ಸುಮಲತಾ ಅವರ ಈ ಒಂದು ಶುಭಾಶಯದಿಂದ, ವೈರಿಗಳು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

0
2366

ದ್ವೇಷ, ಕೋಪ, ಅಸೂಯೆ ಅನ್ನೋದು ಯಾರಿಗೆ ಇರಲ್ಲ ಹೇಳಿ. ಪ್ರತಿಯೊಬ್ಬರಿಗೂ ಇರುತ್ತೆ. ಆದ್ರೆ ಅದನ್ನ ಎಲ್ಲಿ, ಯಾವಾಗ, ಬಳಸಬೇಕು ಅನ್ನೋದ್ರ ಬಗ್ಗೆ ಜಾಗೃತರಾಗಿರಬೇಕು. ಹೌದು. ದ್ವೇಷ ಅನ್ನೋದು ಎಲ್ಲರಿಗೂ ಇರುತ್ತೆ. ಆಗಂತ ಅದನ್ನ ಯಾವಾಗಲು ಬೆನ್ನಿಗೆ ಕಟ್ಟಿಕೊಂಡು ಓಡಾಡುವುದಕ್ಕೆ ಆಗೋಲ್ಲ. ಯಾಕಂದ್ರೆ, ಎಲ್ಲಾ ಸಮಯದಲ್ಲೂ ನಮ್ಮ ಕೋಪ, ದ್ವೇಷ ನಡೆಯುವುದಿಲ್ಲ. ಅದಕ್ಕೆ ಸಮಯ ಹಾಗೂ ಸ್ಥಳ ಬಹಳ ಮುಖ್ಯವಾಗುತ್ತೆ. ಇನ್ನೂ ರಾಜಕಾರಣದಲ್ಲಿ ದ್ವೇಷ ಅಂತ ನೋಡೋಕೋದ್ರೆ, ಅದೆಲ್ಲಾ ಮಕ್ಕಳಾಡುವ ಹುಡುಗಾಟದ ರೀತಿ ಎನಿಸುತ್ತೆ. ಯಾಕಂದ್ರೆ ಬೆಳಿಗ್ಗೆ ಜಗಳ ಆಡ್ತಾರೆ, ಮತ್ತೆ ಸಂಜೆ ಒಂದಾಗ್ತಾರೆ. ಎಲ್ಲೋ ಕೆಲವರು ಮಾತ್ರ, ದ್ವೇಷ ಸಾಧಿಸ್ತಾರೆ.

ಸುಮಲತಾ ಅಂಬರೀಷ್ ಅವರು, ಚುನಾವಣೆಗೆ ಸ್ಪರ್ಧಿಸಿದ್ದೇ ತಡ, ಜೊತೆಗಾರರೆಲ್ಲ ವೈರಿಗಳಾಗೋದ್ರು. ಆದ್ರೆ, ಅವರು ಯಾವುದಕ್ಕೂ ಎದೆಗುಂದಲಿಲ್ಲ.  ತನ್ನ ಜೊತೆಯಲ್ಲಿರುವವರ ಸಹಾಯದೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಆದ್ರೆ ಅವರು ತನ್ನ ವಿರೋಧಿಗಳನ್ನ ವೈರಿಗಳಂತೆ ಕಾಣುತ್ತಾರಾ? ಅಥವಾ ಇಲ್ವಾ? ಅನ್ನೋದು ನಿಜಕ್ಕೂ ಯಾರಿಗೂ ಗೊತ್ತಿಲ್ಲ. ಆದ್ರೆ ಈಗ ಅವರು ಮಾಡಿರುವ ಈ ಒಂದು ಕೆಲಸದಿಂದ, ಎಲ್ಲರೂ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ದೇವೇಗೌಡರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಸುಮಲತಾ

ಮೊನ್ನೆಯಷ್ಟೇ, ಮಾಜಿ ಪ್ರಧಾನಿ ದೇವೇಗೌಡ್ರು ತಮ್ಮ 87ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡರು. ತಮ್ಮ ಹುಟ್ಟುಹಬ್ಬದ ದಿನವನ್ನ ತಿರುಪತಿಯಲ್ಲೇ ಕಳೆಯಬೇಕೆಂದುಕೊಂಡಿದ್ದ, ಅವರು ತಮ್ಮ ಹುಟ್ಟುಹಬ್ಬವನ್ನ ತಿರುಪತಿಯಲ್ಲೇ ಆಚರಿಸಿಕೊಂಡರು. ಹಾಗಾಗಿ ಇಲ್ಲಿ ಯಾರ ಕೈಗೂ ಅವರು ಸಿಕ್ಕಿರಲಿಲ್ಲ. ಎಲ್ಲರೂ ಫೋನ್ ನಲ್ಲಿ ಹಾಗೂ ಟ್ವೀಟ್ ಮಾಡುವುದರ ಮೂಲಕ, ಶುಭಾಶಯ ಕೋರಿದ್ದರು. ಆದರೆ ಯಾರ ಶುಭಾಶಯ, ಹೈಲೈಟ್ ಆಯ್ತೋ, ಇಲ್ವೋ ಗೊತ್ತಿಲ್ಲ. ಆದ್ರೆ ಸುಮಲತಾ ಅಂಬರೀಷ್ ಅವರು ಮಾಡಿದ ಶುಭಾಶಯ ಮಾತ್ರ, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಹೌದು. ಮಾಜಿ ಪ್ರಧಾನಿ ದೇವೇಗೌಡರಿಗೆ ಸುಮಲತಾ ಅವರು ಕೂಡ, ಶುಭಾಶಯ ತಿಳಿಸಿದ್ದಾರೆ.

ಟ್ವೀಟ್ ಮಾಡುವುದರ ಮೂಲಕ, ಶುಭಾಶಯ ತಿಳಿಸಿದ ಸುಮಲತಾ

ದೇವೇಗೌಡರಿಗೆ ಶುಭಾಶಯ ತಿಳಿಸಿರುವ ಸುಮಲತಾ ಅವ್ರು, ಟ್ವೀಟ್ ಮಾಡಿದ್ದಾರೆ. ಹೌದು. ಗೌರವಾನ್ವಿತ ಮಾಜಿ ಪ್ರಧಾನಿಗಳಾದ ಶ್ರೀ ಹೆಚ್.ಡಿ ದೇವೇಗೌಡರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ತಿಳಿಸಿದ್ದಾರೆ. ಕೆಲಸದ ದೃಷ್ಟಿಯಲ್ಲಿ ನೋಡಿದಾಗ, ಇವರೆಲ್ಲಾ ವೈರಿಗಳು. ಆದ್ರೆ ಸುಮಲತಾ ಅವರು ಅದ್ಯಾವುದನ್ನೂ ಮನಸ್ಸಿಗೆ ತೆಗೆದುಕೊಳ್ಳದೆ, ದೇವೇಗೌಡರಿಗೆ ಶುಭಾಶಯ ತಿಳಿಸಿದ್ದಾರೆ.

ಅಭಿಮಾನಿಗಳಿಂದ ಮೆಚ್ಚುಗೆಯ ಸುರಿಮಳೆ

ಸುಮಲತಾ ಅವರು, ದೇವೇಗೌಡರಿಗೆ ಶುಭಾಶಯ ತಿಳಿಸಿದ್ದೆ ತಡ, ಅವರ ಅಭಿಮಾನಿಗಳ ಜೊತೆಗೆ, ಅವರ ವೈರಿಗಳು ಸಹ, ಮೆಚ್ಚುಗೆ ವ್ಯಕ್ತಪಡಿಸಿದ್ರು. ಹೌದು. ಯಾಕಂದ್ರೆ, ರಾಜಕೀಯದಲ್ಲಿ ಅವರು ವೈರಿಗಳ ರೀತಿ ಇರುವವರು. ಆದ್ರೆ ಸುಮಲತಾ ಅವರು, ಯಾವುದನ್ನೂ ಮನಸ್ಸಿಗೆ ತೆಗೆದುಕೊಳ್ಳದೆ, ಶುಭಾಶಯ ತಿಳಿಸಿದ್ದರು. ಅದನ್ನ ನೋಡಿದ ಜನರು ಅವರ ಬಗ್ಗೆ ಹಾಡಿ ಹೊಗಳಿದರು. ಜೊತೆಗೆ, ನೀವೊಬ್ಬ ವಿಶಾಲ ಹೃದಯದ ಪ್ರಬುದ್ಧ ರಾಜಕಾರಣಿ ಎಂದು ಹೊಗಳಿಕೆಯ ಸುರಿಮಳೆ ಸುರಿಸಿದ್ದಾರೆ.

ನಿಜಕ್ಕೂ ಸುಮಲತಾ ಅವರ ಈ ಗುಣ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುವಂತೆ ಮಾಡಿದೆ. ಈ ಟ್ವೀಟ್ ನೋಡಿದಾಗಿನಿಂದ, ಎಲ್ಲರೂ, ಅವರನ್ನ ಹೊಗಳುತ್ತಿದ್ದಾರೆ.

LEAVE A REPLY

Please enter your comment!
Please enter your name here