ನಡೆದಾಡುವ ದೇವರ ಹುಟ್ಟುಹಬ್ಬಕ್ಕೆ ಶುಭಕೋರಿದ ಭಾರತದ ಪ್ರದಾನ ಮಂತ್ರಿ

0
924
shivakumara swamiji

ಕರ್ನಾಟಕದ ಜನತೆಗೆ ಈ ದಿನ ನೆನಪಿನಲ್ಲಿ ಇಟ್ಟುಕೊಳ್ಳುವ ದಿನ ಹಾಗೂ ನೆನೆಯುವ ದಿನ. ತಮ್ಮ ಜೀವನವನ್ನೇ ಸಮಾಜದ ಸುಧಾರಣೆಗೆ ಅರ್ಪಿಸಿದ ಮಹಾನ್ ವ್ಯಕ್ತಿ. ಅದೆಷ್ಟೋ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ, ಊಟ ನೀಡಿ ಅವರ ಪಾಲಿಗೆ ದೇವರಾಗಿ ಮೆರೆದ ನಡೆದಾಡುವ ದೇವರೆಂದೇ ಗುರುತಿಸಿಕೊಂಡ ಶ್ರೀ ಶಿವಕುಮಾರ್ ಸ್ವಾಮೀಜಿಯವರ 112 ನೇ ಜಯಂತಿಯನ್ನು ರಾಜ್ಯದ ಜನರು ವಿಜೃಂಭಣೆ ಇಂದ ಆಚರಿಸುತ್ತಿದ್ದಾರೆ. ಸಿದ್ದಗಂಗಾ ಮಠದ ನಿವಾಸಿಯರು ಸ್ವಾಮೀಜಿ ಅವರ ಅಪಾರ ಕೊಡುಗೆಯನ್ನು ಮರೆಯಲು ಸಾಧ್ಯವೇ ಇಲ್ಲ. ಶಿವಕುಮಾರ್ ಸ್ವಾಮೀಜಿ ಅವರ ಜಯಂತಿಯ ಸಂಭ್ರಮಾಚಾರಣೆಯಲ್ಲಿ ಇಂದು ಮಠದ ಜನರು ಮುಳುಗಿದ್ದಾರೆ.

ಸ್ವಾಜಿಯವರ 112ನೇ ಜಯಂತಿಯ ಪ್ರಯುಕ್ತ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ

ಸ್ವಾಮೀಜಿಯ 112ನೆಯ ಜಯಂತಿಯ ಪ್ರಯುಕ್ತ ದೇಶದ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿ ಅವರು ಕೂಡ ಟ್ವಿಟ್ಟರ್ ಖಾತೆಯ ಮೂಲಕ ಸ್ವಾಮೀಜಿ ಅವರಿಗೆ ಜಯಂತಿಯ ಶುಭಾಶಯ ಸಲ್ಲಿಸಿದ್ದಾರೆ.. ಪರಮ ಪುಣ್ಯರಾದ ಶಿವಕುಮಾರ್ ಸ್ವಾಮೀಜಿ ಅವರ ಚರಣಕ್ಕೆ ನನ್ನ ಒಂದು ನಮನ, ಅವರು ಈ ದಿನ ನಮ್ಮ ಬಳಿ ಇಲ್ಲವಾದರೂ ಅವರು ಬಿಟ್ಟು ಹೋದ ಆದರ್ಶಗಳು, ತತ್ವಗಳು, ನುಡಿಗಳು, ಜ್ಞಾನದ ಕಿಚ್ಚು ಸದಾ ಕಾಲ ನಮ್ಮಲೇ ಇರುತ್ತದೆ. ನಾವು ಇವೆಲ್ಲವೂ ಅರಿತು ಜೀವನದ ಹಾದಿಯಲ್ಲಿ ಮುಂದೆ ಬರಬೇಕು ಎಂದು ಹೇಳಿದ್ದಾರೆ. . ಜೊತೆಗೆ ಮೋದಿ ಅವರು ಟ್ವೀಟ್ ಮಾಡಿ ಶ್ರೀಗಳ ಜೊತೆಗೆ ತೆಗಿಸಿಕೊಂಡ ಒಂದು ಭಾವಚಿತ್ರವನ್ನು ಕೂಡ ಹಾಕಿದ್ದಾರೆ.

ಈ ದಿನ ಮಹತ್ವಪೂರ್ಣವಾದ ದಿನ ಎಂದೇ ನಾನು ಭಾವಿಸಿದ್ದೇನೆ ಎಂದು ಮೋದಿ ಅವರು ಟ್ವಿಟ್ಟರ್ ಅಲ್ಲಿ ಬರೆದುಕೊಂಡಿದ್ದಾರೆ

ಭಾವಚಿತ್ರದ ಜೊತೆಗೆ ಕನ್ನಡದಲ್ಲಿ ಬರೆದ ಒಂದು ಸಂದೇಶ ಕೂಡ ಕಂಗೊಳಿಸುತ್ತಿದೆ. ಈ ದಿನ ಮಹತ್ವ ಪೂರ್ಣವಾದ ದಿನವೆಂದೇ ನಾನು ಭಾವಿಸಿದ್ದೇನೆ ಎಂದು ಹೇಳಿದ್ದಾರೆ.. ಶ್ರೀಗಳ ಮಾರ್ಗದರ್ಶನದಲ್ಲಿ ನಾವು ನಡೆದರೆ ಯಶಸ್ಸು ನಮಗೆ ಕಟ್ಟಿಟ ಬುತ್ತಿ,. ಶತ ಕೋಟಿ ಜನರನ್ನು ಉದ್ದರಿಸಿದವರು. ಈ ದಿನ ಸ್ವಾಮೀಜಿಯವರನ್ನು ನಾವು ಸ್ಮರಿಸಲೇಬೇಕು, ಆದೇಷ್ಟೂ ಯುವಕರಿಗೆ, ನಾಗರಿಕರಿಗೆ ಸ್ಪೂರ್ತಿ ಆಗಿದ್ದಾರೆ ಎಂದು ಮೋದಿ ಅವರು ಸ್ವಾಮೀಜಿ ಅವರನ್ನು ನೆನೆಯುತ್ತಾ ತಮ್ಮ ಮನದಾಳದ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.

ಅಮಿತ್ ಷಾ ಕೂಡ ಶ್ರೀಗಳ ಸ್ಮರಿಸುತ್ತಾ ಕನ್ನಡದಲ್ಲೇ ಟ್ವೀಟ್ ಮಾಡಿದ್ದಾರೆ

ಶ್ರೀಗಳ ಆರಧಾಕರು ಲಕ್ಷಾಂತರ ಜನರು ಇದ್ದಾರೆ. ಮೋದಿ ಬಳಿಕ ಅಮಿತ್ ಷಾ ಕೂಡ ಶ್ರೀಗಳ ಸ್ಮರಿಸುತ್ತಾ ಕನ್ನಡದಲ್ಲೇ ಟ್ವೀಟ್ ಮಾಡಿದ್ದಾರೆ. ನಮ್ಮ ಹೃದಯದಲ್ಲಿ ನೆಲೆಸಿರುವ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ್ ಸ್ವಾಮಿಗಳ 112 ನೇ ಜಯಂತಿ ಇಂದು. ಶ್ರೀಗಳ ಜನ್ಮ ದಿನದ ಸಂದರ್ಭದಲ್ಲಿ ಭಕ್ತಿ ಪೂರ್ವಕವಾಗಿ ಅವರ ಸೇವೆಯನ್ನು ಸ್ಮರಿಸುತ್ತೇನೆ. ಲಕ್ಷಾಂತರ ಜನರ ಬಾಳಿಗೆ ಬೆಳಕಾಗಿದ್ದ ಶ್ರೀಗಳ ನಡೆ, ನುಡಿ ನಮ್ಮಂಥ ಲಕ್ಷಾಂತರ ಮಂದಿಗೆ ಆದರ್ಶ, ಮಹಾನ್ ಚೇತನಕ್ಕೆ ಶರಣು ಶರಣಾರ್ಥಿ ಎಂದು ಟ್ವಿಟ್ಟರ್ ಅಲ್ಲಿ ಬರೆದುಕೊಂಡಿದ್ದಾರೆ.

 

ಇಂದು ಮಕ್ಕಳಿಗೆ ಉಚಿತವಾಗಿ ಯೋಗಾಸನ ಹಾಗೂ ಪ್ರಾಣಾಯಾಮವನ್ನು ಪತಂಜಾಲಿ ಯೋಗ ಸಂಸ್ತೆಯವರು ಹೇಳಿಕೊಟ್ಟಿದ್ದಾರೆ ಹಾಗೂ ಕ್ರಿಶ್ ಆರ್ಟ್ಸ್ ಅವರು ಶ್ರೀಗಳ ಪ್ರತಿಮೆಯನ್ನು ತಯಾರಿಸಿ ಮಠಕ್ಕೆ ಹಸ್ತಾಂತರಿಸಿದ್ದಾರೆ

ಸ್ವಾಮೀಜಿ ಅವರ ಜಯಂತಿಯ ಅಂಗವಾಗಿ, ಇಂದು ಮಕ್ಕಳಿಗೆ ಉಚಿತವಾಗಿ ಯೋಗಾಸನ ಹಾಗೂ ಪ್ರಾಣಾಯಾಮವನ್ನು ಪತಂಜಾಲಿ ಯೋಗ ಸಂಸ್ಥೆಯವರು ಹೇಳಿಕೊಟ್ಟಿದ್ದಾರೆ. ಬೆಂಗಳೂರಿನ ಕ್ರಿಶ್ ಆರ್ಟ್ಸ್ ಅವರು ಶ್ರೀಗಳ ಪ್ರತಿಮೆಯನ್ನು ಸ್ವತಃ ತಾವೇ ತಯಾರಿಸಿ ಮಠಕ್ಕೆ ಕೊಡುಗೆ ಆಗಿ ನೀಡಿದ್ದಾರೆ. ಮೊದಲು ಪ್ರತಿಮೆಯನ್ನು ಮಣ್ಣಿನಲ್ಲಿ ಮಾಡಲಾಗಿದೆ, ಆನಂತರ ಫೈಬರ್ ನಲ್ಲಿ ತಯಾರಿಸಲಾಗಿದೆ. ದೂರದ ಊರಿನಿಂದ ಆಗಮಿಸಿದ ಭಕ್ತಾದಿಗಳಿಗೆ ಮಠದ ಆವರಣದಲ್ಲಿ ಎಂಟು ಜಾಗದಲ್ಲಿ ಪ್ರಸಾದ ಹಂಚುವ ವ್ಯವಸ್ಥೆ ಮಾಡಿದ್ದಾರೆ. ಶ್ರೀಗಳ ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಬಂದು ಶಿವಕುಮಾರ್ ಸ್ವಾಮೀಜಿ ಅವರ ಭಾವಚಿತ್ರಕ್ಕೆ ನಮಸ್ಕರಿಸಿ ಪುನೀತರಾಗಿದ್ದಾರೆ.

LEAVE A REPLY

Please enter your comment!
Please enter your name here