ರೈತರ ವಿಷಯಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ ಸುಮಲತಾ ಅಂಬರೀಷ್

0
707

ಈ ಬಾರಿ ಲೋಕಸಭಾ ಚುನಾವಣೆ ಆದಮೇಲೆ, ಎಲ್ಲರೂ ಪ್ರಮಾಣ ವಚನ ಸ್ವೀಕರಿಸಿ, ಅವರವರ ಕಾರ್ಯಕಲಾಪಗಳಲ್ಲಿ ಮುಳುಗಿದ್ದಾರೆ. ಇತ್ತ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರು ಕೂಡ, ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹೌದು. ಭಾರಿ ಸದ್ದು ಮಾಡಿದ್ದ ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಭಾರಿ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದು ಎಲ್ಲರಿಗೂ ಗೊತ್ತಿದೆ. ಅದಾದ ಮೇಲೆ, ಅವರು ಪ್ರಮಾಣ ವಚನ ಸ್ವೀಕರಿಸುವುದು ಮುಖ್ಯವಾಗಿತ್ತು. ಆದ್ರೆ ಈಗ ಪ್ರಮಾಣ ವಚನ ಕೂಡ, ಸ್ವೀಕರಿಸಿದ್ದಾಯ್ತು. ಆದ್ರೆ ಈಗ ಪ್ರಮಾಣ ವಚನ ಸ್ವೀಕರಿಸಿದ ಸುಮಲತಾ ಅವರು, ರೈತರ ಕಷ್ಟವನ್ನು ಪರಿಹರಿಸಲು ಕೇಂದ್ರ ಸರ್ಕಾರದ ಬಳಿ ಚರ್ಚಿಸಿದ್ದಾರೆ.

ಕೃಷ್ಣರಾಜನಗರ ಜಲಾಶಯದ ನಾಲೆಗಳ ಮೂಲಕ ನೀರನ್ನು ಹರಿಸಬೇಕು

ಮಂಡ್ಯದ ಸಂಸದೆಯಾದ ಸುಮಲತಾ ಅವರು, ಅಲ್ಲಿನ ರೈತರಿಗೆ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ಕೇಂದ್ರ ಸರ್ಕಾರದ ಮೊರೆ ಹೋಗಿದ್ದಾರೆ. ರಾಜ್ಯದಲ್ಲಿ ಬರ ಹೆಚ್ಚಾಗಿರುವದರಿಂದ ರೈತರು ಕೃಷಿಯ ವಿಚಾರದಲ್ಲಿ ಹಲವಾರು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ರೈತರು ಬೆಳೆದ ಬೆಳೆಗಳು ಈಗ ಬೆಳೆದು ನಿಂತಿದೆ, ಆದರೆ ಬೆಳೆಗಳಿಗೆ ಸರಿಯಾಗಿ ನೀರು ಇಲ್ಲದಿರುವ ಕಾರಣದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಕೃಷ್ಣರಾಜನಗರ ಜಲಾಶಯದ ಮೂಲಕ ನೀರನ್ನು ಹರಿಸಿ ರೈತರು ಬೆಳೆದ ಬೆಳೆಗೆ ನೆರವಾಗಬೇಕೆಂದು, ಸಂಸದೆ ಸುಮಲತಾ ಕೇಂದ್ರ ಜಲಸಂಪನ್ಮೂಲ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಬೆಳೆಗಳನ್ನು ಕಾಪಾಡಿಕೊಳ್ಳಲು ಸಾಧ್ಯ

ರಾಜ್ಯದಲ್ಲಿ ಭೀಕರವಾದ ಬಿಸಿಲಿನಿಂದ ಬರಗಾಲ ಉಂಟಾಗಿದೆ. ಜನರು ಬಿಸಿಲು ಹಾಗೂ ಬರಗಾಲದಿಂದ ತತ್ತರಿಸಿ ಹೋಗಿದ್ದಾರೆ. ಕುಡಿಯುವ ನೀರಿಗೂ ಸಹ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ನೀರಿನ ಕೊರತೆಯಿಂದಾಗಿ ರೈತರು ಸಹ ವ್ಯವಸಾಯ ಮಾಡಲಾರದಂತಾಗಿದೆ. ಬರಗಾಲದ ಪ್ರದೇಶಗಳಲ್ಲಿ ಎಂದಿಗಿಂತ ಇನ್ನು ಹೆಚ್ಚು ಬರಡನ್ನು ನೀವು ನೋಡಬಹುದು. ಊರಿನ ಕೆರೆಗಳು ಸಹ ಒಣಗಿ ಹೋಗಿವೆ, ರೈತರು ಹಾಗೂ ಬರ ಪ್ರದೇಶದ ಜನತೆ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಮುಂಗಾರು ಮಳೆ ಕೊರತೆಯಾಗಿರುವದರಿಂದ ಬರಗಾಲದ ಭೀತಿ ಉಂಟಾಗಿದೆ. ನೀರಿಲ್ಲದೆ ರೈತರು ಪರದಾಡುವ ಒಂದು ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ರೈತರಿಗೆ ನಾಲೆಗಳ ಮೂಲಕ ನೀರನ್ನು ಹರಿಸಿದರೆ ರೈತರಿಗೆ ಬಹಳ ಉಪಯೋಗವಾಗುತ್ತದೆ. ಜಲಾಶಲಯದ ನೀರಿನಿಂದ ರೈತರು ತಮ್ಮ ಬೆಳೆಗಳನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದು ಸುಮಲತಾ ಕೇಂದ್ರ ಸರ್ಕಾರದಲ್ಲಿ ಮನವಿ ಮಾಡಿದ್ದಾರೆ.

ಪರಿಶೀಲಿಸಿದ ನಂತರ ಸರಿಯಾದ ಕ್ರಮ ತೆಗೆದುಕೊಳ್ಳಲಾಗುವುದು

ಕಾವೇರಿ ನೀರಿನ ಸಮಸ್ಯೆಯ ಕುರಿತು ಮತ್ತು ಮಂಡ್ಯ ಕ್ಷೇತ್ರದ ವಾಸ್ತವದ ಬಗ್ಗೆ ನಿಯಂತ್ರಣ ಮಂಡಳಿಯ ಅಧ್ಯಕ್ಷರಿಗೆ ವಿವರಿಸಿದ್ದು, ಸರಿಯಾದ ಸಮಯಕ್ಕೆ ನೀರು  ಬಿಡುಗಡಗೆ ಸೂಚನೆ ನೀಡುವಂತೆ ಕೋರಿದ್ದಾರೆ. ಮನವಿಯ ಕುರಿತಾಗಿ ಪರಿಶೀಲನೆ ನಡೆಸಿದ ನಂತರ ಸರಿಯಾದ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರದ ಜಲ ಸಂಪನ್ಮೂಲ ಸಚಿವರು ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಸುಮಲತಾ ಅವರು ಸದಾನಂದ ಗೌಡರನ್ನು ಭೇಟಿ ಆಗಿದ್ದು, ಕಾವೇರಿ ಕೊಳ್ಳದ ಸಮಸ್ಯೆಯ ಬಗ್ಗೆ ವಿವರಣೆ ನೀಡಿ ರೈತರ ಭೂಮಿಗೆ ನೀರು ಬಿಡಬೇಕೆನ್ನುವ ಬೇಡಿಕೆಯನ್ನು ಇಟ್ಟಿದ್ದಾರೆ.

ಚುನಾವಣೆಯಲ್ಲಿ ಗೆದ್ದ ನಂತರ, ಸುಮಲತಾ ಅವರು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ರೈತರ ಕಷ್ಟವನ್ನು ಗಮನಿಸಿ ವ್ಯವಸಾಯ ವಿಚಾರದಲ್ಲಿ ಸರಿಯಾದ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರದ ಬಳಿ ಅನೇಕ ವಿಷಯಗಳ ಕುರಿತು ಮಾತನಾಡಿದ್ದಾರೆ. ಹೀಗೆ ಇವರ ಕೆಲಸಗಳು ಮುಂದುವರೆಯಲಿ.

LEAVE A REPLY

Please enter your comment!
Please enter your name here