ಮೃತ ಯೋಧರ ಕುಟುಂಬಕ್ಕೆ ಊಹೆಗೂ ಮೀರಿದ ಸಹಾಯ ಮಾಡಲು ಮುಂದಾದ ನಟ ಸುಮನ್

0
784

ಮನುಷ್ಯ ದೇವರನ್ನು ಕಂಡಿಲ್ಲ. ಆದ್ರೆ ದೇವರ ರೂಪದಲ್ಲಿರುವ ವ್ಯಕ್ತಿಗಳನ್ನು ಕಂಡಿದ್ದಾನೆ. ಅವರೇ ಯೋಧರು. ಹೌದು. ತಮ್ಮ ಜೀವವನ್ನು ಲೆಕ್ಕಿಸದೆ, ಇಡೀ ದೇಶವನ್ನು ಅವರು ಗಡಿಯಲ್ಲಿ ನಿಂತು ಕಾಯುತ್ತಿದ್ದಾರೆ. ನಾವೆಲ್ಲರೂ ಇಷ್ಟೊಂದು ನೆಮ್ಮದಿಯಾಗಿ ಬದುಕುತ್ತಿದ್ದೇವೆ ಅಂದ್ರೆ ಅದು ಅವರು ಕೊಟ್ಟ ಭಿಕ್ಷೆ. ಆದ್ರೆ ಅವರು ಜೊತೆಗೆ ಅವರ ಮನೆಯವರು ಮಾತ್ರ ಬಹಳಷ್ಟು ಕಷ್ಟ ಪಡುತ್ತಿದ್ದಾರೆ. ಹೌದು. ಗಡಿಯಲ್ಲಿ ಯೋಧನಿದ್ದರೆ, ಇತ್ತ ಅವರ ಮನೆಯವರು ಅವರ ಚಿಂತೆಯಲ್ಲೇ ಕೊರಗುತ್ತಿರುತ್ತಾರೆ. ಇನ್ನು ಇಷ್ಟೋ ಕುಟುಂಬಗಳಲ್ಲಿ ಯೋಧರು ವೀರ ಮರಣ ಹೊಂದಿದ್ದಾರೆ. ಆದ್ರೆ ಅಂಥವರ ಮನೆಯವರ ಬಗ್ಗೆ ಒಂದೆರಡು ದಿನ ಜನರು ಕಣ್ಣೀರು ಹಾಕುತ್ತಾರೆ. ನಂತರ ಮರೆತು ಬಿಡುತ್ತಾರೆ. ಆದ್ರೆ ಅದರಲ್ಲಿ ಎಲ್ಲೋ ಕೆಲವರು ಮಾತ್ರ ಯೋಧರ ಕುಟುಂಬಗಳಿಗೆ ಸಹಾಯ ಮಾಡುತ್ತಾರೆ. ಅದರಲ್ಲಿ ನಟ ಸುಮನ್ ಕೂಡ ಒಬ್ಬರಾಗಿದ್ದಾರೆ. ಹೌದು. ಮೃತ ಯೋಧರ ಕುಟುಂಬಗಳಿಗೆ ಸಹಾಯವಾಗುವ ಸಲುವಾಗಿ, ಒಂದು ಕಾರ್ಯ ಕೈಗೊಂಡಿದ್ದಾರೆ.

ಮೃತ ಯೋಧರ ಕುಟುಂಬದ ನೆರವಿಗೆ ನಿಂತ ಸುಮನ್

ಸಾಮಾನ್ಯವಾಗಿ ಮೃತ ಯೋಧರ ಕುಟುಂಬಕ್ಕೆ ಸರ್ಕಾರ ಸಹಾಯವನ್ನು ಮಾಡುತ್ತದೆ. ಆದ್ರೆ ಅದು ಹೆಚ್ಚು ದಿನ ಉಳಿಯುವುದಿಲ್ಲ. ಯಾಕಂದ್ರೆ ಸರ್ಕಾರ ನೀಡುವ ಧನ ಸಹಾಯ ಇಂದು ಇದ್ದು, ನಾಳೆ ಖಾಲಿಯಾಗುತ್ತದೆ. ಆದ್ರೆ ಎಷ್ಟೋ ಯೋಧರ ಕುಟುಂಬಗಳಿಗೆ ಉಳಿದುಕೊಳ್ಳಲು ಮನೆಗಳಿಲ್ಲ. ಹಾಗಾಗಿ ನಟ ಸುಮನ್ ಮೃತ ಯೋಧರ ಕುಟುಂಬಗಳಿಗೆ ಸಹಾಯವಾಗಲೆಂದು ಮನೆ ಕಟ್ಟುವುದಕ್ಕಾಗಿ ಭೂಮಿಯನ್ನು ನೀಡುತ್ತಿದ್ದಾರೆ. ಹೌದು. ಮೃತ ಯೋಧರ ಹಲವು ಕುಟುಂಬಗಳಿಗೆ ವಾಸಿಸಲು ಸರಿಯಾದ ಮನೆಗಳಿಲ್ಲ. ಅವರು ಬಹಳಷ್ಟು ಕಷ್ಟ ಪಡುತ್ತಿದ್ದಾರೆ. ಹಾಗಾಗಿ ಅವರಿಗೆ ಉಳಿದುಕೊಳ್ಳಲು ಮನೆಬೇಕಾಗಿರುವುದರಿಂದ, ಅವರ ಸಹಾಯಕ್ಕೆ ಸುಮನ್ ನಿಂತಿದ್ದಾರೆ. ಅಂದ್ರೆ ಯೋಧರಿಗೆ ಮನೆ ಕಟ್ಟಿಕೊಳ್ಳಲೆಂದು ಭೂಮಿ ನೀಡುತ್ತಿದ್ದಾರೆ.

175 ಎಕರೆ ಭೂಮಿಯನ್ನು ಸಮರ್ಪಣೆ ಮಾಡುತ್ತಿರುವ ಸುಮನ್

ಮೃತ ಯೋಧರ ಕುಟುಂಬಕ್ಕೆ ಮನೆ ಕಟ್ಟಿಸಿಕೊಳ್ಳುವ ಸಲುವಾಗಿ ಸುಮಾರು 175 ಎಕರೆ ಭೂಮಿಯನ್ನು ನೀಡುತ್ತಿದ್ದಾರೆ. ಹೌದು. ಅವರಿಗೆ ತಾನು ಜೀವನದಲ್ಲಿ ಏನು ಮಾಡಿದ್ದೇನೆ ಎಂಬುದಕ್ಕೆ ಒಂದು ಸಾಕ್ಷಿಯು ಇರಲಿಲ್ಲವಂತೆ. ಅಂದ್ರೆ ದೇಶಕ್ಕಾಗಿ ನಾನು ಏನಾದರು ಮಾಡಬೇಕು ಅನ್ನೋದು ಅವರ ಆಸೆಯಾಗಿತ್ತಂತೆ. ಆದರೆ ಅದಕ್ಕೆ ಏನು ಮಾಡುವುದು ಎಂಬುದು ಮಾತ್ರ ಗೊತ್ತಿರಲಿಲ್ಲವಂತೆ. ಹಾಗಾಗಿ ನಾನು ಯೋಧರ ಕುಟುಂಬಕ್ಕೆ ನೆರವಾಗಬೇಕು ಎನ್ನುವ ಸಲುವಾಗಿ, ಭೂಮಿಯನ್ನು ನೀಡಿದ್ದಾರೆ. ಇನ್ನು ಅವರು ಈ ಭೂಮಿಯಲ್ಲಿ ಸ್ವಂತ ಸ್ಟುಡಿಯೋ ಕಟ್ಟಿಸಬೇಕು ಎಂದು ತಿಳಿದಿದ್ದರಂತೆ. ಆದರೆ ಅದರ ಆಸೆಯನ್ನು ಕೈ ಬಿಟ್ಟು, ಈ ವಿಚಾರವಾಗಿ ಭೂಮಿ ನೀಡಿದ್ದಾರೆ. ಜೊತೆಗೆ ಇತರರಿಗೂ ಕೆಲವು ಮಾತುಗಳನ್ನು ಹೇಳಿದ್ದಾರೆ. ನಾವು ದೇಶವನ್ನು ಕಾಪಾಡಿದರೆ, ದೇಶ ನಮ್ಮನ್ನು ಕಾಪಾಡುತ್ತದೆ. ಹಾಗಾಗಿ ದೇಶ ಕಾಯುತ್ತಿರುವ ಯೋಧರಿಗೆ ಗೌರವ ನೀಡಿ ಎಂದು ಹೇಳಿದ್ದಾರೆ.

ನಿಜಕ್ಕೂ ನಟ ಸುಮನ್ ಅವರ ಈ ಕಾರ್ಯಕ್ಕೆ ಅಭಿನಂದನೆ ತಿಳಿಸಲೇಬೇಕು. ಯಾಕಂದ್ರೆ ಧನಸಹಾಯ ನೀಡಿದರೆ ಅದು ಉಳಿಯುವುದಿಲ್ಲ ಎಂಬುದು ಅವರಿಗೆ ತಿಳಿದಿದೆ. ಹಾಗಾಗಿ ಅವರಿಗೆ ಕೊನೆಯವರೆಗೂ ನೆರವಾಗಬೇಕೆಂದು ಮನೆ ಕಟ್ಟಿಕೊಳ್ಳಲು ಭೂಮಿ ನೀಡಿ, ಈ ಮೂಲಕ ಯೋಧರಿಗೆ ಗೌರವ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here