ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರ್ಪಡೆಯಾಯಿತು ಕನ್ನಡತಿ ನಿರ್ಮಾಣ ಮಾಡಿದ ಬಾಕ್ಸ್

0
784

ಕೇವಲ ಬಾಕ್ಸ್ ಗಳಿಂದಾನೆ ಇವರು ರಾಷ್ಟ್ರೀಯ ಮಟ್ಟದ ಪುಸ್ತಕದಲ್ಲಿ ತಮ್ಮ ಹೆಸರನ್ನು ಶಾಶ್ವವಾತವಾಗಿ ಬರೆದುಕೊಂಡಿದ್ದಾರೆ. ಇವರ ಹೆಸರು ಅಪೇಕ್ಷಾ .ಎಸ್ ಕೊಟ್ಟಾರಿ. ಮೂಲತಃ ಕರ್ನಾಟಕದವರಾಗಿದ್ದಾರೆ. ಕನ್ನಡತಿಯ ಸಾಧನೆ ನಿಜಕ್ಕು ಮೆಚ್ಚತಕ್ಕಂತಹದು. ಬಾಲ್ಯದಿಂದಾನು ಸಣ್ಣ ಪುಟ್ಟ ಗಿಫ್ಟ್ ಡಬ್ಬಗಳನ್ನು ಸಿದ್ದ ಪಡಿಸುವ ಹವ್ಯಾಸವನ್ನು ಇವರು ಬೆಳೆಸಿಕೊಂಡಿದ್ದರು. ಅದೆ ಹವ್ಯಾಸದಲ್ಲಿ ಕರಗತ ಪಡೆದುಕೊಂಡು, ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದಾರೆಂದರೆ ಅದು ತಮಾಷೆಯ ಮಾತಲ್ಲ. ಸಾಕಷ್ಟು ಕಠಿಣ ಪರಿಶ್ರಮಗಳ ನಂತರ ಇಂತಹದೊಂದು ಸಾಧನೆಗೆ ಸಾಕ್ಷಿಯಾಗಿದ್ದಾರೆ. ಮುಂದೆ ಓದಿ

ನೂತನವಾದ ದಾಖಲೆಗೆ ಪಾತ್ರವಾದ ಬಾಕ್ಸ್ 

ಬೆಸೆಂಟ್ ಕಾಲೇಜಿನ ಬಿ ಕಾಮ್ ವಿದ್ಯಾರ್ಥಿಯಾಗಿದ್ದು, ಇನ್ಕ್ರೆಡಿಬಲ್ ಇಂಡಿಯಾ ಪರಿಕಲ್ಪನೆಯ ಅಡಿಯಲ್ಲಿ, ಇಂತಹ ವಿಭಿನ್ನವಾದ ಮತ್ತು ವಿಶಿಷ್ಟವಾದ ಬಾಕ್ಸ್ ಗಳನ್ನು ತಯಾರಿಸಿದ್ದಾರೆ. 1000 ಸೆಂಟಿಮೀಟರ್ ಉದ್ದವಿರುವ ಈ ಬಾಕ್ಸ್ ನ ಸುತ್ತಳತೆ ಕೇವಲ 25 ಸೆಂಟಿಮೀಟರ್ ಪಡೆದುಕೊಂಡಿರಿವುದು ವಿಶೇಷವಾದ ಸಂಗತಿಯಾಗಿದೆ. ಈ ಬಾಕ್ಸ್ ಈಗ 2019 ರ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಅತಿ ಉದ್ದವಾದ ಬಾಕ್ಸ್ ಎನ್ನುವ ನೂತನವಾದ ದಾಖಲೆಗೆ ಪಾತ್ರವಾಗಿದೆ. ಈ ಬಾಕ್ಸ್ ತಯಾರಿಕೆಯ ವಿಚಾರದ ಅಂಗವಾಗಿ ಹಲವು ವಿಷಯಗಳನ್ನು ಅಪೇಕ್ಷಾ ಅವರು ಹಂಚಿಕೊಂಡಿದ್ದಾರೆ.

ಬಾಕ್ಸ್ ನ ವೈಶಿಷ್ಟತೆ

ಮೇಲ್ನೋಟಕ್ಕೆ ಸಾಮಾನ್ಯ ಡಬ್ಬಿಯಂತೆ ನಿಮಗೆ ಭಾಸವಾದರು, ಒಂದಾದ ನಂತರ ಬಾಕ್ಸ್ ಓಪನ್ ಆದಾಗ ಮಾಹಿತಿಯನ್ನು ನೀಡುತ್ತ ಸಾಗುತ್ತದೆ. ಈ ಬಾಕ್ಸ್ ನಲ್ಲಿ ನೀವು ಸ್ವಾತಂತ್ರ ಹೋರಾಟಗಾರರು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರು ಸೇರಿದಂತೆ ಸಾಂಸ್ಕೃತಿಕ ವಿಚಾರಗಳ ಕುರಿತು ಹಲವು ಮಾಹಿತಿಯನ್ನು ನೀಡುವ ಹಾಗೆ ಬಾಕ್ಸ್ ಅನ್ನು ನಿರ್ಮಿಸಿದ್ದಾರೆ. ಬಾಕ್ಸ್ ನಲ್ಲಿರುವ ಒಂದಾದ ನಂತರ ಪುಟವನ್ನು ತೆರೆಯುತ್ತ ಹೋದಲ್ಲಿ, ನಿಮಗೆ ಎರಡು ಬದಿಯಲ್ಲಿ ಮೂರು ವಿಭಾಗಗಳಲ್ಲಿ ಮಾಹಿತಿ ಸಿಗುತ್ತ ಹೋಗುತ್ತದೆ. ಮಾಹಿತಿಯ ಬಂಡಾರವನ್ನು ಇವರು ಬಾಕ್ಸ್ ಮುಖಾಂತರ ಪ್ರದರ್ಶಿಸಿದ್ದಾರೆ.

ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಗು ಸೇರ್ಪಡೆಯಾಗಬೇಕು

ಈ ತರಹದೆ 30 ಗಿಫ್ಟ್ ಬಾಕ್ಸ್ ಗಳನ್ನು ಮಾರಾಟ ಮಾಡಿದ್ದೇನೆ ಎಂದು ಅಪೇಕ್ಷ ಅವರು ಹೇಳಿದ್ದಾರೆ. ಅಪೇಕ್ಷ ಅವರ ಸಾಧನೆಗೆ ಅವರ ಸ್ನೇಹಿತರು ಸಹ ಪ್ರೋತ್ಸಾಹವನ್ನು ನೀಡಿದ್ದಾರೆ. ಸ್ನೇಹಿತರಿಗೆ ಬಾಕ್ಸ್ ಉಡುಗೊರೆಯಾಗಿ ಕೊಡುವ ಮೂಲಕ ಮತ್ತಷ್ಟು ಸಹಕಾರ ಸ್ನೇಹಿತರಿಂದ ಪಡೆಯಬಹುದೆನ್ನುವುದು ಇವರ ನಿಲುವಾಗಿದೆ.

ಈ ಸಾಧನೆಯನ್ನು ಗುರುತಿಸಿ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಗೂ ಸೇರ್ಪಡೆಯಾಗಬೇಕೆನ್ನುವ ಆಸೆಯನ್ನು ಇವರು ಇಟ್ಟುಕೊಂಡಿದ್ದಾರೆ. ಇವರ ವಿಭಿನ್ನವಾದ ಪ್ರಯತ್ನದಿಂದ, ಇಂದು ಭಾರತ ದೇಶವನ್ನು ಪ್ರತಿನಿಧಿಸುತ್ತಿರುವುದು ಸಂತಸದ ವಿಷಯವಾಗಿದೆ.

LEAVE A REPLY

Please enter your comment!
Please enter your name here