ಸುಧಾಮೂರ್ತಿ ಅವರ ಅಳಿಯನಿಗೆ ವಿದೇಶ ಸಂಸತ್ ನಲ್ಲಿ ಸಿಕ್ಕಿದ ವಿಶೇಷ ಸ್ಥಾನವಾದ್ರೂ ಏನು?

0
357
sudhamuthi aliya

ಸಹಾಯ ಅಂದ ಕೂಡಲೇ ನಮ್ಮಲ್ಲಿ ಹಲವರು ನೆನಪಾಗುತ್ತಾರೆ. ಅದರಲ್ಲೂ ಕೆಲವರನ್ನ ಮಾತ್ರ ಜನರು ಉತ್ತುಂಗ ಸ್ಥಾನದಲ್ಲಿರಿಸಿದ್ದಾರೆ. ಆ ಸಾಲಿಗೆ ನಮ್ಮ ಇನ್ಫೋಸಿಸ್ ಅಧ್ಯಕ್ಷೆಯಾದ ಸುಧಾ ಮೂರ್ತಿಯವರು ಸೇರುತ್ತಾರೆ. ಯಾಕಂದ್ರೆ, ಅವರು ಸಹಾಯ ಮಾಡುವುದರ ಮೂಲಕವೇ, ಎಲ್ಲರೂ ಅವರನ್ನ ಸಮಾಜ ಸೇವಕಿ ಎಂದು ಕರೆಯುತ್ತಾರೆ. ಬಡವರು, ಕಷ್ಟದಲ್ಲಿರುವವರು ಅಂದ್ರೆ ಸುಧಾ ಮೂರ್ತಿಯವರಿಗೆ ಅದೇನೋ ಒಂಥರಾ ಪ್ರೀತಿ. ಅಂಥವರಿಗೆ ಏನಾದರು ಸಹಾಯ ಮಾಡಬೇಕು, ಒಳ್ಳೆಯದನ್ನ ಮಾಡಬೇಕು ಅಂತ ಯಾವಾಗಲು ಹಾತೊರೆಯುತ್ತಿರುತ್ತಾರೆ. ಹಾಗಾಗಿ ಅಂಥವರಿಗೆ ತಮ್ಮ ಕೈಲಾದ ಸಹಾಯವನ್ನ ಮಾಡುತ್ತಾರೆ. ಈಗ ಅಂಥವರ ಅಳಿಯನಿಗೆ ಒಂದು ದೊಡ್ಡ ಹುದ್ದೆ ಸಿಕ್ಕಿದೆ. ಹೌದು. ತಮ್ಮ ಮುದ್ದಿನ ಮಗಳ ಪತಿಗೆ, ವಿದೇಶದಲ್ಲಿ ಭಾರಿ ದೊಡ್ಡ ಹುದ್ದೆ ಸಿಕ್ಕಿದೆಯಂತೆ. ಇದೇ ವಿಚಾರವಾಗಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಇಂಗ್ಲೆಂಡ್ ನ ಕ್ಯಾಬಿನೆಟ್ ನಲ್ಲಿ ವಿಶೇಷ ಸ್ಥಾನ ಪಡೆದ ರಿಶಿ ಸುನಾಕ್

ನಾರಾಯಣಮೂರ್ತಿ ಹಾಗು ಸುಧಾಮೂರ್ತಿ ಅವರ ಅಳಿಯ ರಿಸಿ ಸುನಾಕ್ ಅವರು ಮೂಲತಃ ಇಂಗ್ಲೆಂಡ್ ದೇಶಕ್ಕೆ ಸೇರಿದವರಾಗಿದ್ದು, ಅವರು ಅಲ್ಲಿಯೇ ನೆಲೆಸಿದ್ದಾರೆ. ಇನ್ನು ಇವರ ಪತ್ನಿ ಅಕ್ಷತಾ. ಅವರೇ ನಾರಾಯಣಮೂರ್ತಿ ಹಾಗು ಸುಧಾಮೂರ್ತಿ ದಂಪತಿಗಳ ಮಗಳು. ಈಗ ಇವರ ಅಳಿಯನಿಗೆ ಇಂಗ್ಲೆಂಡ್ ಕ್ಯಾಬಿನೆಟ್ ನಲ್ಲಿ ವಿಶೇಷ ಸ್ಥಾನ ಸಿಕ್ಕಿದೆಯಂತೆ. ಹೌದು. ಇಂಗ್ಲೆಂಡ್ ನ ನೂತನ ಪ್ರಧಾನಿಯಾಗಿ ಬೋರಿಸ್ ಜಾನ್ಸನ್ ಅವರು ಅಧಿಕಾರ ಪಡೆದಿದ್ದಾರೆ. ಹೌದು. ಮೊದಲಿಂದಲೂ ಸರ್ಕಾರದದಲ್ಲಿ ಕಾಣಿಸಿಕೊಳ್ಳುತ್ತಿದ್ದ ರಿಶಿ ಅವರು ಈ ಮೊದಲು ಸಹ ತೆರೆಸಾ ಮೇ ಅವರ ಆಡಳಿತಾವಧಿಯಲ್ಲೂ ಕಾರ್ಯ ನಿರ್ವಹಿಸಿದ್ದರು. ಅದಾದ ನಂತರ ಈಗ ವಿಶೇಷ ಸ್ಥಾನವನ್ನು ಪಡೆದಿದ್ದಾರಂತೆ.

ಯಾರ್ಕ್ ಶೈರನ್ ರಿಚ್ ಮಂಡ್ ಗೆ ಕನ್ಸರ್ವೇಟಿವ್ ಪಕ್ಷದ ಸದಸ್ಯ

ಇನ್ನು ರಿಶಿ ಅವರು ಇಂಗ್ಲೆಂಡ್ ನ ಯಾರ್ಕ್ ಶೈರನ್ ರಿಚ್ ಮಂಡ್ ಗೆ ಕನ್ಸರ್ವೇಟಿವ್ ಪಕ್ಷದ ಸದಸ್ಯತ್ವ ಪಡೆದುಕೊಂಡಿದ್ದಾರೆ. ರಿಶಿ ಈ ಮೊದಲು ಅಂದ್ರೆ ೨೦೧೫ರಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಗೆದ್ದು, ಮೊದಲಬಾರಿಗೆ ಬ್ರಿಟಿಷ್ ಸಂಸತ್ ನ ಪ್ರವೇಶ ಮಾಡಿದ್ದರು. ಅದಾದ ನಂತರ ಈಗ ಕ್ಯಾಬಿನೆಟ್ ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಇವರು ಇಂಗ್ಲೆಂಡ್ ದೇಶಕ್ಕೆ ಸೇರಿದವರಾಗಿದ್ದು, ಅವರ ತಾಯಿ ಒಬ್ಬ ಫಾರ್ಮಸಿಸ್ಟ್ ಹಾಗು ಅವರ ತಂದೆ ನ್ಯಾಷನಲ್ ಹೆಲ್ತ್ ಸರ್ವಿಸಸ್ ನಲ್ಲಿ ಉದ್ಯೋಗಿಯಾಗಿದ್ದರು. ಇನ್ನು ರಿಶಿ ಅವರೌ ಅಕ್ಷತಾ ಅವರನ್ನು ಕ್ಯಾಲಿಫೋರ್ನಿಯಾದಲ್ಲಿ ಭೇಟಿಯಾಗಿದ್ದರು. ಹೌದು. ವಿದ್ಯಾಭ್ಯಾಸಕ್ಕಾಗಿ ಕ್ಯಾಲಿಫೋರ್ನಿಯಾದಲ್ಲಿ ಇದ್ದಂತಹ ಅಕ್ಷತಾರನ್ನು ನೋಡಿ, ವಿವಾಹವಾಗೆಬೇಕೆಂದು ನಿರ್ಧರಿಸಿದ್ದರು. ಅದರಂತೆ ಅವರನ್ನು ವಿವಾಹಯ ಮಾಡಿಕೊಂಡರು.

3 ಜನ ಭಾರತೀಯರಿಗೆ ಸ್ಥಾನ ದೊರೆತಿದೆ

ಇಂಗ್ಲೆಂಡ್ ನ ಈ ಬಾರಿಯ ಕ್ಯಾಬಿನೆಟ್ ಗೆ ೩ ಜನ ಸದ್ಯಸರು ಆಯ್ಕೆಯಾಗಿದ್ದರು. ಅದ್ರಲ್ಲಿ ವಿಶೇಷ ಏನು ಅಂದ್ರೆ ಆ ಮೂರೂ ನಿಜಾನಾ ಸದಸ್ಯರು ಕೂಡ ಭಾರತೀಯರೇ ಆಗಿದ್ದಾರಂತೆ. ಹಾಗಾಗಿ ಈ ಬಗ್ಗೆ ಎಲ್ಲರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಹೌದು. ವಿದೇಶದ ಕ್ಯಾಬಿನೆಟ್ ನಲ್ಲಿ ನಮ್ಮ ಭಾರತೀಯರನ್ನು ಗುರುತಿಸಿ, ಅವರಿಗೆ ಒಂದು ಅವಕಾಶ ಮಾಡಿಕೊಡುತ್ತಿದ್ದಾರೆ ಅಂತ ಎಲ್ಲರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಿನಲ್ಲಿ ನಮ್ಮ ದೇಶದ ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣ ಮೂರ್ತಿ ಹಾಗು ಸುಧಾಮೂರ್ತಿ ಅವರ ಅಳಿಯ ರಿಶಿ ಸುನಾಕ್ ಅವರು ಇಂಗ್ಲೆಂಡ್ ಕ್ಯಾಬಿನೆಟ್ ನಲ್ಲಿ ಸದಸ್ಯ ಸ್ಥಾನ ಪಡೆದಿರುವುದು ಅವರ ಕುಟುಂಬದವರಿಗೆಲ್ಲ ಸಂತಸದ ವಿಷಯಾಗಿದೆಯಂತೆ. ಹಾಗಾಗಿ ತಮ್ಮ ಅನಿಸಿಕೆ ಹಾಗು ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here