ಲೋಕಸಭೆಯ ನಾಯಕರಿಗೆ ಅನ್ನದಾತರ ಮಹತ್ವ ತಿಳಿಸಿದ ಸಂಸದೆ ಸುಮಲತಾ ಅಂಬರೀಷ್

0
581

ಈ ಬಾರಿಯ ಲೋಕಸಭಾ ಚುನಾವಣೆ ಮುಗಿದ ಎಲ್ಲರೂ ಅವರವರ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಹೌದು. ಅವರವರ ಕ್ಷೇತ್ರಗಳ ವಿಚಾರದಲ್ಲಿಯೇ ಎಲ್ಲರೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದರ ಮಧ್ಯೆ, ಬಾರಿ ಸದ್ದು ಮಾಡಿದ್ದ ಮಂಡ್ಯ ಕ್ಷೇತ್ರದಿಂದ ಭರ್ಜರಿ ಗೆಲುವು ಸಾಧಿಸಿದ ಸುಮಲತಾ ಅಂಬರೀಷ್ ಅವರು, ಸಹ ಮಂಡ್ಯ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಜೊತೆಗೆ, ಜನರಿಗೆ ಬೇಕಾದ ಸೌಲಭ್ಯ ಹಾಗೂ ಸವಲತ್ತುಗಳನ್ನು ಒದಗಿಸುವುದಕ್ಕೆ ದೊಡ್ಡ ದೊಡ್ಡ ನಾಯಕರುಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಹೌದು. ಈಗ ಇದೇ ವಿಚಾರವಾಗಿ ಮೊದಲಬಾರಿಗೆ ಸಂಸತ್ತಿನಲ್ಲಿ ಮಾತನಾಡಿದ್ದಾರೆ. ಲೋಕಸಭೆಯಲ್ಲಿಂದು ಪ್ರಥಮ ಬಾರಿಗೆ ಮಾತನಾಡಿದ ಮಂಡ್ಯ ಸಂಸದೆ ಸುಮಲತಾ ತಮ್ಮ ಕ್ಷೇತ್ರದ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಮುಖ್ಯವಾಗಿ ಪ್ರಸ್ತಾಪಿಸಿದರು.

ರಾಜ್ಯದ ತೊಂದರೆಗಳ ಬಗ್ಗೆ ತಿಳಿಸಿದ ಸುಮಲತಾ

ಮೊದಲಬಾರಿಗೆ ಇಂದು ಲೋಕಸಭೆಯಲ್ಲಿ ಮಾತನಾಡಿದ ಸಂಸದೆ ಸುಮಲತಾ ಅವರು, ರಾಜ್ಯ ಹಾಗೂ ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ಹೌದು. ಸಂಸತ್ತಿನಲ್ಲಿ ತಮ್ಮ ಮಾತನ್ನು ಆರಂಭಿಸಿದ ಸುಮಲತಾ ಅವರು, ಮೊದಲು ಕನ್ನಡಲ್ಲಿಯೇ ತಮ್ಮ ಮಾತನ್ನು ಶುರು ಮಾಡಿದ್ದಾರೆ. ಹೌದು. ಮೊದಲಿಗೆ ನನ್ನ ಮಂಡ್ಯದ ಸ್ವಾಭಿಮಾನಿ ಜನತೆಗೆ ಧನ್ಯವಾದಗಳು ಎಂದು ತಿಳಿಸಿ, ನಂತರ ಇಂಗ್ಲಿಷ್ ನಲ್ಲಿ ತಮ್ಮ ಮಾತನ್ನು ಮುಂದುವರೆಸಿದ್ದಾರೆ. ಮಳೆಯಿಲ್ಲದೇ ರಾಜ್ಯದಲ್ಲಿ ನೀರಿನ ಸಮಸ್ಯೆ ಹಾಗೂ ರಾಜ್ಯದಲ್ಲಿ ಬರ ತೀವ್ರವಾಗಿದ್ದು, ರೈತರು ಮಾಡಿದ ಬ್ಯಾಂಕ್ ಸಾಲ ತೀರಿಸಲಾಗದ ಪರಿಸ್ಥಿತಿಯಲ್ಲಿದ್ದಾರೆ. ಇದರ ಜೊತೆಗೆ ಕುಡಿಯುವ ನೀರಿನ ಸಮಸ್ಯೆ ಹಾಗೂ ಗೋವುಗಳಿಗೆ ಮೇವಿನ ಸಮಸ್ಯೆ ಎದುರಾಗಿದೆ, ಹೀಗಾಗಿ ಪ್ರಧಾನ ಮಂತ್ರಿ ಮತ್ತು ಕೇಂದ್ರ ಕೃಷಿ ಸಚಿವರು ಸಂಬಂಧ ಗಮನ ಹರಿಸಿ ಬರ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಬರ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಸರ್ಕಾರ ಮುಂದಾಗಬೇಕು

ರಾಜ್ಯದಲ್ಲಿ ಬರಗಾಲ ಹೆಚ್ಚಾಗಿರೋದ್ರಿಂದ, ಜನರು ಕಷ್ಟದಲ್ಲಿ ಕೈ ತೊಳೆಯುವಂತಾಗಿದೆ. ಅಲ್ಲದೆ ಕೃಷಿಗಾಗಿ ರೈತರು ಬ್ಯಾಂಕ್ ನಲ್ಲಿ ಸಾಲ ಮಾಡಿದ್ದಾರೆ. ಆದರೆ ಮಳೆ ಬರದಿದ್ದ ಕಾರಣದಿಂದಾಗಿ, ರೈತರಿಗೆ ಸರಿಯಾದ ಫಸಲು ಸಿಕ್ಕಿಲ್ಲ. ಇದರಿಂದ, ಅವರಿಗೆ ಸಾಲ ತೀರಿಸಲು ಆಗುತ್ತಿಲ್ಲ. ಅಲ್ಲದೆ ಉತ್ಪನ್ನಗಳಿಗೆ ಅಸಮರ್ಪಕ ಬೆಲೆ ನಿಗದಿ, ಸಕ್ಕರೆ ಕಾರ್ಖಾನೆಗಳು ಬಾಕಿ ಮರುಪಾವತಿ ನೀಡದೆ ಬ್ಯಾಂಕ್ ಸಾಲಗಳನ್ನು ಮರುಪಾವತಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಮಂಡ್ಯ ರೈತರ ಬೆಳೆಗಳಿಗೆ ಈ ಕೂಡಲೇ ನೀರು ಹರಿಸಬೇಕು, ಜಲಸಂಕಷ್ಟ ನಿವಾರಿಸಲು ಸರ್ಕಾರ ಕೂಡಲೇ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.

ನಾವು ಅನ್ನದಾತನನ್ನು ರಕ್ಷಣೆ ಮಾಡುವ ಅವಶ್ಯಕತೆಯಿದೆ

ಸಂಸತ್ತಿನಲ್ಲಿ ಮಾತನಾಡುವಾಗ ಅನ್ನದಾತರ ಅವಶ್ಯಕತೆ ಎಷ್ಟಿದೆ ಇದೆ ಎಂದು ತಿಳಿಸಿದ್ದಾರೆ. ಹೌದು. ನಾವು ಅನ್ನದಾತನನ್ನು ರಕ್ಷಣೆ ಮಾಡುವ ಅವಶ್ಯಕತೆಯಿದೆ, ಮಾನ್ಸೂನ್ ವೈಫಲ್ಯವಲ್ಲ, ಅವರಿಗೆ ಸೂಕ್ತ ಪರಿಹಾರ ಒದಗಿಸದಿದ್ದರೇ ನಮ್ಮ ವೈಫಲ್ಯವೂ ಕಾರಣವಾಗುತ್ತದೆ. ಯಾಕಂದ್ರೆ ನಾವೇ ಅನ್ನದಾತರ ಕಷ್ಟವನ್ನು ಆಲಿಸದಿದ್ದರೆ, ಅವರ ಕಹಸ್ತವನ್ನು ಯಾರು ಕೇಳುತ್ತಾರೆ. ಹಾಗಾಗಿ ಆದಷ್ಟು ಬೇಗ, ಅನ್ನದಾತರ ಕಷ್ಟ ನಿವಾರಣೆಯಾಗಬೇಕೆಂದು ಹೇಳಿದ್ದಾರೆ. ಜೊತೆಗೆ ಕೊನೆಯಲ್ಲಿ ಜೈ ಜವಾನ್, ಜೈ ಕಿಸಾನ್, ಜೈ ಕರ್ನಾಟಕ ಎಂದು ಹೇಳುವ ಮೂಲಕ ಸುಮಲತಾ ತಮ್ಮ ಭಾಷಣ ಮುಗಿಸಿದ್ದಾರೆ.

ಒಟ್ಟಿನಲ್ಲಿ ಸುಮಲತಾ ಅವರು ರಾಜ್ಯದ ರೈತರ ಕಷ್ಟಗಳಿಗೆ ಬಹಳಷ್ಟು ಸ್ಪಂಧಿಸುತ್ತಿದ್ದರೆ. ನಿಜಕ್ಕೂ ಇವರ ಮಾತುಗಳನ್ನು ಕೇಳುತ್ತಿದ್ದರೆ, ಸಂತೋಷವಾಗುತ್ತದೆ. ಯಾಕಂದ್ರೆ ಸಂಸತ್ತಿನಲ್ಲಿ ಅನ್ನದಾತರ ಅವಶ್ಯಕತೆ ದೇಶಕ್ಕೆ ಎಷ್ಟಿದೆ ಎಂಬುದನ್ನ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here