ದುನಿಯಾ ವಿಜಯ್ ಅವರ ಹೊಸ ಪ್ರಯತ್ನಕ್ಕೆ ಬೆಂಬಲಿಸಿದ ನಟ ಯಾರು?

0
392

ಕನ್ನಡ ಚಿತ್ರರಂಗದಲ್ಲಿ ಅನೇಕರು ನಟನೆ ಮಾಡುವುದಲ್ಲದೆ, ನಿರ್ದೇಶನದ ಜವಾಬ್ದಾರಿಯನ್ನು ಹೊತ್ತು ಕೊಂಡಿದ್ದಾರೆ. ಸಿನಿಮಾದಲ್ಲಿ ನಾವು ನಟನೆ ಹೇಗೋ, ನಿರ್ದೇಶಕರು ಹೇಳಿದ ಹಾಗೆ ಮಾಡಿಬಿಡಬಹುದು, ಆದರೆ ನಟನೆ ಮಾಡುವುದರ ಜೊತೆಗೆ ನಿರ್ದೇಶನದ ಮಾಡಲು ಬಹಳ ಕಠಿಣವಾದ ಕೆಲಸ. ಸ್ಕ್ರಿಪ್ಟ್ , ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುವುದು, ದೃಶ್ಯಾವಳಿಗಳನ್ನು ಸರಿಯಾದ ರೀತಿಯಲ್ಲಿ ಶೂಟ್ ಮಾಡುವುದು ಇವೆಲ್ಲ ಒತ್ತಡ ನಿರ್ದೇಶಕರ ಮೇಲೆ ಇರುತ್ತದೆ. ನಿರ್ದೇಶನ ಮಾಡುವುದರ ಜೊತೆಗೆ ನಟನೆಯನ್ನು ಮಾಡಲು ಹೊರಟಿದ್ದಾರೆ ಬ್ಲಾಕ್ ಕೋಬ್ರಾ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬೆನ್ನು ತಟ್ಟಿದ್ದಾರೆ

ಹೌದು. ಈಗ ದುನಿಯಾ ವಿಜಯ್ ಅವರು ಅಗ್ನಿಪರೀಕ್ಷೆಗೆ ನಿಂತಿದ್ದಾರೆ. ಇತ್ತೀಚಿಗೆ ದುನಿಯಾ ವಿಜಯ್ ಅವರ ಸಿನಿಮಾಗಳು ಕಡಿಮೆ ಆಗಿವೆ. ಆದ್ದರಿಂದ ಸ್ವತಃ ತಾವೆ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಸಲಗ ಅನ್ನೋ ಚಿತ್ರದ ಮೂಲಕ ವಿಜಯ್ ಅವರು ಮೊದಲನೆ ಬಾರಿಗೆ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಸಲಗ ಪೋಸ್ಟರ್ ನೋಡುತ್ತಿದ್ದರೆ ಮಾಸ್ ಸಿನಿಮಾ ಎಂದು ನಮಗೆ ಅನಿಸುತ್ತದೆ. ಟಗರು ಚಿತ್ರ ತಂಡದವರು ದುನಿಯಾ ವಿಜಯ್ ಗೆ ಆಧಾರ ಸ್ತಂಬವಾಗಿ ನಿಂತಿದ್ದಾರೆ. ದುನಿಯಾ ವಿಜಯ್ ಅವರ ಈ ನಿರ್ಧಾರಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬೆನ್ನು ತಟ್ಟಿದ್ದಾರೆ.

kotigobba 3

ಸುದೀಪ್ ಅವರು ದುನಿಯಾ ವಿಜಯ್ ಗೆ ಶುಭಾಶಯಗಳನ್ನು ತಿಳಿಸಿದ್ದಾರೆ

ಸುದೀಪ್ ಅವರು ಸಹ ಮೊದಲು ನಟನಾಗಿ, ಆನಂತರ ನಿರ್ದೇಶಕರಾಗುತ್ತಾರೆ. ಮೈ ಆಟೋಗ್ರಾಫ್ ಸುದೀಪ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಚೊಚ್ಚಲ ಚಿತ್ರವಾಗಿತ್ತು. ಸಿನಿಮಾ ಹಿಟ್ ಕೂಡ ಆಗಿತ್ತು. ನಂತರ ಶಾಂತಿ ನಿವಾಸ, ಕೆಂಪೇಗೌಡ, ಮಾಣಿಕ್ಯ ಚಿತ್ರಗಳನ್ನು ನಿರ್ದೇಶನ ಮಾಡುತ್ತಾರೆ. ನಿರ್ದೇಶಕ ಹಾಗೂ ನಟನ ಜವಾಬ್ದಾರಿಯನ್ನು ಹೇಗೆ ನಿಭಾಯಿಸಬೇಕೆನ್ನುವುದು ಇವರಿಗೆ ಚೆನ್ನಾಗಿ ತಿಳಿದಿರುತ್ತದೆ. ಈಗ ಸುದೀಪ್ ಅವರು ದುನಿಯಾ ವಿಜಯ್ ಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

ಚಿತ್ರೀಕರಣದ ಕ್ಷಣಗಳನ್ನು ಮಜಾ ಮಾಡು ನಿಮಗೆ ಯಶಸ್ಸು ಸಿಗಲಿ

ಯಾರಾದರೂ ಒಂದು ಹೆಜ್ಜೆ ಮುಂದೆ ಇಡುತ್ತಾರೆಂದರೆ ಅದು ಖುಷಿ ಪಡುವ ಕ್ಷಣವಾಗುತ್ತದೆ. ಕೆಲವೊಂದು ಬಾರಿ ನಮ್ಮನ್ನು ನಾವು ಹುಡುಕಬೇಕಾಗುತ್ತದೆ. ಇನ್ನು ಕೆಲವು ಬಾರಿ ಉಲ್ಲಾಸಕ್ಕಾಗಿ ಹಾಗು ಬೆಳವಣಿಗೆಗಾಗಿ, ಒಬ್ಬ ನಟ ನಿದೇಶಕನಾಗಿ ಬದಲಾಗುವುದು ಒಳ್ಳೆಯ ವಿಷಯ ಮತ್ತು ಒತ್ತಡದ ಕೆಲಸ. ಚಿತ್ರೀಕರಣದ ಕ್ಷಣಗಳನ್ನು ಮಜಾ ಮಾಡಿ ನಿಮಗೆ ಯಶಸ್ಸು ಸಿಗಲಿ ಎಂದು ಸುದೀಪ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ದುನಿಯಾ ವಿಜಯ್ ಅವರು ಈ ಚಿತ್ರದ ಮುಲ್ಕಾ ಕಮ್ ಬ್ಯಾಕ್ ಆಗಲಿ ಎಂದು ನಾವು ಸಹ ಹಾರೈಸೋಣ.

LEAVE A REPLY

Please enter your comment!
Please enter your name here