ಕಿರುತೆರೆಯ ಕಾರ್ಯಕ್ರಮದ ಮೂಲಕ ಟೆನ್ನಿಸ್ ಕೃಷ್ಣ ಸಿನಿ ವೃತ್ತಿಯಲ್ಲಿ ಹೊಸ ತಿರುವು

0
315

ವೀಕ್ ಎಂಡ್ ವಿತ್ ರಮೇಶ್ ನಾಲ್ಕನೇ ಆವೃತ್ತಿಯ ಕಾರ್ಯಕ್ರಮ ಬಹಳ ಸೊಗಸಾಗಿ ಮೂಡಿ ಬರುತ್ತಿದೆ. ಹರಟೆ, ಚರ್ಚೆ, ಸಾಧಕರು ಕಷ್ಟ ಪಟ್ಟು ಮೇಲೆ ಬಂದಿರುವ ರೀತಿಯ ಕಥೆಯನ್ನು ಕೇಳುತ್ತಿದ್ದರೆ, ನಾವು ಇಂತಹದೊಂದು ಸಾಧನೆ ಮಾಡಬೇಕೆಂದು ಅನಿಸುತ್ತದೆ. ಕಾರ್ಯಕ್ರಮ ನೋಡುಗರನ್ನು ಉತ್ತೇಜಕರನ್ನಾಗಿ ಮಾಡುವುದಲ್ಲದೆ, ಹಲವರಿಗೆ ಸ್ಪೂರ್ತಿ ನೀಡುತ್ತದೆ. ಈ ಕಾರ್ಯಕ್ರಮದಲ್ಲಿ ಹಲವಾರು ಸಾಧಕರು ತಮ್ಮ ಸುಖ ಮತ್ತು ದುಃಖದ ಕ್ಷಣಗಳನ್ನು ಹಂಚಿಕೊಳ್ಳುತ್ತಾರೆ. ಒಮ್ಮೊಮ್ಮೆ ಭಾವುಕರಾಗಿಬಿಡುತ್ತಾರೆ. ಹರಟೆ, ಮಾತು ಕಥೆ, ಸಾಧಕರು ತಮ್ಮ ಜೀವನದಲ್ಲಿ ನಡೆದು ಬಂದ ದಾರಿಯ ಬಗ್ಗೆ ಹೇಳಿಕೊಳ್ಳುವ ರೀತಿ ನೋಡುಗರರನ್ನು ಕಟ್ಟಿ ಹಾಕುತ್ತದೆ. ಈಗ ಒಬ್ಬ ಹಾಸ್ಯ ಕಲಾವಿದನ ಜೀವನದಲ್ಲಿ ಈ ಕಾರ್ಯಕ್ರಮ ಪ್ರಮುಖ ಪಾತ್ರ ವಹಿಸಿದೆ.

ಟೆನ್ನಿಸ್ ಕೃಷ್ಣ ಅವರ ಪಾಲಿಗೆ ಇದು ಅದೃಷ್ಟವಾದ ಕಾರ್ಯಕ್ರಮವಾಗಿದೆ

ವೀಕ್ ಎಂಡ್ ವಿಥ್ ರಮೇಶ್ ಕಾರ್ಯಕ್ರಮ ಇನ್ನೇನು ಕೊನೆ ಘಟ್ಟಕ್ಕೆ ಬಂದು ನಿಂತಿದೆ. ಇಂತಹದೆ ಒಂದು ಸಂದರ್ಭದಲ್ಲಿ ಒಬ್ಬ ಕಲಾವಿದನ ಸಿನಿ ವೃತ್ತಿಯ ಜೀವನವನ್ನು ಬದಲಾಯಿಸಿದ ಒಂದು ಹೆಗ್ಗಳಿಕೆಗೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ. ಹೌದು, ಸದಾ ನಮ್ಮನ್ನು ತೆರೆ ಮೇಲೆ ನಕ್ಕು ನಲಿಸುತ್ತ ಬರುತ್ತಿದ್ದ ಕಲಾವಿದರೆಂದರೆ ಅದು ಟೆನಿಸ್ ಕೃಷ್ಣ. ಹಲವಾರು ಕನ್ನಡ ಚಿತ್ರಗಳಲ್ಲಿ ಹಾಸ್ಯ ಪ್ರಧಾನವಾದ ಪಾತ್ರವನ್ನು ಮಾಡುತ್ತ ನಮಗೆ ಒಳ್ಳೆಯ ಮನೋರಂಜನೆ ನೀಡುತ್ತ ಬಂದಿದ್ದರು. ಇತ್ತೀಚಿಗೆ ಸಿನಿಮಾ ಅವಕಾಶಗಳಿಂದ ಟೆನಿಸ್ ಕೃಷ್ಣ ವಂಚಿತರಾಗಿದ್ದಾರೆ. ವೀಕ್ ಎಂಡ್ ವಿಥ್ ರಮೇಶ್ ಕಾರ್ಯಕ್ರಮ ಇವರ ಪಾಲಿಗೆ ಒಂದು ಅದೃಷ್ಟವಾದ ಕಾರ್ಯಕ್ರಮವಾಗಿದೆ ಎಂದು ಹೇಳಬಹುದಾಗಿದೆ.

ಹಳೆ ಕಲಾವಿದರಿಗೆ ಚಿತ್ರರಂಗದಲ್ಲಿ ಅವಕಾಶ ಸಿಗುತ್ತಿಲ್ಲ

ನವರಸ ನಾಯಕ ಜಗ್ಗೇಶ್ ವೀಕ್ ಎಂಡ್ ಟೆಂಟ್ ಗೆ ಬಂದಾಗ, ಟೆನಿಸ್ ಕೃಷ್ಣ ಅತಿಥಿಯಾಗಿ ಆಗಮಿಸಿದ್ದರು. ಆಗ ಅವರು ಆಡಿದ ಮಾತುಗಳು ಈಗ ಹೊಸ ತಿರುವು ಪಡೆದುಕೊಂಡಿದೆ. ಕಳೆದ ಮೂರು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಟೆನಿಸ್ ಕೃಷ್ಣ ಹಾಸ್ಯ ನಟರಾಗಿ ಗುರುತಿಸಿಕೊಂಡಿದ್ದರು. ಆದರೆ ಈಗ ಮೊದಲನೇ ಬಾರಿಗೆ ಇವರು ನಿರ್ದೇಶಕರಾಗುತ್ತಿದ್ದಾರೆ. ವೀಕ್ ಎಂಡ್ ವಿತ್ ಕಾರ್ಯಕ್ರಮದಲ್ಲಿ ಇವರು ಆಗಮಿಸಿದ್ದಾಗ, ಹಳೆ ಕಲಾವಿದರಿಗೆ ಚಿತ್ರರಂಗದಲ್ಲಿ ಅವಕಾಶ ಸಿಗುತ್ತಿಲ್ಲ ಎಂದು ತಮ್ಮ ನೋವನ್ನು ವ್ಯಕ್ತ ಪಡಿಸಿದ್ದರು. ಇದನ್ನು ಗಮನಿಸಿದ ಅರುಣ್ ಹೊಸಕೊಪ್ಪ ಮತ್ತು ಅಚ್ಯುತ್ ಗೌಡ ಎನ್ನುವರು ಕೃಷ್ಣ ಅವರಿಗೆ ನಿರ್ದೇಶನದ ಜವಾಬ್ದಾರಿಯನ್ನು ಕೊಟ್ಟಿದ್ದಾರೆ.

‘ಮತ್ತೆ ಮತ್ತೆ’ ಎನ್ನುವ ಶೀರ್ಷಿಕೆಯನ್ನು ಇಟ್ಟಿದ್ದಾರೆ

ಟೆನಿಸ್ ಕೃಷ್ಣ ನಿರ್ದೇಶಿಸುತ್ತಿರುವ ಸಿನಿಮಾಗೆ ‘ಮತ್ತೆ ಮತ್ತೆ’ ಎನ್ನುವ ಶೀರ್ಷಿಕೆಯನ್ನು ಇಟ್ಟಿದ್ದಾರೆ. ಚಿತ್ರದ ಕಥೆ ಹಾಸ್ಯಮಯವಾಗಿದ್ದು, ಸಸ್ಪೆನ್ಸ್ ಅಂಶಗಳನ್ನು ನೀವು ಈ ಚಿತ್ರದಲ್ಲಿ ನೋಡಬಹುದಾಗಿದೆ. ಈ ಹಿಂದೆ ಕೊಂಚ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೃಷ್ಣ ಕೆಲಸ ಮಾಡಿದ್ದು, ಈಗ ಸಂಪೂರ್ಣವಾದ ನಿರ್ದೇಶನದ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ಈ ಚಿತ್ರದಲ್ಲಿ ಏಳು ಪ್ರಮುಖ ಪಾತ್ರಗಳಿವೆಯಂತೆ. ಕಲಾವಿದರನ್ನು ಆಡಿಷನ್ ಮಾಡುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here