ಅಬ್ಬರಿಸಿ ಬೊಬ್ಬಿರಿಯಲು ಬರುತ್ತಿವೆ ಶಿವಣ್ಣನ ಸಾಲು ಸಾಲು ಸಿನಿಮಾಗಳು

0
497
shivanna movies

ನಮ್ಮ ಚಂದನವನದ ನಾಯಕರಿಗೆ ಎಷ್ಟು ಡಿಮ್ಯಾಂಡ್ ಇದೆ ಅಂದ್ರೆ, ಒಂದರ ನಂತರ ಒಂದು ಸಿನಿಮಾ ಮಾಡೋಕೆ ಆಫರ್ ಗಳು ಬರುತ್ತಲೇ ಇರುತ್ತವೆ. ಹೌದು. ಅದರಲ್ಲೂ ಸ್ಟಾರ್ ನಟರಿಗಂತೂ ಕೇಳೋದೇ ಬೇಡ. ಯಾವಾಗ ಫ್ರೀ ಆಗ್ತಾರಪ್ಪ ಅಂತ ನಿರ್ಮಾಪಕರು ಕಾಯ್ತಾನೆ ಇರ್ತಾರೆ. ಅದೇ ರೀತಿ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಈಗ ಬಹು ಬೇಡಿಕೆಯ ನಟರಿಗೆ, ಪುರಸೊತ್ತು ಸಿಗದಷ್ಟು, ಸಿನಿಮಾಗಳು ಸಾಲು ಸಾಲಾಗಿವೆ.

ಬೇಡಿಕೆಯ ಸ್ಟಾರ್ ನಟರ ಸಾಲಿನಲ್ಲಿ ನಮ್ಮ ಶಿವಣ್ಣ ಈಗ ಮೊದಲ ಸ್ಥಾನದಲ್ಲಿದ್ದಾರೆ. ಹೌದು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಸ್ಯಾಂಡಲ್ ವುಡ್ ನ ಮೋಸ್ಟ್ ಬ್ಯುಸಿಯಸ್ಟ್ ನಟ. ಇವರು ಸಾಲು ಸಾಲು ಸಿನಿಮಾಗಳನ್ನ ತಮ್ಮ ಬತ್ತಳಿಕೆಯಲ್ಲಿ ಇಟ್ಟುಕೊಂಡಿದ್ದಾರೆ. ವಿಭಿನ್ನ ಸಿನಿಮಾಗಳನ್ನು ಆಯ್ಕೆಮಾಡಿಕೊಳ್ಳುವುದರ ಮೂಲಕ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಶಿವಣ್ಣ ಈ ವರ್ಷ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಲು ಸಜ್ಜಾಗಿದ್ದಾರೆ.

ಸಾಲು ಸಾಲು ಸಿನಿಮಾಗಳನ್ನ ಪಡೆದಿರುವ ಶಿವಣ್ಣ

ಶಿವಣ್ಣ ತಮ್ಮ ಲಿಸ್ಟ್ ನಲ್ಲಿ ಇಟ್ಟುಕೊಂಡಿರುವ ಸಿನಿಮಾಗಳನ್ನ ನೋಡಿದ್ರೆ, ನಿಜಕ್ಕೂ ಎಂಥವರಿಗೂ ಆಶ್ಚರ್ಯವಾಗುತ್ತೆ. ಯಾಕಂದ್ರೆ, ಅವರು ಲಿಸ್ಟ್ ನಲ್ಲಿ ಸಿನಿಮಾಗಳು ಇರುವುದು ದೊಡ್ಡ ವಿಷಯವಲ್ಲ. ಬದಲಿಗೆ ಅವೆಲ್ಲಾ ಸಿನಿಮಾಗಳು ಇದೇ ವರ್ಷದಲ್ಲಿ ಬಿಡುಗಡೆಯಾಗುತ್ತಿರೋದೇ, ಮುಖ್ಯವಾಗಿದೆ. ಹೌದು. ಶಿವಣ್ಣ ತಮ್ಮ ಬತ್ತಳಿಕೆಯಲ್ಲಿರೋ, ಕೆಲವು ಸಿನಿಮಾಗಳನ್ನ ಇದೇ ವರ್ಷದಲ್ಲಿ ತೆರೆಗೆ ತರಲಿದ್ದಾರೆ. ಹೌದು. ಈ ಒಂದೇ ವರ್ಷದಲ್ಲಿ ಶಿವರಾಜ್ ಕುಮಾರ್ ಅಭಿನಯದ ನಾಲ್ಕು ಸಿನಿಮಾಗಳು ತೆರೆಗೆ ಬರುವ ಸಾಧ್ಯತೆ ಇದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡ್ತಾ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುತ್ತಿರುವ ಕರುನಾಡ ಚಕ್ರವರ್ತಿ 2019ರಲ್ಲಿ ನಾಲ್ಕು ಸಿನಿಮಾಗಳ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಈ ವರ್ಷಪೂರ್ತಿ, ಚಿತ್ರಮಂದಿರಗಳಲ್ಲಿ ಶಿವಣ್ಣನ ಸಿನಿಮಾಗಳೇ ಹೆಚ್ಚಾಗಿ ರಾರಾಜಿಸಲಿವೆ. ಹಾಗಾದ್ರೆ, ಆ ಸಿನಿಮಾಗಳಾದ್ರು ಯಾವುವು? ಅಂತ ತಿಳಿಸ್ತೀವಿ ನೋಡಿ.

‘ಕವಚ’ ಹಾಗೂ ‘ರುಸ್ತುಂ’

ನಮ್ಮ ಶಿವಣ್ಣ ಕವಚ ಚಿತ್ರದ ಮೂಲಕ, ಈ ವರ್ಷದ ಖಾತೆಯನ್ನ ತೆರೆದಿದ್ದಾರೆ. ಹೌದು. ಈ ವರ್ಷದ ಮೊದಲ ಸಿನಿಮಾ ಕವಚ. ಮಾಸ್ ಡೈಲಾಗ್ ಗಳ ಮೂಲಕ, ಶಿವಣ್ಣ ಕವಚದಲ್ಲಿ ಬಹಳ ಅದ್ಭುತವಾಗಿ ನಟಿಸಿದ್ದಾರೆ. ಇನ್ನೂ ರುಸ್ತುಂ ಸಿನಿಮಾ ಇನ್ನೇನು ತೆರೆಗೆ ಬರಲು ಸಜ್ಜಾಗುತ್ತಿದೆ. ಈಗಾಗಲೇ ಸಿನಿಮಾ ಟ್ರೈಲರ್ ನೋಡಿಯೇ ಅಭಿಮಾನಿಗಳ ಹಾರ್ಟ್ ಬೀಟ್ ಹೆಚ್ಚಾಗಿದೆ. ಹೌದು. ಶಿವಣ್ಣ ಈ ಚಿತ್ರದಲ್ಲಿ ವಿಶೇಷವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಜನರಲ್ಲಿ ಈ ಸಿನಿಮಾದ ನಿರೀಕ್ಷೆ ಹೆಚ್ಚಾಗಿದ್ದು, ಜೂನ್ 14ಕ್ಕೆ ತೆರೆಗೆ ಬರಲಿದೆ.

‘ದ್ರೋಣ’ ಹಾಗೂ ‘ಆನಂದ್’

ದ್ರೋಣ ಚಿತ್ರ ಈಗಾಗಲೇ ಚಿತ್ರೀಕರಣ ಮುಗಿಸಿ, ಸದ್ಯ ಪೊಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಮುಳುಗಿದೆ. ಆದಷ್ಟು ಬೇಗ ಚಿತ್ರಮಂದಿರಕ್ಕೆ ಕಾಲಿಡಲು ಎಲ್ಲಾ ರೀತಿ ತಯಾರಾಗುತ್ತಿದೆ. ಚಿತ್ರದಲ್ಲಿ ಶಿವರಾಜ್ ಕುಮಾರ್ ಶಿಕ್ಷಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಶಿವಣ್ಣನಿಗೆ ನಾಯಕಿಯಾಗಿ ಬಹುಭಾಷ ನಟಿ ಇನಿಯಾ ಬಣ್ಣ ಹಚ್ಚಿದ್ದಾರೆ. ಇದರ ಜೊತೆಗೆ ಆನಂದ್ ಸಿನಿಮಾದ ಚಿತ್ರೀಕರಣ ಕೂಡ, ಬಹುತೇಕ ಮುಗಿಸಿದ್ದಾರೆ. ಶಿವರಾಜ್ ಕುಮಾರ್ ಅಭಿನಯದ ಮೊದಲ ಸೂಪರ್ ಹಿಟ್ ‘ಆನಂದ್’ ಸಿನಿಮಾದ ಶೀರ್ಷಿಕೆಯನ್ನೆ ಮತ್ತೆ ಬಳಸಿಕೊಳ್ಳಲಾಗಿದ್ದು, ಇದೇ ವರ್ಷ ತೆರೆಗೆ ಬರುವ ಸಾಧ್ಯತೆ ಇದೆ.

‘ಮೈ ನೇಮ್ ಇಸ್ ಅಂಜಿ’ ಮತ್ತು ‘ಎಸ್ ಆರ್ ಕೆ’

ದ್ರೋಣ ಹಾಗೂ ಆನಂದ್ ಸಿನಿಮಾಗಳ ಮಧ್ಯದಲ್ಲೇ ಈಗ ಈ ಎರಡು ಸಿನಿಮಾಗಳ ಶೂಟಿಂಗ್ ನಡೆಯಲಿದೆ. ಹೌದು. ದ್ರೋಣ ಸಿನಿಮಾ ಶೂಟಿಂಗ್ ಮುಗಿಯುತ್ತಿದ್ದಂತೆ, ‘ಮೈ ನೇಮ್ ಇಸ್ ಅಂಜಿ’ ಮತ್ತು ‘ಎಸ್ ಆರ್ ಕೆ’ ಸಿನಿಮಾಗಳ ಕಾರ್ಯ ಶುರುವಾಗಲಿದೆ. ಹರ್ಷ ಸಾರಥ್ಯದಲ್ಲಿ ‘ಮೈ ನೇಮ್ ಇಸ್ ಅಂಜಿ’ ಬಂದರೆ, ಇನ್ನೂ ‘ಎಸ್ ಆರ್ ಕೆ’, ಲಕ್ಕಿ ಗೋಪಾಲ್ ನಿರ್ದೇಶನದಲ್ಲಿ ಮೂಡಿ ಬರಲಿದೆ. ಈ ಎರಡು ಸಿನಿಮಗಳು ಇದೇ ವರ್ಷ ತೆರೆಗೆ ಬರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ಈ ವರ್ಷವೆಲ್ಲಾ ಶಿವಣ್ಣ ಫುಲ್ ಬ್ಯುಸಿಯಾಗಿದ್ದಾರೆ. ಯಾವ ಸಿನಿಮಾ, ನಂತರ ಯಾವ ಸಿನಿಮಾ ಬರುತ್ತೆ ಅಂತ ಕಾದು ನೋಡಬೇಕು. ಹಾಗೇ ಯಾವ ಸಿನಿಮಾ ಅಭಿಮಾನಿಗಳ ಮನ ಗೆಲ್ಲುತ್ತೆ ಅನ್ನೋದು ಸಹ ಕುತೂಹಲದ ವಿಷಯವಾಗಿದೆ.

LEAVE A REPLY

Please enter your comment!
Please enter your name here