ರಂಗಭೂಮಿ ಕಲಾವಿದನ ಹಿಂದಿರುವ ರೋಚಕವಾದ ನೋವಿನ ಕಥೆ

0
322

ರಾಜು ತಾಳಿಕೋಟೆ ಮೂಲತಃ ಇವರು ರಂಗಭೂಮಿ ಕಲಾವಿದರಾಗಿದ್ದಾರೆ. ಕೆಲ ಕನ್ನಡ ಚಿತ್ರಗಳಲ್ಲಿಯೂ ಬಣ್ಣ ಹಚ್ಚಿದ್ದಾರೆ. ಉತ್ತರ ಕರ್ನಾಟಕದಲ್ಲಿ ಬಹಳ ಹೆಸರುವಾಸಿಯಾದ ಹಾಸ್ಯ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಇವರ ಅಭಿನಯದ ಕಲಿಯುಗದ ಕುಡುಕ ನಾಟಕವು ಹತ್ತು ಸಾವಿರಕ್ಕು ಹೆಚ್ಚು ಪ್ರದರ್ಶನವನ್ನು ಕಾಣುವ ಮೂಲಕ ದಾಖಲೆಯನ್ನು ನಿರ್ಮಿಸಿತ್ತು. ಕಣ್ಣಿದ್ದರೂ ಬುದ್ದಿ ಬೇಕು, ಮಾನವಂತರ ಮನೆತನ, ತಾಳಿ ತಕರಾರು ಹೀಗೆ ಅನೇಕ ನಾಟಕಗಳು ಇವರಿಗೆ ಹೆಚ್ಚು ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಪ್ರಸ್ತುತವಾಗಿಯೂ ಸಹ ಇವರು ರಂಗಭೂಮಿಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಸದ್ಯಕ್ಕೆ ಇವರು ಬಿಗ್ ಬಾಸ್ 7ನೇ ಆವೃತ್ತಿಯ ಸ್ಪರ್ಧಿಯಾಗಿ ಮನೆಗೆ ಕಾಲಿಟ್ಟಿದ್ದಾರೆ.

ನಮ್ಮ ತಂದೆ ಮೂಲತಃ ರಂಗ ಭೂಮಿಯ ಕಲಾವಿದರಾಗಿದ್ದರು

ರಾಜು ತಾಳಿಕೋಟೆ ತಮ್ಮ ತಂದೆ ಮತ್ತು ತಾಯಿಯ ನೆನಪಿಸಿಕೊಂಡು ನಿನ್ನೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ನಂದು ಮತ್ತು ರವಿ ಬೆಳಗೆರೆ ಇಬ್ಬರದು ಒಂದೆ ಕಥೆಯಾಗಿದೆ. ಅವರಿಗೂ ತಂದೆ ಯಾರು ಎಂದು ಗೊತ್ತಿರಲಿಲ್ಲ. ನಾನು ನಮ್ಮ ತಂದೆಯ ಆಸರೆಯಲ್ಲಿ ಬೆಳೆದಿರಲಿಲ್ಲ. ನಮ್ಮ ತಂದೆ ಮೂಲತಃ ರಂಗ ಭೂಮಿಯ ಕಲಾವಿದರಾಗಿದ್ದರು. ಆದ್ದರಿಂದ ಅವರು ಹೆಚ್ಚು ಮಹಿಳೆಯರನ್ನ ಹೆಂಡತಿಯನ್ನರಾಗಿ ಸ್ವೀಕರಿಸಿದ್ದರು.

ತಂದೆಯ ಜೊತೆ ಹೆಚ್ಚು ಸಮಯವನ್ನು ಕಳೆದಿರಲಿಲ್ಲ

ಒಬ್ಬ ಶಾಲಾ ಶಿಕ್ಷಕಿಯನ್ನು ನಮ್ಮ ತಂದೆ ಮದುವೆಯಾಗಿದ್ದರು. ಮದುವೆ ಆದ ನಂತರ ಶಿಕ್ಷಕಿಯ ವೃತ್ತಿಗೆ ವಿದಾಯ ಹೇಳಿ ನಮ್ಮ ತಂದೆ  ಜೊತೆ ನಾಟಕಗಳನ್ನು ಮಾಡಲು ಶುರು ಮಾಡಿದ್ದರಂತೆ. ರಾಜು ತಾಳಿಕೋಟೆ ಕೊನೆಯ ಮಗನಾಗಿದ್ದರು. ರಾಜು ಅವರು ತಮ್ಮ ತಂದೆಯನ್ನು ನೋಡಿದ್ದರು ಸಹ ಅವರೊಂದಿಗೆ ಹೆಚ್ಚು ಸಮಯವನ್ನು ಕಳೆದಿರಲಿಲ್ಲ. ಅಕ್ಕ ಮತ್ತು ಅಮ್ಮನ ಜೊತೆ ತಮ್ಮ ಬಾಲ್ಯದ ಜೀವನವನ್ನು ಕಳೆದಿದ್ದರು.

ತಾಳಿಕೋಟೆ ಅವರ ಜೀವನದಲ್ಲಿ ಹೊಸ ತಿರುವು

ಒಂದು ದಿನ ತಮ್ಮ ಜೀವನವನ್ನು ಸಾಗಿಸುವ ಸಲುವಾಗಿ ಹೋಟೆಲ್ ನಲ್ಲಿ ರಾಜು ತಾಳಿಕೋಟೆ ಕೆಲಸವನ್ನು ಹುಡುಕಿಕೊಂಡಿದ್ದರು. ಒಬ್ಬ ವ್ಯಕ್ತಿ ಇವರನ್ನು ಗುರುತಿಸಿದ್ದು, ನೀವು ಇಲ್ಲಿ ಕೆಲಸ ಮಾಡಬೇಡಿ ಎಂದು ನಾಟಕ ಸಂಸ್ಥೆಗೆ ಕರೆದುಕೊಂಡು ಬಂದಿದ್ದರಂತೆ. ರಂಗಭೂಮಿಯಲ್ಲಿ ಪರದೆಯನ್ನು ಎಳೆಯುವುದು, ಸ್ವಿಚ್ ಹಾಕುವುದು ಹೀಗೆ ಇನ್ನಿತರ ಕೆಲಸವನ್ನು ಮಾಡಿಕೊಂಡಿದ್ದರು. ಆದರೆ ಒಂದು ನಾಟಕ ನಡೆಯುವ ಸಂದರ್ಭದಲ್ಲಿ ಪಾತ್ರ ಮಾಡುವ ಕಲಾವಿದರು ಬಂದಿರಲಿಲ್ಲ. ಆಗ ಆ ಪಾತ್ರವನ್ನು ರಾಜು ತಾಳಿಕೋಟೆ ಅವರು ಮಾಡಿ ಜನರಿಂದ ಸೈ ಎನ್ನಿಸಿಕೊಳ್ಳುತ್ತಾರೆ, ಅಂದು ನಾಟಕದ ಕಡೆ ತಾಳಿಕೋಟೆ ಮುಖ ಮಾಡಿದ್ದು ಮತ್ತೆ ಹಿಂತುರುಗಿ ನೋಡಲೇ ಇಲ್ಲ. ಕೆಲ ಕನ್ನಡ ಚಿತ್ರಗಳಲ್ಲಿಯೂ ಇವರು ತಮ್ಮ ಅಭಿನಯದ ಛಾಪನ್ನು ತೋರಿಸಿದ್ದಾರೆ.

ತಂದೆ ತಾಯಿ ನಿಲ್ಲಿಸಿದ ನಾಟಕ ಸಂಸ್ಥೆಯನ್ನು ಮುಂದುವರೆಸಿದ್ದರು 

ಇವರ ತಂದೆ ತಾಯಿ ನಿಲ್ಲಿಸಿದ ನಾಟಕ ಸಂಸ್ಥೆಯನ್ನು ಇವರು ಮುಂದುವರೆಸಿಕೊಂಡು ಹೋಗುತ್ತಾರೆ. ಮನೆ ಮಾಡಿಕೊಂಡು ಪತ್ನಿಯರ ಜೊತೆ ಸುಖಮಯವಾಗಿ ನಾನು ನನ್ನ ಜೇವನ ವನ್ನು ನಡೆಸುತ್ತಿದ್ದೇನೆ ಎಂದು ತಮ್ಮ ಕಥೆಯನ್ನು ರಾಜು ತಾಳಿಕೋಟೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದರು.

LEAVE A REPLY

Please enter your comment!
Please enter your name here