ಹುಟ್ಟು ಹಬ್ಬಕ್ಕೆ ಮೋದಿಯವರಿಂದ ಊಹಿಸಲಾಗದ ಉಡುಗೊರೆ ಪಡೆದ ಸುರೇಶ್ ಅಂಗಡಿ

0
728

ರಾಜಕೀಯವನ್ನ ಸಂಪೂರ್ಣವಾಗಿ ತಿಳಿಯಬೇಕು ಅಂದ್ರೆ ಬಹಳ ಕಷ್ಟ ಪಡಬೇಕು. ಯಾಕಂದ್ರೆ ಅಂತ ಚದುರಂಗದ ಆಟ ಅದರಲ್ಲಿ ಇರುತ್ತೆ. ಚದುರಂಗ ಆಟ ಬೇಕಾದರೂ, ಸುಲಭವಾಗಿ ಕಲಿಯಬಹುದು. ಆದ್ರೆ ಈ ರಾಜಕೀಯ ಅನ್ನೋದನ್ನ ಅಷ್ಟು ಸುಲಭವಾಗಿ ಕಲಿಯಲು ಆಗುವುದಿಲ್ಲ. ಆದ್ರೆ ಕೆಲವರು ಅದರಲ್ಲಿ ಮಿಂದೆದಿದ್ದಾರೆ. ಹೌದು. ಮೊದಲಿನಿಂದಲೂ ರಾಜಕೀಯದಲ್ಲಿ ಇದ್ದು, ಪಕ್ಷಗಳ ಜೊತೆ ಒಡನಾಟ ಬೆಳೆಸಿ ಈಗ ದೊಡ್ಡ ದೊಡ್ಡ ಗದ್ದುಗೆ ಏರಿರುವವರು ನಮ್ಮಲ್ಲಿ ಇದ್ದಾರೆ.

ಹಿಂದಿನ ಚುನಾವಣೆ ಹೇಗಿತ್ತು ಅಂತ ನಮಗೆ ಸರಿಯಾಗಿ ಗೊತ್ತಿಲ್ಲ. ಆದ್ರೆ ಈಗಿನ ಚುನಾವಣೆ ಮಾತ್ರ, ಕುತೂಹಲದ ಜೊತೆಗೆ, ಬೇಸರವೂ ತರಿಸುತ್ತೆ. ಯಾಕಂದ್ರೆ ಸ್ಥಾನ ಯಾರಿಗೆ ಸಿಗಬಹುದು ಅನ್ನೋದು ಕುತೂಹಲವಾದರೆ, ನಾಯಕರ ಕೆಲವು ಕೆಲಸಗಳು ಜನರಲ್ಲಿ ಬೇಸರ ತರಿಸುತ್ತವೆ. ಆದರೂ ಕೆಲವು ನಾಯಕರು ಹೇಗೆ ಅಂದ್ರೆ, ತಮ್ಮ ಅಧಿಕಾರದಿಂದ ಜನರ ಮನಸ್ಸಲ್ಲಿ ತೀವ್ರವಾಗಿ ಉಳಿದಿದ್ದಾರೆ. ಕೆಲವು ಬಾರಿ ಅವರು, ಜನರ ಕಷ್ಟಕ್ಕೆ ಸ್ಪಂದಿಸಿಲ್ಲ ಅಂದ್ರು, ಜನರು ಅವರನ್ನ ಕೈ ಬಿಡುವುದಿಲ್ಲ. ಈ ಸಾಲಿಗೆ ಸುರೇಶ್ ಚನ್ನಬಸಪ್ಪ ಅಂಗಡಿ ಅವರು ಸೇರುತ್ತಾರೆ. ಹೌದು. ಇವರು ಬೆಳಗಾವಿಯ ಜನನಾಯಕರಾಗಿದ್ದಾರೆ.

ಗೆಲುವಿನ ನಗೆ ಬೀರಿರುವ ಸುರೇಶ್ ಅಂಗಡಿ

ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಆಯ್ಕೆಯಾಗಿ, ಈ ಬಾರಿ ನರೇಂದ್ರ ಮೋದಿ ಸಂಪುಟದಲ್ಲಿ ಮಂತ್ರಿಯಾಗಿ ಮಿಂಚಲಿರುವ ಸುರೇಶ್ ಚನ್ನಬಸಪ್ಪ ಅಂಗಡಿ ಅವರು ಜನಪ್ರಿಯತೆ ಮತ್ತು ವಿವಾದಗಳನ್ನು ಸಮನಾಗಿ ಗಳಿಸಿರುವ ಜನನಾಯಕ. 2014ರಲ್ಲಿಯೇ ಸುರೇಶ್ ಅಂಗಡಿ ಅವರು ಹ್ಯಾಟ್ರಿಕ್ ಸಾಧಿಸಿದ್ದರು. ಈಗ ಕೇಂದ್ರ ಸಚಿವರಾಗುವ ಅವಕಾಶ ಅವರಿಗೆ ಒದಗಿ ಬಂದಿದೆ. ಇಲ್ಲಿಯವರೆಗೂ, ಜನರ ಕಷ್ಟ ಸುಖಕ್ಕೆ ಆಗಾಗ ಸ್ಪಂಧಿಸುತ್ತಿದ್ದರು. ಅದರಂತೆ ಈಗ ಕೇಂದ್ರ ಸಚಿವರಾದ ನಂತರವೂ ಬೆಳಗಾವಿ ಲೋಕಸಭಾ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಮಾಡಲಿ ಎಂಬುದು ಅಲ್ಲಿನ ಜನರ ಆಶಯ.

ರೈಲ್ವೆ ಸಚಿವರಾದ ಸುರೇಶ್ ಅಂಗಡಿ

ಈ ಬಾರಿ ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿರುವ ಸುರೇಶ್ ಅಂಗಡಿ ಅವರು, ಸಚಿವರಾಗಿದ್ದಾರೆ. ಹೌದು ಈ ಬಾರಿಯ ಕದನದಲ್ಲಿ ಕಾಂಗ್ರೆಸ್ಸಿನ ಅಭ್ಯರ್ಥಿ ಡಾ. ವಿಎಸ್ ಸಾಧುನವರ್ ಅವರನ್ನು 391,304 ಮತಗಳ ಭಾರೀ ಅಂತರದಿಂದ ಅಂಗಡಿ ಸದೆಬಡಿದಿದ್ದಾರೆ. ಇಂದು ಬಹಿರಂಗಪಡಿಸಿದ ಸಚಿವರುಗಳ ಹೆಸರಿನಲ್ಲಿ ಸುರೇಶ್ ಅಂಗಡಿಯವರ ಹೆಸರು ಸಹ ಸೇರಿದ್ದು, ಅವರಿಗೆ ಇದು ಬಹಳ ಸಂತೋಷ ತರಿಸಿದೆ. ಹೌದು. ಅವರನ್ನ ರಾಜ್ಯದ ರೈಲ್ವೆ ಸಚಿವರನ್ನಾಗಿ ಮಾಡಲಾಗಿದೆ. ಈ ಬಾರಿ ಮಂತ್ರಿಗಿರಿ ಒಲಿದು ಬರುತ್ತಿದ್ದಂತೆ ಬೆಳಗಾವಿಯ ಅವರ ಮನೆಯಲ್ಲಿ ಭಾರೀ ಸಂತಸದ ವಾತಾವರಣ ಸೃಷ್ಟಿಯಾಗಿದೆ. ಸಿಹಿ ಹಂಚಿ, ಪಟಾಕಿ ಸಿಡಿ ಮನೆಮಂದಿ ಮತ್ತು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ರಾಜ್ಯದ ನಾಲ್ವರು ಸಂಸದರಲ್ಲಿ ಒಬ್ಬರು

ಪ್ರಧಾನಿ ಮೋದಿ ಅವರ ಎರಡನೇ ಅವಧಿಯಲ್ಲಿ ಸಚಿವರಿಗೆ ಖಾತೆಗಳನ್ನ ಸಂಸದರಿಗೆ ತಿಳಿಸಿದ್ದಾರೆ. ಅದರಲ್ಲಿ ನಮ್ಮ ರಾಜ್ಯದ ನಾಲ್ವರು ಸಂಸದರು ಸಹ ಸೇರಿದ್ದಾರೆ. ಅದರಲ್ಲಿ ಸುರೇಶ್ ಅಂಗಡಿ ಅವರು ಸಹ ಸೇರಿದ್ದಾರೆ. ಇದೇ ಮೊದಲ ಬಾರಿಗೆ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿದೆ. ಇದರಿಂದ ಅವರು ಬಹಳಷ್ಟು ಸಂತಸ ವ್ಯಕ್ತಪಡಿಸಿದ್ದಾರೆ. ಅದು ಅಲ್ಲದೆ, ಅವರ ಹುಟ್ಟು ಹಬ್ಬದ ಸಮಯದಲ್ಲೇ, ಈ ಅಧಿಕಾರ ನೀಡಿರುವುದು ಅವರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಹೌದು. ನಾಳೆ ಅವರ ಹುಟ್ಟುಹಬ್ಬವಿದೆ, ಇದೇ ಸಮಯದಲ್ಲಿ ಅವರಿಗೆ ಅಧಿಕಾರ ಸಿಕ್ಕಿರುವುದು, ಮೋದಿಯವರ ದೊಡ್ಡ ಉಡುಗೊರೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ನಮ್ಮ ರಾಜ್ಯದ ನಾಲ್ಕು ಜನ ಸಂಸದರಿಗೆ ಸಚಿವ ಸ್ಥಾನ ಸಿಕ್ಕಿರುವುದು ಕರ್ನಾಟಕದ ಜನತೆಗೆ ಬಹಳಷ್ಟು ಸಂತಸ ತರಿಸಿದೆ. ಆದ್ರೆ ಅವರು ತಮ್ಮ ಅಧಿಕಾರವನ್ನ ಸದುಪಯೋಗ ಪಡಿಸಿಕೊಂಡು, ಜನರಿಗೆ ಒಳಿತು ಮಾಡಲಿ ಅನ್ನೋದು ಎಲ್ಲರ ಆಸೆಯಾಗಿದೆ.

LEAVE A REPLY

Please enter your comment!
Please enter your name here