ಟಿಟಿಡಿ ಅಧ್ಯಕ್ಷ ಸ್ಥಾನದ ಕುರಿತು ಮಹತ್ವವಾದ ನಿರ್ಧಾರ ತೆಗೆದುಕೊಂಡ ಆಂಧ್ರ ಸರ್ಕಾರ

0
476

ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯವರು ದೇವಸ್ಥಾನದ ಅಧ್ಯಕ್ಷ ಸ್ಥಾನದಲ್ಲಿ ವೈವಿ ಸುಬ್ಬಾರೆಡ್ಡಿ ಅವರನ್ನು ಕೂರಿಸಿದ್ದರು. ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳಾದ ಜಗನ್ ಮೋಹನ್ ರೆಡ್ಡಿ ಅವರು ಈ ರೀತಿಯಾದ ನಿರ್ಧಾರವನ್ನು ತೆಗೆದುಕೊಂಡಿದ್ದರು. ಸುಬ್ಬ ರೆಡ್ಡಿ ಅವರು ತಮ್ಮ ಸಂಬಂಧಿಯಾಗಿರುವುದರಿಂದ ಅದ್ಯಕ್ಷದ ಸ್ಥಾನ ನೀಡಲಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಜಗನ್ ಮೋಹನ್ ರೆಡ್ಡಿ ಅವರು ತಮ್ಮ ನಿರ್ಧಾರವನ್ನು ಬದಲಾಯಿಸಿದ್ದಾರೆ. ಟಿಟಿಡಿ ಮಂಡಳಿಗೆ ಹೊಸ ಸದಸ್ಯರನ್ನು ನೇಮಿಸಬೇಕೆಂದು ಸಿ ಎಂ ಮಂಗಳವಾರ ದಿನದಂದು ಆದೇಶವನ್ನು ನೀಡಿದ್ದಾರೆ. ಆ ಸ್ಥಾನಕ್ಕೆ ಈಗ ಯಾರು ಬರಲಿದ್ದಾರೆ. ಮುಂದೆ ಓದಿ

ಟಿಟಿಡಿ ಸ್ಥಾನಕ್ಕೆ ಮರಳಿದ ಸುಧಾಮೂರ್ತಿ

ಟಿಟಿಡಿ ಮಂಡಳಿಗೆ ರಾಜೀನಾಮೆ ಸಲ್ಲಿಸಿದ ಇನ್ಫೋಸಿಸ್ ಫೌಂಡೇಶನ್ ಸಂಸ್ಥೆಯ ಮುಖ್ಯಸ್ಥೆ ಸುಧಾಮೂರ್ತಿ ಅವರು ಮತ್ತೊಮ್ಮೆ ಟಿಟಿಡಿ ಅಧ್ಯಕ್ಷರ ಸ್ಥಾನಕ್ಕೆ ಮರಳಿದ್ದಾರೆ. ತಿರುಪತಿ ದೇಗುಲದ ಆರ್ಥಿಕ ನಿರ್ವಣೆಯ ಜವಾಬ್ದಾರಿಯನ್ನು ಜಗನ್ ಮೋಹನ್ ರೆಡ್ಡಿ ಅವರು ತಮ್ಮ ಆಪ್ತರಿಗೆ ನೀಡಿದ್ದಾರೆ ಎನ್ನುವ ಆರೋಪವು ಕೇಳಿ ಬರುತ್ತಿತ್ತು. ಈ ಹಿಂದೆ ಇದ್ದ ಮಂಡಳಿಯ ಸಮಯ ಮುಗಿದಿದ್ದು, ಮೂರು ತಿಂಗಳಾದರೂ ಹೊಸ ಸದಸ್ಯರನ್ನು ನೇಮಿಸುವ ಪ್ರಯತ್ನವನ್ನು ಮಾಡಿರಲಿಲ್ಲ. ಆದರೆ ಈಗ ಹೊಸ ಮಂಡಳಿಯನ್ನು ರಚಿಸಿದ್ದು, ಮಂಡಳಿಯ ಸದಸ್ಯರ ಸಂಖ್ಯೆ 15 ರಿಂದ 20 ಕ್ಕೆ ಏರಿಸಲಾಗಿದೆ. ಕರ್ನಾಟಕದಿಂದ ಸುಧಾಮೂರ್ತಿ, ಸಂಪತ್ ರವಿ ನಾರಾಯಾಣ, ರಮೇಶ್ ಶೆಟ್ಟಿ ನೇಮಕವಾಗಿದ್ದರು.

ಈ ಹಿಂದೆ ರಾಜೀನಾಮೆ ನೀಡಿದ್ದರು

ಈ ಹಿಂದೆ ಟಿಟಿಡಿ ಟ್ರಸ್ಟ್ ಗೆ ಸುಧಾಮೂರ್ತಿ ಅವರು ರಾಜೀನಾಮೆ ನೀಡಿದ್ದರು. ಹೌದು. ನಾನು ರಾಜೀನಾಮೆ ನೀಡಿದ್ದು ಸತ್ಯ ಎಂದು ಖಚಿತಪಡಿಸಿದ್ದರು. ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈ ಎಸ್ ಆರ್ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸರ್ಕಾರದ ಆಡಳಿತ ಬದಲಾಗಿರುವ ಕಾರಣದಿಂದಾಗಿ ಟಿ‌ಟಿ‌ಡಿ ಅಧ್ಯಕ್ಷರನ್ನು ಬದಲಾಯಿಸಬಹುದು ಎನ್ನುವ ಮಾತುಗಳು ಕೇಳಿ ಬಂದಿತ್ತು. ಜಗನ್ ರೆಡ್ಡಿ ಅವರ ಸಂಬಂಧಿ, ಮಾಜಿ ಸಂಸದೆ ವೈ ವಿ ಸುಬ್ಬಾ ರೆಡ್ಡಿ ಅವರನ್ನು ನೂತನ ಬೋರ್ಡ್ ಚೇರ್ಮನ್ ಆಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಆದ್ದರಿಂದ ಸುಧಾಮೂರ್ತಿ ಅವರು ರಾಜೀನಾಮೆ ನೀಡಿದ್ದಾರೆ ಎಂದು ಪರಿಗಣಿಸಲಾಗಿತ್ತು.

ನಾನು ಸಂತೋಷದಿಂದ ಮತ್ತೆ ಬೋರ್ಡ್ ಗೆ ಸೇರುತ್ತೇನೆ

ಈ ವಿಷಯದ ಕುರಿತು ಸ್ವತಃ ಸುಧಾಮೂರ್ತಿ ಅವರು ಸ್ಪಷ್ಟನೆ ನೀಡಿದ್ದಾರೆ. ನನ್ನನ್ನು ಟಿಟಿಡಿ ಸದಸ್ಯರನ್ನಾಗಿ ನೇಮಿಸಿದ್ದು ಈ ಹಿಂದಿನ ಸರ್ಕಾರ. ಇದೀಗ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ನಾನು ಸದಸ್ಯೆಯಾಗಿ ಮುಂದುವರೆಯುವುದು ಸರಿಯಲ್ಲ ಎನ್ನುವುದು ನನ್ನ ಭಾವನೆ.

ಹೊಸ ಸರ್ಕಾರಕ್ಕೂ ನನ್ನನ್ನು ಬೋರ್ಡ್ ಸದಸ್ಯಳನ್ನಾಗಿ ಮುಂದುವರೆಸುವ ಇಚ್ಛೆ ಇದ್ದರೆ, ನಾನು ಸಂತೋಷದಿಂದ ಮತ್ತೆ ಬೋರ್ಡ್ ಗೆ ಸೇರುತ್ತೇನೆ ಎಂದು ಹೇಳಿದ್ದರು. ಈ ಹಿಂದೆ ಸುಧಾಮೂರ್ತಿ ಅವರು ರಾಜೀನಾಮೆ ನೀಡಿರುವ ವಿಚಾರ ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು.

LEAVE A REPLY

Please enter your comment!
Please enter your name here