ಸಲಗ ಚಿತ್ರಕ್ಕೂ ಹಾಗೂ ಸೈಲೆಂಟ್ ಸುನೀಲನಿಗೂ ಇರುವ ಲಿಂಕ್ ಆದ್ರೂ ಏನು?

0
672

ಭೂಗತ ಲೋಕ ಅನ್ನೋದು ಅಷ್ಟು ಸಾಮಾನ್ಯವಲ್ಲ. ಒಂದು ಸಾರಿ ಅದಕ್ಕೆ ಯಾರಾದ್ರೂ ಎಂಟ್ರಿ ಕೊಟ್ರೆ, ಅಲ್ಲಿಗೆ ಮುಗಿತು. ಮತ್ತೆ ಅದರಿಂದ ವಾಪಾಸ್ ಬರೋದು, ಬಹಳ ಕಷ್ಟ. ಯಾಕಂದ್ರೆ ಅದರ ತಾಕತ್ ಆ ರೀತಿ ಇದೆ. ಎಂಥವರನ್ನೂ ಸಹ ತನ್ನತ್ತ ಸೆಳೆಯುವಂತ ಶಕ್ತಿ ಹೊಂದಿದೆ ಈ ಭೂಗತ ಲೋಕ. ಅದರಲ್ಲೂ ಹೆಸರು ಮಾಡಬೇಕು ಅಂತ ಅನ್ಕೊಂಡಿರೋರು ಮಾತ್ರ, ಆಸೆ ಪಟ್ಟು ರೌಡಿಸಂ ಗೆ ಪಾದಾರ್ಪಣೆ ಮಾಡ್ತಾರೆ. ಚಿಕ್ಕ ಪುಟ್ಟ ಹುಡುಗರೆಲ್ಲಾ ಮಚ್ಚು ಹಿಡಿಯೋ ಮೂಲಕ, ನಾವೇ ಪಂಟ್ರು ಅಂತ ಮೆರೆಯುತ್ತಿದ್ದಾರೆ.

ನಗರದಲ್ಲಿ ಇತ್ತೀಚಿಗೆ ಮಚ್ಚಿನ ಸದ್ದು ಅಷ್ಟಾಗಿ ಕೇಳುತ್ತಿಲ್ಲ ಅಂತ ಕೆಲವ್ರು ಹೇಳ್ತಿದ್ದಾರೆ. ಆದ್ರೆ ಅವರಿಗೇನು ಗೊತ್ತು, ಸದ್ದಿಲ್ಲದೆ ನಡೆಯೋದೆ ಈ ರೌಡಿಸಂ ಅಂತ. ಅವರ ಮರ್ಮಗಳು, ಅವರ ಉಪಾಯಗಳು ಯಾರ ಕಣ್ಣಿಗೂ ಕಾಣುವುದಿಲ್ಲ. ಸೂಚನೆಯೇ ಇಲ್ಲದೆ, ತಮ್ಮ ಕೆಲಸವನ್ನ ಮಾಡಿ ಮುಗಿಸುತ್ತಾರೆ. ಈಗ ಸದ್ಯಕ್ಕೆ ಬೆಂಗಳೂರಿನಲ್ಲಿ ಹವಾ ಕ್ರಿಯೇಟ್ ಮಾಡ್ತಿರೋ ಹೆಸರು ಅಂದ್ರೆ ಅದು ಸೈಲೆಂಟ್ ಸುನೀಲ. ಎಲ್ಲಾ ಕಡೆ ತನ್ನ ಹಾವಳಿ ಎಬ್ಬಿಸುತ್ತಿದ್ದಾನೆ. ಇವನ ಹವಾ ಎಷ್ಟಿದೆ ಅಂದ್ರೆ, ಇವನ ಲೈಫ್ ಸ್ಟೋರಿ ಕುರಿತು, ಸಿನಿಮಾ ಮಾಡಬೇಕು ಅಂತ ಕೂಡ, ಕೆಲವ್ರು ತಯಾರಾಗಿದ್ದಾರೆ. ಆದ್ರೆ ಸದ್ಯಕ್ಕೆ ಆ ಸಿನಿಮಾ ಮುಂಚೆ, ಈಗ ಮತ್ತೊಂದು ಸಿನಿಮಾದಲ್ಲಿ ಸುನೀಲ ನ ಕೆಲವೊಂದು ಅಂಶಗಳು ಸೇರಿಕೊಂಡಿವೆ.

ಸುನೀಲ ನ ಕೆಲವು ಅಂಶಗಳು ಸೇರಿರುವ ಸಿನಿಮಾ

ಈ ಮೊದಲು, ಸೈಲೆಂಟ್ ಸುನೀಲನ ಜೀವನ ಕುರಿತು, ಸಿನಿಮಾ ಮಾಡಬೇಕು ಅಂತ ನಿರ್ಧಾರ ಮಾಡಿದ್ದರು. ಈಗಲೂ ಸಹ ಅದೇ ಪ್ಲಾನ್ ಅಲ್ಲಿ ಇದ್ದಾರೆ. ಇನ್ನೂ ಆ ಸಿನಿಮಾದಲ್ಲಿ ಸುನೀಲನೇ ನಾಯಕನಾಗಿ ನಟಿಸಲಿದ್ದಾನೆ. ಆದ್ರೆ ಸದ್ಯಕ್ಕೆ ಸುನೀಲನ ಕೆಲವು ವೈಯಕ್ತಿಕ ಕಾರಣಗಳಿಂದ, ಸಿನಿಮಾ ಮಾಡೋ ಕೆಲಸ ಹಾಗೆ ನಿಂತಿದೆ. ಆದ್ರೆ ಈಗ ಸೈಲೆಂಟ್ ಸುನೀಲನ ಕೆಲವು ಜೀವನ ಅಂಶಗಳನ್ನ ಹಾಗೂ ಅವನ ಕೆಲವು ರೌಡಿಸಂ ವಿಷಯಗಳನ್ನ ಆರಿಸಿ, ಒಂದು ಸಿನಿಮಾದಲ್ಲಿ ತೆರೆ ಮೇಲೆ ತರುತ್ತಿದ್ದಾರೆ, ಅದು ಬಹು ನಿರೀಕ್ಷಿತ ಸಿನಿಮಾದಲ್ಲಿ. ಹೌದು. ದುನಿಯಾ ವಿಜಯ್ ಅವರ ಮುಂದಿನ ಸಿನಿಮಾದಲ್ಲಿ ಸುನೀಲನ ಕೆಲವು ರೌಡಿಸಂ ಸೀನ್ ಗಳು ಇರಲಿವೆಯಂತೆ.

ಸಲಗ ದಲ್ಲಿ ಇದೆಯಂತೆ ಸುನೀಲನ ಹವಾ ಸೀನ್ ಗಳು

ಮೊನ್ನೆಯಷ್ಟೇ ಎಲ್ಲರ ಬಾಯಲ್ಲೂ ಸುನೀಲನ ಬಗ್ಗೆ ಮಾತುಕತೆ ನಡೆಯುತ್ತಿತ್ತು. ಯಾಕಂದ್ರೆ, ಅವನಿಗೆ ಅಲೋಕ್ ಕುಮಾರ್ ಅವರು ಫುಲ್ ವಾರ್ನಿಂಗ್ ಕೊಟ್ಟಿದ್ರು. ಅದರಲ್ಲಿ ಸುನೀಲ ಅವರ ಮುಂದೆ ನಿಲ್ಲೋದು, ಅವರನ್ನ ಗುರಾಯಿಸೋದು ಮಾಡ್ತಾನೆ. ಈಗ ಅದೇ ಕೆಲವು ದೃಶ್ಯಗಳು ಸಲಗ ಚಿತ್ರದಲ್ಲಿ ತರಬೇಕು ಅನ್ನೋದು ವಿಜಯ್ ಪ್ಲಾನ್ ಆಗಿದೆಯಂತೆ. ಹೌದು. ಮೊದಲ ಬಾರಿಗೆ ನಿರ್ದೇಶಕನಾಗಿರುವ ದುನಿಯಾ ವಿಜಯ್, ಈ ಸಿನಿಮಾದಲ್ಲಿ ಬಹಳ ವಿಶೇಷತೆಯನ್ನ ತರುತ್ತಿದ್ದಾರಂತೆ. ಇದೊಂದು ಪಕ್ಕ ಮಾಸ್ ಸಿನಿಮಾ ಆಗಿರೋದ್ರಿಂದ, ಈ ಚಿತ್ರದಲ್ಲಿ ಕೆಲವು ರಿಯಲ್ ಕಥೆಯ ಆಧಾರಿತ ರೌಡಿಸಂ ದೃಶ್ಯಗಳು ಇದ್ರೆ, ಚೆನ್ನಾಗಿರುತ್ತೆ ಅಂತ ಎನಿಸಿದೆಯಂತೆ. ಹಾಗಾಗಿ ಈ ನಿರ್ಧಾರ ಮಾಡಿದ್ದಾರಂತೆ.

 

ಈಗಾಗಲೇ ಬಿಂಬಿಸುತ್ತಿರುವ ಟ್ರೋಲ್ ಪೇಜ್ ಗಳು

ಸಲಗ ಚಿತ್ರದಲ್ಲಿ ಈ ರೀತಿಯ ದೃಶ್ಯಗಳು ಬರುತ್ತವೆ ಅಂತ ಎಲ್ಲಿಯೂ ಸಹ ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಆದ್ರೆ ಕೆಲವು ದೃಶ್ಯಗಳು ಸುನೀಲನನ್ನ ಹೋಲುತ್ತಿವೆ. ಅದಕ್ಕೆ ಪೂರಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಪೇಜ್ ಗಳು ಸಹ ಹರಿದಾಡುತ್ತಿವೆ. ಹೌದು. ಅಲೋಕ್ ಕುಮಾರ್ ಹಾಗೂ ಸೈಲೆಂಟ್ ಸುನೀಲನ ನಡುವೆ ನಡೆದ ಸಂಭಾಷಣೆ ರೀತಿಯಲ್ಲೇ, ಈ ಸಿನಿಮಾದಲ್ಲಿ ದೃಶ್ಯಗಳು ಬರುತ್ತಿವೆ. ಅದರಲ್ಲಿ ದುನಿಯಾ ವಿಜಯ್ ಇದ್ದಾರೆ. ಆದ್ರೆ ನಿಜಕ್ಕೂ ಇದು ಸುನೀಲನನ್ನ ಕುರಿತಾಗಿರುವ ಕಥೆಯೋ ಅಥವಾ, ಸಾಮಾನ್ಯವಾಗಿ ಮಾಡಿರೋ ದೃಶ್ಯಗಳೋ ಗೊತ್ತಿಲ್ಲ. ಆದ್ರೆ ಚಿತ್ರತಂಡ ಅಧಿಕೃತ ಘೋಷಣೆ ಮಾಡಿದಾಗ ಮಾತ್ರ ಎಲ್ಲವೂ ತಿಳಿಯುತ್ತದೆ.


ಒಟ್ಟಿನಲ್ಲಿ ಸುನೀಲನ ಸಂಪೂರ್ಣ ಜೀವನಾಧಾರಿತ ಸಿನಿಮ ಮಾಡಬೇಕು ಅನ್ನೋದು ಕೆಲವರ ಉದ್ದೇಶವಾಗಿತ್ತು. ಆದ್ರೆ ಸದ್ಯಕ್ಕೆ ಅವನ ಕೆಲವು ರೌಡಿಸಂ ದೃಶ್ಯಗಳು ತೆರೆ ಮೇಲೆ ಬರಲು ಸಜ್ಜಾಗುತ್ತಿವೆಯಂತೆ. ಅದು ದುನಿಯಾ ವಿಜಯ್ ಅವರ ಸಿನಿಮಾದಲ್ಲಿ. ಆದ್ರೆ ನಿಜಕ್ಕೂ ಇದು ಎಷ್ಟರ ಮಟ್ಟಿಗೆ ನಿಜ ಅನ್ನೋದು, ಚಿತ್ರತಂಡ ಬಹಿರಂಗ ಪಡೆಸಿದಾಗ ಮಾತ್ರ ಗೊತ್ತಾಗಲಿದೆ.

LEAVE A REPLY

Please enter your comment!
Please enter your name here