ಪೈಲ್ವಾನ್ ಚಿತ್ರದ ಟ್ರೇಲರ್ ಕುರಿತು ವಿಶೇಷ ಸಂದೇಶವನ್ನು ರವಾನಿಸಿದ ಅಭಿನಯ ಚಕ್ರವರ್ತಿ

0
371

ದಿ ವಿಲ್ಲನ್ ಚಿತ್ರದ ನಂತರ ಕಿಚ್ಚನ ಸಿನೆಮಾಗಳು ಬಿಡುಗಡೆ ಆಗಲೇ ಇಲ್ಲ, ಇದೇ ಇವರ ಕೊನೆ ಸಿನೆಮಾವಾಗಿದ್ದು ಅಭಿಮಾನಿಗಳು ಇವರ ಸಿನೆಮಾವನ್ನು ನೋಡಲು ಕಾತರಿಸುತ್ತಿದ್ದಾರೆ. ಅಭಿನಯ ಚಕ್ರವರ್ತಿಯ ಅಭಿನಯವನ್ನು ನೋಡಲಾರದೇ ಬಹಳ ದಿನಗಳು ಕಳೆದವು. ಈ ಹಿಂದೆ ಚಿತ್ರತಂಡದವರು ಟೀಸರ್ ರಿಲೀಸ್ ಮಾಡಿದ್ದು, ಬಂದಾ ನೋಡೋ ಪೈಲ್ವಾನ್ ಎನ್ನುವ ಹಾಡು ಬಹಳ ಜನಪ್ರಿಯವಾಗಿತ್ತು. ಚಿತ್ರ ಬಿಡುಗಡೆಯ ವಿಷಯದಲ್ಲಿ ನಾನಾ ಗೊಂದಲಗಳು ಎದ್ದಿದ್ದು, ಕೊನೆಗೂ ಸೆಪ್ಟೆಂಬರ್ ತಿಂಗಳಿನಲ್ಲಿ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡದವರು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಕಿಚ್ಚನ ದೇಹಸಿರಿ ನೋಡಿದ ಅಭಿಮಾನಿಗಳು ಮಾರು ಹೋಗಿದ್ದರು, ಈ ಸಿನೆಮಾಕ್ಕಾಗಿ ಸುದೀಪ್ ಅವರು ಬಹಳ ಕಷ್ಟ ಪಟ್ಟಿದ್ದಾರೆ.

ಪೈಲ್ವಾನ್ ಚಿತ್ರದ ಟ್ರೇಲರ್ ಸಂಚಲನ ಸೃಷ್ಟಿಸುತ್ತಿದೆ

ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಪೈಲ್ವಾನ್ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಇನ್ನು ಸುದೀಪ್ ಕುಸ್ತಿ ಪಟುವಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೈಲ್ವಾನ್ ಬೇರೆ ಭಾಷೆಯ ಚಿತ್ರದ ರಿಮೇಕ್ ಎನ್ನುವ ಊಹಪೋಹಗಳು ಎದ್ದಿದ್ದವು. ಆದರೆ ಟ್ರೇಲರ್ ಮುಖಾಂತರ ಇದು ರಿಮೇಕ್ ಸಿನಿಮಾವಲ್ಲ ಎನ್ನುವ ಸ್ಪಷ್ಟತೆ ಸಿಕ್ಕಿದೆ. ಕುಸ್ತಿಯ ಕಥಾಹಂದರ ಸಿನಿಮಾದಲ್ಲಿದೆ. ಇನ್ನು ಅಭಿನಯ ಚಕ್ರವರ್ತಿಯ ದೇಹ ಸಿರಿ ಚಿತ್ರದಲ್ಲಿ ಅದ್ಭುತವಾಗಿ ಮೂಡಿ ಬಂದಿದೆ. ಟ್ರೇಲರ್ ಬಿಡುಗಡೆಯಾದ ಕೆಲವೆ ಕ್ಷಣಗಳಲ್ಲಿ ಅತಿ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿತ್ತು.

ನಿಮ್ಮ ಸ್ನೇಹಕ್ಕೆ, ಬೆಂಬಲಕ್ಕೆ ಹಾಗೂ ಪ್ರೀತಿಗೆ ಈ ನಿಮ್ಮ ಕಿಚ್ಚ ಸದಾ ಚಿರಋಣಿ

ಪೈಲ್ವಾನ್ ಚಿತ್ರದ ಟ್ರೇಲರ್ ನೋಡಿದ ಕಿಚ್ಚನ ಅಭಿಮಾನಿಗಳು ಸಕಾರಾತ್ಮಕವಾದ ಪ್ರತಿಕ್ರಿಯೆ ನೀಡಿರುವುದರಿಂದ ಕಿಚ್ಚನಿಗೆ ಬಹಳ ಖುಷಿಯಾಗಿದೆ. ಖುಷಿಯಾಗುವುದರ ಜೊತೆಗೆ ಅಭಿಮಾನಿಗಳ ಪ್ರೀತಿ ಮತ್ತು ಅಭಿಮಾನವನ್ನು ಕಂಡು ಭಾವುಕರಾಗಿದ್ದಾರೆ. ಟ್ರೇಲರ್ ಗೆ ಸಿಕ್ಕಿರುವ ರೆಸ್ಪಾನ್ಸ್ ನೋಡಿ ಕಿಚ್ಚ ಕನ್ನಡದಲ್ಲಿಯೆ ಟ್ವೀಟ್ ಮಾಡಿದ್ದಾರೆ. ಸಾಮಾನ್ಯವಾಗಿ ಕಿಚ್ಚ ಕನ್ನಡದಲ್ಲಿ ಟ್ವೀಟ್ ಮಾಡುವುದು ಅಪರೂಪ. ಆದರೆ ಈಗ ಕನ್ನಡದಲ್ಲಿ ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದ್ದು, ಅಭಿಮಾನಿಗಳಿಗೆ ವಿಶೇಷವಾದ ಸಂದೇಶವನ್ನು ನೀಡಿದ್ದಾರೆ. ಸ್ನೇಹಿತರೆ ನಿಮ್ಮ ಸ್ನೇಹಕ್ಕೆ, ಬೆಂಬಲಕ್ಕೆ ಹಾಗೂ ಪ್ರೀತಿಗೆ ಈ ನಿಮ್ಮ ಕಿಚ್ಚ ಸದಾ ಚಿರಋಣಿ. ಪೈಲ್ವಾನ್ ಚಿತ್ರದ ಟೀಸರ್ ನಿಮಗೆ ಇಷ್ಟವಾಗುತ್ತದೆ ಎಂದು ಅಂದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಈ ನನ್ನ ಉಸಿರು ನಿಮಗಾಗಿ

ಎಲ್ಲಿಯವರೆಗೆ ನೀವೆಲ್ಲ ನನ್ನನ್ನು ನಂಬುವಿರೋ ಅಲ್ಲಿಯವರೆಗೆ ಈ ನನ್ನ ಉಸಿರು ನಿಮಗಾಗಿ ಎಂದಿದ್ದಾರೆ. ಇಲ್ಲಿ ನಂಬಿಕೆಯ ವಿಚಾರವನ್ನು ಕಿಚ್ಚ ಪ್ರಸ್ತಾಪಿಸಿದ್ದು, ಇದರ ಒಳ ಅರ್ಥ ಜನರಿಗೆ ಅರ್ಥವಾಗಿದೆ ಎಂದು ಹೇಳಬಹುದಾಗಿದೆ.

ಚಿತ್ರ ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ಪೈಲ್ವಾನ್ ಚಿತ್ರ ಯಾವ ರೀತಿ ಸದ್ದು ಮಾಡುತ್ತದೆ ಎನ್ನುವುದು ಕಾದು ನೋಡಬೇಕಿದೆ. ಚಿತ್ರ ಗೆಲ್ಲುವ ನಿರೀಕ್ಷೆಯಲ್ಲಿ ಕಿಚ್ಚ ಸುದೀಪ್ ಅವರು ಇದ್ದಾರೆ.

LEAVE A REPLY

Please enter your comment!
Please enter your name here