ಸರ್ದಾರ್ ಪಟೇಲ್ ಅವರ ಪ್ರತಿಮೆ ರೀತಿಯಲ್ಲೇ ಸಿದ್ದಗಂಗಾ ಶ್ರೀಗಳ ಪ್ರತಿಮೆ ನಿರ್ಮಾಣವಾಗಲಿದೆಯಾ?

0
735
siddaganga sreegala pratime

ದೇವರು ಹೇಗಿದ್ದಾನೆ ಎಂಬುದನ್ನು ನಾವು ನೋಡಿಲ್ಲ. ಆದ್ರೆ ದೇವರ ರೂಪವನ್ನು ಒಬ್ಬರಲ್ಲಿ ಕಂಡಿದ್ದೇವೆ. ಅವರೇ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಗಳು. ಇವರನ್ನು ಎಲ್ಲರು ನಡೆದಾಡುವ ದೇವರೆಂದು ಕರೆಯುತ್ತಾರೆ. ಯಾಕಂದ್ರೆ ಎಲ್ಲರು ಇವರಲ್ಲೇ ದೇವರನ್ನು ಕಂಡಿದ್ದಾರೆ. ಆದ್ರೆ ಇವರು ಜನವರಿ 21 2019 ರಂದು ಶಿವೈಕ್ಯರಾಗುತ್ತಾರೆ. ಆಗಿಂದ ಇಡೀ ಸಿದ್ದಗಂಗಾ ಮಠ ಒಂದು ರೀತಿ ಅನಾಥವಾಗುತ್ತದೆ. ಯಾಕಂದ್ರೆ ಇಡೀ ಜನರ ಜೀವಾಳವಾಗಿದ್ದ ಇವರು ಎಲ್ಲರನ್ನು ಅಗಲಿದ ಮೇಲೆ ಅಲ್ಲಿನ ಜನರೆಲ್ಲಾ ಬಹಳಷ್ಟು ನೊಂದಿದ್ದಾರೆ. ಈ ಸಮಯದಲ್ಲಿ ಜನರು ಒಂದು ಮನವಿಯನ್ನು ಮುಂದಿಟ್ಟಿದ್ದಾರೆ. ಹೌದು. ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪ್ರತಿಮೆಯ ರೀತಿ, ಶಿವಕುಮಾರ್ ಸ್ವಾಮೀಜಿಗಳ ಪ್ರತಿಮೆಯನ್ನು ಮಾಡಿಸುವುದಾಗಿ ಮನವಿ ಮಾಡಿದ್ದಾರೆ.

ನಡೆದಾಡುವ ದೇವರ ಅತಿ ಎತ್ತರ ಪ್ರತಿಮೆ ನಿರ್ಮಿಸುವಂತೆ ಮನವಿ

ದೇಶದಲ್ಲಿ ಅತಿ ಹೆಚ್ಚು ಎತ್ತರ ಹೊಂದಿರುವ ಪ್ರತಿಮೆ ಅಂದ್ರೆ ಅದು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪ್ರತಿಮೆ. ಇನ್ನು ಅಲ್ಲಿ ಪ್ರತಿಮೆ ನಿರ್ಮಾಣ ಮಾಡಿದ ನಂತರ ಅದೊಂದು ಭಾರತದ ಪ್ರವಾಸಿ ತಾಣವಾಗಿ ಹೆಸರು ವಾಸಿಯಾಗಿದೆ. ಹಾಗಾಗಿ ಅಲ್ಲಿಗೆ ಸಾವಿರಾರು ಪ್ರವಾಸಿಗರು ಪ್ರತಿಮೆಯನ್ನು ನೋಡಲು ಬರುತ್ತಲೇ ಇರುತ್ತಾರೆ. ಅದೇ ರೀತಿ ದೇಶದ ಅತಿ ದೊಡ್ಡ ಪ್ರತಿಮೆ ಸರ್ದಾರ ವಲ್ಲಭಬಾಯಿ ಪಟೇಲ್ ಅವರ ಪ್ರತ್ರಿಮೆಯಾದರೆ, ರಾಜ್ಯಕ್ಕೆ ನಡೆದಾಡುವ ದೇವರ ಪ್ರತಿಮೆ ಬೇಕು ಎಂದು ಜನರು ಮನವಿ ಮಾಡುತ್ತಿದ್ದಾರೆ. ಹೌದು. ನಾವೆಲ್ಲ ದೇವರನ್ನು ನೇರವಾಗಿ ನೋಡಿಲ್ಲ. ದೇವರ ರೂಪವನ್ನು ಸಿದ್ದಗಂಗಾ ಮಠದ ಶ್ರೀ ಸಿದ್ದಗಂಗಾ ಸ್ವಾಮೀಜಿಗಳಲ್ಲಿ ಕಂಡಿದ್ದೇವೆ. ಹಾಗಾಗಿ ಅವರ ಪ್ರತಿಮೆ ನಿರ್ಮಿಸುವುದಾಗಿ ಮನವಿ ಮಾಡಿದ್ದಾರೆ.

ರಾಜ್ಯಸರ್ಕಾರಕ್ಕೆ ಮನವಿ ಮಾಡಿದ ಜನರು

ಇನ್ನು ಜನರು ತಮ್ಮ ಮನವಿಯನ್ನು ರಾಜ್ಯ ಸರ್ಕಾರದ ಮುಂದಿಟ್ಟಿದ್ದಾರೆ. ಹೌದು. ನಮ್ಮ ರಾಜ್ಯಕ್ಕೆ ಸಿದ್ದಗಂಗಾ ಶ್ರೀಗಳ ಪ್ರತಿಮೆ ಬಹಳ ಮುಖ್ಯವಾಗಿದೆ. ಹಾಗಾಗಿ ರಾಜ್ಯದ ಯಾವುದಾದರು ಒಂದು ಸ್ಥಳದಲ್ಲಿ ಪ್ರತಿಮೆಯನ್ನು ನಿರ್ಮಿಸಬೇಕು. ಆಗ ಅದೊಂದು ಪ್ರವಾಸಿ ತಾಣವಾಗಿ ನಿರ್ಮಾಣವಾಗುತ್ತದೆ. ನಮ್ಮ ಗುರುಗಳನ್ನು ನೋಡಲು ಅನೇಕ ಕಡೆಗಳಿಂದಲೂ ಜನರು ಬರುತ್ತಾರೆ. ಹಾಗಾಗಿ ದಯವಿಟ್ಟು ಪ್ರತಿಮೆ ಮಾಡಿಸಿ ಎಂದು ರಾಜ್ಯಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಜೊತೆಗೆ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಅವರ ಮೇಲು ಅಪಾರವಾದ ನಂಬಿಕೆಯನ್ನು ಇಟ್ಟಿದ್ದಾರೆ. ಯಾಕಂದ್ರೆ ನಮ್ಮ ಬೇಡಿಕೆಯನ್ನು ಈಡೇರಿಸುತ್ತೀರಾ ಎಂದು ನಂಬಿಕೆ ಇಟ್ಟಿದ್ದೇವೆ ಎಂದು ಜನರು ತಿಳಿಸಿದ್ದಾರೆ.

ಒಟ್ಟಿನಲ್ಲಿ ಜನರು ಸಿದ್ದಗಂಗಾ ಶ್ರೀಗಳ ಪ್ರತಿಮೆ ನಿರ್ಮಾಣ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದರೆ ರಾಜ್ಯ ಸರ್ಕಾರ ಇದಕ್ಕೆ ಇನ್ನು ಯಾವ ಪ್ರತಿಕ್ರಿಯೆಯನ್ನು ನೀಡಿಲ್ಲ. ಹಾಗಾದ್ರೆ ಮುಂದಿನ ದಿನಗಳಲ್ಲಿ ಪ್ರತಿಮೆ ನಿರ್ಮಿಸಲು ಸರ್ಕಾರ ಸಮ್ಮತಿ ನೀಡುತ್ತದೆಯೋ ಅಥವಾ ಸಮಯ ಕೇಳುತ್ತದೆಯೋ ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here