ದೊಸ್ತಾ , ನಮ್ಮ ಉತ್ತರ ಕರ್ನಾಟಕದ ಜೋಳದ ರೊಟ್ಟಿ , ಎಣ್ಣೆಗಾಯಿ ತಿನ್ನೂ ಮನಸಾಗೆತೇನು !?

0
1183
sri venkateshwara north karnataka hotel
sri venkateshwara north karnataka hotel

ಹೆಚ್ಚುಕಮ್ಮಿ ಅರ್ಧ ಬೆಂಗಳೂರಿಗರ ಬದುಕು ಇಡ್ಲಿ, ವಡೆ, ಸಾಂಬಾರ್, ಚಟ್ನಿ ಇವುಗಳ ಸುತ್ತಾನೆ ಸುತ್ತು ಹಾಕ್ತಿರತ್ತೆ, “ಅಣ್ಣ ಸಾಂಬಾರ್ ಡಿಪ್ ಬೇಡ , separate ಕೊಡಿ” , “ಅಣ್ಣ ಇನ್ನು ಸ್ವಲ್ಪ ಚಟ್ನಿ ಹಾಕಿ” , ಈ ಮಾತುಗಳು ದಿನಚರಿಯಲ್ಲಿ ಸೇರ್ಕೊಂಡ್ ಬಿಟ್ಟಿರ್ತದೆ. ಇದನ್ನ ನಾವು ಬೆಂಗಳೂರಿಗರ ಹೃದಯ ಅಂತ ಹೇಳಿದ್ರೆ ತಪ್ಪಾಗೋದಿಲ್ಲ. ದರ್ಶಿನಿಗಳ ತಿಂಡಿ , ಫಿಲ್ಟರ್ ಕಾಪಿ ಇವು ಹೃದಯದ ಭಾಗ ಆದ್ರೆ , ಹೊರಗಿನ ಶಹರಗಳಿಂದ ಬಂದೋರಿಗೆ ರೋಟಿ ದಾಲ್, ಪಾವ್ ಬಾಜಿ ಇವುಗಳು ಹೇರಳವಾಗಿ ಸಿಗೋದ್ರಿಂದ ಮನೆ  feel ಕೊಡತ್ತೆ. ನೀವೇನಾದ್ರು ಉತ್ತರ ಕರ್ನಾಟಕದವರಾಗಿದ್ದು, ಊರಿನ ಊಟನ ಬೆಂಗಳೂರಿನಲ್ಲಿ ತಿನ್ನೋ ಮನಸಾದ್ರೆ ಶ್ರೀ ವೆಂಕಟೇಶ್ವರ ಹೋಟೆಲ್, ಗಾಂಧಿ ಬಜರ್ Best Choice.

pc: karthik bhat
pc: karthik bhat

ದೊಸ್ತಾ, ಬೊಂಬಾಟ್ ಊಟ ಬರಿ 100 ರೂಪಾಯಿ ಒಳಗಡೆ ಸಿಗತ್ತೆ !!!

ಅಂತ ದುಬಾರಿ ಹೋಟೆಲ್ ಏನಲ್ಲ ಇದು , ಜೋಳದ ರೊಟ್ಟಿ ಊಟ ಆರ್ಡರ್ ಮಾಡಿದ್ರೆ 2 ರೊಟ್ಟಿ , ಎಣ್ಣೆಗಾಯಿ, ಪಲ್ಯ, ಮೊಸರು, ಚಟ್ನಿಪುಡಿ, ಅನ್ನ, ಸಾಂಬಾರ್, ರಸಂ, ಉಪ್ಪಿನಕಾಯಿ ಮತ್ತು ಸೌತೆಕಾಯಿ ಎಲ್ಲ ಸಿಗತ್ತೆ. ನಿಮಗೆ ಅಷ್ಟೇನು ಹಸಿವಾಗಿಲ್ಲ ಅಂದ್ರೆ ಬರಿ ರೊಟ್ಟಿ ಅಥವಾ ಅನ್ನ-ಸಾಂಬಾರ್ ಮಾತ್ರ ತಗೆದುಕೊಳ್ಳೊ option ಕೂಡ ಇದೆ.
ಹೋಟೆಲ್ ನೋಡೋಕೆ ಅಷ್ಟಕಷ್ಟೆ ಅನ್ನಿಸಿದ್ರು , ಊಟ ಮಾತ್ರ ಸಕ್ಕತ್ ಸ್ವಾದಿಷ್ಟ. ನಿಮಗೆ ಹಸಿವಾಗಿ ಒಳ್ಳೆ ಊಟ ಮಾಡ್ಬೇಕು ಅಂತ ಅನ್ನಿಸಿದ್ರೆ , ಹೋಟೆಲ್ ಆವರಣ ಮತ್ತು ಪರಿಸರ matter ಆಗೋದಿಲ್ಲ ಬಿಡಿ. (ನಮಗನ್ನಿಸಿದ್ದು)

sri venkateshwara north karnataka hotel
sri venkateshwara north karnataka hotel

ಏನೇನ್ ಸಿಗತ್ರಿ !!?

regular ಊಟ – ( Rs.80) – 2 ರೊಟ್ಟಿ ಅಥವಾ ಚಪಾತಿ , 2 ವಿಧವಾದ ಪಲ್ಯ , ಅನ್ನ , ಸಾಂಬಾರ್ , ರಸಂ, ಮೊಸರು, ಉಪ್ಪಿನಕಾಯಿ, ಚಟ್ನಿಪುಡಿ, ಸೌತೆಕಾಯಿ

ರೊಟ್ಟಿ – (Rs.50) 2 ರೊಟ್ಟಿ ಅಥವಾ ಚಪಾತಿ , 2 ತರಹದ ಪಲ್ಯ , ಮೊಸರು

ಅನ್ನ-ಸಾಂಬಾರ್ – (Rs.50) ಅನ್ನ ಮತ್ತು ಸಾಂಬಾರ್, 2 ತರದ ಪಲ್ಯ, ಮೊಸರು

Special ಊಟ : (Rs.150) ಸೊಪ್ಪಿನ ಸಲಾಡ್, ಸ್ವೀಟ್, ಮೊಸರು, 3 ವಿಧವಾದ ಪಲ್ಯ, ರೊಟ್ಟಿ ಅಥವಾ ಚಪಾತಿ(3 pieces), ಅನ್ನ, ಸಾಂಬಾರ್, ರಸಂ, ಮಜ್ಜಿಗೆ, ಉಪ್ಪಿನಕಾಯಿ, ಚಟ್ನಿಪುಡಿ.

Open: 12:30 PM – 3:30 PM and 7 PM – 10 PM

Where: 31, Police station, Near Gandhi Bazaar, Basavanagudi

ಸಮಯ ಮಾಡ್ಕೊಂಡು ಶ್ರೀ ವೆಂಕಟೇಶ್ವರ ಹೋಟೆಲ್ಗೆ ಒಂದು visit ಕೊಡಿ, ಉತ್ತರ ಕರ್ನಾಟಕದ ರುಚಿ ನಿಮ್ಮ ನಾಲಗೆಯ ಮೇಲೆ ತುಂಬಾ ದಿನಗಳ ಕಾಲ ಹಾಗೇ ಉಳ್ಕೊಂಡ್ ಬಿಡತ್ತೆ.ನಿಮಗೂ ಇದೇ ತರಹದ ಜಾಗಗಳು ಗೊತ್ತಿದ್ದಲ್ಲಿ ಕಾಮೆಂಟ್ ನಲ್ಲಿ ತಿಳಿಸಿ.

LEAVE A REPLY

Please enter your comment!
Please enter your name here