ಕನ್ನಡಿಗರಿಗೆ ಮೊದಲ ಆದ್ಯತೆ ನೀಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ ಶಿವಣ್ಣ ಹಾಗು ರಿಷಬ್ ಶೆಟ್ಟಿ

0
756
shivanna hagu rishab

ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು ಅನ್ನೋ ಅಭಿಯಾನ ಈಗಾಗಲೇ ಶುರುವಾಗಿದೆ. ಹೌದು. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ ಹಾಗಾಗಿ ಮೊದಲು ಕನ್ನಡಿಗರಿಗೆ ಉದ್ಯೋಗ ಸಿಗುವಂತೆ ಮಾಡಿ ಎಂದು ಹಲವು ಸಂಘಟನೆಗಳು ಹಾಗು ಯುವಕರು ಇಂದು ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ. ಯಾಕಂದ್ರೆ ನಮ್ಮಲ್ಲಿ ಹೆಚ್ಚಿನ ನಿರೋದ್ಯೋಗಿಗಳಿದ್ದಾರೆ. ಆದ್ರೆ ಅವರನ್ನೆಲ್ಲಾ ಬಿಟ್ಟು, ಹೊರ ರಾಜ್ಯದವರಿಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ. ಇದರಿಂದ ನಮ್ಮ ಕನ್ನಡಿಗರು ನಿರುದ್ಯೋಗಿಗಳಾಗುತ್ತಿದ್ದಾರೆ. ಹಾಗಾಗಿ ನಮ್ಮ ಕನ್ನಡಿಗರಿಗೆ ಮೊದಲು ಉದ್ಯೋಗ ನೀಡಿ ಎಂದು ಸಿನಿಮಾ ನಟರು ಸೇರಿದಂತೆ ಹಲವಾರು ಇದಕ್ಕೆ ಸಾಥ್ ನೀಡುತ್ತಿದ್ದಾರೆ.

ಕನ್ನಡಿಗರಿಗೆ ಮೊದಲು ಆದ್ಯತೆ ನೀಡಿ ಎಂದ ಶಿವಣ್ಣ

ಇನ್ನು ಈ ಬಗ್ಗೆ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಕೂಡ ಮನವಿ ಮಾಡಿದ್ದಾರೆ. ಹೌದು. ಕರ್ನಾಟಕ ಅಂದಕೂಡಲೇ ಮೊದಲು ಕನ್ನಡಿಗರಿಗೆ ಆದ್ಯತೆ ನೀಡಬೇಕು. ಭಾಷೆ, ನೀರು ಅಥವಾ ಉದ್ಯೋಗ ಹೀಗೆ ಯಾವುದೇ ಇರಲಿ, ಅಲ್ಲಿ ಮೊದಲು ಕನ್ನಡಿಗರಿಗೆ ಅವಕಾಶಗಳನ್ನು ನೀಡಬೇಕು. ಇದು ಎಲ್ಲರ ಕರ್ತವ್ಯವಾಗಿದೆ ಎಂದರು. ಹಾಗಾಗಿ ದಯವಿಟ್ಟು ಮೊದಲು ಕನ್ನಡಿಗರಿಗೆ ಕೆಲಸ ಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು. ಆಗಂತ ಬೇರೆಯವರಿಗೆ ಕೆಲಸ ಕೊಡಬೇಡಿ ಎಂದು ಹೇಳುತ್ತಿಲ್ಲ. ಅವರಿಗೂ ಕೆಲಸ ಕೊಡಿ, ಆದರೆ ಮೊದಲು ನಮ್ಮವರಿಗೆ ಆದ್ಯತೆ ನೀಡಿ. ನಂತರ ಬೇರೆಯವರಿಗೆ ಕೆಲಸ ಕೊಡಿ ಎಂದು ಮನವಿ ಮಾಡಿದ್ದಾರೆ.

ಅಭಿಯಾನಕ್ಕೆ ಬೆಂಬಲ ನೀಡುತ್ತಿರುವ ರಿಷಬ್ ಶೆಟ್ಟಿ

ಕರ್ನಾಟಕದಲ್ಲಿ ಮೊದಲು ಕನ್ನಡಿಗರಿಗೆ ಉದ್ಯೋಗ ನೀಡಿಲ್ಲ ಅಂದ್ರೆ ಹೇಗೆ? ಮೊದಲು ನಮ್ಮವರಿಗೆ ಆದ್ಯತೆ ನೀಡಬೇಕು. ಕರ್ನಾಟಕಕ್ಕೆ ಮೀಸಲಿರುವ ಅಷ್ಟು ಹುದ್ದೆಗಳನ್ನು ಸರಿಯಾಗಿ ಕನ್ನಡಿಗರಿಗೆ ನೀಡಿದರೆ, ನಮ್ಮಲ್ಲಿ ನಿರುದ್ಯೋಗದ ಸಮಸ್ಯೆ ಬರುವುದಿಲ್ಲ. ಇದಕ್ಕೋಸ್ಕರ ಈಗ ಇಂದು ಹಾಗು ನಾಳೆ ಪ್ರತಿಭಟನೆ ನಡೆಯುತ್ತಿದೆ. ಇದಕ್ಕೆ ನನ್ನ ಬೆಂಬಲವು ಕೂಡ ಇದೆ. ಇತ್ತೀಚೆಗಷ್ಟೇ ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೇ ಮೀಸಲಾಗಬೇಕು ಎಂದು ಒತ್ತಾಯಿಸಿ ರಾಜ್ಯದ ನಾಲ್ಕು ಸಂಸದರು ರಾಜ್ಯಸಭೆಯಲ್ಲಿ ಧ್ವನಿ ಎತ್ತಿದ್ದರು. ಆದರೆ ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರೂ, ಅವರ ಸರ್ಕಾರ ಪತನವಾಯಿತು. ಬಳಿಕ ಮತ್ತೆ ಆಗಸ್ಟ್ 10ರಂದು ಟ್ವಿಟರ್ ಅಭಿಯಾನ ಕೂಡ ನಡೆಸಲಾಯಿತು. ಈ ವೇಳೆ ಸಿಎಂ ಯಡಿಯೂರಪ್ಪನವರು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ.

ನಮ್ಮ ಹೋರಾಟ ನಡೆಯುತ್ತಲೇ ಇರುತ್ತದೆ

ಇನ್ನು ಈ ವಿಚಾರವಾಗಿ ಇಂದು ಗಾಂಧಿ ಪ್ರತಿಮೆ ಬಳಿ ಹೋರಾಟ ನಡೆಯುತ್ತಿದೆ. ಹೌದು. ನಮ್ಮವರಿಗೆ ಮೊದಲ ಆದ್ಯತೆ ನೀಡಬೇಕೆಂದು ಹಲವು ಸಂಘ ಸಂಸ್ಥೆಗಳು ಹಾಗು ಯುವಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ ಈ ಎರಡು ದಿನ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹೇಳಿದ್ದಾರೆ. ಯಾಕಂದ್ರೆ ಸರ್ಕಾರಕ್ಕೆ ನಮ್ಮಂತಹ ನಿರೋದ್ಯೋಗಿಗಳು ಕಣ್ಣಿಗೆ ಕಾಣುತ್ತಿಲ್ಲ. ಹಾಗಾಗಿ ನಮಗೆ ಬಿಟ್ಟು, ಬೇರೆಯವರಿಗೆ ಉದ್ಯೋಗ ನೀಡುತ್ತಿದ್ದಾರೆ. ಮೊದಲು ನಮಗೆ ಆದ್ಯತೆ ನೀಡಿ ಎಂದು ಹೋರಾಟ ನಡೆಸುತ್ತಿದ್ದಾರೆ. ಹಾಗಾದ್ರೆ ಈ ಹೋರಾಟ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂದು ಕಾದು ನೋಡಬೇಕು.

ಒಟ್ಟಿನಲ್ಲಿ ಕರ್ನಾಟಕದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು ಅನ್ನೋದು ಎಲ್ಲರ ಕೂಗಾಗಿದೆ. ಇದೇ ವಿಚಾರವಾಗಿ ಈಗ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಆದ್ರೆ ಸರ್ಕಾರಕ್ಕೆ ಇವರು ಕೂಗು ಕೇಳಿ, ಏನಾದ್ರು ಪ್ರತಿಕ್ರಿಯೆ ನೀಡುತ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here