ತನ್ನ ಹಾಗು ತನ್ನ ಪತಿಯ ಪರವಾಗಿ ಮೆಗಾಸ್ಟಾರ್ ಗೆ ಶುಭಾಶಯ ಕೋರಿದ ಸುಮಲತಾ ಅಂಬರೀಷ್

0
749
sumalatha and chiranjivi

ಮೆಗಾಸ್ಟಾರ್ ಚಿರಂಜೀವಿ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಚಿರಂಜೀವಿ ಅಂದ್ರೆ ಪ್ರತಿಯೊಬ್ಬರಿಗೂ ಗೊತ್ತು. ಯಾಕಂದ್ರೆ ತಮ್ಮ ನಟನೆ ಮೂಲಕ ಎಣಿಕೆ ಮಾಡಲಾಗದಷ್ಟು ಅಭಿಮಾನಿಗಳನ್ನು ಅವರು ಹೊಂದಿದ್ದಾರೆ. ತೆಲುಗಿನಲ್ಲಿ ಸಾಕಷ್ಟು ಸಿನಿಮಾಗಳನ್ನು ನಟಿಸಿರುವ ಇವರು, ಕನ್ನಡದಲ್ಲೂ ಸಹ ಒಂದು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಹೌದು. ಕ್ರೇಜಿಸ್ಟಾರ್ ಅಭಿನಯದ ಸಿಪಾಯಿ ಚಿತ್ರದ ಮೂಲಕ ಕನ್ನಡ ಸಿನಿರಂಗಕ್ಕೆ ಕಾಲಿಟ್ಟ ಇವರಿಗೆ ಕನ್ನಡ, ಹಾಗು ಕನ್ನಡಿಗರು ಅಂದ್ರೆ ಬಹಳ ಇಷ್ಟವಂತೆ. ಹಾಗಾಗಿ ಅವರಿಗೆ ಸಾಕಷ್ಟು ಜನ ಸ್ನೇಹಿತರು ಕನ್ನಡದವರೇ ಇದ್ದಾರೆ. ಇಂದು ಮೆಗಾಸ್ಟಾರ್ ಚಿರಂಜೀವಿ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿ ಅವರಿಗೆ ಸಾಕಷ್ಟು ಜನ ಶುಭಾಶಯ ತಿಳಿಸಿದ್ದಾರೆ. ಆದ್ರೆ ಒಬ್ಬರ ಪರವಾಗಿ, ಇನ್ನೊಬ್ಬರು ಶುಭಾಶಯ ತಿಳಿಸಿರುವುದೇ ವಿಶೇಷವಾಗಿದೆಯಂತೆ. ಹೌದು. ರೆಬಲ್ ಸ್ಟಾರ್ ಅಂಬರೀಷ್ ಅವರ ಪರವಾಗಿ ಅವರ ಪತ್ನಿ ಸುಮಲತಾ ಅಂಬರೀಷ್ ಅವರು, ಚಿರಂಜೀವಿ ಅವರಿಗೆ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ.

ಮೆಗಾಸ್ಟಾರ್ ಗೆ ಶುಭಾಶಯ ತಿಳಿಸಿದ ರೆಬಲ್ ಸ್ಟಾರ್ ಪತ್ನಿ

ಇಂದು ಮೆಗಾಸ್ಟಾರ್ ಚಿರಂಜೀವಿ ಅವರ ಹುಟ್ಟುಹಬ್ಬ. ಚಿರಂಜೀವಿ ಅವರು ತೆಲುಗು ನಟನಾಗಿದ್ದರು, ಅವರಿಗೆ ಕನ್ನಡ ಸಿನಿರಂಗದಲ್ಲಿ ಸಾಕಷ್ಟು ಜನ ಸ್ನೇಹಿತರಿದ್ದಾರೆ. ಅದರಲ್ಲಿ ಮುಖ್ಯವಾಗಿ ಅವರ ಮನಗೆದ್ದ ಸ್ನೇಹಿತ ಅಂದ್ರೆ ಅದು ರೆಬಲ್ ಸ್ಟಾರ್ ಅಂಬರೀಷ್. ಪ್ರತಿಬಾರಿಯೂ ಚಿರಂಜೀವಿ ಅವರ ಹುಟ್ಟಹಬ್ಬಕ್ಕೆ, ರೆಬಲ್ ಸ್ಟಾರ್ ಮರೆಯದೆ ಶುಭಾಶಯ ತಿಳಿಸುತ್ತಿದ್ದರಂತೆ. ಆದರೆ ಈಗ ಅವರು ನಮ್ಮಿಂದ ಅಗಲಿದ್ದಾರೆ. ಹಾಗಾಗಿ ಅವರ ಪತ್ನಿ ಸುಮಲತಾ ಅಂಬರೀಷ್ ಅವರು ಶುಭಾಶಯ ತಿಳಿಸಿದ್ದಾರಂತೆ. ಹೌದು. ನನ್ನ ಪತಿ ಹಾಗು ಚಿರಂಜೀವಿ ಅವರ ನಡುವೆ ಅವಿನಾಭಾವ ಸಂಬಂಧವಿತ್ತು. ಹಾಗಾಗಿ ಪ್ರತಿವರ್ಷವೂ ಅವರ ಹುಟ್ಟುಹಬ್ಬಕ್ಕೆ ಇವರು ಶುಭಾಶಯ ತಿಳಿಸುತ್ತಿದ್ದರು. ಆದ್ರೆ ಈಗ ಅವರಿಲ್ಲ. ಅದಕ್ಕೆ ನನ್ನ ಕಡೆಯಿಂದ ಹಾಗು ನನ್ನ ಪತಿಯ ಕಡೆಯಿಂದ ನಾನೇ ಶುಭಾಶಯ ತಿಳಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಅಂಬಿ, ಚಿರಂಜೀವಿ ಹಾಗು ರಜನಿಕಾಂತ್ ಸಬಂಧ ಅವಿನಾಭಾವ

ಅಂಬಿ ಹಾಗು ಚಿರಂಜೀವಿ ನಡುವಿನ ಸಂಬಂಧ ನಿಜಕ್ಕೂ ಅವಿನಾಭಾವ. ಯಾಕಂದ್ರೆ ಯಾವುದಾದ್ರೂ ಕೆಲವು ಕಾರಣಗಳಿಂದ ಯಾವಾಗಲು ಭೇಟಿಯಾಗುತ್ತಲೇ ಇದ್ದರಂತೆ. ಅಲ್ಲದೆ ಚಿರಂಜೀವಿ ಅವರು ಬೆಂಗಳೂರಿಗೆ ಬಂದಾಗಲೆಲ್ಲಾ, ಅಂಬಿಯನ್ನು ಭೇಟಿ ಮಾಡದೇ ಎಂದಿಗೂ ಹಾಗಿಯೇ ಹಿಂದಿರುಗುತ್ತಿರಲಿಲ್ಲ. ಸ್ವಲ್ಪ ಸಮಯವಾದರೂ ಫ್ರೀ ಮಾಡಿಕೊಂಡು ಬಂದು, ಅಂಬಿಯನ್ನು ಭೇಟಿ ಮಾಡುತ್ತಿದ್ದರು. ಅಲ್ಲದೆ ಅಂಬಿ ಅಂತ್ಯಕ್ರಿಯೆ ಸಮಯದಲ್ಲೂ ಸಹ ಚಿರಂಜೀವಿ ಬೆಂಗಳೂರಿಗೆ ಬಂದಿದ್ದರು. ಹೌದು. ಚಿರಂಜೀವಿ ಹಾಗು ರಜನಿಕಾಂತ್ ಅವರು ಅಂಬರೀಷ್ ಗೆ ಒಳ್ಳೆಯ ಗೆಳೆಯರು. ಹಾಗಾಗಿ ಇವರಿಬ್ಬರು ಅಂದ್ರೆ ನನ್ನ ಪತಿಗೆ ಬಹಳ ಅಚ್ಚುಮೆಚ್ಚು ಎಂದು ಸುಮಲತಾ ಹೇಳಿದ್ದಾರೆ.

ನಾನು ಸಹ ಅವರ ಜೊತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದೇನೆ

ಇನ್ನು ಸುಮಲತಾ ಅವರು ಸಹ ಚಿರಂಜೀವಿ ಅವರ ಜೊತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಹೌದು. ಖೈದಿ’, ‘ಗ್ಯಾಂಗ್ ಲೀಡರ್’, ‘ಅಗ್ನಿ ಗುಂಡಮ್’, ‘ಸ್ವಯಂ ಕೃಷಿ’ ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಗಾಗಿ ಅಂಬರೀಷ್ ಹಾಗು ಚಿರಂಜೀವಿ ಎಷ್ಟು ಒಳ್ಳೆಯ ಗೆಳೆಯರೋ, ಸುಮಲತಾ ಹಾಗು ಚಿರಂಜೀವಿ ಕೂಡ ಒಳ್ಳೆಯ ಸ್ನೇಹಿತರು. ಹಾಗಾಗಿ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಚಿರಂಜೀವಿ ಅವರಿಗೆ ಶುಭಾಶಯ ತಿಳಿಸಿದ್ದಾರೆ. ಹಾಗೆ ಅವರ ‘ಸೈರಾ ನರಸಿಂಹ ರೆಡ್ಡಿ’ ಚಿತ್ರ ದೊಡ್ಡ ಯಶಸ್ಸು ಕಾಣಲಿ ಎಂದು ಸುಮಲತಾ ಶುಭ ಹಾರೈಸಿದ್ದಾರೆ. ‘ಸೈರಾ ನರಸಿಂಹ ರೆಡ್ಡಿ’ ಚಿರಂಜೀವಿ ನಟನೆಯ ಸಿನಿಮಾವಾಗಿದ್ದು, ಇತ್ತೀಚಿಗಷ್ಟೆ ಟೀಸರ್ ಬಿಡುಗಡೆಯಾಗಿದೆ.

ಒಟ್ಟಿನಲ್ಲಿ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಚಿರಂಜೀವಿ ಅವರಿಗೆ ಸಾಕಷ್ಟು ಜನ ಶುಭಾಶಯ ತಿಳಿಸಿದ್ದಾರೆ. ಆದ್ರೆ ಸುಮಲತಾ ಅವರು ಶುಭಾಶಯ ತಿಳಿಸಿರುವುದೇ ವಿಶೇಷವಾಗಿದೆ. ಯಾಕಂದ್ರೆ ಅವರ ಕಡೆಯಿಂದ ಹಾಗು ಅವರ ಪತಿಯ ಕಡೆಯಿಂದ ತಮ್ಮ ಸ್ನೇಹಿತನಿಗೆ ಶುಭಾಶಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here