ಡಾಕ್ಟರೇಟ್ ಗೌರವ ಪಡೆದುಕೊಂಡ ಬಾಲಿವುಡ್ ಸ್ಟಾರ್ ಶಾರುಖ್ ಖಾನ್

0
343
sharuk khan

ಸಾಧನೆ ಅನ್ನೋದು ಯಾರ ಮನೆ ಆಸ್ತಿಯು ಅಲ್ಲ. ಸಾಧನೆ ಅನ್ನೋದನ್ನು ಯಾರು ಬೇಕಾದರೂ ಸಾಧಿಸಬಹುದು. ಹೌದು. ಸಾಧನೆ ಅನ್ನೋದನ್ನು ಸಾಧಿಸುವ ಛಲವಿರಬೇಕು. ಆ ಛಲವೊಂದಿದ್ದರೆ, ಯಾರು ಯಾವ ಸಾಧನೆ ಬೇಕಾದ್ರು ಮಾಡಬಹುದು. ಆದರೆ ಅದಕ್ಕೆ ಬಹಳಷ್ಟು ಪರಿಶ್ರಮ ಪಡಬೇಕು. ಇನ್ನು ಸಾಧನೆ ಅನ್ನೋದು ಇಂಥ ವಿಷಯಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಬದಲಿಗೆ ಒಬ್ಬೊಬ್ಬರಿಗೂ ಅವರದ್ದೇ ಆದ ಮುಖ್ಯ ವಿಷಯದ ಬಗ್ಗೆ ಗೆಲುವು ಸಾಧಿಸಿದರೆ ಅದೇ ಅವರಿಗೆ ಸಾಧನೆ. ಅದೇ ರೀತಿ ನಮ್ಮಲ್ಲಿ ಸಿನಿಮಾ, ಕ್ರೀಡೆ, ಹೀಗೆ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿ, ಪ್ರಶಸ್ತಿ ಪಡೆದವರಿದ್ದಾರೆ. ಆದರೆ ಸಿನಿಮಾ ರಂಗದಲ್ಲಿ ಡಾಕ್ಟರೇಟ್ ಅನ್ನೋದು ಅಷ್ಟು ಸುಲಭವಾಗಿ ಸಿಗುವುದಿಲ್ಲ. ಯಾಕಂದ್ರೆ ಅದಕ್ಕೆ ಅದರದ್ದೇ ಆದ ಗೌರವವಿದೆ. ಹಾಗಾಗಿ ಸಿನಿಮಾ ರಂಗದಲ್ಲಿ ಸಾಧನೆ ಮಾಡಿದವರಿಗೆ ಡಾಕ್ಟರೇಟ್ ನೀಡಿ ಗೌರವಿಸಲಾಗುತ್ತದೆ. ಈಗ ಈ ಡಾಕ್ಟರೇಟ್ ಅನ್ನು ಬಾಲಿವುಡ್ ನ ಬಾದ್ ಶಾ ಪಡೆದುಕೊಂಡಿದ್ದಾರೆ.

ಡಾಕ್ಟರೇಟ್ ಪಡೆದ ಬಾಲಿವುಡ್ ಬಾದ್ ಶಾ

ಬಾಲಿವುಡ್ ನ ಕಿಂಗ್ ಆಫ್ ಬಾಲಿವುಡ್, ಕಿಂಗ್ ಖಾನ್, ಬಾದ್ ಶಾ ಎಂದೆಲ್ಲ ಕರೆಸಿಕೊಳ್ಳುವ ಶಾರೂಖ್ ಖಾನ್, ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಶಾರುಖ್ ಖಾನ್ ಅಂದ್ರೆ ಎಲ್ಲರಿಗು ಇಷ್ಟ. ಬಾಲಿವುಡ್ ನಲ್ಲಿ ಸಾಕಷ್ಟು ಸಿನಿಮಾಗಳನ್ನು ನೀಡುವುದರ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಇನ್ನು ಶಾರುಖ್ ಖಾನ್ ತಾವು ನಟಿಸಿರುವ ಸಿನಿಮಾಗಳಿಂದ ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಆದ್ರೆ ಅವರಿಗಿದ್ದ ಒಂದೇ ಒಂದು ಆಸೆ ಅಂದ್ರೆ ಅದು ಡಾಕ್ಟರೇಟ್ ಪಡೆಯೋದು. ಈಗ ಆ ಆಸೆಯನ್ನು ಸಹ ಈಡೇರಿಸಿಕೊಂಡಿದ್ದಾರೆ. ಹೌದು. ಆಸ್ಟ್ರೇಲಿಯದ ಮೆಲ್ಬೋರ್ನ್ ನಲ್ಲಿರುವ ‘ಲಾ ಟ್ರೋಬ್ ವಿಶ್ವವಿದ್ಯಾಲಯ’ ಭಾರತೀಯ ನಟ ಶಾರೂಖ್ ಖಾನ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ಶಾರುಖ್ ಖಾನ್ ಅವರು ನೀಡಿರುವ ಕೊಡುಗೆಗೆ ಲಭಿಸಿರುವ ಡಾಕ್ಟರೇಟ್

ಹೊರಗಿನ ಜನರಿಗೆ ಶಾರುಖ್ ಖಾನ್ ಅವರು ಒಬ್ಬ ನಟ ಅನ್ನೋದು ಮಾತ್ರ ಗೊತ್ತು. ಆದ್ರೆ ಅವರು ನಟನಾಗಿ ಹೆಚ್ಚು ಶ್ರಮ ಪಟ್ಟಿರುವುದಕ್ಕಿಂತ, ಸಾಮಾಜಿಕ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಹೌದು. ಮೀರ್ ಫೌಂಡೇಶನ್ ಮೂಲಕ ಬಡಮಕ್ಕಳು, ಮಹಿಳೆಯರ ಸಬಲೀಕರಣದ ಹೋರಾಟ ಮತ್ತು ಭಾರತ ಚಿತ್ರರಂಗಕ್ಕೆ ಶಾರುಖ್ ಖಾನ್ ನೀಡಿರುವ ಕೊಡುಗೆಯನ್ನ ಪರಿಗಣಿಸಿ ಲಾ ಟ್ರೋಬ್ ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿದೆ. ಹೌದು. ಶಾರುಖ್ ಖಾನ್ ಮಹಿಳೆಯರಿಗೋಸ್ಕರ ಹಲವಾರು ಹೋರಾಟಗಳನ್ನು ಮಾಡಿದ್ದಾರೆ. ಹಾಗಾಗಿ ಅವರಿಗೆ ಈ ಡಾಕ್ಟರೇಟ್ ನೀಡಿಲಾಗಿದೆ.

ಶಾರೂಖ್ ಹೆಸರಿನಲ್ಲಿ ಸ್ಕಾಲರ್ ಶಿಪ್ ನೀಡುವುದಾಗಿ ಘೋಷಣೆ

ಇನ್ನು ಶಾರುಖ್ ಅವರಿಗೆ ಡಾಕ್ಟರೇಟ್ ನೀಡುವುದರ ಜೊತೆಗೆ, ಅವರ ಹೆಸರಿನಲ್ಲಿ ಸ್ಕಾಲರ್ ಶಿಪ್ ನೀಡುವುದಾಗಿ ಘೋಷಿಸಿದ್ದಾರೆ. ಹೌದು. ಸಂಶೋಧನ ವಿಭಾಗದಲ್ಲಿ ಆಯ್ಕೆಯಾಗುವ ಮಹಿಳಾ ಅಭ್ಯರ್ಥಿಗಳಿಗೆ ನಾಲ್ಕು ವರ್ಷಕ್ಕೆ ಧನಸಹಾಯ ಮಾಡುವುದಾಗಿ ಪ್ರಕಟಿಸಿದ್ದಾರೆ. ಇನ್ನು ಈ ಬಗ್ಗೆ ಶಾರುಖ್ ಅವರು ಮಾತನಾಡಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ. ಹೌದು. ಮಹಿಳಾ ಸಬಲೀಕರಣ ಮತ್ತು ಮಹಿಳಾ ಸಮಾನತೆ ದೃಷ್ಟಿಯಿಂದ ಈ ವಿದ್ಯಾರ್ಥಿವೇತನ ನೀಡುತ್ತಿರುವುದು ನನಗೆ ಸಂತಸ ತಂದಿದೆ. ಇದಕ್ಕಾಗಿ ಲಾ ಟ್ರೋಬ್ ವಿಶ್ವವಿದ್ಯಾಲಯಕ್ಕೆ ಹೃದಯಪೂರ್ವಕ ಧನ್ಯವಾದ ತಿಳಿಸುತ್ತೇನೆ” ಎಂದು ಶಾರೂಖ್ ಖಾನ್ ತಿಳಿಸಿದ್ದಾರೆ.

ಒಟ್ಟಿನಲ್ಲಿ ಬಾಲಿವುಡ್ ನ ಬಾದ್ ಶಾ ಶಾರುಖ್ ಖಾನ್ ಅವರು ಸಿನಿಮಾ ಹೊರತುಪಡಿಸಿ, ಇನ್ನಿತರ ಉತ್ತಮ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ಎಷ್ಟರ ಮಟ್ಟಿಗೆ ತೊಡಗಿಸಿಕೊಂಡಿದ್ದಾರೆ ಅನ್ನೋದಕ್ಕೆ ಈ ಡಾಕ್ಟರೇಟ್ ಪ್ರಶಸ್ತಿಯೇ ಉದಾಹರಣೆಯಾಗಿದೆ. ಮುಂದಿನ ದಿನಗಳಲ್ಲೂ ಇದೇ ರೀತಿ ಮಹಿಳಾ ಸಬಲೀಕರಣಕ್ಕಾಗಿ ಶಾರುಖ್ ಖಾನ್ ಅವರು ಹೋರಾಡಲಿ ಎಂದು ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here