ಮಂಡ್ಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿರುವ ಸಂಸದೆ ಸುಮಲತಾ ಅಂಬರೀಷ್

0
560
sumaltha pravaha

ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹದಿಂದ ಅಲ್ಲಿನ ಜನರ ಜೀವನ ಅಸ್ತವ್ಯಸ್ತವಾಗಿದೆ. ಹೌದು. ಉತ್ತರ ಕರ್ನಾಟಕ ಹಾಗು ಮಲೆನಾಡು ಪ್ರದೇಶಗಳಲ್ಲಿ ವರುಣ ತನ್ನ ರೌದ್ರ ನರ್ತನವನ್ನು ತೋರಿಸುತ್ತಿದೆ. ಇದರಿಂದ ಅಲ್ಲಿನ ಜನರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು, ಒದ್ದಾಡುವಂತಾಗಿದೆ. ಹೌದು. ಉತ್ತರ ಕರ್ನಾಟಕ ಸೇರಿದಂತೆ ಹಲವೆಡೆ ಅತಿಯಾದ ಮಳೆಯಿಂದಾಗಿ ಜನರು ಕಷ್ಟದಲ್ಲಿ ಬದುಕುತ್ತಿದ್ದಾರೆ. ಹಾಗಾಗಿ ಅವರ ಸಹಾಯಕ್ಕಾಗಿ ಇಡೀ ಕರ್ನಾಟಕದ ಜನತೆಯೇ ನಿಂತಿದೆ. ಈ ಮಧ್ಯದಲ್ಲಿ ಸುಮಲತಾ ಅಂಬರೀಷ್ ಅವರ ಮಾತು ಕೇಳಿಬಂದಿದೆ. ಮಂಡ್ಯದಲ್ಲಿ ಅತಿಯಾದ ಮಳೆಯಿಂದಾಗಿ ಅಲ್ಲಿನ ಜನರು ಕಷ್ಟ ಪಡುತ್ತಿದ್ದಾರೆ, ಆದ್ರೆ ಸಂಸದೆ ಸುಮಲತಾ ಅಂಬರೀಷ್ ಅವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಕೆಲವು ಜೆಡಿಎಸ್ ನಾಯಕರು ಆರೋಪ ಮಾಡುತ್ತಿದ್ದಾರಂತೆ. ಹಾಗಾಗಿ ಈಗ ಅದೇ ವಿಚಾರವಾಗಿಈಗ ಸುಮಲತಾ ಅವರು ತಿರುಗೇಟು ನೀಡಿದ್ದಾರಂತೆ.

ಪ್ರವಾಹ ಪೀಡಿತರ ನೆರವಿಗೆ ಮುಂದಾದ ಸಂಸದೆ ಸುಮಲತಾ

ಶತಮಾನಗಳಿಂದ ಇಂಥ ಮಳೆಯನ್ನು ಕರ್ನಾಟಕ ಕಂಡಿರಲಿಲ್ಲ. ಆದ್ರೆ ಈ ಬಾರಿ ಬಂದಿರುವ ಮಳೆಗೆ ಇಡೀ ಕರ್ನಾಟಕವೇ ತತ್ತರಿಸಿ ಹೋಗಿದೆ. ಅದರಲ್ಲಿ ಮಂಡ್ಯ ಜಿಲ್ಲೆಯ ಕೆಲವು ಭಾಗಗಳು ಸಹ ಸೇರಿವೆ. ಹೌದು. ಈ ಬಾರಿಯ ಮಳೆಗೆ ಮಂಡ್ಯ ಜಿಲ್ಲೆಯ ಕೆಲವು ತಾಲೂಕುಗಳು ಹಾಗು ಹಳ್ಳಿಗಳು ಸಹ ತತ್ತರಿಸಿ ಹೋಗಿವೆ. ಈ ಮಧ್ಯೆ ಸುಮಲತಾ ಅವರು ಜಿಲ್ಲೆಯಲ್ಲಿ ಇಲ್ಲ ಎಂಬ ಸುದ್ದಿ ಕೇಳಿಬಂದಿತ್ತು. ಆದ್ರೆ ಸುಮಲತಾ ಅವರು ಹೇಳಿಕೆ ನೀಡಿದವರಿಗೆ ತಿರುಗೇಟು ನೀಡಿದ್ದಾರೆ. ಹೌದು. ಕೆಲವು ದಿನಗಳಿಂದ ದೆಹಲಿಯ ಅಧಿವೇಶನದಲ್ಲಿ ಭಾಗಿಯಾಗಿದ್ದ ಸುಮಲತಾ ಅವರು ಇಂದು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರಂತೆ. ಹೌದು. ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲೆಂದು ಸುಮಲತಾ ಅವರು ಕೆಲವು ತಾಲೂಕು ಹಾಗು ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ.

ಜನರ ಕಷ್ಟವನ್ನು ನೇರವಾಗಿ ಆಲಿಸಲು ಸಂಪರ್ಕ ಸಭೆ ಹಮ್ಮಿಕೊಳ್ಳಲಾಗಿದೆ

ದೆಹಲಿಯಿಂದ ಹಿಂದಿರುಗಿರುವ ಸುಮಲತಾ ಅವರು ತಮ್ಮ ಹೇಳಿಕೆಯನ್ನು ಎಲ್ಲರ ಮುಂದೆ ತಿಳಿಸಿದ್ದಾರೆ. ಹೌದು. ನಾನು ದೆಹಲಿಯಲ್ಲಿ ಅಧಿವೇಶನಕ್ಕೆ ಹೋಗಿದ್ದೆ. ಆದರೂ ಇಲ್ಲಿನ ಪರಿಸ್ಥಿಯ ಬಗ್ಗೆ ನಾನು ಬಲ್ಲೆ. ಅದಕ್ಕೋಸ್ಕರ ಈಗ ಮಳೆಯಿಂದ ತೊಂದರೆಗೆ ಸಿಲುಕಿರುವ ಹಳ್ಳಿಗಳಿಗೆ ಭೇಟಿ ನೀಡಲಿದ್ದೇನೆ ಎಂದು ತಿಳಿಸಿದ್ದಾರೆ. ಜೊತೆಗೆ ಉತ್ತರ ಕರ್ನಾಟಕದಲ್ಲಿ ಆಗಿರುವಂತಹ ಪರಿಣಾಮ ಇಲ್ಲಿ ಆಗಿಲ್ಲ. ಆದರೂ ಕೆ ಆರ್ ಎಸ್ ಜಲಾಶಯದಿಂದ ನೀರು ಬಿಟ್ಟ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದ ಸಂತೇಮಾಳ, ನಿಮಿಷಾಂಭ ದೇವಾಲಯ, ದೊಡ್ಡಪಾಳ್ಯ, ಎಣ್ಣೆಹೊಳೆಕೊಪ್ಪಲು ಮುಂತಾದ ಗ್ರಾಮಗಳು ಪ್ರವಾಹಕ್ಕೆ ಸಿಲುಕಿವೆ. ಹಾಗಾಗಿ ಅಂತ ಗ್ರಾಮಗಳ ಜನರ ಕಷ್ಟವನ್ನು ಆಲಿಸಲು ಮುಂದಾಗಿದ್ದಾರೆ. ಜೊತೆಗೆ ಜನರು ತಮಗಿರುವ ಕಷ್ಟವನ್ನು ನೇರವಾಗಿ ಹೇಳಿಕೊಳ್ಳಲು ಒಂದು ನೇರ ಸಂಪರ್ಕ ಸಭೆಯನ್ನು ಕೂಡ ಹಮ್ಮಿಕೊಳ್ಳುತ್ತಾರಂತೆ.

ಪರಿಹಾರ ಘೋಷಣೆ ಮಾಡುವ ಸಾಧ್ಯತೆ ಇದೆಯಾ?

ಇನ್ನು ಮಳೆಯಿಂದ ಕಷ್ಟ ಪಡುತ್ತಿರುವ ಜನರು ತಮಗಾಗುತ್ತಿರುವ ಕಷ್ಟಗಳನ್ನು ಹೇಳಿಕೊಳ್ಳಲಿ ಎಂದು ನೇರ ಸಂಪರ್ಕ ಸಭೆ ಹಮ್ಮಿಕೊಳ್ಳಲಾಗಿದೆಯಂತೆ. ಹೌದು. ಜನರ ನೆರವಿಗಾಗಿ ಇದು ಒಂದು ಉಪಾಯವಂತೆ. ಯಾಕಂದ್ರೆ ಜನರಿಗೆ ಯಾವ ಕಷ್ಟ ಇದೆ ಅಂತ ಅವರು ನೇರವಾಗಿ ಹೇಳಿದಾಗ ಮಾತ್ರ ತಿಳಿಯೋದು ಅದಕ್ಕಾಗಿ ಈ ರೀತಿಯ ನೇರ ಸಂಪರ್ಕ ಸಭೆಯನ್ನು ಹಮ್ಮಿಕೊಳ್ಳಗಿದೆ ಎಂದು ತಿಳಿಸಿದ್ದಾರೆ. ಜೊತೆಗೆ ನೆರೆ ಸಂತ್ರಸ್ತರಿಗೆ ಪರಿಹಾರ ಘೋಷಣೆ ಮಾಡುವ ಸಾಧ್ಯತೆ ಇದೆಯಂತೆ. ಹೌದು. ಕೇಂದ್ರ ಸರ್ಕಾರದ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುವ ಸುಮಲತಾ ಅವರು ಪರಿಹಾರಕ್ಕಾಗಿ ಹಣ ಬಿಡುಗಡೆ ಮಾಡಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದ್ರೆ ಇದರ ಬಗ್ಗೆ ಸುಮಲತಾ ಅವರು ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿಲ್ಲ.

sumalatha sadana

ಒಟ್ಟಿನಲ್ಲಿ ಸುಮಲತಾ ಅವರು ಸಂಸದೆಯದಾಗಿನಿಂದ ಮಂಡ್ಯ ಜಿಲ್ಲೆಗೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡುತ್ತ ಬಂದಿದ್ದಾರೆ. ಹಾಗಾಗಿ ಈಗ ಮಳೆಯಿಂದ ಕಷ್ಟ ಪಡುತ್ತಿರುವ ಜನರ ಸಹಾಯಕ್ಕೆ ಮಂಡ್ಯ ಜಿಲ್ಲೆಯ ಹಳ್ಳಿಗಳಿಗೆ ಭೇಟಿ ನೀಡಿ, ಅವರ ಕಷ್ಟಕ್ಕೆ ನೆರವಾಗುತ್ತಿದ್ದಾರೆ.

LEAVE A REPLY

Please enter your comment!
Please enter your name here