ದೇಶಾದ್ಯಂತ ಪ್ರಸಿದ್ಧರಾಗಿದ್ದಾರೆ

ಹೃತಿಕ್ ರೋಷನ್ ಮೊಟ್ಟ ಮೊದಲನೆ ಬಾರಿಗೆ ಬೈಯೋಪಿಕ್ ಚಿತ್ರವನ್ನು ಮಾಡುತ್ತಿದ್ದಾರೆ. ಬಿಹಾರ್ ನಿವಾಸಿಯಾದ ಆನಂದ್ ಕುಮಾರ್ ಅವರ ಸ್ಪೂರ್ತಿದಾಯಕವಾದ ಕಥೆಯೆ ಸೂಪರ್ 30 ಚಿತ್ರವಾಗಲಿದೆ. ಆನಂದ್ ಕುಮಾರ್ ಅವರು ಒಬ್ಬ ಗಣಿತ ಶಿಕ್ಷಕನಾಗಿದ್ದು, ತಮ್ಮ ಸೂಪರ್ 30 ಕಾರ್ಯಕ್ರಮದ ಮೂಲಕ ದೇಶಾದ್ಯಂತ ಹೆಸರುವಾಸಿಯಾಗಿದ್ದಾರೆ. ಐಐಟಿ ಪ್ರವೇಶ ಪರೀಕ್ಷೆಯನ್ನು ಬರೆಯುವಂತಹ ಬಡ ವಿದ್ಯಾರ್ಥಿಗಳಿಗೆ ಇವರು ತರಬೇತಿಯನ್ನು ನೀಡುತ್ತಾರೆ. ಆನಂದ್ ಅವರ ತಂದೆ ಅಂಚೆ ಕಚೇರಿಯಲ್ಲಿ ಕ್ಲರ್ಕ್ ಆಗಿ ಸೇವೆ ಸಲ್ಲಿಸಿದ್ದಾರೆ. ಮನೆಯಲ್ಲಿ ಬಡತನವಿರುವ ಕಾರಣದಿಂದಾಗಿ, ಇವರು ಇಂಗ್ಲಿಷ್ ಮಾಧ್ಯಮ ಬಿಟ್ಟು ಹಿಂದಿ ಮಾಧ್ಯಮದಲ್ಲಿ ಓದುತ್ತಾರೆ. ಮುಂದೆ ಓದಿ.

ಗಣಿತ ಟ್ಯೂಷನ್ ಹೇಳಲು ಶುರು ಮಾಡಿದರು

ಶಾಲೆಯ ದಿನಗಳಲ್ಲಿ ಗಣಿತ ವಿಷಯದಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದರು. ನಂತರ ಕೇಂಬ್ರಿಡ್ಜ್ ಸಂಸ್ಥೆಯಲ್ಲಿ ಪದವಿ ಮಾಡುವ ಅರ್ಹತೆ ಇದ್ದರು, ಆರ್ಥಿಕತೆ ಇವರ ಜೀವನದಲ್ಲಿ ಮುಳುವಾಗುತ್ತದೆ. ಬೆಳ್ಳಂಬೆಳಿಗ್ಗೆ ಇವರು ವಿದ್ಯಾಭ್ಯಾಸವನ್ನು ಮಾಡುತ್ತಿದ್ದು, ಸಂಜೆಯ ಸಮಯದಲ್ಲಿ ಅಮ್ಮ ಮಾಡಿದ ಹಪ್ಪಳವನ್ನು ಮಾರಾಟ ಮಾಡುತ್ತಿದ್ದರು. ಇವರ ತಂದೆ ಮರಣ ಹೊಂದಿದ ನಂತರ, ಜೀವನ ನಡೆಸಲು ಬಹಳ ಕಷ್ಟವಾಗಿತ್ತು. ಇದೆ ವೇಳೆಯಲ್ಲಿ ಆನಂದ್ ಗಣಿತ ಟ್ಯೂಷನ್ ಹೇಳಲು ಶುರು ಮಾಡಿದರು. 500 ರುಪಾಯಿ ಕೊಟ್ಟು ಒಂದು ಸಣ್ಣ ಕೋಣೆಯನ್ನು ಬಾಡಿಗೆಗೆ ತೆಗೆದುಕೊಂಡಿದ್ದರು. ಟ್ಯೂಷನ್ ಗೆ ರಾಮಾನುಜಂ ಎಂದು ನಾಮಕಾರಣ ಮಾಡಿದ್ದು, ಮೊದಲು ಕೇವಲ 2 ವಿದ್ಯಾರ್ಥಿಗಳು ಸೇರುತ್ತಾರೆ. ನಂತರ 36 ಕ್ಕೆ ಬಂದು ನಿಂತಿದ್ದು, ಕೊನೆಗೆ 500 ಕ್ಕೆ ಏರುತ್ತದೆ. ವರ್ಷ ಕಳೆಯುತ್ತಾ ಸಂಸ್ಥೆ ಬೆಳೆಯುತ್ತ ಹೋಗುತ್ತದೆ.

ಸುಮಾರು 391 ವಿದ್ಯಾರ್ಥಿಗಳು iit ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ

ರಾಮಾನುಜಂ ಟ್ಯೂಷನ್ ಮೂಲಕ ಟ್ಯೂಷನ್ ಮಾಡುತ್ತಿದ್ದ ಆನಂದ್ ಅವರ ಹತ್ತಿರ ಕೆಲ ಬಡ ಮಕ್ಕಳು ಆಗಮಿಸಿದ್ದು, ನಮ್ಮ ಹತ್ತಿರ ಹಣ ಇಲ್ಲ, ಆದರೆ ಕಲಿಯಬೇಕೆನ್ನುವ ಆಸಕ್ತಿ ಇದೆ ಎಂದು ಹೇಳಿದ್ದರು. ಆಗ ಆನಂದ್ ಒಂದು ಪರೀಕ್ಷೆಯನ್ನು ಇಡುತ್ತಾರೆ. ಪರೀಕ್ಷೆಯಲ್ಲಿ ಪಾಸಾದ 30 ಬಡ ಮಕ್ಕಳಿಗೆ ಸೂಪರ್ 30 ಎನ್ನುವ ಕಾರ್ಯಕ್ರಮವನ್ನು ಶುರು ಮಾಡಿ, ಮಕ್ಕಳಿಗೆ ಪಾಠ ಹೇಳಲು ಶುರು ಮಾಡುತ್ತಾರೆ. 2010 ರಲ್ಲಿ ಸೂಪರ್ 30 ವಿದ್ಯಾರ್ಥಿಗಳು iit , jiit ಪರೀಕ್ಷೆಯಲ್ಲಿ ಪಾಸ್ ಆಗುತ್ತಾರೆ. 2003 ರಿಂದ 2017 ರ ವರೆಗು ತರಬೇತಿ ಪಡೆದ ಸುಮಾರು 391 ವಿದ್ಯಾರ್ಥಿಗಳು iit ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕೋಚಿಂಗ್ ತೆಗೆದುಕೊಂಡ ವಿದ್ಯಾರ್ಥಿಗಳ ಫಲಿತಾಂಶ ಕಂಡ ಜನರು ನಿಬ್ಬೆರಗಾಗಿದ್ದರು. ಆನಂದ್ ಕುಮಾರ್ ಅವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಡಿಸ್ಕವರಿ ಚಾನೆಲ್ ನವರು ಇವರ ಕುರಿತು ಒಂದು ಡಾಕ್ಯುಮೆಂಟರಿ ಕಥೆಯನ್ನು ಪ್ರಸಾರ ಮಾಡಿದ್ದರು.

ಲಿಮ್ಕಾ ದಾಖಲೆಯ ಪುಸ್ತಕದಲ್ಲಿ ಇವರ ಹೆಸರು ಸೇರ್ಪಡೆಯಾಗಿದೆ. ಯುವ್ರೋಪ್ ನಾ ಫೋಕಸ್ ಮ್ಯಾಗಜಿನ್ ಗ್ಲೋಬಲ್ ಪರ್ಸನಾಲಿಟಿ ಎಂದು ಗುರುತಿಸಿದ್ದರು. ಕೊಯಮುತ್ತೂರ್ ವಿಶ್ವ ವಿದ್ಯಾಲಯದವರು ಡಾಕ್ಟ್ರೇಟ್ ಅನ್ನು ನೀಡಿ ಗೌರವಿಸಿದ್ದಾರೆ. ಎಸ್ ರಾಮಾನುಜಂ ಪ್ರಶಸ್ತಿಯು ಸಹ ಇವರು ಬಾಚಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here