ನಿರ್ದೇಶಕ ಸೂರಿ ಸದ್ಯಕ್ಕೆ ಸುದೀಪ್ ಗೆ ಆಕ್ಷನ್ ಕಟ್ ಹೇಳುವುದಿಲ್ಲ ಎಂದಿದ್ದಾದ್ರೂ ಏಕೆ?

0
791

ಸ್ಯಾಂಡಲ್ ವುಡ್ ನಲ್ಲಿ ದಿನಕ್ಕೊಂದು ಹೊಸ ಹೊಸ ಹೇಳಿಕೆಗಳು ಹೊರ ಬೀಳುತ್ತಿವೆ. ಹೌದು. ನಮ್ಮ ಚಂದನವನದ ನಾಯಕರು ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ನಮ್ಮ ಸ್ಟಾರ್ ನಟರಂತೂ ಕೇಳೋದೇ ಬೇಡ. ತಮ್ಮ ಬತ್ತಳಿಕೆಯಲ್ಲಿ ಸಾಕಷ್ಟು ಬಾಣಗಳನ್ನ ಹೊಂದಿದ್ದಾರೆ. ಅಂದ್ರೆ ಸಾಲು ಸಾಲು ಸಿನಿಮಾ ಶೂಟಿಂಗ್ ನಲ್ಲಿ ಮುಳುಗಿದ್ದಾರೆ. ಇತ್ತ ಜನರಿಗೆ ಅವರನ್ನ ನೋಡಿ ಒಂದು ಕ್ಷಣ ಗೊಂದಲವಾಗುತ್ತಿದೆ. ಹೌದು. ಯಾವ ನಟ, ಯಾವ ನಿರ್ದೇಶಕರ ಜೊತೆ ಸಿನಿಮಾ ಮಾಡುತ್ತಿದ್ದಾರೆ? ಯಾವ ಸಿನಿಮಾ ಮಾಡುತ್ತಿದ್ದಾರೆ ಅನ್ನೋದೇ ಗೊಂದಲವಾಗಿದೆ. ಯಾಕಂದ್ರೆ, ಈ ಸಿನಿಮಾದಲ್ಲಿ ಇದ್ದಂತಹ ನಾಯಕ, ನಾಳೆ ನೋಡಿದ್ರೆ ಇನ್ನೊಂದು ಸಿನಿಮಾದಲ್ಲಿ ಇರುತ್ತಾರೆ ಅನ್ನೋ ಸುದ್ದಿಗಳು ಕೇಳಿಬರುತ್ತಿವೆ. ಅದೇ ರೀತಿ ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ, ಬಗ್ಗೆಯೂ ಸಹ ಕೆಲವು ಹೇಳಿಕೆಗಳು ಹೊರಬಿದ್ದಿದ್ದವು. ಆದ್ರೆ ಈಗ ಆ ಗೊಂದಲಕ್ಕೆ ನಿರ್ದೇಶಕ ಸೂರಿ ಅವರು ತೆರೆ ಎಳೆದಿದ್ದಾರೆ.

ಸುದೀಪ್ ಹಾಗೂ ಸೂರಿ ಬಗ್ಗೆ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಮಾತುಗಳು

ಸ್ಯಾಂಡಲ್ ವುಡ್ ನ ಸ್ಟಾರ್ ನಟರಲ್ಲಿ ಕಿಚ್ಚ ಸುದೀಪ್ ಕೂಡ ಒಬ್ಬರು. ಸುದೀಪ್ ಕನ್ನಡ ಸಿನಿಮಾ ರಂಗದಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವ ನಾಯಕ. ಈಗಾಗಲೇ ಸುದೀಪ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ಅವರು ಹಾಗೂ ಸೂರಿ ನಡುವಿನ ಕೆಲವು ಮಾತುಗಳು ಕೇಳಿ ಬರುತ್ತಿವೆ. ಹೌದು. ಸೂರಿ ನಿರ್ದೇಶನದಲ್ಲಿ ಸುದೀಪ್ ನಟಿಸಲಿದ್ದಾರೆ ಅನ್ನೋ ಸುದ್ದಿ ಕೇಳಿ ಬರುತ್ತಲೇ ಇತ್ತು. ಅದರ ವಿಚಾರವಾಗಿ ಈಗಾಗಲೇ ಗಾಂಧಿನಗರದಲ್ಲಿ ಸಾಕಷ್ಟು ಮಾತುಕತೆಗಳು ನಡೆದಿವೆ. ಆದರೆ ಇದರ ಬಗ್ಗೆ ನಿರ್ದೇಶಕ ಸೂರಿ ಆಗಲಿ ಅಥಾವ ಸುದೀಪ್ ಆಗಲಿ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಇಬ್ಬರು ಸೇರಿ ಸಿನಿಮಾ ಮಾಡುತ್ತಾರೆ ಅನ್ನೋ ಮಾತುಗಳು ಮಾತ್ರ ಕೇಳಿ ಬರುತ್ತಿತ್ತು. ಆದ್ರೆ ಅದಕ್ಕೆ ಸೂರಿ ಉತ್ತರ ನೀಡಿದ್ದಾರೆ.

ನಾವು ಯಾವುದೇ ಸಿನಿಮಾ ಮಾಡುತ್ತಿಲ್ಲ

ಜನರಿಂದ ಕೇಳಿ ಬರುತ್ತಿದ್ದ ಮಾತುಗಳಿಗೆ ನಿರ್ದೇಶಕ ಸೂರಿ ಉತ್ತರ ನೀಡಿದ್ದಾರೆ. ಹೌದು. ನಾನು, ಸುದೀಪ್ ಅವರು ಯಾವುದೇ ಸಿನಿಮಾ ಮಾಡುತ್ತಿಲ್ಲ. ಸುಮ್ಮನೆ ಸುಳ್ಳು ಸುದ್ದಿ ಹೇಳಬಾರದು ಎಂದು ಹೇಳಿದ್ದಾರೆ. ಜೊತೆಗೆ ನಾನು ಈಗಾಗಲೇ, ಸಾಕಷ್ಟು ಸಿನಿಮಾಗಳ ವಿಚಾರದಲ್ಲಿ ಬ್ಯುಸಿಯಾಗಿದ್ದೇನೆ. ಹೀಗಿರುವಾಗ ಸುದೀಪ್ ಅವರ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದೀನಿ ಅನ್ನೋದು ಸುಳ್ಳು. ಸದ್ಯಕ್ಕೆ ನಾವು ಆ ರೀತಿಯ ಯಾವುದೇ ಪ್ಲಾನ್ ಅಲ್ಲಿ ಇಲ್ಲ. ಜನರಾಗಲಿ ಅಥವಾ ಯಾರೇ ಆಗಲಿ ಇಂಥ ಸುಳ್ಳು ಸುದ್ದಿಗೆ ಪ್ರೋತ್ಸಾಹ ನೀಡಬಾರದು ಎಂದು ಹೇಳಿದ್ದಾರೆ.

ನನ್ನ ಸಿನಿಮಾವನ್ನ ನಾನೆ ನಿರ್ಧಾರ ಮಾಡುತ್ತೇನೆ

ಈ ರೀತಿಯ ಊಹಾಪೋಹಗಳು ಕೇಳಿಬಂದ ಮೇಲೆ, ನಿರ್ದೇಶಕ ಸಾಕಷ್ಟು ರೀತಿಯಲ್ಲಿ ಉತ್ತರ ನೀಡುತ್ತಿದ್ದಾರೆ. ಆದರೂ ಸಹ ಇದರ ವಿವಾಹಾರವಾಗಿ ಇನ್ನೂ ಸುದ್ದಿ ಹರಿದಾಡುತ್ತಲೇ ಇದೆ. ಹಾಗಾಗಿ ಅವರು, ನನ್ನ ಸಿನಿಮಾಗಳನ್ನ ನಾನೆ ನಿರ್ಧಾರ ಮಾಡುತ್ತೇನೆ. ಇದರ ವಿಚಾರವಾಗಿ ಬೇರೆ ಯಾರು ನಿರ್ಧಾರ ಮಾಡುವ ಅವಶ್ಯಕತೆ ಇಲ್ಲ. ಇನ್ನೂ ಈ ವಿಷಯದಲ್ಲಿ ನಾನೇ, ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಹೀಗಿರುವಾಗ ಬೇರೆ ಯಾರೋ ಹೇಳಿದ್ದನ್ನ ಜಿತೇಹೀ ನಂಬುತ್ತೀರಾ. ಸದ್ಯಕ್ಕೆ. ನಾನು, ಸುದೀಪ್ ಅವರ ಸಿನಿಮಾ ಗೆ ನಿರ್ದೇಶನ ಮಾಡುತ್ತಿಲ್ಲ. ಯಾಕಂದ್ರೆ ಸುದೀಪ ಅವರು ದೊಡ್ಡ ನಟ. ಅವರ ಜೊತೆ ಕೆಲಸ ಮಾಡಬೇಕು ಅಂದ್ರೆ ಸಾಕಷ್ಟು ತಯಾರಿಗಳು ಆಗಬೇಕು. ಸುಮ್ಮನೆ ಸಿನಿಮಾ ಮಾಡಲು ಆಗುವುದಿಲ್ಲ. ಸಾಕಷ್ಟು ಸಮಯ ಹಿಡಿಯುತ್ತೆ. ಆ ಟೈಮ್ ಬಂದಾಗ ನಾನೆ ಹೇಳುತ್ತೇನೆ. ಸದ್ಯಕ್ಕೆ ಈ ಗಾಳಿ ಸುದ್ದಿಯನ್ನ ಇಲ್ಲಿಗೆ ಬಿಟ್ಟು ಬಿಡಿ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಸೂರಿ ಹಾಗೂ ಸುದೀಪ್ ಕಾಂಬಿನೇಶನ್ ನ ಸಿನಿಮಾ ಮೂಡಿ ಬರುತ್ತದೆ ಎಂದು ಗಾಂಧಿನಗರದಲ್ಲಿ ಸುದ್ದಿಯಾಗಿತ್ತು. ಆದ್ರೆ ಅದಕ್ಕೆ ಉತ್ತರ ನೀಡುವ ಮೂಲಕ, ಸೂರಿ ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿದ್ದಾರೆ.

LEAVE A REPLY

Please enter your comment!
Please enter your name here