ಮಂಡ್ಯದಲ್ಲಿ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕಿದ ಸುಮಲತಾ

0
658

ಚುನಾವಣೆ ಅಂದ್ಮೇಲೆ ಜಿದ್ದಾಜಿದ್ದಿ ಹಾಗೂ ಪೈಪೋಟಿ ಚೆನ್ನಾಗಿಯೇ ನಡೆಯುತ್ತೆ. ಎಲ್ಲರ ಗಮನವೂ ಚುನಾವಣೆಯ ಮೇಲೆ ಇರುತ್ತೆ. ಆದರೆ ಅದಕ್ಕಿಂತ ಮುಖ್ಯ ಅಂದ್ರೆ, ಅದು ಫಲಿತಾಂಶ. ಹೌದು. ಜನರಿಗೆ ಚುನಾವಣೆಗಿಂತ, ಫಲಿತಾಂಶದ ಬಗ್ಗೆ ಹೆಚ್ಚಿನ ಕುತೂಹಲವಿರುತ್ತೆ. ಹಾಗಾಗಿ ಈಗ ನಡೆದಿರುವ ಲೋಕಸಭಾ ಚುನಾವಣೆ ಬಗ್ಗೆ ಎಲ್ಲರಿಗೂ ಹೆಚ್ಚಿನ ಕುತೂಹಲವಿದೆ. ಆದರೆ ಎಲ್ಲಾ ಜಿಲ್ಲೆಗಳಿಗಿಂತ, ಮಂಡ್ಯ ಜಿಲ್ಲೆ ಎಲ್ಲರ ಗಮನವನ್ನ ಹೆಚ್ಚಾಗಿ ಸೆಳೆದಿದೆ. ಯಾಕಂದ್ರೆ, ಮಂಡ್ಯದಲ್ಲಿ ಎರಡು ಪಕ್ಷಗಳ ನಡುವೆ, ದೊಡ್ಡ ರಣಕಹಳೆಯೇ ಮೊಳಗುತ್ತಿದೆ. ಹಾಗಾದ್ರೆ, ಸದ್ಯಕ್ಕೆ, ಮಂಡ್ಯದ ಪರಿಸ್ಥಿತಿ ಹೇಗಿದೆ? ಹಾಗೆ ಫಲಿತಾಂಶದ ಬಿಸಿ ಎಷ್ಟರ ಮಟ್ಟಿಗೆ ತಟ್ಟುತ್ತಿದೆ ಅಂತ ತಿಳಿಸ್ತೀವಿ ನೋಡಿ.

ಮಂಡ್ಯದಲ್ಲಿ ಜೆಡಿಎಸ್ ನಿಂದ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅವರು ಸ್ಪರ್ಧಿಸಿದ್ದರು. ಗೆಲುವು ಯಾರಿಗೆ ಅನ್ನೋದು, ಎಲ್ಲರಿಗೂ ಇರುವ ಕುತೂಹಲವಾಗಿದೆ. ಆದರೆ ಬೆಳಿಗ್ಗೆಯಿಂದಲೂ, ಮತ ಎಣಿಕೆಯಲ್ಲಿ ಭಾರಿ ಏರಿಳಿತಗಳು ಕಂಡುಬಂದವು. ಮೊದಲಿಗೆ ಸುಮಲತಾ ಅವರು ಮುನ್ನಡೆಯಲ್ಲಿ ಇದ್ದರೆ, ನಂತರ ನಿಖಿಲ್ ಮುನ್ನಡೆಗೆ ಬರುತ್ತಿದ್ದರು. ಆದ್ರೆ ಈಗ ಸದ್ಯಕ್ಕೆ ಸುಮಲತಾ ಅವರು, ನಿಖಿಲ್ ಅವರನ್ನ ಹಿಂದಿಕ್ಕಿ, ಮುನ್ನಡೆಯಲ್ಲಿದ್ದಾರೆ.

ನಿಖಿಲ್ ಕುಮಾರಸ್ವಾಮಿಯನ್ನ ಹಿಂದಿಕ್ಕಿದ ಸುಮಲತಾ

ಬೆಳಿಗ್ಗೆಯಿಂದಲೂ, ಚುನಾವಣೆಯ ಫಲಿತಾಂಶದ ಬಗ್ಗೆ ಏರಿಳಿತಗಳು ನಡೆಯುತ್ತಿವೆ. ಮೊದಲಿಗೆ ಸುಮಲತಾ ಅವರು, ಮುನ್ನಡೆ ಸಾಧಿಸಿದ್ದರು. ಆದರೆ ನಂತರ ನಿಖಿಲ್ ಅವರು ಮುನ್ನಡೆ ಪಡೆದರು. ಆದರೆ ಫಲಿತಾಂಶದಲ್ಲಿ ನಡೆಯುತ್ತಿರುವ ಏರಿಳಿತಗಳಿಂದ, ಒಬ್ಬರು, ಇನ್ನೊಬ್ಬರ ವಿರುದ್ಧ ಹಣಾಹಣಿ ಸಾಧಿಸುತ್ತಿದ್ದಾರೆ. ಸ್ಥಳದಲ್ಲಿಯೂ ಸಹ ಪಕ್ಷ ಪಕ್ಷಗಳ ನಡುವೆ ಪೈಪೋಟಿ ನಡೆಯುತ್ತಿದೆ. ತಮ್ಮ ಅಭ್ಯರ್ಥಿ, ಮುಂದಿದ್ದಾರೆ ಅಂದ ಕೂಡಲೇ, ಒಬ್ಬೊರಿಗೊಬ್ಬರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಆದರೆ ನಂತರದ ಕೆಲವು ಕ್ಷಣಗಳಲ್ಲಿ ಹಿನ್ನೆಡೆ ಎಂದ ಕೂಡಲೇ, ಕತ್ತಿ ಮಸೆಯುತ್ತಿದ್ದಾರೆ.

ಸುಮಲತಾ v/s ನಿಖಿಲ್

ಪೈಪೋಟಿ ಅಂದ್ರೆ ನಿಜಕ್ಕೂ ಇದೆ ಎನಿಸುತ್ತೆ. ಯಾಕಂದ್ರೆ ಒಂದೊಂದು ಸುತ್ತಿನಲ್ಲೂ, ಒಬ್ಬೊಬ್ಬರು ಮುನ್ನಡೆ ಸಾಧಿಸುತ್ತಿದ್ದಾರೆ. 5ನೇ ಹಂತದಲ್ಲಿ ಸುಮಲತಾ ಮುಂದಿದ್ದರೆ, 6ನೇ ಹಂತದಲ್ಲಿ ನಿಖಿಲ್ ಮುನ್ನಡೆ ಸಾಧಿಸುತ್ತಿದ್ದಾರೆ. ನಿಜಕ್ಕೂ ಇದರಲ್ಲಿ ಗೆಲುವು ಯಾರದ್ದಾಗುತ್ತೆ ಅಂತ ಗೊತ್ತಿಲ್ಲ. ಸುಮಲತಾ ಗೆದ್ದರೆ, ಜೋಡೆತ್ತುಗಳಿಗೆ ಸಂತಸವೋ ಸಂತಸ. ಒಂದು ವೇಳೆ, ನಿಖಿಲ್ ಗೆದ್ದರೆ, ಅದು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಗೆಲುವಾಗುತ್ತೆ. ಸದ್ಯಕ್ಕೆ ಇಬ್ಬರ ನಡುವಿನ ಪೈಪೋಟಿ ಜೋರಾಗಿಯೇ ನಡೆಯುತ್ತಿದೆ.

sumaltha geluvu

ಗೆಲುವು ಸಾಧಿಸಿದ ಸುಮಲತಾ

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲ್ತಾರೆ ಅಂತ ಎಲ್ಲರೂ ತಿಳಿದಿದ್ದರು. ಆದರೆ ಸುಮಲತಾ ಅವರು, ಆ ಮಾತನ್ನ ಸುಳ್ಳು ಮಾಡಿದ್ದಾರೆ. ಹೌದು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಭಾರಿ ಮತಗಳ ಅಂತರದಿಂದ, ನಿಖಿಲ್ ಅವರನ್ನ ಸೋಲಿಸಿದ್ದಾರೆ. ಸಾವಿರಾರು ಮತಗಳ ಅಂತರದಿಂದ ನಿಖಿಲ್ ಅವರನ್ನ ಹಿಂದಿಕ್ಕಿ, ಗೆಲುವು ಸಾಧಿಸಿದ್ದಾರೆ. ತನ್ನ ಮಗ ನಿಖಿಲ್ ಗೆಲ್ಲಬೇಕು ಅನ್ನುವುದಕ್ಕಾಗಿ, ಕುಮಾರಸ್ವಾಮಿ ಅವರು ಬಹಳ ಕಷ್ಟ ಪಟ್ಟಿದ್ದರು. ಆದ್ರೆ ಮಂಡ್ಯ ಜನತೆ ನಿಖಿಲ್ ಅವರನ್ನ ಕೈ ಬಿಟ್ಟಿದ್ದಾರೆ. ಜೋಡೆತ್ತುಗಳು, ಹೇಳುತ್ತಿದ್ದ ಮಾತುಗಳನ್ನ ಉಳಿಸಿಕೊಂಡಿದ್ದಾರೆ. ಮಾತಿಗೆ ಮಾತುಗಳು ಬಹಳಷ್ಟು ನಡೆದಿದ್ದವು. ಆದರೆ ಆ ಮಾತುಗಳಿಗೆಲ್ಲಾ, ಸುಮಲತಾ ಗೆಲುವು ಎನ್ನುವುದರ ಮೂಲಕ ಫುಲ್ ಸ್ಟಾಪ್ ನೀಡಿದ್ದಾರೆ.

ಒಟ್ಟಿನಲ್ಲಿ ಮಂಡ್ಯ ಚುನಾವಣೆ ಬಗ್ಗೆ ಎಲ್ಲರಲ್ಲೂ ಬಹಳಷ್ಟು ಕುತೂಹಲವಿತ್ತು. ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ನಡೆದ ಚುನಾವಣೆಗಿಂತ, ಮಂಡ್ಯದಲ್ಲಿ ನಡೆದ ಕಾಳಗ ಬಹಳಷ್ಟು ಎಲ್ಲರನ್ನೂ ಉತ್ಸಾಹಕರಾಗುವಂತೆ ಮಾಡಿತ್ತು. ಯಾಕಂದ್ರೆ ದರ್ಶನ್ ಹಾಗೂ ಯಶ್ ಜೋಡಿ, ಮತ್ತೆ ಕುಮಾರಸ್ವಾಮಿ ಹಾಗೂ ನಿಖಿಲ್ ಜೋಡಿ, ಬಹಳಷ್ಟು ಸದ್ದು ಮಾಡಿತ್ತು. ಆದ್ರೆ ಆ ಸದ್ದು ನಿಲ್ಲುವಂತೆ ಈಗ ಸುಮಲತಾ ಮಾಡಿದ್ದಾರೆ. ಅದು ಗೆಲುವು ಅನ್ನೋ ಒಂದು ಅಸ್ತ್ರದೊಂದಿಗೆ

LEAVE A REPLY

Please enter your comment!
Please enter your name here