ನೈಜವಾದ ವಿಮಾನವನ್ನು ತಯಾರಿಸಿದ ವಿದ್ಯಾರ್ಥಿ ಇಲ್ಲಿದೆ ರೋಚಕ ಕಥೆ

0
504

ರಾಜಸ್ಥಾನದ ಚಿತ್ರಾಂ ಗುರ್ಜಾರ್ ಎನ್ನುವ ಯುವಕ ಎರಡು ಬೈಕ್ ಗಳ ಇಂಜಿನ್, ಲೋಹ, ಕೆಲವು ಬಿಡಿ ಭಾಗಗಳು ಹಾಗು ಇನ್ನಿತರ ಉಪಯೋಗಿಸಲಾರದಂತಹ ಸಾಮಾಗ್ರಿಗಳನ್ನು ಸಂಗ್ರಹಿಸಿ ಒಂದು ವಿಮಾನವನ್ನು ತಯಾರಿಸಿದ್ದಾನೆ. ಐಟಿಐ ಓದುತ್ತಿರುವ ಚೀತ್ರಂ ಇಂತಹದೊಂದು ವಿಮಾನವನ್ನು ಸಿದ್ದ ಪಡಿಸಲು ಸತತ ಎರಡು ವರ್ಷಗಳ ಕಾಲ ಕಷ್ಟ ಪಟ್ಟಿದ್ದರು. ಈಗ ೮ ಲಕ್ಷ ಮೊತ್ತದಲ್ಲಿ ವಿಮಾನ ನಿರ್ಮಾಣವಾಗಿದ್ದು, ಇದನ್ನು ಆಗಸದಲ್ಲಿ ಹಾರಿಸವುದಕ್ಕಾಗಿ ಕಾಯುತ್ತಿದ್ದಾನೆ. ಈ ವಿಮಾನಕ್ಕೆ ಪಾವನ ಪುತ್ರ ಎಂದು ನಾಮಕರಣ ಮಾಡಿದ್ದಾನೆ. ಇನ್ನು ವಿಮಾನದ ಡಿಸೈನ್ ಆಕರ್ಷಕವಾಗಿದೆ. ಯುವಕನ ಈ ಕಾರ್ಯಕ್ಕೆ ಜನರು ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ.

20 ಅಡಿ ಎತ್ತರ ಹಾರುವ ಸಾಮ್ಯರ್ಥತೆಯನ್ನು ವಿಮಾನ ಹೊಂದಿದೆ

ಭಾರತ ದೇಶದ ತ್ರಿವರ್ಣ ಬಣ್ಣವನ್ನು ಬಳಸಿ ವಿಮಾನದ ಅಲಂಕಾರವನ್ನು ಮಾಡಿದ್ದಾರೆ. ವಿಮಾನದ ಮೇಲೆ ಜೈ ಜವಾನ್, ಜೈ ಕಿಸಾನ್, ಮೇರಾ ಭಾರತ್ ಮಹಾನ್, ಜಲ್ ಹಿ ಜೀವನ್ ಹೇ ಎನ್ನುವ ಘೋಷಣೆಗಳನ್ನು ವಿಮಾನದ ಮೇಲೆ ಬರೆದಿದ್ದಾರೆ. ಇನ್ನು ಈ ವಿಮಾನ 6 ಮೀಟರ್ ಅಂದರೆ 20 ಅಡಿ ಎತ್ತರ ಹಾರುವ ಸಾಮ್ಯರ್ಥತೆಯನ್ನು ವಿಮಾನ ಹೊಂದಿದೆ. ಕೇಂದ್ರ ಸರ್ಕಾರದಿಂದ ವಿಮಾನ ಹಾರಾಟಕ್ಕೆ ಅನುಮತಿ ನೀಡಲಾಗಿದ್ದು, ಸ್ವಲ್ಪ ದಿನಗಳಲ್ಲಿ ವಿಮಾನ ಹಾರಾಟವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಇನ್ನು ಈ ವಿಮಾನ ತಯಾರಾಗುತ್ತಿದ್ದಂತೆ, ಚೆತ್ರಮ್ ಲೋಕಲ್ ಹೀರೋ ಆಗಿ ಜನಪ್ರಿಯನಾಗುತ್ತಿದ್ದಾನೆ.

ಭಿನ್ನ ವಿಭಿನ್ನವಾಗಿ ಹೊಸದಾದ ಸಂಶೋಧನೆಯನ್ನು ಮಾಡುತ್ತಿರುತ್ತಾರೆ

ವಿಮಾನದ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದ್ದು, ಕೇವಲ ಭಾರತ ದೇಶವಲ್ಲದೆ ಇತರ ದೇಶದ ಮಾದ್ಯಮದವರು ಈ ವಿಷಯದ ಕುರಿತು ಸುದ್ದಿಯನ್ನಾಗಿ ಮಾಡುತ್ತಿದ್ದಾರೆ. ನಿಜಕ್ಕು ಇವನು ಮಾಡಿದ ಕಾರ್ಯವನ್ನು ಮೆಚ್ಚಿಕೊಳ್ಳಬೇಕಾಗಿದೆ. ಕೆಲವರು ಮನೆಯಲ್ಲಿದ್ದ ಹಾಳಾದ ವಸ್ತುಗಳನ್ನು ಉಪಯೋಗಿಸಿಕೊಂಡು ಭಿನ್ನ ವಿಭಿನ್ನವಾಗಿ ಹೊಸದಾದ ಸಂಶೋಧನೆಯನ್ನು ಮಾಡುತ್ತಿರುತ್ತಾರೆ. ತಮಗೆ ಯಾವ ವಿಷಯದ ಮೇಲೆ ಆಸಕ್ತಿ ಇರುತ್ತದೊ ಅನಂತಹ ವಿಷಯಗಳತ್ತ ಇವರು ಹೆಚ್ಚು ಗಮನವನ್ನು ಹರಿಸುತ್ತಿರುತ್ತಾರೆ. ಅಂದು ಬೆಳಸಿಕೊಂಡ ಆಸಕ್ತಿಯೆ ಇಂದು ಇಂತಹ ಕೆಲಸಗಳನ್ನು ಮಾಡುವುದಕ್ಕೆ ಪೂರಕವಾಗಿದೆ.

ವಿಮಾನ ಹಾರಾಟದ ಸುಂದರದ ಕ್ಷಣಕ್ಕಾಗಿ ಜನರು ಎದುರು ನೋಡುತ್ತಿದ್ದಾರೆ

ಇನ್ನು ವಿದ್ಯಾಭ್ಯಾಸವನ್ನು ಮಾಡುತ್ತಿದ್ದ ಹುಡುಗ ಪಾಲು ಬಿದ್ದ ವಸ್ತುಗಳನ್ನು ಬಳಸಿಕೊಂಡು ವಿಮಾನವನ್ನು ತಯಾರಿಸಿದ್ದಾನೆ. ಇಂತಹ ಪ್ರತಿಭೆಗಳಿಗೆ ಮುಂದಿನ ದಿನಗಳಲ್ಲಿ ಹೆಚ್ಚಾದ ಅವಕಾಶಗಳನ್ನು ನೀಡಬೇಕಿದೆ. ಇನ್ನು ವಿಮಾನ ಹಾರಾಟದ ಸುಂದರದ ಕ್ಷಣಕ್ಕಾಗಿ ಕುತೂಹಲದಿಂದ ಜನರು ಎದುರು ನೋಡುತ್ತಿದ್ದಾರೆ.

LEAVE A REPLY

Please enter your comment!
Please enter your name here