ಮಾಲಿನ್ಯ ನಿಯಂತ್ರಿಸಲು ಬರುತ್ತಿವೆ ಸೋಲಾರ್ ಆಟೋಗಳು

0
1526
solar auto

ಇತ್ತೀಚಿಗೆ ನಮ್ಮ ನಗರಕ್ಕೆ ಹಲವು ಯೋಜನೆಗಳನ್ನ ಹಾಗೂ ಸೌಲಭ್ಯಗಳನ್ನ ಜಾರಿಗೆ ತರುತ್ತಿದ್ದಾರೆ. ಯಾಕಂದ್ರೆ ಒಂದು ಕಾಲದಲ್ಲಿ ಬೆಂಗಳೂರನ್ನ ಗಾರ್ಡನ್ ಸಿಟಿ ಅಂತ ಕರೆಯುತ್ತಿದ್ರು. ಆದ್ರೆ ಈಗ ಹೇಗಾಗಿದೆ ಅಂದ್ರೆ, ಬೆಂಗಳೂರು ಗಾರ್ಬೇಜ್ ಸಿಟಿಯಾಗಿದೆ. ಜೊತೆಗೆ ವಾಹನಗಳ ಸಂಚಾರದಿಂದ, ಎಲ್ಲೆಂದರಲ್ಲಿ ಕೇವಲ ಹೊಗೆ ಮಾತ್ರ ಕಾಣುತ್ತೆ. ಒಂದು ಕಾಲದಲ್ಲಿ ಹೇಳುತ್ತಿದ್ರು, ದೆಹಲಿಯಲ್ಲೇ ಅತಿ ಹೆಚ್ಚು ವಾಹನಗಳ ಸಂಚಾರ ಇರೋದು ಅಂತ. ಆದ್ರೆ ಈಗ ನಮ್ಮ ಸಿಲಿಕಾನ್ ಸಿಟಿ, ದೆಹಲಿಯನ್ನೇ ಮೀರಿಸುತ್ತಿದೆ. ಯಾಕಂದ್ರೆ ಅಷ್ಟೊಂದು ವಾಹನಗಳು ಬೆಂಗಳೂರಿನಲ್ಲಿ ಪ್ರತಿದಿನ ಸಂಚರಿಸುತ್ತವೆ.

ಹೌದು. ಒಂದು ಕಾಲದಲ್ಲಿ ಬೆಂಗಳೂರು ಸುಂದರ ಪರಿಸರದಿಂದ ಕೂಡಿತ್ತು. ಆದ್ರೆ ಈಗ, ಎತ್ತ ನೋಡಿದರೂ ಕೇವಲ ಹೋಗೆ ಕಾಣುತ್ತದೆ. ಹಾಗಾಗಿ ನಮ್ಮ ಸರ್ಕಾರ ಹೊಸ ಹೊಸ ಯೋಜನೆಗಳನ್ನ ತರುತ್ತಲೇ ಇರುತ್ತದೆ. ಆದ್ರೆ ಅದ್ಯಾವುದು ಅಷ್ಟರ ಮಟ್ಟಿಗೆ ಪ್ರಯೋಜನವಾಗಿಲ್ಲ. ಆದ್ರೆ ಈಗ ಹೊಸದೊಂದು ದಾರಿ ಸಿಕ್ಕಿದೆ. ಇದನ್ನ ಒಂದು ರೀತಿಯಲ್ಲಿ ಯೋಜನೆ ಅಂತ ಹೇಳಲು ಆಗುವುದಿಲ್ಲ. ಬದಲಿಗೆ ಉಪಾಯ ಅಂತ ಹೇಳಬಹುದು. ಹೌದು. ಇದರಿಂದ ಬೆಂಗಳೂರಿನಲ್ಲಿ ಮಾಲಿನ್ಯ ತಡೆಗಟ್ಟಬಹುದಾಗಿದೆ. ಮಾಲಿನ್ಯ ನಿಯಂತ್ರಣಕ್ಕೆ ಇದೊಂದು ಒಳ್ಳೆ ಉಪಾಯವಾಗಿದೆ.

ನಗರಕ್ಕೆ ಲಗ್ಗೆ ಇಡಲಿವೆ ಸೋಲಾರ್ ಆಟೋಗಳು

ಬೆಂಗಳೂರಿನಲ್ಲಿ ಯಾವ ಯೋಜನೆ ತಂದರು ಮಾಲಿನ್ಯ ಮಾತ್ರ ನಿಯಂತ್ರಣವಾಗಿಲ್ಲ. ಆದ್ರೆ ಈಗ ಹೊಸ ದಾರಿಯೊಂದು ಸಿಕ್ಕಿದೆ. ಹೌದು. ಅದೇ ಈ ಸೋಲಾರ್ ಆಟೋಗಳು. ಸಾಮಾನ್ಯವಾಗಿ ಆಟೋಗಳಿಗೆ ಡೀಸಲ್, ಪೆಟ್ರೋಲ್ ಹಾಗೂ ಗ್ಯಾಸ್ ಬಳಸುತ್ತಾರೆ. ಆದ್ರೆ ಈಗ ಇದ್ಯಾವುದನ್ನು ಬಳಸದೆ ಆಟೋ ರಸ್ತೆಯಲ್ಲಿ ಸಂಚರಿಸಲಿದೆ. ಹೌದು. ಇನ್ಮುಂದೆ ಬೆಂಗಳೂರಿನಲ್ಲಿ ಸೋಲಾರ್ ಆಟೋಗಳು ಸಂಚರಿಸಲಿವೆ. ಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ, ಈ ರೀತಿಯ ಆಟೊಗಳನ್ನ ತರಲಾಗಿದೆ.

ಸೋಲಾರ್ ಆಟೋಗಳು

ಇನ್ಮುಂದೆ ಬೆಂಗಳೂರಿನಲ್ಲಿ ಪರಿಸರ ಸ್ನೇಹಿ ಸೋಲಾರ್ ಆಟೋಗಳು ಸಂಚರಿಸಲಿವೆ. ಇದರಿಂದ ಮಾಲಿನ್ಯ ನಿಯಂತ್ರಿಸಬಹುದಾಗಿದೆ. ಈ ಆಟೋಗಳು ದಿನಕ್ಕೆ 100 ಕಿ ಲೋ ಚಲಿಸುತ್ತವೆ. ಇದರಲ್ಲಿ ಅಳವಡಿಸಿರುವ ಸೋಲಾರ್ ಬ್ಯಾಟರಿಗಳು ಸೂರ್ಯನ ಕಿರಣಗಳನ್ನು ಬಳಸಿಕೊಂಡು ಆಟೋಮಿಕ್ ಚಾರ್ಜ್ ಅಗೋದ್ರಿಂದ, ಹೆಚ್ಚಿನ ಚಾರ್ಜ್ ಮಾಡೋ ಅವಶ್ಯಕೆತೆ ಇಲ್ಲ. ಜೊತೆಗೆ ಖರ್ಚು ಸಹ ಕಡಿಮೆ. ಮಾಲೀಕ ಇಂತ ಆಟೊಗಳನ್ನ ಎಷ್ಟು ಬೇಕಾದರೂ ಬಾಡಿಗೆಗೆ ಬಿಡಬಹುದು. ಇದರಿಂದ ಮಾಲೀಕನಿಗೆ ಹೆಚ್ಚಿನ ಲಾಭ. ಯಾಕಂದ್ರೆ ಕೇವಲ ಸೂರ್ಯನ ಕಿರಣಗಳನ್ನ ಮಾತ್ರ ಸೋಲಾರ್ ತೆಗೆದುಕೊಳ್ಳುವುದರಿಂದ, ಬೇರೆ ಯಾವ ರೀತಿಯಲ್ಲೂ ಖರ್ಚು ಆಗುವುದಿಲ್ಲ. ಇದೊಂದು ಒಳ್ಳೆ ದಾರಿಯಾಗಿದೆ.

ಕರ್ನಾಟಕದಲ್ಲಿ ರಸ್ತೆಗಿಳಿದಿರುವ 50 ಆಟೋಗಳು

ಈಗಾಗ್ಲೇ ಕರ್ನಾಟಕದಲ್ಲಿ 50 ಸೋಲಾರ್ ಆಟೋಗಳು ರಸ್ತೆಗಿಳಿದಿವೆ. ಅದರಲ್ಲಿ 7 ಆಟೋಗಳು ಬೆಂಗಳೂರಿನಲ್ಲಿ ಸಂಚರಿಸುತ್ತಿವೆ. ಜೊತೆಗೆ ಈಗಿರುವ ಹಳೆಯ ಆಟೋಗಳು ಸಹ ಇದೇ ರೂಪ ಪಡೆದುಕೊಳ್ಳುತ್ತಿವೆ. ಹೌದು. ಹಳೆಯ ಆಟೋಗಳಿಗೂ ಸೋಲಾರ್ ಬ್ಯಾಟರಿ, ಕೇಬಲ್ ಗಳನ್ನ ಅಳವಡಿಸಿ ಅವುಗಳನ್ನ ರಸ್ತೆಗೆ ಇಳಿಸಲು ನಿರ್ಧಾರ ಮಾಡಿದ್ದಾರೆ. ಯಾಕಂದ್ರೆ ಎಲ್ಲಾ ರೀತಿಯಲ್ಲೂ ಒಳ್ಳೆಯದು ಆಗುತ್ತೆ ಅಂದ್ರೆ, ಎಲ್ಲರೂ ಅದನ್ನ ಒಪ್ಪಿಕೊಳ್ಳುತ್ತಾರೆ. ಹಾಗಾಗಿ ಇನ್ಮುಂದೆ ಬೆಂಗಳೂರಿನಲ್ಲಿ ಸೋಲಾರ್ ಆಟೋಗಳು ಸಂಚರಿಸಲಿವೆ.

ಬೆಂಗಳೂರನ್ನ ಮಾಲಿನ್ಯದಿಂದ ತಪ್ಪಿಸಬೇಕು ಅನ್ನೋದು ಎಲ್ಲರ ಆಸೆ. ಆದ್ರೆ ಸರಿಯಾದ ಯೋಜನೆ ಕಾರ್ಯರೂಪಕ್ಕೆ ಬಂದರೆ ಮಾತ್ರ ಅದು ಸಾಧ್ಯವಾಗುತ್ತದೆ. ಈಗ, ಈ ಸೋಲಾರ್ ಆಟೋಗಳಿಂದ, ಮಾಲಿನ್ಯ ಕಡಿಮೆ ಆಗಬಹುದು ಅನ್ನೋ ನಿರೀಕ್ಷೆಯಲ್ಲಿ ತರಲಾಗುತ್ತಿದೆ. ಒಟ್ಟಿನಲ್ಲಿ ಮಾಲಿನ್ಯ ನಿಯಂತ್ರಣವಾದರೆ ಸಾಕು.

LEAVE A REPLY

Please enter your comment!
Please enter your name here