ಬಡಕುಟುಂಬದಲ್ಲಿ ರೈತನ ಮಗನಾಗಿ ಜನಿಸಿದ ಶಿವನ್ ಅವರು ಇಸ್ರೋ ಅಧ್ಯಕ್ಷರಾಗಿದ್ದಾದ್ರೂ ಹೇಗೆ?

0
826

ಶುಕ್ರವಾರ ರಾತ್ರಿ ಇಡೀ ಭಾರತದ ಜನತೆ ಬಹಳಷ್ಟು ಕಾತುರದಿಂದ ಚಂದ್ರಯಾನಕ್ಕಾಗಿ ಕಾಯುತ್ತ ಕುಳಿತಿದ್ದರು. ಹೌದು. ದೇಶದ ಹೆಮ್ಮೆಯ ಕಾರ್ಯವಾದ ಚಂದ್ರಯಾನ 2, ಚಂದ್ರನ ಮೇಲ್ಮೈ ತಲುಪುತ್ತದೆ ಎಂದು ಬಹಳಷ್ಟು ಸಂತಸ ಪಟ್ಟಿದ್ದರು. ಆದ್ರೆ ಕೊನೆ ಕ್ಷಣದಲ್ಲಿ ಆದಂತ ಕೆಲವು ಅಡೆತಡೆಗಳಿಂದ ಮಿಷನ್ ಕಂಟ್ರೋಲ್ ಹಾಗು ವಿಕ್ರಮ್ ಲ್ಯಾಂಡರ್ ನ ಸಂಪರ್ಕ ಕಡಿತವಾಗುತ್ತದೆ. ಹಾಗಾಗಿ ಇದರಿಂದ ಎಲ್ಲರಿಗು ನಿರಾಸೆಯುಂಟಾಗಿದೆ. ಆದ್ರೆ ಇದರ ಬಗ್ಗೆ ಇಸ್ರೋ ಅಧ್ಯಕ್ಷ ಕೆ. ಶಿವನ್ ಅವರು ಬಹಳಷ್ಟು ಮನನೊಂದು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಇದರ ಹಿಂದೆ ನಮ್ಮ ಶ್ರಮ ಬಹಳಷ್ಟಿದೆ ಎಂದು ಹೇಳಿದ್ದಾರೆ. ಆದರೆ ಇಷ್ಟೆಲ್ಲಾ ಶ್ರಮ ವಹಿಸಿ ಕಾರ್ಯ ನಿರ್ವಹಿಸುತ್ತಿರುವ ಶಿವನ್ ಅವರು ಒಬ್ಬ ಸಾಮಾನ್ಯ ರೈತನ ಮಗ. ಹೌದು. ಬಡಕುಟುಂಬವೊಂದರಲ್ಲಿ ಜನಿಸಿದ ಶಿವನ್ ಅವರು ಕಷ್ಟಪಟ್ಟು ಓದಿ, ನಂತರ ಇಸ್ರೋ ಅಧ್ಯಕ್ಷರಾಗಿದ್ದಾರೆ.

ಬಡಕುಟುಂಬದಲ್ಲಿ ಜನಿಸಿದ ಕೆ. ಶಿವನ್

ಕೆ. ಶಿವನ್ ಅವರು ಒಬ್ಬ ಸಾಮಾನ್ಯ ರೈತನ ಮಗ. ಹೌದು. ಶಿವನ್ ಅವರು ಮೂಲತಃ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಸರಕ್ಕಲ್‍ವಿಲೈ ಗ್ರಾಮದವರು. ಇವರ ತಂದೆ ಒಬ್ಬ ಸಾಮಾನ್ಯ ರೈತರು. ಇನ್ನು ಶಿವನ್ ಅವರ ಮನೆಯಲ್ಲಿ ಬಡತನ ಹೆಚ್ಚು ಇದ್ದಿದ್ದರಿಂದ ಅವರ ಸಹೋದರರು ಶಾಲೆಯ ಮೆಟ್ಟಿಲು ಹತ್ತುವುದಕ್ಕೆ ಆಗಿರಲಿಲ್ಲ. ಆದರೆ ಶಿವನ್ ಅವರು ತಮ್ಮ ಬಡತನದ ಕಷ್ಟ ಇದ್ದರು ಪರವಾಗಿಲ್ಲ, ನಾನು ಓದಲೇಬೇಕು ಎಂದು ಹಠ ಹಿಡಿಯುತ್ತಾರೆ. ಅದರಂತೆ ಬೆಳಿಗ್ಗೆಯಿಂದ ಕೃಷಿ ಕೆಲಸದಲ್ಲಿ ತಮ್ಮ ತಂದೆಗೆ ಸಹಾಯ ಮಾಡಿ, ನಂತರ ಅವರು ತಮ್ಮ ವಿದ್ಯಾಭ್ಯಾಸಕ್ಕಾಗಿ ತೆರಳುತ್ತಿದ್ದರು. ಅಲ್ಲದೆ ಅವರು ಸಣ್ಣವನಾಗಿದ್ದಾಗ ಚಪ್ಪಲಿ ಇಲ್ಲದೆ ಶಾಲೆಗೆ ಹೋಗುತ್ತಿದ್ದರು. ಧೋತಿ(ಪಂಚೆ) ಉಟ್ಟುಕೊಂಡೇ ಇಡೀ ಅವರ ಕಾಲೇಜು ಜೀವನವನ್ನು ಕಳೆದಿದ್ದರಂತೆ.

ಸಹೋದರ ಹಾಗೂ ಸಹೋದರಿಯರಿಗೆ ಶಿಕ್ಷಣ ಪಡೆಯಲು ಆಗಲಿಲ್ಲ

ಇನ್ನು ಇವರ ಮನೆಯಲ್ಲಿ ಬಡತನ ಇದ್ದಿದ್ದರಿಂದ ಇವರ ಸಹೋದರ ಹಾಗು ಸಹೋದರಿಯರಿಗೆ ಶಿಕ್ಷಣ ಪಡೆಯಲು ಆಗಲಿಲ್ಲವಂತೆ. ಈ ಬಗ್ಗೆ ಸ್ವತಃ ಶಿವನ್ ಅವರೇ ಹೇಳಿದ್ದಾರೆ. ಹೌದು. ನಾನು ಕಾಲೇಜಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಕೃಷಿ ಚಟುವಟಿಕೆಯಲ್ಲಿ ಅಪ್ಪನಿಗೆ ಸಹಾಯ ಮಾಡುತ್ತಿದ್ದೆ. ಈ ಕಾರಣದಿಂದಾಗಿ ತಂದೆ ನಮ್ಮ ಮನೆಯ ಹತ್ತಿರವಿರುವ ಕಾಲೇಜಿಗೆ ನನ್ನನ್ನು ಸೇರಿಸಿದರು. ಯಾವತ್ತು ನಾನು ನನ್ನ ಬಿಎಸ್‍ಸಿ(ಮ್ಯಾಥಮ್ಯಾಟಿಕ್ಸ್)ಯನ್ನು ಶೇ.100ರಷ್ಟು ಮಾಕ್ರ್ಸ್ ತೆಗೆದುಕೊಂಡು ಉತ್ತೀರ್ಣನಾದೆನೋ ಅಂದೇ ತಂದೆ ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಪ್ರೋತ್ಸಾಹಿಸಿದರು. ಅಲ್ಲಿಂದ ಅವರು 2006ರಲ್ಲಿ ಐಐಟಿ ಮುಂಬೈನಲ್ಲಿ ಏರೋಸ್ಪೇಸ್(ವೈಮಾನಿಕ) ಎಂಜಿನಿಯರಿಂಗ್ ನ ವಿಷಯದಲ್ಲೇ ಪಿಎಚ್‍ಡಿ ಗಳಿಸಿದರು. ನಂತರ ಅವರಿಗೆ ಇಸ್ರೋ ಬಗ್ಗೆ ವಿಶೇಷ ಆಸಕ್ತಿ ಮೂಡಿದ್ದು, ಅದರ ಬಗ್ಗೆ ಅಧ್ಯಯನಕ್ಕೆ ಇಳಿಯುತ್ತಾರೆ.

ಸಾಧಿಸುವ ಛಲವೊಂದಿದ್ದರೆ ಯಾವ ಬಡತನವು ಲೆಕ್ಕಕ್ಕೆ ಬರುವುದಿಲ್ಲ

ಈ ರೀತಿ1982ರಲ್ಲಿ ಇಸ್ರೋ ಕುಟುಂಬ ಸೇರಿಕೊಂಡ ಶಿವನ್ ಆ ನಂತರ ಪೋಲಾರ್ ಸ್ಯಾಟಲೈಟ್ ವೆಹಿಕಲ್(ಪಿಎಸ್‍ಎಲ್‍ವಿ) ರಾಕೆಟ್ ಯೋಜನೆಗಳಲ್ಲಿ ಕೆಲಸ ಮಾಡಿದ್ದರು. ನಂತರ 2018ರ ಜನವರಿ ಅಂದರೆ ಇಸ್ರೋ ಮುಖ್ಯಸ್ಥರಾಗುವ ಮೊದಲು ವಿಕ್ರಂ ಸಾರಾಭಾಯಿ ಸ್ಪೇಸ್ ಸೆಂಟರ್(ವಿಎಸ್‍ಎಸ್‍ಸಿ)ಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ರಾಕೆಟ್ ವಿಚಾರದಲ್ಲಿ ಇವರಿಗೆ ಇರುವ ವಿಷಯ ಜ್ಞಾನವನ್ನು ತಿಳಿದು ಇವರನ್ನು ಇಸ್ರೋದಲ್ಲಿ `ರಾಕೆಟ್ ಮ್ಯಾನ್’ ಎಂದೇ ಕರೆಯಲಾಗುತ್ತದೆ. ಇಷ್ಟು ಮಾತ್ರವಲ್ಲದೇ 2017ರ ಫೆಬ್ರವರಿ 15ರಂದು ಒಂದೇ ಬಾರಿಗೆ ಪಿಎಸ್‍ಎಲ್‍ವಿ -ಸಿ37 ಮೂಲಕ 104 ಉಪಗ್ರಹಗಳನ್ನು ಉಡಾಯಿಸುವ ಮೂಲಕ ಇಸ್ರೋ ವಿಶ್ವದಾಖಲೆ ನಿರ್ಮಿಸಿತ್ತು. ಈ ದಾಖಲೆ ನಿರ್ಮಾಣದಲ್ಲೂ ಶಿವನ್ ಅವರು ಪ್ರಮುಖ ಪಾತ್ರವಹಿಸಿದ್ದರು. ಈ ರೀತಿ ಎಷ್ಟೇ ಬಡತನವಿದ್ದರೂ ಅದ್ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ, ನನಗೆ ಸಾಧಿಸುವ ಛಲವಿದೆ. ನಾನು ಸಾಧಿಸುತ್ತೇನೆ ಎಂದು ಈ ಮಟ್ಟಕ್ಕೆ ಶಿವನ್ ತಲುಪಿದ್ದಾರೆ.

ನಿಜಕ್ಕೂ ಶಿವನ್ ಅವರ ಈ ಸಾಧನೆಗೆ ಮೆಚ್ಚಲೇಬೇಕು. ಯಾಕಂದ್ರೆ ಒಂದು ಬಡತನದ ಕುಟುಂಬದಲ್ಲಿ ಜನಿಸಿದ ಇವರು, ಎಲ್ಲ ಕಷ್ಟಗಳನ್ನು ಮನಸ್ಸಲ್ಲಿಟ್ಟುಕೊಂಡು, ಕೇವಲ ಅವರ ಸಾಧನೆ ಬಗೆ ಮಾತ್ರ ಗಮನ ವಹಿಸಿ, ಈಗ ಗೆಲುವನ್ನು ಸಾಧಿಸಿದ್ದಾರೆ.

LEAVE A REPLY

Please enter your comment!
Please enter your name here