ಪ್ರೀತಿಸಿದ ಹುಡುಗನೊಂದಿಗೆ ಮಗಳ ನಿಶ್ಚಿತಾರ್ಥ ಮಾಡಿದ ಶ್ರೀರಾಮುಲು. ಹುಡುಗ ಯಾರು?

0
1064
sreeramulu

ನಮ್ಮ ರಾಜ್ಯ ಬಹಳಷ್ಟು ಅಭಿವೃದ್ಧಿಯಾಗಿ, ಬಹು ಬೆಳವಣಿಗೆ ಕಾಣುತ್ತದೆ. ಅಲ್ಲದೆ ಮನುಷ್ಯರು ಸಹ ಬಹಳಷ್ಟು ಬದಲಾವಣೆಗಳನ್ನು ತಮ್ಮ ಜೀವನದಲ್ಲಿ ಕಂಡುಕೊಳ್ಳುತ್ತಿದ್ದಾರೆ. ಆದರೆ ಇಷ್ಟೆಲ್ಲಾ ಬದಲಾವಣೆಯಾದರೂ, ಒಂದು ವಿಚಾರದಲ್ಲಿ ಮಾತ್ರ ನಮ್ಮ ಜನರು ಹಿಂದೆ ಸರಿಯುತ್ತಾರೆ. ಅದೇ ಮದುವೆ. ಹೌದು. ಅಂತರ್ಜಾತಿ ಹಾಗು ಪ್ರೇಮ ವಿವಾಹ ಅಂದ್ರೆ ಯಾರಿಗೂ ಸಹಿಸಲಾಗುವುದಿಲ್ಲ. ಅದಕ್ಕಾಗಿ ಅದನ್ನು ಯಾರು ಒಪ್ಪುವುದಿಲ್ಲ. ಎಲ್ಲೋ ಕೆಲವರು ಮಾತ್ರ ತಮ್ಮ ಮಕ್ಕಳು ಚೆನ್ನಾಗಿರಲಿ ಎನ್ನುವ ದೃಷ್ಟಿಯಿಂದ ಮದುವೆ ಮಾಡುತ್ತಾರೆ. ಈಗ ಆ ಸಾಲಿಗೆ ಶ್ರೀರಾಮುಲು ಅವರು ಕೂಡ ಸೇರಿದ್ದಾರೆ. ಹೌದು. ಪ್ರೀತಿಸಿದ ಯುವಕನೊಂದಿಗೆ ತಮ್ಮ ಮಗಳ ನಿಶ್ಚಿತಾರ್ಥ ಮಾಡಿದ್ದಾರೆ. ಜೊತೆಗೆ ಇದೇ ಸಮಯದಲ್ಲಿ ರಾಜಕೀಯರ ನಾಯಕರುಗಳ ನಡುವೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದಾರೆ.

ಪ್ರೀತಿಸಿದ ಹುಡುಗನೊಂದಿಗೆ ಮಗಳ ಮದುವೆ

ಸಾಮಾನ್ಯವಾಗಿ ರಾಜಕೀಯ ನಾಯಕರುಗಳು ಅಂದ್ರೆ ಆಸ್ತಿ ಅಂತಸ್ತು ಜೊತೆಗೆ, ತಮ್ಮ ಗೌರವದ ಬಗ್ಗೆ ಹೆಚ್ಚು ಚಿಂತಿಸುತ್ತಾರೆ. ಯಾಕಂದ್ರೆ ವಿರೋಧ ಪಕ್ಷದವರ ಮುಂದೆ ತಲೆ ತಗ್ಗಿಸಿ ನಿಲ್ಲಲು ಇಷ್ಟ ಪಡುವುದಿಲ್ಲ. ಹಾಗಾಗಿ ಎಲ್ಲ ವಿಷಯದಲ್ಲೂ ಬಹಳಷ್ಟು ಯೋಚನೆ ಮಾಡುತ್ತಾರೆ. ಆದರೆ ಶ್ರೀರಾಮುಲು ಅವರು ತಮ್ಮ ಮಗಳು ಇಷ್ಟ ಪಟ್ಟಿರುವ ಹುಡುಗನೊಂದಿಗೆ ನಿಶ್ಚಿತಾರ್ಥ ಮಾಡಿದ್ದಾರೆ. ಹೌದು. ಇವರಿಗೆ ನಾಲ್ಕು ಜನ ಮಕ್ಕಳು. 3 ಹೆಣ್ಣು ಹಾಗು 1 ಗಂಡು. ಅದರಲ್ಲಿ ಅವರ ದೊಡ್ಡ ಮಗಳು ರಕ್ಷಿತಾ, ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದಳು. ಅದನ್ನು ನೇರವಾಗಿ ಬಂದು ತಮ್ಮ ತಂದೆಯ ಬಳಿ ಹೇಳಿದ್ದಾಳೆ. ತಕ್ಷಣವೇ ಅವರ ತಂದೆ ಅವರ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಉದ್ಯಮಿ ಮಗನ ಜೊತೆಗೆ ನಿಶ್ಚಿತಾರ್ಥ

ಇನ್ನು ರಕ್ಷಿತಾ ವಿದ್ಯಾಭ್ಯಾಸಕ್ಕಾಗಿ ಲಂಡನ್ ಗೆ ತೆರಳಿದ್ದು, ಅಲ್ಲಿಯೇ ಭಾರತದ ಯುವಕನಾದ ಲಲಿತ್ ಕುಮಾರ್ ಸಹ ಓದುತ್ತಿದ್ದ. ಆಗ ಇಬ್ಬರು ಒಂದೇ ದೇಶದವರಾಗಿದ್ದರಿಂದ ಇಬ್ಬರ ನಡುವೆ ಸ್ನೇಹ ಉಂಟಾಗಿ, ನಂತರ ಪ್ರೀತಿ ಬೆಳೆದಿದೆ. ಇನ್ನು ಲಲಿತ್ ಕುಮಾರ್ ಮೂಲತಃ ಹೈದರಾಬಾದ್ ನವರಾಗಿದ್ದು, ಇವರ ತಂದೆ ದೊಡ್ಡ ಉದ್ಯಮಿಯಾಗಿದ್ದಾರೆ. ಇನ್ನು ಇವರಿಬ್ಬರು ತಮ್ಮ ಪ್ರೀತಿಯ ವಿಚಾರವನ್ನು ಮನೆಯಲ್ಲಿ ಹೇಳಿದಾಗ ಅವರ ಪೋಷಕರು ಯಾವುದೇ ರೀತಿ ವಿರೋಧ ವ್ಯಕ್ತಪಡಿಸದೆ ಅವರ ಪ್ರೀತಿಗೆ ಸಮ್ಮತಿ ಸೂಚಿಸಿದ್ದಾರೆ.

ದ್ವೇಷ ಮರೆತು ಒಂದಾದ ರಾಜಕೀಯ ನಾಯಕರು

ಇನ್ನು ಇವರ ಮಗಳ ನಿಶ್ಚಿತಾರ್ಥ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ನಡೆದಿದ್ದು, ಅನೇಕ ರಾಜಕೀಯ ನಾಯಕರು ನಿಶ್ಚಿತಾರ್ಥಕ್ಕೆ ಆಗಮಿಸಿದ್ದರು. ಇನ್ನು ಈ ಸಮಯದಲ್ಲಿ ದ್ವೇಷ ಮರೆತು ಎಲ್ಲ ರಾಜಕೀಯ ನಾಯಕರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಹೌದು. ಶ್ರೀರಾಮುಲು ಅವರು ಎಲ್ಲ ಪಕ್ಷದ ನಾಯಕರನ್ನು ನಿಶ್ಚಿತಾರ್ಥಕ್ಕೆ ಆಹ್ವಾನಿಸಿದ್ದು, ಬಿಜೆಪಿ, ಕಾಂಗ್ರೆಸ್ ಹಾಗು ಜೆಡಿಎಸ್ ನಾಯಕರೆಲ್ಲರೂ ಆಗಮಿಸಿದ್ದರು. ಇನ್ನು ಸಮಾರಂಭದಲ್ಲಿ ಒಬ್ಬರಿಗೊಬ್ಬರು ಬಹಳಷ್ಟು ಆತ್ಮೀಯರಾಗಿ ಮಾತನಾಡಿದ್ದಾರೆ. ಏಲ್ಲಕ್ಕಿತ ಹೆಚ್ಚಾಗಿ ರಾಜಕೀಯವೇ ಬೇರೆ, ವೈಯಕ್ತಿಕವೇ ಬೇರೆ ಎಂಬುದನ್ನು ಸಾಭೀತು ಪಡಿಸಿದ್ದಾರೆ.

ಒಟ್ಟಿನಲ್ಲಿ ಶ್ರೀರಾಮುಲು ಅವರು ತಮ್ಮ ಮಗಳು ಪ್ರೀತಿಸಿದ ಹುಡುಗನೊಂದಿಗೆ ನಿಶ್ಚಿತಾರ್ಥ ಮಾಡಿ, ಮಗಳ ಪ್ರೀತಿಗೆ ಬೆಲೆ ಕೊಟ್ಟಿದ್ದಾರೆ. ಜೊತೆಗೆ ವೈಷಮ್ಯವನ್ನು ಮರೆತು, ಎಲ್ಲ ಪಕ್ಷದ ನಾಯಕರನ್ನು ಸಮಾರಂಭಕ್ಕೆ ಆಹ್ವಾನಿಸುವುದರ ಮೂಲಕ ದ್ವೇಷಕ್ಕೆ ಎಳ್ಳು ನೀರು ಬಿಡಲು ಮುಂದಾಗಿದ್ದಾರೆ.

LEAVE A REPLY

Please enter your comment!
Please enter your name here