ಬಿಜೆಪಿ ಹಮ್ಮಿಕೊಂಡಿರುವ ಸಭೆಯಲ್ಲಿ ಪಾಲ್ಗೊಂಡ ಸುಮಲತಾ ಅಂಬರೀಷ್ ಜನರಲ್ಲಿ ಕುತೂಹಲ ಹೆಚ್ಚಿಸಿದೆ

0
700

ಮಂಡ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ಬಿಜೆಪಿ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಸುಮಲತಾ ಅಂಬರೀಷ್ ಅವರು ಭಾಗಿಯಾಗುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ. ಇನ್ನು ಇವರು ಸಂಸದರಾದ ನಂತರ ಬಿಜಿಪಿ ಕಾರ್ಯಕರ್ತರೊಂದಿಗೆ ಹೆಚ್ಚು ಒಡನಾಟವನ್ನು ಇಟ್ಟುಕೊಂಡಿದ್ದರು. ಮಂಡ್ಯ ಚುನಾವಣೆಯ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸುವ ಮೂಲಕ ಗೆಲುವನ್ನು ಸಾಧಿಸಿದ್ದರು. ಸುಮಲತಾ ಅವರು ಬಿಜೆಪಿ ಪಕ್ಷಕ್ಕೆ ಸೇರುತ್ತಾರಾ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ಸಭೆಯಲ್ಲಿ ಪಾಲ್ಗೊಂಡಿರುವ ಉದ್ದೇಶ ಅದೇ ಇರಬಹುದಾ ಎನ್ನುವ ವಿಚಾರ ಚರ್ಚೆಗೆ ಕಾರಣವಾಗುತ್ತಿದೆ. ಬಿಜೆಪಿ ಕಚೇರಿಯಲ್ಲಿ ಸಭೆ ಹಮ್ಮಿಕೊಂಡಿರುವದರಿಂದ ಜನರಲ್ಲಿ ಇನ್ನು ಕುತೂಹಲ ಹೆಚ್ಚಿಸಿದೆ ಅಂತಾನೆ ಹೇಳಬಹುದಾಗಿದೆ. ಮುಂದೆ ಓದಿ

ಪ್ರೋತ್ಸಾಹಿಸಿದ್ದು ಕಾಂಗ್ರೆಸ್ ಮುಖಂಡರು

ಸುಮಲತಾ ಅವರ ಈ ವರ್ತನೆಗೆ ಕಾಂಗ್ರೆಸ್ ಪಕ್ಷದ ಸದಸ್ಯರು ಬೇಸರವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಚುನಾವಣೆಯ ವೇಳೆಯಲ್ಲಿ ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದಾಗ, ಅವರಿಗೆ ಪ್ರೋತ್ಸಾಹಿಸಿದ್ದು ಕಾಂಗ್ರೆಸ್ ಮುಖಂಡರು. ಈ ಹಿಂದೆ ಒಂದು ಬಾರಿ ಇವರು ಗೆದ್ದರೆ ಸಾಕು ಬಿಜೆಪಿ ಗೆ ಸೇರ್ಪಡೆಯಾಗುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಗೆಲುವಿನ ನಂತರವೂ ಇವರು ಬಿ ಎಸ್ ಯಡಿಯೂರಪ್ಪನವರನ್ನ ಭೇಟಿ ಮಾಡಿದ್ದರು. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಲ್ಲಿ ವೈಮನಸ್ಸು ಉಂಟಾದ ಕಾರಣದಿಂದಾಗಿ, ಯಾವ ಪಕ್ಷಕ್ಕೆ ಸೇರಿಕೊಂಡರೆ ಸೂಕ್ತ ಎನ್ನುವ ಗೊಂದಲದಲ್ಲಿ ಇವರು ಇದ್ದರು.

ಬಿಜೆಪಿಗೆ ಒಂದು ದೊಡ್ಡ ಶಕ್ತಿ ಸಿಕ್ಕಂತೆ ಆಗುತ್ತದೆ

ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ, ಬಿಜೆಪಿ ಗೆ ಸೇರಿಕೊಳ್ಳುವ ಸಾಧ್ಯತೆಗಳು ಹೆಚ್ಚಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಸುಮಲಾತ ಅವರು ಬಿಜೆಪಿಗೆ ಬಂದರೆ ಅವರನ್ನು ನಾವು ಸ್ವಾಗತಿಸುತ್ತೇವೆ. ಇವರ ಹಿಂದೆ ಬಲ ಇದೆ, ಉತ್ತಮವಾದ ಕೆಲಸಗಳನ್ನು ಮಾಡುತ್ತಾರೆ ಎನ್ನುವ ನಂಬಿಕೆ ನನಗಿದೆ. ಇವರ ಆಗಮನದಿಂದ ಬಿಜೆಪಿಗೆ ಒಂದು ದೊಡ್ಡ ಶಕ್ತಿ ಸಿಕ್ಕಂತೆ ಆಗುತ್ತದೆ ಎಂದು ಮಂಡ್ಯ ಕ್ಷೇತ್ರದ ಬಿಜೆಪಿ ಜಿಲ್ಲಾಧ್ಯಕ್ಷರಾದ ನಾಗಣ್ಣ ಗೌಡ ತಿಳಿಸಿದ್ದಾರೆ.

ಅಸಮಾಧಾನ ವ್ಯಕ್ತ ಪಡಿಸುತ್ತಿರುವ ಕಾಂಗ್ರೆಸ್ ಮುಖಂಡರು

ಕಾಂಗ್ರೆಸ್ ಪಕ್ಷದವರು ಸುಮಲತಾ ಅವರ ಮೇಲೆ ಕೆಂಡ ಕಾರುತ್ತಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಇವರಿಗೆ ಕಾಂಗ್ರೆಸ್ ಸದಸ್ಯರು ಸಹಕಾರ ನೀಡಿದ್ದರು. ಆದರೆ ಈಗ ಬಿಜೆಪಿ ಪಕ್ಷಕ್ಕೆ ಸೇರಿಕೊಳ್ಳುವ ಪ್ಲಾನ್ ಮಾಡುತ್ತಿದ್ದಾರೆ ಎಂದು ಅಸಮಾಧಾನದ ಮಾತುಗಳನ್ನು ಹೇಳುತ್ತಿದ್ದಾರೆ. ಈ ಸಭೆಯಲ್ಲಿ ಇಂಡುವಾಳು ಸಚ್ಚಿದಾನಂದ ಅವರು ಸಹ ಪಾಲ್ಗೊಳ್ಳಲಿದ್ದು, ಇವರು ಸಹ ಬಿಜೆಪಿಗೆ ಸೇರಬಹುದೆನ್ನುವ ಮಾತುಗಳು ಕೇಳಿ ಬರುತ್ತಿದೆ. ಚುನಾವಣೆಯ ಹಂತದಲ್ಲಿ ಮಂಡ್ಯ ಜಿಲ್ಲೆಯ ಕಾಂಗ್ರೆಸ್ ನಾಯಕರು ಸುಮಲತಾ ಅವರ ಪರವಾಗಿ ಕೆಲಸ ಮಾಡಿದ್ದರು ಎಂದು ಸಚ್ಚಿದಾನಂದ ಅವರು ತಿಳಿಸಿದ್ದು, ಸುಮಲಾತಾ ಅವರಿಗೆ ತಮ್ಮ ಬೆಂಬಲವನ್ನು ಮತ್ತೊಮ್ಮೆ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here