ಬೆಂಗಳೂರಿನಲ್ಲಿ ಚಿಂದಿಯಾಗಿರೊ ದಾವಣಗೆರೆ ಬೆಣ್ಣೆ ದೋಸೆ ತಿನ್ಬೇಕಂದ್ರೆ, ಇದೇ ಸರಿಯಾದ ಜಾಗ.

0
896
sri guru kotureshwara benne dose hotel
sri guru kotureshwara benne dose hotel

ದಾವಣಗೆರೆ ಅನ್ನೊ ಹೆಸರು ಕೇಳುತ್ತಿದ್ದಹಾಗೆ ಕಣ್ಣಮುಂದೆ ಬರೋದು ವಿಧವಿಧವಾದ ದೋಸೆಗಳು, ಅದ್ರಲ್ಲು ದಾವಣಗೆರೆ ಬೆಣ್ಣೆ ದೋಸೆ ಎಷ್ಟು ಹೆಸರುವಾಸಿ ಅಂದ್ರೆ, ಬೆಣ್ಣೆ ದೋಸೆ ಜತೆ ದಾವಣಗೆರೆ ಸೇರಿಲ್ಲ ಅಂದ್ರೆ ಅದು ಬೆಣ್ಣೆ ದೋಸೆನೇ ಅಲ್ಲ ಅನ್ನೋಹಾಗೆ ಆಗಿಹೋಗಿದೆ. ಬೆಂಗಳೂರಿನಲ್ಲು ಏನು ಕಮ್ಮಿ ಇಲ್ಲ ಇದರ ಹವಾ. ಬೆಂಗಳೂರಿನ ಕೆಲವು ಹೋಟೆಲ್ಗಳಲ್ಲಿ ಬರಿ ಹೆಸರಿಗೆ ಮಾತ್ರ ದಾವಣಗೆರೆ ಬೆಣ್ಣೆ ದೋಸೆ ಇರತ್ತೆ ಹೊರೆತು ನಿಜವಾದ ದಾವಣಗೆರೆ ಬೆಣ್ಣೆ ದೋಸೆಯ ಸ್ವಾದ ನಮ್ಮ ನಾಲಗೆಗೆ ತಟ್ಟೋದೆಯಿಲ್ಲ, ಆದರೆ ಶ್ರೀ ಗುರು ಕೊಟ್ಟೂರೇಶ್ವರ ಬೆಣ್ಣೆ ದೋಸೆ ಹೋಟೆಲ್ ನಲ್ಲಿ ನಾವು ಬೆಣ್ಣೆ ದೋಸೆ ತಿಂದಾಗ ನಿಜವಾಗ್ಲೂ ಮನಸು ಕರಗಿ ಹೋಗ್ಬಿಡ್ತು.

ಬೆಣ್ಣೆ ದೋಸೆ ಅಂದ್ರೆ ಏನು ? 

ಕನ್ನಡದವರಾದ ನಿಮಗೆ ಬೆಣ್ಣೆ ದೋಸೆ ಅಂದ್ರೆ ಏನು ಅಂತ ಹೇಳೋ ಅವಶ್ಯಕತೆ ಇಲ್ಲ ಅನ್ಸತ್ತೆ.ಬೇಯಿಸಿದ ಆಲೂಗಡ್ಡೆ ಪಲ್ಯಾದ ಜೊತೆ ಮೈ ಮರೆತಿರುವ ದೋಸೆಗೆ ಮೈತಣಿಸುವ ಸ್ವಾದಿಷ್ಟ ಬೆಣ್ಣೆ ಬಿದ್ರೆ ಸೃಷ್ಟಿಯಾಗೊ ಅದ್ಭುತಕ್ಕೆ ಬೆಣ್ಣೆ ದೋಸೆ ಅಂತ ಕರಿತಾರೆ. ತಂಗಿನ ಕಾಯಿ ಚಟ್ನಿ ಜತೆ ತಿಂತಿದ್ರೆ ಬೂಲೋಕದಲ್ಲಿ ಇದ್ದಿವಿ ಅನ್ನೋದನ್ನೆ ಮರೆತುಬಿಡ್ತೀವಿ ನಾವು.

 

Benne dose
Benne dose

ಬೆಣ್ಣೆ ದೋಸೆಗೆ ಶ್ರೀ ಗುರು ಕೊಟ್ಟೂರೇಶ್ವರ ಹೋಟೆಲ್ಲೆ ಯಾಕೆ ?

ಇವತ್ತಿಗೂ ಅದೇ ಸ್ವಾದ ಮತ್ತೆ ಅದೇ ಬದಲಾಗದ ದಾವಣಗೆರೆ ಬೆಣ್ಣೆ ದೋಸೆಯ ವಿಶ್ಸ್ವಾಸಾರ್ಹ ರುಚಿ ಇದೆ. ತೆಳುವಾಗಿ,ಗರಿಗರಿಯಾಗಿ ಮನಸಿಗೆ ಹಿಡಿಸುವ ಹಾಗಿದೆ. ಗರಿಗರಿಯಾದ ದೋಸೆಗೆ ಸಕ್ಕತ್ತಾಗಿ ಸಾತ್ ನೀಡೋದು ಆಲೂಗಡ್ಡೆ ಪಲ್ಯ ಮತ್ತೆ ತಂಗಿನಕಾಯಿ ಚಟ್ನಿ. ನೀವೇನಾದ್ರು ಇಲ್ಲಿ ದೋಸೆ ತಿನ್ನೋದಕ್ಕೆ ಶುರು ಮಾಡಿದ್ರೆ ಆ ರುಚಿ ಒಂದು ಕ್ಷಣದಲ್ಲೇ ತಟ್ಟೆನಾ ಖಾಲಿಮಾಡಿಸಿಬಿಡುವಷ್ಟು ನಿಮ್ಮನ್ನ ಸೆಳೆದುಬಿಡತ್ತೆ. ಕಳೆದ ಇಪ್ಪತ್ತು ವರ್ಷಗಳಿಂದಲೂ ಬೆಣ್ಣೆ ದೋಸೆ ಮಾಡಿಮಾಡಿ ಆ ಕಲೆಯಲ್ಲಿ ನೀಪುಣರಾಗಿಹೋಗಿದ್ದರೆ ಅಂತ ಹೆಳ್ಬೋದು.ಒಂದೇ ಮಾತಲ್ಲಿ ಹೇಳಬೇಕಂದ್ರೆ ಸಕತ್ ಸ್ವಾದಿಷ್ಟ, ತಿನ್ನದೇ ಇದ್ರೆ ನಿಮಗೆ ನಷ್ಟ.

guru kottureshwara benne dose
guru kottureshwara benne dose

ಇಲ್ಲಿ ತಿನ್ನೋದಕ್ಕೆ ಏನೇನ್ ಸಿಗತ್ತೆ ?

ಹೆಚ್ಚಿಗೆ ಬೇರೇನೂ ಸಿಗಲ್ಲ ಇಲ್ಲಿ, ಸಿಗೋದು ಕೇವಲ ಮೂರು ವಿಧವಾದ ಮತ್ತು ರುಚಿಕರವಾದ ದೋಸೆಗಳು , ಮೊದಲನೆಯದಾಗಿ ಖಾಲಿ ದೋಸೆ, ಎರಡನೆಯದಾಗಿ ಸಿಂಗಲ್ ಬೆಣ್ಣೆ ದೋಸೆ, ಮೂರನೆಯದಾಗಿ ಡಬಲ್ ಬೆಣ್ಣೆ ದೋಸೆ. ಮೂರರಲ್ಲೂ ಮಸ್ತ್ ಇದ್ದಾರೆ ಈ ನಳಪಾಖ ತಜ್ಞರು.

guru kottureshvara benne dose hotel
guru kottureshvara benne dose hotel

ನೆನಪಿಡಿ

ಶುಚಿರುಚುಯಾದ ಗರಿಗರಿ ಬೆಣ್ಣೆ ಮಸಾಲೆ ಅಥವಾ ದೋಸೆ ತಿನ್ನಬೇಕಂದ್ರೆ ಹೆಚ್ಚುಕಮ್ಮಿ 20 ರಿಂದ 30 ನಿಮಿಷ ಕಾಯಲೇಬೇಕಾಗುತ್ತದೆ. ಜಾಗ ಸಿಕ್ಕದ್ದೆ ನಿಮ್ಮ ಟೇಬಲ್ ಮೇಲೆ ಬಂದ ಗರಿಗರಿಯಾದ ದೋಸೆ ತಿಂದ್ರೆ ಕಾದಿದ್ದೆಲ್ಲ ಮರೆತು ಹೋಗ್ಬಿಡತ್ತೆ.

Location

Subbarama Chetty Rd, NR Colony, Basavanagudi, Bengaluru,

Timings: 7:30 am – 1:30 pm and 4:30 pm – 10 pm

 

LEAVE A REPLY

Please enter your comment!
Please enter your name here