ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಶಿವಣ್ಣ

0
882
shivanna birthday

ಸ್ಯಾಂಡಲ್ ವುಡ್ ನಲ್ಲಿ ಸದಾ ಕಾಲ ಓಡುತ್ತಿರುವ ಕುದುರೆ ಅಂದ್ರೆ ಅದು ಶಿವಣ್ಣ. ಹೌದು. 55 ದಾಟಿದರು ಶಿವಣ್ಣ, ಈಗಿನ ಯಾವ ಯುವ ನಾಯಕರಿಗಿಂತಲೂ ಕಡಿಮೆ ಇಲ್ಲ. ನಟನೆ, ಡಾನ್ಸ್ ಹಾಗು ಇನ್ನಿತರ ಎಲ್ಲ ವಿಷಯಗಳಲ್ಲೂ ಶಿವಣ್ಣ ಚಿಂದಿ ಉಡಾಯಿಸುತ್ತಾರೆ. ಮೊದಲಿನಿಂದಲೂ ಎಂಗ್ ಅಂಡ್ ಎನರ್ಜೆಟಿಕ್ ಆಗಿದ್ದಾರೆ ನಮ್ಮ ಶಿವಣ್ಣ. ಹಾಗಾಗಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಲೇ ಇರುತ್ತಾರೆ. ಈಗಲೂ ಸಹ ಶಿವಣ್ಣ ತಮ್ಮ ಬತ್ತಳಿಕೆಯಲ್ಲಿ ಸಾಕಷ್ಟು ಸಿನಿಮಾಗಳನ್ನು ಹೊಂದಿದ್ದಾರೆ. ಆದರೆ ಸದ್ಯಕ್ಕೆ ಶಿವಣ್ಣ ನಟನೆಗೆ ಸ್ವಲ್ಪ ದಿನ ಬ್ರೇಕ್ ನೀಡಿದ್ದಾರೆ. ಹೌದು. ಸಿನಿಮಾ ಶೂಟಿಂಗ್ ಸಮಯದಲ್ಲಿ ಆದಂತಹ ಒಂದು ಪೆಟ್ಟಿನಿಂದ ಅವರು ಲಂಡನ್ ಗೆ ಆಪರೇಷನ್ ಗಾಗಿ ಹೋಗಿದ್ದು, ಆಪರೇಷನ್ ಸಕ್ಸಸ್ ಆಗಿದೆ. ಆದ್ರೆ ಸದ್ಯಕ್ಕೆ ಅವರಿನ್ನೂ ಭಾರತಕ್ಕೆ ಬರಲು ಆಗುವುದಿಲ್ಲ. ಆದ್ರೆ ನಾಳೆ ಅವರ ಹುಟ್ಟುಹಬ್ಬ ಇರೋದ್ರಿಂದ, ಅವರ ಅಭಿಮಾನಿಗಳು ಬೇಸರವಾಗಬಾರದು ಎಂದು ಅವರಿಗೆ ಒಂದು ಸರ್ಪ್ರೈಸ್ ನೀಡುತ್ತಿದ್ದಾರೆ.

ನಾಳೆ ಶಿವಣ್ಣನ ಹುಟ್ಟುಹಬ್ಬ

ನಮ್ಮ ಸೆಂಚುರಿ ಸ್ಟಾರ್ ನಾಳೆ ಹುಟ್ಟಿದ ದಿನ. ಸಾಮಾನ್ಯವಾಗಿ ಸಿನಿಮಾ ಕಲಾವಿದರ ಹುಟ್ಟುಹಬ್ಬ ಬಂದ್ರೆ, ಅವರ ಅಭಿಮಾನಿಗಳು ಅವರ ಮನೆ ಹತ್ತಿರ ಹೋಗಿ, ಸಂಭ್ರಮ ಆಚರಿಸುತ್ತಾರೆ. ಅದರಲ್ಲೂ ಶಿವರಾಜ್ ಕುಮಾರ್ ಅವರ ಬರ್ತ್ ಡೇ ಅಂದ್ರೆ, ಇನ್ನೂ ಕೇಳಬೇಕಾ, ಅಭಿಮಾನಿಗಳು ಅದ್ದೂರಿಯಾಗಿ ಅವರ ಹುಟ್ಟುಹಬ್ಬ ಆಚರಿಸಬೇಕು ಅಂದುಕೊಂಡಿದ್ದರು. ಆದ್ರೆ ಈ ಬರಿ ಶಿವಣ್ಣನ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸೋಕೆ ಆಗುವುದಿಲ್ಲ. ಯಾಕಂದ್ರೆ ಅವರು ಲಂಡನ್ ನಲ್ಲಿ ಇದ್ದಾರೆ. ಆಗಂತ ಶಿವಣ್ಣ ತಮ್ಮ ಅಭಿಮಾನಿಗಳಿಗೇನು ಬೇಸರ ತರಿಸಿಲ್ಲ. ಹೌದು. ತಮ್ಮ ಅಭಿಮಾನಿಗಳಿಗೆ ಬೇಸರವಾಗಬಾರದು ಅನ್ನೋ ನಿಟ್ಟಿನಲ್ಲಿ ಅವರಿಗೊಂದು ಸಪ್ರೈಸ್ ನೀಡುತ್ತಿದ್ದಾರೆ. ಹೌದು. ಇಂದು ಆಪರೇಷನ್ ಸಕ್ಸಸ್ ಆದ ನಂತರ ಆ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಈ ಅಮಾಯದಲ್ಲಿ ಶಿವಣ್ಣ ತಮ್ಮ ಅಭಿಮಾನಿಗಳಿಗೊಂದು ಸಿಹಿ ಸುದ್ದಿ ನೀಡಿದ್ದಾರೆ.

ಇನ್ಮುಂದೆ ಶಿವಣ್ಣ ಕಾಣಲಿದ್ದಾರೆ ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ

ಶಿವಣ್ಣ ಸ್ಟಾರ್ ನಟ. ಆದ್ರೆ ಇಲ್ಲಿಯವರೆಗೂ ಅವರು ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ಬಳಕೆ ಮಾಡಿಲ್ಲ. ಹೌದು. ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಶಿವಣ್ಣನ ಖಾತೆಗಳೇ ಇಲ್ಲ. ಇಷ್ಟು ದಿನ ಅಭಿಮಾನಿಗಳು ಅವರನ್ನು ಸಾಮಾಜಿಕ ಜಾಲತಾಣಕ್ಕೆ ಬರುವಂತೆ ಮಾಡಿದ್ದರು. ಆದ್ರೆ ಶಿವಣ್ಣ ಮಾತ್ರ, ಬಂದಿರಲಿಲ್ಲ. ಆದ್ರೆ ಅವರಿಗೆ ಸಂಬಂಧಪಟ್ಟ ವಿಷಯಗಳನ್ನು ಹಾಗೂ ಸುದೀಗಳನ್ನು ಅವರ ಆಪ್ತ ಸಹಾಯಕ ಅಪ್ಲೋಡ್ ಮಾಡುತ್ತಿದ್ದರು. ಆದ್ರೆ ಇನ್ಮುಂದೆ ಶಿವಣ್ಣನೇ ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ಉಪಯೋಗಿಸಲಿದ್ದಾರೆ. ಅದು ಅವರ ಹುಟ್ಟುಹಬ್ಬದ ಪ್ರಯುಕ್ತ. ಹೌದು. ತಮ್ಮ ಅಭಿಮಾನಿಗಳ ಬಹಳ ವರ್ಷದ ಆಸೆಯನ್ನು ಶಿವಣ್ಣ ಈ ವರ್ಷದ ತಮ್ಮ ಹುಟ್ಟು ಹಬ್ಬದಂದು ಈಡೇರಿಸಲಿದ್ದಾರೆ.

shivanna

ಅಭಿಮಾನಿಗಳ ಆಸೆ ಈಡೇರಿಸಲಿರುವ ಶಿವಣ್ಣ

ಇನ್ನೂ ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಶಿವಣ್ಣ ಅಭಿಮಾನಿಗಳ ಹಲವು ಗ್ರೂಪ್ ಗಳಿವೆ. ಆದ್ರೆ ಎಂದಿಗೂ ಶಿವಣ್ಣ ಅವುಗಳನ್ನು ನೋಡಿಲ್ಲ. ಯಾಕಂದ್ರೆ ಅವರ ಖಾತೆಯೇ ಇರಲಿಲ್ಲ. ಆದ್ರೆ ಈಗ ಅವರು ತಮ್ಮ ಖಾತೆ ತೆರೆಯುತ್ತಿರೋದು ಅಭಿಮಾನಿಗಳಿಗೆ ಬಹಳ ಸಂತಸದ ಸುದ್ದಿಯಾಗಿದೆ. ಇನ್ನೂ ನಾಳೆ ಫೇಸ್ ಬುಕ್ ಖಾತೆ ತೆರೆಯುತ್ತಿರೋದ್ರಿಂದ, ಶಿವಣ್ಣ ನಾಳೆ ಲೈವ್ ಗೆ ಬರುವ ಸಾಧ್ಯತೆ ಇದೇ. ಹಾಗಾಗಿ ಅವರ ಅಭಿಮಾನಿಗಳು, ಅವರಿಗೆ ನೇರವಾಗಿ ವಿಶ್ ಮಾಡಬಹುದು. ಹೌದು. ನಾಳೆ ಹುಟ್ಟುಹಬ್ಬದ ಪ್ರಯುಕ್ತ ಮೊದಲಬಾರಿಗೆ ಶಿವಣ್ಣ ಲೈವ್ ಬರುವ ಸಾಧ್ಯತೆ ಇದೆಯಂತೆ. ಹಾಗಾಗಿ ಅಭಿಮಾನಿಗಳು ಅವರಿಗೆ ವಿಶ್ ಮಾಡಬೇಕು ಅಂದ್ರೆ ಫೇಸ್ ಬುಕ್ ಅಥವಾ ಇನ್ಸ್ಟಾಗ್ರಾಮ್ ನಲ್ಲಿ ಶುಭಾಶಯ ತಿಳಿಸಬಹುದು.

ಒಟ್ಟಿನಲ್ಲಿ ಲೆಕ್ಕವಿಲ್ಲದಷ್ಟು ಅಭಿಮಾನಿಗಳನ್ನು ಹೊಂದಿರುವ ಶಿವಣ್ಣನ ಹುಟ್ಟುಹಬ್ಬವನ್ನು ಬಹಳಷ್ಟು ಅದ್ದೂರಿಯಾಗಿ ಮಾಡಬೇಕು ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದ್ರೆ ಅವರ ಹುಟ್ಟುಹಬ್ಬವನ್ನು ಈ ವರ್ಷ ಆಚರಿಸಲು ಆಗುವುದಿಲ್ಲ. ಆದ್ರೆ ಅಭಿಮಾನಿಗಳಿಗೆ ಮಾತ್ರ ಅವರು ಸಿಹಿ ಸುದ್ದಿ ನೀಡುತ್ತಿದ್ದಾರೆ.

LEAVE A REPLY

Please enter your comment!
Please enter your name here