ತಮ್ಮ ಪ್ರೀತಿಯ ಶ್ವಾನದ ಜೀವನದ ಮೌಲ್ಯ ತಿಳಿಸಲು ಪುಸ್ತಕ ಬರೆಯುತ್ತಿರುವ ಸುಧಾಮೂರ್ತಿ

0
525
sudhamurthi and dog

ಕೆಲವರಿಗೆ ಮನುಷ್ಯರಿಗಿಂತ ಪ್ರಾಣಿಗಳು ಅಂದ್ರೆ ಅಚ್ಚುಮೆಚ್ಚು. ಯಾಕಂದ್ರೆ ಮನುಷ್ಯನಿಗಿಂತ ಪ್ರಾಣಿಗಳಿಗೆ ಹೆಚ್ಚಿನ ನೀಯತ್ತು ಇರುತ್ತದೆ ಅನ್ನೋದು ಮನುಷ್ಯನ ಭಾವನೆ. ಹಾಗಾಗಿ ಮನುಷ್ಯ ಪ್ರಾಣಿಗಳನ್ನು ಹೆಚ್ಚಾಗಿ ಇಷ್ಟ ಪಡುತ್ತಾನೆ. ಅದರಲ್ಲೂ ಕೆಲವರಂತೂ ಮನುಷ್ಯರ ಸಹವಾಸವನ್ನೇ ಮಾಡುವುದಿಲ್ಲ. ಬದಲಿಗೆ ಕೇವಲ ಪ್ರಾಣಿಗಳ ಜೊತೆಯೇ, ತಮ್ಮ ಒಡನಾಟವನ್ನು ಬೆಳೆಸುತ್ತಾರೆ. ಇನ್ನು ಕೆಲವರು ಪ್ರಾಣಿಗಳನ್ನ ತಮ್ಮ ಮಕ್ಕಳಂತೆ ಮನೆಯಲ್ಲಿ ಸಾಕುತ್ತಾರೆ. ಅದರಲ್ಲಿ ನಮ್ಮ ಇನ್ಫೋಸಿಸ್ ಫೌಂಡೇಶನ್‍ನ ಮುಖ್ಯಸ್ಥೆ ಸುಧಾಮೂರ್ತಿ ಅವರು ಕೂಡ ಒಬ್ಬರು. ಅವರ ಮನೆಯಲ್ಲಿ ಒಂದು ನಾಯಿಯನ್ನು ಸಾಕಿದ್ದಾರೆ. ಅವರು ಇಂದಿಗೂ ಅದನ್ನು ಒಂದು ಪ್ರಾಣಿ ಎಂದು ನೋಡಿಲ್ಲ. ಬದಲಿಗೆ ನಮ್ಮ ಮನೆಯಲ್ಲಿರುವ ಒಬ್ಬ ಸದಸ್ಯ ಎಂದು ಭಾವಿಸಿದ್ದಾರೆ. ಹಾಗಾಗಿ ಈಗ ಆ ಶ್ವಾನವನ್ನು ಕುರಿತು, ಒಂದು ಪುಸ್ತಕವನ್ನು ಬರೆಯಲಿದ್ದಾರೆ. ಹೌದು. ಶ್ವಾನದ ಜೀವನದ ಅಂಶಗಳನ್ನು ತಮ್ಮ ಪುಸ್ತಕದ ಮೂಲಕ ತಿಳಿಸಲಿದ್ದಾರೆ.

ತಮ್ಮ ಮನೆಯ ಶ್ವಾನದ ಜೀವನ ಅಂಶ ತಿಳಿಸಲಿರುವ ಸುಧಾಮೂರ್ತಿ

ಸುಧಾಮೂರ್ತಿ ಅವರು ತಮ್ಮ ಮನೆಯಲ್ಲಿ ಒಂದು ಶ್ವಾನ ಸಾಕಿದ್ದಾರೆ. ಅವರಿಗೆ ಆ ಶ್ವಾನ ಅಂದ್ರೆ ಬಹಳ ಇಷ್ಟ. ಹಾಗಾಗಿ ಅದನ್ನು ತುಂಬಾ ಮುದ್ದಾಗಿ ಸಾಕಿದ್ದಾರೆ. ಈಗ ಆ ಶ್ವಾನದ ಬಗ್ಗೆ ಎಲ್ಲರಿಗು ತಿಳಿಸಲು ಹೊರಟಿದ್ದರೆ. ಹೌದು. ಶ್ವಾನಗಳ ಜೀವನ ಅಂಶಗಳನ್ನು ಜನರಿಗೆ ತಿಳಿಸಲು, ಆ ಶ್ವಾನದ ಕುರಿತು ಪುಸ್ತಕ ಬರೆಯಲು ನಿರ್ಧರಿಸಿದ್ದಾರೆ. ಹೌದು. ಸುಧಾಮೂರ್ತಿಯವರು ಕೆಲವು ವರ್ಷಗಳ ಹಿಂದೆ ತಮ್ಮ ಮನೆಗೆ ಒಂದು ನಾಯಿಯನ್ನು ತಂದರು. ಅದಕ್ಕೆ ಗೋಪಿ ಎಂಬ ಹೆಸರನ್ನು ಇಟ್ಟರು. ಇನ್ನು ಆ ಶ್ವಾನ ತಾನು, ಒಂದು ಶ್ವಾನ ಎಂಬ ಭಾವನೆ ಬರದಂತೆ, ಅದನ್ನು ನೋಡಿಕೊಂಡರು. ಅದೇ ರೀತಿ ಈಗ ಆ ಶ್ವಾನದ ಕುರಿತು ಪುಸ್ತಕ ಬರೆಯಲು ನಿರ್ಧರಿಸಿದ್ದಾರೆ.

`ದಿ ಗೋಪಿ ಡೈರೀಸ್’ ಪುಸ್ತಕ

ಇನ್ನೂ ಸುಧಾಮೂರ್ತಿಯವರು ತಮ್ಮ ಶ್ವಾನದ ಜೀವನದ ಅಂಶಗಳನ್ನು ಕುರಿತು ಬರೆಯುತ್ತಿರುವ ಪುಸ್ತಕಕ್ಕೆ `ದಿ ಗೋಪಿ ಡೈರೀಸ್’ ಎಂಬ ಶೀರ್ಷಿಕೆಯನ್ನು ನೀಡಿದ್ರೆ. ಹೌದು. `ದಿ ಗೋಪಿ ಡೈರೀಸ್’ ಎಂಬ ಮೂರು ಪುಸ್ತಕಗಳ ಸರಣಿಯನ್ನು ಹಾರ್ಪರ್ ಕಾಲಿನ್ಸ್ ಇಂಡಿಯಾ ಪ್ರಕಟಿಸುತ್ತಿದ್ದು, ಈ ಪುಸ್ತಕ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಪ್ರಕಟವಾಗಲಿದೆ. ಈ ಪುಸ್ತಕವನ್ನು ಸುಧಾಮೂರ್ತಿ ಅವರು ಸರಳ ಶೈಲಿಯಲ್ಲಿ ಬರೆದಿದ್ದು, ನಾಯಿಯ ದೃಷ್ಟಿಕೋನ ಇಟ್ಟುಕೊಂಡು ಜೀವನದ ಮೂಲ ಮೌಲ್ಯಗಳನ್ನು ತಿಳಿಸಲು ಹೊರಟಿದ್ದಾರೆ. ಅದರಲ್ಲೂ ಮುಖ್ಯವಾಗಿ ಈ ಪುಸ್ತಕವನ್ನು ಯುವ ಜನಾಂಗಕ್ಕೆ ನಾನುಬರೆಯುತ್ತಿದ್ದೇನೆ. ಇದು ಯುವ ಜನಾಂಗಕ್ಕೆ ಬರೆಯುತ್ತಿರುವ ಮೊದಲ ಪುಸ್ತಕವಾಗಿದೆ ಎಂದು ತಿಳಿಸಿದ್ದಾರೆ.

ಪ್ರಾಣಿಗಳನ್ನು ಪ್ರೀತಿಸುವ ಮಕ್ಕಳಿಗಾಗಿಯೇ ಈ ಪುಸ್ತಕ

ಸುಧಾಮೂರ್ತಿಯವರು ಈ ಪುಸ್ತಕವನ್ನು ಮಕ್ಕಳಿಗಾಗಿ ಬರೆಯುತ್ತಿದ್ದಾರಂತೆ. ಹೌದು. ಪ್ರಾಣಿಗಳನ್ನು ಪ್ರೀತಿಸುವ ಮಕ್ಕಳಿಗಾಗಿಯೇ ಈ ಪುಸ್ತಕವನ್ನು ಬರೆಯುತ್ತಿರುವುದು ಎಂದು ತಿಳಿಸಿದ್ದಾರೆ. ಯಾಕಂದ್ರೆ ಮಕ್ಕಳಿಗೆ ಶ್ವಾನ ಒಂದು ಜೀವನದಲ್ಲಿ ಬೆಳೆದ ರೀತಿ ತಿಳಿಯಬೇಕು. ಯಾಕಂದ್ರೆ ಅದನ್ನು ಯಾರೋ ಅಪರಿಚಿತರು ಮನೆಗೆ ಕರೆದುಕೊಂಡು ಬಂದು ಸಾಕುತ್ತಾರೆ. ನಂತರ ಆ ಶ್ವಾನ ಆ ಮೆನೆಜ್ ಹೇಗೆ ಹೊಂದಿಕೊಳ್ಳುತ್ತದೆ. ಎಂಬುದನ್ನು ತಿಳಿದುಕೊಳ್ಳಬೇಕು. ಹಾಗಾಗಿ ನಾನು ಪ್ರಾಣಿಗಳನ್ನು ಪ್ರೀತಿಸುವ ಮಕ್ಕಳಿಗಾಗಿ ಈ ಪುಸ್ತಕವನ್ನು ಬರೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಜೊತೆಗೆ ಈ ಕಥೆ ಮೂರು ಭಾಗದಲ್ಲಿದ್ದು, ಗೋಪಿ ಮನೆಗೆ ಬರುವುದರಿಂದ ಕಥೆ ಆರಂಭವಾಗುತ್ತದೆ. ಗೋಪಿ ಆ ಮನೆಯಲ್ಲಿ ಹೇಗೆ ಬಾಳುತ್ತದೆ, ತನ್ನ ಸುತ್ತಲಿನ ಜಗತ್ತನ್ನು ಹೇಗೆ ನೋಡುತ್ತಾನೆ ಎನ್ನುವ ಕಾಲ್ಪನಿಕ ಕಥೆ ಇದಾಗಿದೆಯಂತೆ.

ಒಟ್ಟಿನಲ್ಲಿ ಸುಧಾಮೂರ್ತಿಯವರು ಶ್ವಾನದ ಜೀವನದ ಅಂಶಗಳನ್ನು ಜನರಿಗೆ ತಿಳಿಸಲು ಮುಂದಾಗಿದ್ದಾರೆ. ಹೌದು. ಶ್ವಾನದಲ್ಲಿ ಇರುವಂತಹ ಎಷ್ಟೋ ಅಂಶಗಳನ್ನು ಮನುಷ್ಯ ರೂಡಿಸಿಕೊಳ್ಳಬೇಕಾಗುತ್ತದೆ. ಜೊತೆಗೆ ಶ್ವಾನ ತನ್ನ ಜೀವನದಲ್ಲಿ ಕಂಡುಕೊಳ್ಳುವ ಬದಲಾವಣೆಗಳನ್ನು ಎಲ್ಲರಿಗೂ ತಿಳಿಸಲು ನಿರ್ಧರಿಸಿದ್ದಾರೆ.

LEAVE A REPLY

Please enter your comment!
Please enter your name here