ಬೆಂಗಳೂರಿನಲ್ಲಿ ಈ ಬಿರಿಯಾನಿಗೋಸ್ಕರ ಜನರು ಮುಗಿಬೀಳ್ತಾರೆ.

0
2380
shivaji military hote

ಆಹಾ ಊಟ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದ್ರಲ್ಲೂ ಮಾಂಸದೂಟ ಅಂದ್ರೆ ಬಾಯಲ್ಲಿ ನೀರು ಬರುತ್ತೆ. ನಮ್ಮಲ್ಲಿ ಮಾಂಸದೂಟ ಅಂದ್ರೆ, ಇಷ್ಟ ಪಡೋ ಜನರು ತುಂಬಾ ಇದಾರೆ. ಅದ್ರಲ್ಲೂ ಇಷ್ಟವಾದ ಬಿರಿಯಾನಿ ಕಬಾಬ್ ಅಂದ್ರೆ ಕೇಳ್ಬೇಕಾ. ಎಷ್ಟು ದೂರ ಆದ್ರೂ ಪರವಾಗಿಲ್ಲ ಅಂತ ಹೋಗ್ತಾರೆ. ಹೌದು ನಮ್ಮ ಜನರಿಗೆ ಒಂದು ಕಡೆ ಊಟ ಇಷ್ಟ ಆಯಿತು ಅಂದ್ರೆ ಸಾಕು, ಆ ಜಾಗ ಎಷ್ಟೇ ದೂರ ಇದ್ರೂ ಹೋಗಿ, ತಿಂದು ಬರ್ತಾರೆ. ಯಾಕಂದ್ರೆ ಅಲ್ಲಿನ ರುಚಿ ಬೇರೆಲ್ಲೂ ಸಿಗಲ್ಲ ಅಂತ.
ಇದೆ ರೀತಿ ನಮ್ಮ ರಾಜಧಾನಿಯಲ್ಲೂ ಕೂಡ ಒಂದು ಹೋಟೆಲ್ ಇದೆ. ಈ ಹೋಟೆಲ್ ನಲ್ಲಿ ಮಾಡೋ ಅಡಿಗೆ ಅಂದ್ರೆ ಎಲ್ಲರಿಗು ಪ್ರಾಣ. ಇಲ್ಲಿ ಊಟ ತಗೋಳೋಕೆ ಅಂತ ಬೆಳಿಗ್ಗೆನೆ ಬಂದು ಕಾಯೋ ಅಂತ ಜನರು ಸಾಕಷ್ಟಿದ್ದಾರೆ. ಹಾಗಾದ್ರೆ ಆ ಹೋಟೆಲ್ ಯಾವ್ದು ಅಂತ ತಿಳಿಸ್ತೀವಿ ನೀವೇ ನೋಡಿ.

ಶಿವಾಜಿ ಮಿಲಿಟರಿ ಹೋಟೆಲ್

ಮಿಲಿಟರಿ ಹೋಟೆಲ್ ಹೆಸರನ್ನು ನೀವು ಕೇಳಿರುವಿರಿ. ಬಹುತೇಕರಿಗೆ ಮಿಲಿಟ್ರಿ ಹೋಟೆಲ್‌ನಲ್ಲಿ ಊಟ ಮಾಡೋದಂದ್ರೆ ತುಂಬಾನೇ ಇಷ್ಟವಾಗುತ್ತದೆ. ಬೆಂಗಳೂರಿನಲ್ಲಿರುವ ಶಿವಾಜಿ ಮಿಲಿಟರಿ ಹೋಟೆಲ್‌ಗೆ ದೊಡ್ಡ ಚರಿತ್ರೆಯೇ ಇದೆ. ಮರಾಠ ಯೋಧರಿಗೆ ಮಾಂಸಾಹಾರವನ್ನು ತಯಾರಿಸಿ ಬಡಿಸುತ್ತಿದ್ದ ಗೋವಿಂದ ರಾವ್ ಹಾಗೂ ಲಕ್ಷಣ ರಾವ್ ಎನ್ನುವವರು ಈ ಮಿಲಿಟರಿ ಹೋಟೆಲ್‌ನ್ನು ಪ್ರಾರಂಭಿಸಿದರು. ಈ ಹೋಟೆಲ್‌ನಲ್ಲಿ ಭೋಜನ ಬಹಳ ರುಚಿಕರವಾಗಿರುತ್ತದೆಯೆಂದು ಸಾಕಷ್ಟು ಜನರು ಇಲ್ಲಿಗೆ ಆಗಮಿಸುತ್ತಾರೆ.

ಈ ಹೋಟೆಲ್‌ನ್ನು 1930ರಲ್ಲಿ ಬೆಂಗಳೂರಿನಲ್ಲಿ ಲಕ್ಷಣ ರಾವ್ ಎನ್ನುವವರು ಪ್ರಾರಂಭಿಸಿದರು. ಆಗ ಇವರದು ಒಂದು ಚಿಕ್ಕ ಹೋಟೆಲ್ ಆಗಿತ್ತು. ಆದರೆ ಇವರ ಕೈ ರುಚಿಗೆ ಜನರು ಎಲ್ಲೆಲ್ಲಿಂದಲೋ ಜನ ಬರೋಕೆ ಶುರು ಮಾಡಿದ್ರು. ಆಗಿಂದ ಇವರ ಹೋಟೆಲ್ ತುಂಬಾ ಫೇಮಸ್ ಆಯಿತು. ಪ್ರಸ್ತುತ ಅವರ ಮಗ ಈ ಹೋಟೆಲ್‌ನ್ನು ನಡೆಸುತ್ತಿದ್ದಾರೆ.

ತಲೆ ಮಾಂಸ

ಹುಡುಗರಿಗೆ ಹೆಚ್ಚಾಗಿ ಕುರಿ ಮಾಂಸ ತುಂಬಾ ಇಷ್ಟ ಆಗುತ್ತೆ. ತಲೆ ಮಾಂಸ ಅಂದ್ರೆ ಅವರಿಗೆ ಬಾಯಲ್ಲಿ ನೀರು ತರಿಸುತ್ತೆ. ಅದ್ರಲ್ಲೂ ಇಲ್ಲಿ ಮಾಡೋ ತಲೆ ಮಾಂಸ ಅಂತೂ ಎಲ್ಲಾ ರುಚಿಯನ್ನೂ ಮೀರಿಸುತ್ತೆ. ಈ ಹೋಟೆಲ್ ನಲ್ಲಿ
ತಲೆ ಮಾಂಸ ಹಾಗೂ ಖೀಮಾ ಬಹಳ ರುಚಿಕರವಾಗಿರುತ್ತದೆ. ಬೇಜಾಪ್ರೈ, ಬೋಟಿ ಮಸಾಲಕ್ಕೆ ಸಾಕಷ್ಟು ಡಿಮ್ಯಾಂಡ್ ಇದೆ. ಇದನ್ನ ತಿನ್ನಲ್ಲು ಜನರು ಎಲ್ಲೆಲ್ಲಿಂದಲೋ ಬರುತ್ತಾರೆ.

ಬಿರಿಯಾನಿ ಅಡ್ಡಾ

ಈ ಹೋಟೆಲ್ ನಲ್ಲಿ ತುಂಬಾ ಫೇಮಸ್ ಅಂದ್ರೆ ಬಿರಿಯಾನಿ. ಇಲ್ಲಿನ ಬಿರಿಯಾನಿ ಎಲ್ಲಾ ಹೋಟೆಲ್ ಗಳ ರುಚಿಯನ್ನ ಮೀರಿಸುತ್ತೆ. ಬೆಳಗ್ಗೆ ಆದ ಕೂಡಲೇ, ಇಲ್ಲಿನ ಬಿರಿಯಾನಿ ಗಗಿ ಜನರು ಸಾಲುಗಟ್ಟಿ ನಿಂತಿರುತ್ತಾರೆ. ಅದ್ರಲ್ಲೂ ಇಲ್ಲಿ ಬಿರಿಯಾನಿ ತಗೋಳೋಕೆ ಅಂತ ಬರೋರು, ಒಂದು, ಎರಡು ಪಾರ್ಸಲ್ ತಗೊಂಡ್ ಹೋಗಲ್ಲ. 20-30ಈ ರೀತಿ ಪಾರ್ಸಲ್ ತಗೊಂಡ್ ಹೋಗ್ತಾರೆ. ಇಲ್ಲಿ ಸರಿಯಾಗಿ ಬಿರಿಯಾನಿ ಮಧ್ಯಾಹ್ನ 12.30 ರ ಸಮಯಕ್ಕೆ ರೆಡಿಯಾಗಿರುತ್ತೆ. ಆ ಟೈಮ್ ಅಲ್ಲಿ ರೆಡಿಯಾದ ಬಿರಿಯಾನಿ ಸುಮಾರು 1.30ರ ಸಮಯಕ್ಕೆ ಖಾಲಿಯಾಗಿರುತ್ತೆ. ಯಾಕಂದ್ರೆ ಈ ಬಿರಿಯಾನಿ ಮುಂದೆ ಬೇರ್ಯಾವ ರುಚಿಯೂ ಜನರಿಗೆ ಕಾಣಲ್ಲ. ಹಾಗಾಗಿ ಇಲ್ಲಿಗೆ ಬಂದವರು ಮೊದಲು ಕೇಳೋದೇ ಬಿರಿಯಾನಿ.

ಜಯನಗರ ಹೋಟೆಲ್ ತುಂಬಾ ಫೇಮಸ್

ಇವರ ಹೋಟೆಲ್ ಗಳು ಸುಮಾರು ಕಡೆ ಇವೆ. ಬನಶಂಕರಿ, ಕಾಟನ್ ಪೇಟೆ, ಜಯನಗರ, ಮಲ್ಲೇಶ್ವರಂ ಹಾಗು ಇನ್ನಿತರ ಕಡೆ ಇವರ ಮಿಲಿಟರಿ ಹೋಟೆಲ್ ಗಳಿವೆ. ಆದ್ರೆ ಇವರ ಜಯನಗರ ಹೋಟೆಲ್ ಇವುಗಳಲ್ಲಿ ತುಂಬಾ ಫೇಮಸ್. ಯಾಕಂದ್ರೆ ಇವರು ಮೊದಲು ಶುರು ಮಾಡಿದ್ದೆ ಜಯನಗರದಲ್ಲಿ. ಹಾಗಾಗಿ ಇಲ್ಲಿಗೆ ಜನರು ಹೆಚ್ಚಾಗಿ ಬರುತ್ತಾರೆ. ಚಿಕನ್ ಲೆಗ್‌ ಫ್ರೈ, ಮಟನ್ ಫ್ರೈ ಕೂಡಾ ತುಂಬಾನೇ ಫೇಮಸ್. ಇದು ಜಯನಗರದ ೮ನೇ ಬ್ಲಾಕ್ ೪೫ ಕ್ರಾಸ್‌ನಲ್ಲಿ ಇದೆ.ಇಲ್ಲಿ ಬೆಳಗ್ಗೆ 8 ಗಂಟೆಯಿಂದ ಸಂಜೆ3.30ರವರೆಗೆ ಊಟ ಸಿಗುತ್ತದೆ.

ನಿಜಕ್ಕೂ ಈ ಶಿವಾಜಿ ಮಿಲಿಟರಿ ಹೋಟೆಲ್ ಊಟ ಬೆಂಗಳೂರಿನ ಜನರಿಗೆ ಬಲು ಅದ್ಭುತವಾಗಿದೆ. ನೀವು ಇಲ್ಲಿನ ಊಟದ ರುಚಿ ಸವಿಯಬೇಕೆ. ಹಾಗಾದ್ರೆ ಈಗಲೇ ಶಿವಾಜಿ ಮಿಲಿಟರಿ ಹೋಟೆಲ್ ಗೆ ಭೇಟಿ ನೀಡಿ, ಇಲ್ಲಿನ ಅದ್ಬುತ ರುಚಿಯನ್ನ ಸವಿಯಿರಿ.

LEAVE A REPLY

Please enter your comment!
Please enter your name here