ಬಿಗ್ ಬಾಸ್ ಗೆ ಹಾರಲಿರುವ ಗಾಯಕ ಹನುಮಂತ ಒಂದು ವಾರಕ್ಕೆ ಸಂಭಾವನೆ ಎಷ್ಟು?

0
588

ಬಿಗ್ ಬಾಸ್ ಕಾರ್ಯಕ್ರಮ ಯಾರಿಗೆ ತಾನೆ ಪರಿಚಯವಿಲ್ಲ ಹೇಳಿ, ರಾಜ್ಯದ ಜನತೆಗೆ ಇದು ಚಿರಪರಿಚಿತವಾದ ಜನಪ್ರಿಯವಾದ ಕಾರ್ಯಕ್ರಮವಾಗಿದೆ. ಪ್ರತಿ ಸೀಸನ್ ನಲ್ಲು ಬಿಗ್ ಬಾಸ್ ಶೋ ನಲ್ಲಿ ಜನ ಸಾಮಾನ್ಯರು ಹಾಗು ಸೆಲೆಬ್ರಿಟಿಸ್ ಭಾಗವಹಿಸುತ್ತಿದ್ದರು. ಜನ ಸಾಮಾನ್ಯರನ್ನು ಸಹ ಪ್ರಸಿದ್ದಿ ಮಾಡುವ ಶಕ್ತಿ ಈ ಕಾರ್ಯಕ್ರಮಕ್ಕಿದೆ ಎಂದರೆ ಬಹುಶ ತಪ್ಪಾಗಲಾರದು. ಈಗಾಗಲೆ ಬಿಗ್ ಬಾಸ್ ಸೀಸನ್ 7 ಪ್ರೊಮೊ ಹೊರ ಬಿದ್ದಿದ್ದು, ಸುದೀಪ್ ಪ್ರೊಮೊದಲ್ಲಿ ಕಾಣಿಸಿಕೊಂಡಿದ್ದಾರೆ. ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರೂ ಬಿಗ್ ಬಾಸ್ ಕಾರ್ಯಕ್ರಮವನ್ನು ತಪ್ಪದೆ ವೀಕ್ಷಿಸುತ್ತಾರೆ. ತಮ್ಮ ನೆಚ್ಚಿನ ಸ್ಪರ್ದಿಗಳಿಗೆ ವೋಟ್ ಮಾಡುವ ಮೂಲಕ ಅವರನ್ನು ಉಳಿಸಿಕೊಳ್ಳುತ್ತಾರೆ.

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಅಧಿಕ ಸಂಭಾವನೆ

ಬಿಗ್ ಬಾಸ್ ಕಾರ್ಯಕ್ರಮಕ್ಕೆ ಗಾಯಕ ಹನುಮಂತ ಬರಲಿದ್ದಾರಂತೆ. ಹೌದು ಸ ರೆ ಗ ಮ ಪ ರಿಯಾಲಿಟಿ ಶೋ ಮುಖಾಂತರ ಹನುಮಂತ ಮನೆ ಮಾತಾಗಿದ್ದರು. ಹನುಮಂತ ತುಂಬ ಸೊಗಸಾಗಿ ಹಾಡುತ್ತಾರೆ. ಹಳ್ಳಿ ಸೊಗಡಿನ ಮಾತನ್ನು ಇವರ ಬಾಯಲ್ಲಿ ಕೇಳುವುದೆ ಒಂದು ಚೆಂದ. ಇನ್ನು ಇವರ ಮುಗ್ದತೆಯನ್ನು ಜನರು ಇಷ್ಟ ಪಡುತ್ತಾರೆ. ಈಗ ಹನುಮಂತ ಬಿಗ್ ಬಾಸ್ ಸೀಸನ್ 7 ರಲ್ಲಿ ಭಾಗವಹಿಸಲಿದ್ದಾರೆ ಎನ್ನುವ ಮಾಹಿತಿ ಹೊರ ಬಿದ್ದಿದೆ. ಸಂಗೀತ ಕಾರ್ಯಕ್ರಮದಲ್ಲಿ ಹೆಸರು ಗಳಿಸಿದ ನಂತರ ಈಗ ಬಿಗ್ ಬಾಸ್ ಮನೆಗೆ ಲಗ್ಗೆ ಇಡುತ್ತಿದ್ದಾರೆ. ಹನುಮಂತ ಗಾಯನದಿಂದಾನೆ ಬಿಗ್ ಬಾಸ್ ಮನೆಯ ಸದಸ್ಯರನ್ನು ಮತ್ತು ವೀಕ್ಷಕರನ್ನು ರಂಜಿಸಲಿದ್ದಾರೆ ಅಂತಾನೆ ಹೇಳಬಹುದಾಗಿದೆ.

ಒಂದು ವಾರಕ್ಕೆ 25 ರಿಂದ 30,000 ಸಂಭಾವನೆಯನ್ನು ನೀಡಲಾಗುತ್ತಿದೆ

ಸ ರಿ ಗ ಮ ಪ ಕಾರ್ಯಕ್ರಮದಲ್ಲಿ ಹನುಮಂತನಿಗೆ ವಾರಕ್ಕೆ 10 ಸಾವಿರ ಮೊತ್ತದಷ್ಟು ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದರು. ಆದರೆ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಇನ್ನು ಹೆಚ್ಚು ದುಡ್ಡನ್ನು ಇವರಿಗೆ ನೀಡುತ್ತಿದ್ದಾರೆ ಎಂದು ಮೂಲಗಳ ಪ್ರಕಾರ ಹೇಳಲಾಗುತ್ತಿದೆ. ಬಿಗ್ ಬಾಸ್ ವೇದಿಕೆಯಲ್ಲಿ ಭಾಗವಹಿಸೋ ಚಾನ್ಸ್ ಅನ್ನು ಇವರು ಗಿಟ್ಟಿಸಿಕೊಂಡಿದ್ದು, ಒಂದು ವಾರಕ್ಕೆ 25 ರಿಂದ 30,000 ಸಂಭಾವನೆಯನ್ನು ನೀಡಲಾಗುತ್ತಿದೆ ಎನ್ನುವ ಮಾಹಿತಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.

ಜನ ಸಾಮಾನ್ಯರಿಗೂ ಚಾನ್ಸ್ ನೀಡಿ

ಬಿಗ್ ಬಾಸ್ ಸೀಸನ್ 7 ರ ಕುರಿತು ಜನರು ಹಚ್ಚಾಗಿ ಚರ್ಚಿಸುತ್ತಿದ್ದಾರೆ. ಹೌದು ಈ ಬಾರಿ ಕಾರ್ಯಕ್ರಮದ ನಿಯಮದಲ್ಲಿ ಕೊಂಚ ಬದಲಾವಣೆ ಆಗಿದ್ದು, ಇದರಿಂದ ಜನರಿಗೆ ಬೇಸರವಾಗಿದೆ ಅಂತಾನೆ ಹೇಳಬಹುದಾಗಿದೆ. ಸೀಸನ್ 7 ರಲ್ಲಿ ಜನ ಸಾಮಾನ್ಯರಿಗೆ ಅವಕಾಶವಿಲ್ಲವಂತೆ, ಕೇವಲ ಸೆಲೆಬ್ರಿಟಿಸ್ ಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಆದ್ದರಿಂದ ವೀಕ್ಷಕರು ಕಾಮನ್ ಮ್ಯಾನ್ ಗು ಅವಕಾಶ ನೀಡಬೇಕೆಂದು ಕಾರ್ಯಕ್ರಮದ ಮುಖ್ಯಸ್ಥರಲ್ಲಿ ಒತ್ತಾಯಿಸುತ್ತಿದ್ದಾರಂತೆ. ಈ ಒಂದು ವೇದಿಕೆಯಲ್ಲಿ ಜನ ಸಾಮಾನ್ಯರಿಗೂ ಚಾನ್ಸ್ ಕೊಡಿ ಸಾರ್ ಆಗ ಜನರ ಮೆಚ್ಚುಗೆ, ಕಾರ್ಯಕ್ರಮದ ಮೇಲೆ ಇನ್ನು ಅಧಿಕವಾಗುತ್ತದೆ ಎನ್ನುವುದು ನಮ್ಮ ಭಾವನೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ವೀಕ್ಷಕರು ಕಾಮೆಂಟ್ಸ್ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here