ಸಂಸದರಿಂದ ಏನು ಮಾಡಲಾಗುವುದಿಲ್ಲ, ಎಲ್ಲವೂ ರಾಜ್ಯ ಸರ್ಕಾರವೇ ನೋಡಿಕೊಳ್ಳಬೇಕು ಎಂದ ಸುಮಲತಾ

0
924

ಈ ಬಾರಿ ಲೋಕಸಭಾ ಚುನಾವಣೆ ಆದಮೇಲೆ, ಎಲ್ಲರೂ ಪ್ರಮಾಣ ವಚನ ಸ್ವೀಕರಿಸಿ, ಅವರವರ ಕಾರ್ಯಕಲಾಪಗಳಲ್ಲಿ ಮುಳುಗಿದ್ದಾರೆ. ಇತ್ತ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರು ಕೂಡ, ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹೌದು. ಭಾರಿ ಸದ್ದು ಮಾಡಿದ ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಭಾರಿ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದು ಎಲ್ಲರಿಗೂ ಗೊತ್ತಿದೆ. ಅದಾದ ಮೇಲೆ, ಅವರು ಪ್ರಮಾಣ ವಚನ ಸ್ವೀಕರಿಸುವುದು ಮುಖ್ಯವಾಗಿತ್ತು. ಆದ್ರೆ ಈಗ ಪ್ರಮಾಣ ವಚನ ಕೂಡ, ಸ್ವೀಕರಿಸಿದ್ದಾಯ್ತು. ಆದ್ರೆ ಈಗ ಪ್ರಮಾಣ ವಚನ ಸ್ವೀಕರಿಸಿದ ಸುಮಲತಾ ಅವರು, ಕೆಲವು ಹೇಳಿಕೆಗಳನ್ನ ನೀಡಿದ್ದಾರೆ.

ಸಂಸದೆಯಾಗಿ ಕಲಿಯುವುದು ಸಾಕಷ್ಟಿದೆ

ಸುಮಲತಾ ಅಂಬರೀಷ್ ಅವರಿಗೆ ಈ ಚುನಾವಣೆ ಅನ್ನೋದು ಹೊಸದು. ಅವರ ಪತಿ ರಾಜಕೀಯದಲ್ಲಿ ಇದ್ದರೂ, ಇವರಿಗೆ ಅದರ ಅರಿವು ಸ್ವಲ್ಪ ಕಡಿಮೆಯೇ ಆಗಿತ್ತು. ಆದ್ರೆ ಈಗ ಅವರು ಚುನಾವಣೆಯಲ್ಲಿ ಗೆದ್ದು ಸಂಸದೆಯಾಗಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿದ ಅವರು, ಈಗ ಕೆಲವು ಹೇಳಿಕೆಗಳನ್ನ ನೀಡಿದ್ದಾರೆ. ಹೌದು. ನಾನು ಇದೇ ಮೊದಲ ಬಾರಿಗೆ ಸಂಸದೆಯಾಗಿರೋದ್ರಿಂದ ಕಲಿಯುವುದು ಸಾಕಷ್ಟಿದೆ. ಸಂಸತ್ ಕಲಾಪಗಳ ಪ್ರಕ್ರಿಯೆ ಅರಿತು ಕೆಲಸ ಮಾಡುತ್ತೇನೆ. ಜೊತೆಗೆ ಹಲವರ ಜೊತೆ, ಮುಖಾಮುಖಿ ಭೇಟಿಯಾಗುವುದಿದೆ. ಹಾಗಾಗಿ ಸದ್ಯಕ್ಕೆ ಎಲ್ಲವೂ ರಾಜ್ಯ ಸರ್ಕಾರದ ಕೈಯಲ್ಲಿದೆ ಎನ್ನುವ ಮೂಲಕ, ಸಂಪೂರ್ಣ ಜವಾಬ್ದಾರಿಯನ್ನ ರಾಜ್ಯ ಸರ್ಕಾರದ ಮೇಲೆ ಹೊರಿಸಿದ್ದಾರೆ.

ಕೇವಲ ಸಂಸದರಿಂದ ಏನು ಮಾಡಲು ಸಾಧ್ಯವಿಲ್ಲ

ಸಂಸದೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಅಭಿವೃದ್ಧಿ ಬಗ್ಗೆ ಮಾತನಾಡಬೇಕಾದ ಸುಮಲತಾ ಅವರು, ಎಲ್ಲರಿಗೂ ಶಾಕಿಂಗ್ ಸುದ್ದಿ ನೀಡಿದ್ದಾರೆ. ಹೌದು. ಎಲ್ಲರ ಮುಂದೆ ಮಾತನಾಡಿದ ಸುಮಲತಾ ಅವರು, ನಾನು ಕೇವಲ ಸಂಸದೆ. ಕೇವಲ ಸಂಸದೆಯಾಗಿರೋದ್ರಿಂದ ನನ್ನಿಂದ ಹೆಚ್ಚಿನದಾಗಿ ಏನ್ನನ್ನು ಮಾಡಲು ಆಗುವುದಿಲ್ಲ. ಹಾಗಾಗಿ, ಎಲ್ಲ ಜವಾಬ್ದಾರಿಯನ್ನ ರಾಜ್ಯ ಸರ್ಕಾರವೇ ಹೊರಬೇಕು. ಅಲ್ಲದೆ ಬಿಜೆಪಿಗೆ ಬೆಂಬಲ ನನಗೆ ಸಕಾರಾತ್ಮಕವಾಗಿದ್ದು ಮಂಡ್ಯ ಕ್ಷೇತ್ರದ ಬೆಳವಣಿಗೆಗೆ ಅದು ಸಹಕಾರಿಯಾಗಲಿದೆ. ಕೇಂದ್ರ ಸಚಿವ ಸದಾನಂದಗೌಡರ ಜೊತೆ ಮಾತುಕತೆ ನಡೆಸಿದ್ದು ಅವರು ಜಿಲ್ಲೆಯ ಸಮಸ್ಯೆಗಳನ್ನು ಪಟ್ಟಿ ಮಾಡಿ ನೀಡುವಂತೆ ಹೇಳಿದ್ದಾರೆ ಎಂದು ಸುಮಲತಾ ತಿಳಿಸಿದ್ದಾರೆ.

ಮಂಡ್ಯದ ಶಾಸಕರು ದ್ವೇಷದ ರಾಜಕೀಯ ಬಿಟ್ಟು ಬಿಡಬೇಕು

ಮಂಡ್ಯದಲ್ಲಿ ಅಂಡೆದಂತ ಜಿದ್ದಾಜಿದ್ದಿ ಪೈಪೋಟಿಯಿಂದ ಎಲ್ಲರೂ ವೈರಿಗಳಾಗಿದ್ದರೆ. ಆದ್ರೆ ಯಾವುದೇ ಕಾರಣಕ್ಕೂ ಮಂಡ್ಯ ಶಾಸಕರು ದ್ವೇಷದ ರಾಜಕೀಯ ನಡೆಸಬಾರದು. ಯಾಕಂದ್ರೆ ನಮ್ಮ ದ್ವೇಷ, ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಎಲ್ಲರೂ ದ್ವೇಷದ ರಾಜಕೀಯವನಂ ಬಿಟ್ಟುಬಿಡಬೇಕು ಎಂದು ತಿಳಿಸಿದ್ದಾರೆ. ಅಲ್ಲದೆ ಮಂಡ್ಯದ ಅಭಿವೃದ್ಧಿಗಾಗಿ ಏನು ಮಾಡಬೇಕೋ, ಅದನ್ನ ನಾನಕ್ ಮಂಡ್ಯ ಸಂಸದೆಯಾಗಿ ಕೇಂದ್ರದಿಂದ ಮಾಡಿಸುತ್ತೇನೆ. ಆದ್ರೆ ಕಾವೇರಿ ವಿಚಾರದಲ್ಲಿ ಮಾತ್ರ ನಾನು ಏನು ಮಾಡಲು ಆಗುವುದಿಲ್ಲ. ಯಾಕಂದ್ರೆ ಅದು ಕೋರ್ಟ್ ವ್ಯಾಪ್ತಿಯಲ್ಲಿ ಪ್ರಕರಣ ಇರುವುದರಿಂದ ರಾಜ್ಯ ಸರ್ಕಾರವೇ ಇದರ ಹೊಣೆ ಹೊತ್ತುಕೊಳ್ಳಬೇಕು ಎಂದು ಹೇಳುವ ಮೂಲಕ ಸುಮಲತಾ ಅವರು ಜವಾಬ್ದಾರಿಯಿಂದ ಜಾರಿಕೊಂಡಿದ್ದಾರೆ. ಜೊತೆಗೆ ಪಾರ್ಲಿಮೆಂಟ್ ನಂಗೆ ಹೊಸತು, ಮೊದ ಮೊದಲು ಶಾಲೆಗೆ ಹೋದಂತೆ ಭಾಸವಾಗ್ತಿದೆ. ಸಂಸತ್ ಕಾರ್ಯ ವೈಖರಿ ತಿಳಿದುಕೊಂಡು ಕೆಲಸ ಮಾಡಬೇಕಿದೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಮಂಡ್ಯ ಸಂಸದೆಯಾಗಿರುವ ಸುಮಲತಾ ಅವರು ತಮ್ಮ ಕರ್ತವ್ಯವನ್ನ ಯಾವ ರೀತಿ ನಿರ್ವಹಿಸುತ್ತಾರೆ ಅಂತ ಗೊತ್ತಿಲ್ಲ. ಆದ್ರೆ ಸದ್ಯಕ್ಕೆ ಅವರ ಹೇಳಿಕೆ ಎಲ್ಲರಿಗೂ ಗೊಂದಲವಾಗಿದೆ. ಯಾಕಂದ್ರೆ ಕೇವಲ, ಸಂಸದರಿಂದ ಏನು ಮಾಡಲು ಆಗುವುದಿಲ್ಲ, ಎಲ್ಲವನ್ನೂ ರಾಜ್ಯ ಸರ್ಕಾರವೇ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here