ಪುಟ್ಟ ಬಡ ಮಕ್ಕಳಿಗಾಗಿ ಶಾಲೆ ತೆರೆಯುತ್ತಿರುವ ಸನ್ನಿ ಲಿಯೋನ್

0
1491
sunny leon

ಸನ್ನಿ ಲಿಯೋನ್ ಹೆಸರು ಕೇಳಿದರೆ, ಪಡ್ಡೆ ಹುಡುಗರೆಲ್ಲ, ನಿದ್ದೆಯಿಂದ ಎದ್ದೇಳುತ್ತಾರೆ. ಯಾಕಂದ್ರೆ ಸನ್ನಿ ತಮ್ಮ ನಟನೆ ಹಾಗು ಮೈಮಾಟದಿಂದ ಎಲ್ಲರನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ. ಹೌದು. ಈ ಮೊದಲು ಪೋರ್ನ್ ಸ್ಟಾರ್ ಆಗಿದ್ದ ಸನ್ನಿ ಲಿಯೋನ್ ನಂತರ ಬಾಲಿವುಡ್ ಗೆ ಪ್ರವೇಶ ಮಾಡುತ್ತಾರೆ. 7 ವರ್ಷಗಳ ಹಿಂದೆ ಬಾಲಿವುಡ್ ಗೆ ಪ್ರವೇಶ ಮಾಡಿದ ಸನ್ನಿ, ಈಗ ಎಲ್ಲ ನಾಯಕಿಯರ ಸಾಲಿಗೆ ಅವರು ಸಹ ಸೇರಿದ್ದಾರೆ. ಸನ್ನಿ ಬಾಲಿವುಡ್ ನ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ದಕ್ಷಿಣ ಕನ್ನಡ, ತಮಿಳು ಹಾಗು ಮಲಯಾಳಂ ಚಿತ್ರಗಳಲ್ಲೂ ನಟಿಸಲು ಸಜ್ಜಾಗುತ್ತಿದ್ದಾರೆ. ಆದ್ರೆ ಇಷ್ಟೆಲ್ಲಾ ಸಿನಿಮಾಗಳಲ್ಲಿ ನಟಿಸಿ, ಅಭಿಮಾನಿಗಳನ್ನ ಪಡೆದುಕೊಂಡಿರುವ ನಟಿಯನ್ನ, ಜನರು ಒಬ್ಬ ನಾಯಕಿಯಾಗಿ ಇಷ್ಟ ಪಡುವುದಕ್ಕಿಂತ, ಸಮಾಜ ಸೇವಕಿಯಾಗಿ ಇಷ್ಟ ಪಡುತ್ತಾರೆ. ಅದರಂತೆ ಸನ್ನಿ ಕೂಡ, ಈಗ ಮತ್ತೊಂದು ಸಮಾಜ ಸೇವೆಯ ಕೆಲಸಕ್ಕೆ ಮುಂದಾಗಿದ್ದಾರೆ.

ಸಮಾಜ ಸೇವೆಯಲ್ಲಿ ನಿರತಳಾಗಿರುವ ಸನ್ನಿ

ನಿಜಕ್ಕೂ ಸನ್ನಿಲಿಯೋನ್ ಗೆ ಅಭಿಮಾನಿಗಳ ದೊಡ್ಡ ತಾರಾ ಬಳಗವೇ ಇದೆ. ಅದರಲ್ಲೂ ಪಡ್ಡೆ ಹುಡುಗರು ಸನ್ನಿಯನ್ನ ಕನಸಿನಲ್ಲೂ ಸಹ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಇಂಥ ಸನ್ನಿ, ಸಿನಿಮಾಗಿಂತ, ಹೆಚ್ಚು ಆಸಕ್ತಿ ತೋರಿಸುವ ವಿಷಯ ಅಂದ್ರೆ, ಅದು ಸಮಾಜ ಸೇವೆಯತ್ತ. ಹೌದು. ಸನ್ನಿಗೆ ಸಿನಿಮಾದಲ್ಲಿ ನಟಿಸುವುದಕ್ಕಿಂತ, ಸಮಾಜ ಸೇವೆ ಕಾರ್ಯಗಳಲ್ಲಿ ತೊಡಗುವುದು ಅಂದ್ರೆ ಬಹಳ ಇಷ್ಟ. ಹಾಗಾಗಿ ಸನ್ನಿ ಈಗಾಗಲೇ ಸಾಕಷ್ಟು ಸಮಾಜ ಸೇವೆ ಕಾರ್ಯಗಳನ್ನ ಮಾಡಿದ್ದಾರೆ. ಹೌದು. ಬಡವರಿಗೆ ನೆರವಾಗುದು, ಅಥವಾ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಮಾಡುತ್ತಿದ್ದಾರೆ. ಇದರಿಂದಲೇ ಅಭಿಮಾನಿಗಳು ಸಹ ಸನ್ನಿಯನ್ನ ಬಹಳಷ್ಟು ಇಷ್ಟ ಪಡುತ್ತಾರೆ. ಅದರಂತೆ, ಸನ್ನಿ ಈಗ ಒಂದು ಶಾಲೆಯನ್ನ ಕಟ್ಟಿಸೋಕೆ ನಿರ್ಧಾರ ಮಾಡಿದ್ದಾರೆ.

ಪುಟ್ಟ ಮಕ್ಕಳಿಗಾಗಿ ಶಾಲೆ ತೆರೆಯುತ್ತಿರುವ ಸನ್ನಿ ಹಾಗೂ ಡೇನಿಯಲ್

ಸನ್ನಿ ಪುಟ್ಟ ಮಕ್ಕಳಿಗಾಗಿ ಶಾಲೆ ತೆರೆಯಬೇಕೆಂದು ನಿರ್ಧಾರ ಮಾಡಿದ್ದಾರೆ. ಹೌದು. ಸನ್ನಿಲಿಯೋನ್ ಪತಿ, ಡೇನಿಯಲ್ ಗೆ ಒಂದು ಶಾಲೆ ತೆರೆಯಬೇಕು ಅನ್ನೋದು ತುಂಬಾ ದಿನಗಳ ಕನಸಾಗಿತ್ತಂತೆ. ಆದರೆ ಅದಕ್ಕೆ ಇಷ್ಟು ದಿನ ಕಾಲ ಕೂಡಿಬಂದಿರಲಿಲ್ಲ. ಆದ್ರೆ ಈಗ ಸನ್ನಿ ಹಾಗು ಅವರ ಪತಿ ಡೇನಿಯಲ್ ಶಾಲೆ ಪ್ರಾರಂಭಿಸುವುದಕ್ಕೆ ನಿರ್ಧಾರ ಮಾಡಿದ್ದಾರೆ. ಅಲ್ಲದೆ 3 ಮಕ್ಕಳ ತಾಯಿಯಾಗಿರುವ ಸನ್ನಿಗೆ ಮಕ್ಕಳೆಂದರೆ ಬಹಳ ಇಷ್ಟವಂತೆ. ಹಾಗಾಗಿ ಪುಟ್ಟ ಮಕ್ಕಳಿಗಾಗಿ ಶಾಲೆ ತೆರೆಯಬೇಕು ಅಂತ, ಸನ್ನಿ ನಿರ್ಧಾರ ಮಾಡಿ, ಈಗ ಶಾಲೆಯ ನಿರ್ಮಾಣಕ್ಕೆ ಇಳಿದಿದ್ದಾರೆ.

ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿರುವ ಶಾಲೆ

ಇನ್ನೂ ಪುಟ್ಟ ಮಕ್ಕಳಿಗಾಗಿ ಶಾಲೆ ಕಟ್ಟಿಸುತ್ತಿರುವ ಸನ್ನಿ ಹಾಗೂ ಡೇನಿಯಲ್ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. ಹೌದು. ಶಾಲೆಯ ಬಗ್ಗೆ ಮಾತನಾಡಿದ ಡೇನಿಯಲ್, ಶಾಲೆ ಅಂದ್ರೆ ಕೇವಲ ಮಕ್ಕಳಿಗೆ ಪಾಠ, ಪ್ರವಚನಗಳಿಗೆ ಸೀಮಿತವಾಗಿರಬಾರದು. ಬದಲಿಗೆ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿರಬೇಕು ಎಂದು ಹೇಳಿದ್ದಾರೆ. ಇತ್ತ ಸನ್ನಿ ಕೂಡ, ತಮ್ಮ ಮನದಾಳದ ಮಾತನ್ನು ಹೇಳಿದ್ದು, ಮಕ್ಕಳಿಗೆ ಬಾಲ್ಯದಲ್ಲಿ ಯಾವ ಯಾವ ವಿಷಯಗಳ ಬಗ್ಗೆ ಹೆಚ್ಚು ಒತ್ತು ನೀಡಬೇಕು ಎಂಬುದರ ಬಗ್ಗೆ ಗಮನ ನೀಡುತ್ತಿದ್ದೇವೆ. ಜೊತೆಗೆ ಬಹಳಷ್ಟು ಕ್ರಿಯೇಟಿವ್ ಆಗಿ ಈ ಶಾಲೆಯನ್ನ ನಿರ್ಮಿಸಲಾಗುತ್ತಿದೆ. ಒಟ್ಟಿನಲ್ಲಿ ಮಕ್ಕಳಿಗೆ, ಎಲ್ಲ ಶಾಲೆಗಳ ರೀತಿಯಲ್ಲಿ ಹೋಮ್ ವರ್ಕ್, ನೋಟ್ಸ್ ಅಂತೆಲ್ಲಾ ಹೆಚ್ಚಿನ ಕಾಟ ಇಲ್ಲಿ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ಸಿನಿ ತಾರೆಯರು ಸಮಾಜ ಸೇವೆಯತ್ತ ಮುಖ ಮಾಡುತ್ತಿರುವುದು ಎಲ್ಲರಿಗೂ ಸಂತೋಷದ ವಿಷಯವಾಗಿದೆ. ಆದ್ರೆ ಸನ್ನಿ ಈ ರೀತಿಯ ಸಹಾಯ ಮಾಡುತ್ತಿರುವುದೇನು ಹೊಸದಲ್ಲ. ಈಗಾಗಲೇ ಸನ್ನಿ ಈ ರೀತಿಯ ಹಲವು ಕೆಲಸಗಳನ್ನ ಮಾಡಿ, ಎಲ್ಲರಿಂದ ಸೈ ಎನಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲೂ ಸನ್ನಿಯ ಸಮಾಜ ಸೇವೆ ಹೀಗೆ ಮುಂದುವರೆಯಬೇಕು.

LEAVE A REPLY

Please enter your comment!
Please enter your name here