ದೇವರ ಶಾಪವನ್ನೇ ಹಿಂದಿಕ್ಕಿ, ಸಾವಿನಂಚಿನಲ್ಲಿದ್ದ ಮಗನನ್ನು ಬದುಕಿಸಿಕೊಂಡ ತಾಯಿ

0
539
thayi bhakti

ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಯಾಕಂದ್ರೆ ತಾಯಿ ನಮ್ಮನ್ನು ಪ್ರೀತಿ ಮಾಡುವಷ್ಟು ಬೇರೆ ಯಾರು ಸಹ ಮಾಡುವುದಿಲ್ಲ. ಅವಳ ಪ್ರೀತಿಗೆ ಹಾಗು ಆಕೆಯ ಮಮತೆಗೆ ಬೇರೆ ಸಾಟಿಯೇ ಇಲ್ಲ. ಅವಳ ಪ್ರೀತಿ ಮುಂದೆ, ಬೇರೆ ಎಲ್ಲರ ಪ್ರೀತಿಯು ಶೂನ್ಯ. ಹಾಗೆ ಅವಳ ಪ್ರಾರ್ಥನೆ ಕೂಡ ಅಷ್ಟೇ ಬಲಶಾಲಿಯಾಗಿರುತ್ತದೆ. ಹೌದು. ತಾಯಿ ಮಕ್ಕಳಿಗೆ ಮನಸಾರೆ ಏನೇ ಬೇಡಿಕೊಂಡರು ಅದು ನೆರವೇರುತ್ತದೆಯಂತೆ. ಜೊತೆಗೆ, ತಾಯಿ ಶಕ್ತಿಗೆ ದೇವಾನು ದೇವತೆಗಳೇ ಸೋತಿದ್ದಾರಂತೆ. ಯಾಕಂದ್ರೆ ಆಕೆಯ ಪ್ರಾರ್ಥನೆ ಹಾಗು ಶಕ್ತಿ ಅಷ್ಟಿರುತ್ತದೆ. ಈಗ ಅದೇ ರೀತಿ ಇಲ್ಲೊಂದು ಘಟನೆ ನಡೆದಿದೆ. ಹೌದು. ಇನ್ನೇನು ಸಾಯುವ ಸ್ಥಿತಿಯಲ್ಲಿದ್ದ ಮಗನನ್ನು, ತನ್ನ ದೈವ ಬಲದಿಂದ ತಾಯಿ ಉಳಿಸಿಕೊಂಡಿದ್ದಾಳೆ.

ಸಾಯುವ ಸ್ಥಿತಿಯಲ್ಲಿದ್ದ ಮಗನನ್ನು ಉಳಿಸಿಕೊಂಡ ತಾಯಿ

ಈ ಬಾಲಕನ ಹೆಸರು ಗಂದಮ್ ಕಿರಣ್. ಇವನು ಮೂಲತಃ ತೆಲಂಗಾಣ ರಾಜ್ಯದವನು. ಇವರ ತಂದೆ ತಾಯಿಗೆ ಇವನು ಒಬ್ಬನೇ ಮಗ. ಹಾಗಾಗಿ ಮನೆಯಲ್ಲಿ ಬಹಳ ಮುದ್ದಾಗಿ ಸಾಕಿದ್ದರು. ಇವರ ತಾಯಿಗಂತೂ ಇವನಂದ್ರೆ ಪ್ರಾಣ. ಮಗನಿಗೆ ಒಂದು ಮುಳ್ಳು ಕೂಡ ಚುಚ್ಚದಂತೆ ನೋಡಿಕೊಂಡಿದ್ದರು. ಆದ್ರೆ ಇದ್ದಕ್ಕಿದ್ದಂತೆ, ಅವನಿಗೆ ಜಾಂಡಿಸ್ ರೋಗಕ್ಕೆ ತುತ್ತಾಗುತ್ತಾನೆ. ಆಗ ಅವನಿಗೆ ಎಷ್ಟೇ ಚಿಕಿತ್ಸೆ ಕೊಡಿಸಿದರು, ಆತ ಸ್ವಲ್ಪ ಚೇತರಿಸಿಕೊಳ್ಳಲಿಲ್ಲ. ಬದಲಿಗೆ, ನಂತರ ಅವನಿಗೆ ಡೆಂಗ್ಯೂ ಹಾಗು ಹೆಪಟೈಟಿಸ್ ಬಿ ಪಾಸಿಟಿವ್ ಕೂಡ ಪತ್ತೆಯಾಗುತ್ತದೆ. ಹಾಗಾಗಿ ಅವನು ಯಾವುದೇ ರೀತಿಯಲ್ಲೂ ಚಿಕಿತ್ಸೆಗೆ ಸ್ಪಂಧಿಸುತ್ತಿರಲಿಲ್ಲ. ಅಲ್ಲಿಂದ ಅವನಿಗೆ ಮೆದುಳು ನಿಷ್ಕ್ರಿಯವಾಗುತ್ತದೆ. ಹಾಗಾಗಿ ವೈದ್ಯರು, ಅವನು ಬದುಕುವುದು ಅಸಾಧ್ಯ ಎಂದು ಹೇಳುತ್ತಾರೆ. ಆದ್ರೆ ವೈದ್ಯರ ಈ ಮಾತನ್ನು ನಂಬದ ತಾಯಿ, ತನ್ನ ಮಗನನ್ನು ಉಳಿಸಿಕೊಳ್ಳಲು ದೇವರೊಂದಿಗೆ ಹೊರಡುತ್ತಾಳೆ.

ದೇವರ ಮುಂದೆ ಕಣ್ಣೀರಿಟ್ಟ ತಾಯಿ

ವೈದ್ಯರು ತಮ್ಮ ಮಗ ಉಳಿಯುವುದಿಲ್ಲ ಆದ್ರೆ ಕೊನೆಯ ವರೆಗೂ ಪ್ರಯತ್ನ ಪಡುತ್ತೇವೆ ಎಂದು ಹೇಳುತ್ತಾರೆ. ಆದ್ರೆ ಅವನ ತಾಯಿ, ಒಂದು ಕ್ಷಣವೂ ಯೋಚಿಸದೆ, ಅವನನ್ನು ಮನೆಗೆ ಕರೆದುಕೊಂಡು ಬರುತ್ತಾರೆ. ಅದಾದ ನಂತರ ತಾಯಿ ಸಂಪೂರ್ಣವಾಗಿ ದೇವರ ಮನೆ ಸೇರುತ್ತಾರೆ. ಹೌದು. ನನ್ನ ಮಗ ಬದುಕಲೇ ಬೇಕು ಎಂದು ದೇವರಿಗೆ ಕಣ್ಣೀರಿನಲ್ಲಿ ಅಭಿಷೇಕ ಮಾಡುತ್ತಾರೆ. ಬೇಕಾದರೆ ನನ್ನ ಜೀವ ತೆಗೆದುಕೋ, ಆದರೆ ನನ್ನ ಮಗ ಬದುಕಬೇಕು. ಯಾಕಂದ್ರೆ ನನ್ನ ಮಗ ಇನ್ನು ಬದುಕಿ ಬಾಳಬೇಕಾದವನು. ಹಾಗಾಗಿ ಅವನಿಗೆ ಯಾವ ರೀತಿಯ ತೊಂದರೆಯಾಗಬಾರದೆಂದು ಆಕೆ ದೇವರಲ್ಲಿ ಪ್ರಾರ್ಥನೆ ಮಾಡುತ್ತಾಳೆ. ನಂತರ ಅದ್ಯಾವ ದೇವರ ಪವಾಡವೋ ಗೊತ್ತಿಲ್ಲ. ಒಂದು ಕ್ಷಣ ಮೈ ಅಲ್ಲಾಡಿಸದ ಹುಡುಗನ ಕಣ್ಣಲ್ಲಿ ನೀರು ಬರಲು ಶುರುವಾಗುತ್ತೆ.

ಬಾಲಕನನ್ನು ಕಾಪಾಡಿದ ದೇವರು

ಅವನ ತಾಯಿ ದೇವರಲ್ಲಿ ಬೇಡಿದ ಕೂಡಲೇ, ರಾತ್ರಿ ಸಮಯದಲ್ಲಿ ಹುಡುಗನ ಕಣ್ಣಲ್ಲಿ ನೀರು ಬರತೊಡಗಿದೆ. ತಕ್ಷಣವೇ ಅವರು ವೈದ್ಯರನ್ನು ಭೇಟಿ ಮಾಡಿದ್ದಾರೆ. ಅವರು ಹುಡುಗನ ಕಣ್ಣಲ್ಲಿ ನೀರು ನೋಡಿದ ಕೂಡಲೇ, ಒಂದು ಕ್ಷಣ ಆಶ್ಚರ್ಯ ಪಟ್ಟಿದ್ದಾರೆ. ಯಾಕಂದ್ರೆ ದೇಹವನ್ನೇ ಅಲುಗಾಡಿಸಿದ ಬಾಲಕ, ಈಗ ಕಣ್ಣಲ್ಲಿ ನೀರು ಹರಿಸುತ್ತಿರೋದನ್ನು ನೋಡಿ, ಆಶ್ಚರ್ಯ ಪಟ್ಟಿದ್ದಾರೆ. ನಂತರ ಅವನಿಗೆ ಚಿಕಿತ್ಸೆ ನೀಡಿದ್ದಾರೆ. ಈಗ ಅವನು ಆರೋಗ್ಯವಾಗಿ ಚೆನ್ನಾಗಿದ್ದಾನಂತೆ. ಹಾಗಾಗಿ ಅವನ ತಾಯಿ ಇದೆಲ್ಲಾ ದೇವರ ಪವಾಡವೇ ಸರಿ ಎಂದು ನಂಬಿ, ತಮ್ಮ ಮಗನನ್ನು ಈಗ ಜೋಪಾನವಾಗಿ ನೋಡಿಕೊಳ್ಳುತ್ತಿದ್ದಾರೆ.

ಒಟ್ಟಿನಲ್ಲಿ ತಾಯಿಗಿಂತ ಯಾವ ದೇವರಿಲ್ಲ ಅನ್ನೋದು ಖಚಿತವಾಗುತ್ತಿದೆ. ಹೌದು. ತಾಯಿ ಭಕ್ತಿಗೆ ಹಾಗು ತಾಯಿ ಶಕ್ತಿಗೆ ದೇವಾನು ದೇವತೆಗಳು ಸಹ ಸೋಲುತ್ತಾರೆ ಅನ್ನೋದಕ್ಕೆ ಇದೊಂದು ಉದಾಹರಣೆಯಾಗಿದೆ.

LEAVE A REPLY

Please enter your comment!
Please enter your name here