ಮಕ್ಕಳ ಹೃದಯಕ್ಕಾಗಿ ಬ್ಯಾಟ್ ಬೀಸಿದ ಸುನಿಲ್ ಗವಾಸ್ಕರ್

0
700

ತಂತ್ರಜ್ಞಾನ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ನಮ್ಮ ದೇಶ ಅಭಿವೃದ್ಧಿ ಆಗಿದ್ದರು ಸಹ, ಬಡತನ ಎನ್ನುವುದು ಮಾತ್ರ ದೇಶದಲ್ಲಿ ಹೆಚ್ಚಾಗುತ್ತ ಹೋಗುತ್ತಿದೆ ಹೊರತು ಕಡಿಮೆಯಾಗುವ ಯಾವ ಲಕ್ಷಣಗಳು ಸಹ ಕಂಡು ಬರುತ್ತಿಲ್ಲ. ಅನೇಕ ಜನರು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಜನರ ಕಷ್ಟಕ್ಕೆ ನೆರವಾಗುತ್ತಿದ್ದಾರೆ. ಇತ್ತೀಚಿಗಷ್ಟೆ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿರುವುದರಿಂದ ನಾಗರಿಕರು ತತ್ತರಿಸಿ ಹೋಗಿದ್ದರು. ಬಡವರು ತಮ್ಮ ಮನೆಯನ್ನು ಕಳೆದುಕೊಂಡು ಬೀದಿಗೆ ಬಿದಿದ್ದರು. ಅನೇಕ ಜನರಿಂದ ದೇಣಿಗೆಯನ್ನು ಸಂಗ್ರಹಿಸಿದ್ದು, ಇದರಿಂದ ಜನರ ಕಷ್ಟಕ್ಕೆ ಬಹಳ ಅನುಕೂಲವಾಗಿತ್ತು. ಮಣ್ಣಿನಿಂದ ಹುಟ್ಟಿ ಮಣ್ಣಿನಲ್ಲೆ ಹೋಗಬೇಕಾದರೆ ಬದುಕಿರುವಾಗಲೆ ಮಣ್ಣಿನ ಋಣವನ್ನು ತೀರಿಸಿಯೆ ಹೋಗಬೇಕಾಗಿದೆ.

ಗವಾಸ್ಕರ್ ಅವರಿಂದ ಉತ್ತಮವಾದ ನಿರ್ಧಾರ

ಈಗ ಭಾರತೀಯ ಕ್ರಿಕೆಟ್ ಆಟಗಾರರಾದ ಸುನಿಲ್ ಗವಾಸ್ಕರ್ ಅವರು ಒಂದು ಉತ್ತಮವಾದ ಸಮಾಜ ಸೇವೆ ಮಾಡಲು ಮುಂದಾಗಿದ್ದಾರೆ. ಹೌದು, ಗವಾಸ್ಕರ್ ಅವರು 600 ಮಕ್ಕಳ ಹೃದಯದ ಶಾಸ್ತ್ರ ಚಿಕಿತ್ಸೆಯ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಇದರ ಸಲುವಾಗಿ ಅಮೆರಿಕಾ ದಲ್ಲಿ ಫಂಡ್ ಅನ್ನು ಕಲೆಕ್ಟ್ ಮಾಡಿದ್ದರು. ಹಾರ್ಟ್ ಟು ಹಾರ್ಟ್ ಎನ್ನುವ ಸಂಸ್ಥೆಗೆ ಗವಾಸ್ಕರ್ ಅವರು ಸೇರ್ಪಡೆಯಾಗಿದ್ದರು. ಇತ್ತೀಚಿಗಷ್ಟೆ ಇವರು ಬ್ಯಾಟ್ ಫಾರ್ ಲೈಫ್ ಎನ್ನುವ ನಗರ ಪ್ರವಾಸವನ್ನು ಹಮ್ಮಿಕೊಂಡಿದ್ದರು. ಹೃದಯಕ್ಕೆ ಸಂಬಂಧ ಪಟ್ಟ ಕಾಯಿಲೆಯ ಕುರಿತು ಜಾಗೃತಿ ಮೂಡಿಸಲು ಹಾಗು ಉಚಿತ ಹೃದಯ ಶಸ್ತ್ರ ಚಿಕಿತ್ಸೆಗಾಗಿ ಜನರು ಹೆಚ್ಚಾಗಿ ಭಾಗವಹಿಸಬೇಕೆನ್ನುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ನನ್ನ ಪಾಲಿನ ಅದ್ಬುತ ಆರಂಭಿಕ ಇನ್ನಿಂಗ್ಸ್ ಇದಾಗಿದೆ 

ಭಾರತ ದೇಶದಲ್ಲಿರುವ ಮಕ್ಕಳಿಗೆ ಉಚಿತವಾಗಿ ಹೃದಯ ಶಸ್ತ್ರ ಚಿಕಿತ್ಸೆಯ ಕಾರ್ಯಾಚರಣೆಗಾಗಿ ಅಮೆರಿಕಾ ಪ್ರವಾಸ ತೆಗೆದುಕೊಂಡಿದ್ದು ನಿಜಕ್ಕೂ ನನ್ನ ಪಾಲಿನ ಅದ್ಬುತ ಆರಂಭಿಕ ಇನ್ನಿಂಗ್ಸ್ ಆಗಿದೆ. ಹಲವಾರು ಪ್ರದೇಶಗಳಲ್ಲಿ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ನಾನು ಅವರಿಗೆ ತುಂಬಾ ಕೃತಜ್ಞನಾಗಿದ್ದೇನೆ ಎಂದು ಗವಾಸ್ಕರ್ ಅವರು ತಿಳಿಸಿದ್ದಾರೆ. ಸಹಾಯ ಮಾಡಲು ಬಂದವರಿಗೆ ಬ್ಯಾಟ್ ಗೆ ತಮ್ಮ ಸಹಿಯನ್ನು ನೀಡಿ ಕಾಣಿಕೆಯಾಗಿ ನೀಡಿದ್ದಾರೆ. ಭಾರತದಲ್ಲಿ ನೆಲೆಸಿರುವ ಶ್ರೀ ಸತ್ಯ ಸಾಯಿ ಸಂಜೀವಿನಿ ಆಸ್ಪತೆಯವರು ಶಸ್ತ್ರ ಚಿಕಿತ್ಸೆ ಮಾಡಲು ಒಪ್ಪಿಕೊಂಡಿದ್ದಾರೆ. 2012 ರಿಂದ ಇಲ್ಲಿಯವರೆಗೆ ಏನಿಲ್ಲ ಎಂದರು ೧೦,೦೦೦ ಶಸ್ತ್ರ ಚಿಕಿತ್ಸೆಯನ್ನು ಈ ಆಸ್ಪತ್ರೆಯವರು ಮಾಡಿದ್ದಾರೆ.

ಆಸ್ಪತ್ರೆ ಅಧ್ಯಕ್ಷರ ಮಾತು

ಈ ವಿಷಯದ ಕುರಿತು ಆಸ್ಪತ್ರೆಯ ಅಧ್ಯಕ್ಷರಾದ ಸಿ ಶ್ರೀನಿವಾಸ್ ಅವರು ಪ್ರತಿಕ್ರಿಯಿಸಿದ್ದಾರೆ. ಸುಮಾರು 36,000 ಕ್ಕು ಅಧಿಕವಾದ ಮಕ್ಕಳನ್ನು ಶಸ್ತ್ರ ಚಿಕಿತ್ಸೆಗಾಗಿ ನೋಂದಾಯಿಸಿಕೊಂಡಿದ್ದೇವೆ ಇನ್ನು ಹೆಚ್ಚು ಜನರು ಚಿಕಿತ್ಸೆಯ ಕಾರ್ಯಕ್ರಮದಲ್ಲಿ ಭಾಗವಹಿಸುವದಕ್ಕಾಗಿ ಕಾಯುತ್ತಿದ್ದಾರೆ. ಚಿಕಿತ್ಸೆ ನೀಡದಿದ್ದರೆ ಬಹಳ ಜನರು ಹೆಚ್ಚು ಅವಧಿಯ ಕಾಲದವರೆಗು ಬದುಕುವುದಿಲ್ಲ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here