ಕೈಯಲ್ಲಿ ಬಿಡಿಗಾಸು ಇಲ್ಲದಿದ್ದಾಗ ಶಂಕರ್ ನಾಗ್ ಮಾಡುತ್ತಿದ್ದ ಕೆಲಸದ ಬಗ್ಗೆ ಗುಟ್ಟನ್ನು ಬಿಚ್ಚಿಟ್ಟ ಜೈ ಜಗದೀಶ್

0
1001

ಕರಾಟೆ ಕಿಂಗ್ ಶಂಕರ್ ನಾಗ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಶಂಕರ್ ನಾಗ್ ಅಂದ್ರೆ ಪ್ರತಿಯೊಬ್ಬರಿಗೂ ಇಷ್ಟ. ಅವರು ನಮ್ಮನ್ನು ಆಗಲಿ ೩ ದಶಕಗಳು ಕಳೆದರು, ಜನರು ಮಾತ್ರ ಅವರನ್ನು ಇನ್ನು ಮರೆತಿಲ್ಲ. ಮರೆಯಲು ಸಾಧ್ಯವೂ ಇಲ್ಲ. ಯಾಕಂದ್ರೆ ತಮ್ಮ ನಟನೆ ಹಾಗು ಖಡಕ್ ಡೈಲಾಗ್ ಗಳ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಇನ್ನು ಅವರ ಮಾಲ್ಗುಡಿ ಡೇಸ್ ಧಾರವಾಹಿ ಮಾತ್ರ, ಈಗಲೂ ಎಲ್ಲರ ಕಣ್ಣಿಗೆ ಕಣ್ಣಿದಂತಿದೆ. ಇಂತಹ ನಟ ಎಲ್ಲರಿಂದ ಅಗಲಿದಾಗ ಬಹಳಷ್ಟು ನೋವಾಗಿತ್ತು. ಜೊತೆಗೆ ಅವರ ಸಾವು ಸ್ಯಾಂಡಲ್ ವುಡ್ ಗೆ ತುಂಬಲಾರದ ನಷ್ಟವಾಗಿತ್ತು. ಆದ್ರೆ ಅವರು ನಮ್ಮನ್ನು ಅಗಲಿದರು, ಅವರ ಬಗೆಗಿನ ಮಾತುಗಳು ಮಾತ್ರ ಕಡಿಮೆ ಆಗಿಲ್ಲ. ಅದಕ್ಕೆ ಸಾಕ್ಷಿ ಈಗ ಬಿಗ್ ಬಾಸ್ ಮನೆಯಾಗಿದೆ. ಹೌದು. ಬಿಗ್ ಬಾಸ್ ಮನೆಯಲ್ಲಿ ಯಾವುದಾದ್ರೂ ಒಂದು ನೆಪದಿಂದ ಶಂಕರ್ ನಾಗ್ ಅವರ ಹೆಸರು ಕೇಳಿಬರುತ್ತಿದ್ದು, ಈ ಬಾರಿ ನಟ ಜೈ ಜಗದೀಶ್, ಶಂಕರ್ ನಾಗ್ ಅವರ ಬಗೆಗಿನ ಒಂದು ರೋಚಕ ಸಂಗತಿಯನ್ನ್ಯು ಹೊರ ಹಾಕಿದ್ದಾರೆ.

3 ವರ್ಷ ಯಾವುದೇ ಸಿನಿಮಾಗಳಿಲ್ಲದೆ ಶಂಕರ್ ನಾಗ್ ಒದ್ದಾಡಿದ್ದರು

ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಸದಾಕಾಲ ಶಂಕರ್ ನಾಗ್ ಅವರ ಹೆಸರು ಕೇಳಿಬರುತ್ತಲೇ ಇರುತ್ತದೆ. ಹೌದು. ನಟ ಜೈ ಜಗದೀಶ್, ಶಂಕರ್ ನಾಗ್ ಅವರ ಬಗೆಗಿನ ಕೆಲವೊಂದು ಮಾತುಗಳನ್ನು ಹೇಳಿದ್ದಾರೆ. ಶಂಕರ್ ನಾಗ್ ಒಬ್ಬ ಸ್ಟಾರ್ ನಟನಾಗಿದ್ದರು, ಆ ಕಾಲಕ್ಕೆ ಕೆಲವು ವರ್ಷ ಸಿನಿಮಾಗಳಿಲ್ಲದೆ ಖಾಲಿ ಕೂತಿದ್ದರು. ಹೌದು. ಶಂಕರ್ ನಾಗ್ ಅವರಿಗೆ ಒಂದು ಕಾಲದಲ್ಲಿ 3 ವರ್ಷಗಳ ವರೆಗೆ ಯಾವುದೇ ಸಿನಿಮಾದಲ್ಲಿ ಚಾನ್ಸ್ ಸಿಕ್ಕದೆ ಬಹಳಷ್ಟು ಕಷ್ಟದಲ್ಲಿ ಜೀವನ ನಡೆಸುತ್ತಿದ್ದರು. ಯಾಕಂದ್ರೆ ಸಿನಿಮಾ ಮಾಡಿದರೆ ಮಾತ್ರ ಅವರಿಗೆ ಹಣ ಸಿಗುತ್ತಿತ್ತು. ಇಲ್ಲ ಅಂದ್ರೆ ಇಲ್ಲ. ಹಾಗಾಗಿ ಅವರು ತಮ್ಮ ಖರ್ಚನ್ನು ತುಂಬಿಕೊಳ್ಳಲು ಒಂದು ಕೆಲಸಕ್ಕೆ ಕೈ ಹಾಕುತ್ತಾರೆ. ಅದೇ, ತಮ್ಮ ವ್ಯಾನ್ ನಲ್ಲಿ ಮೆಟಡೋರ್ ಕ್ಯಾಂಟೀನ್ ಮಾಡಿಕೊಂಡಿದ್ದು.

ವ್ಯಾನ್ ನಲ್ಲಿ ಮೆಟಡೋರ್ ಕ್ಯಾಂಟೀನ್ ಪ್ರಾರಂಭಿಸಿದ ಸಾಂಗ್ಲಿಯಾನ

35 ವರ್ಷಗಳ ಹಿಂದೆ ಶಂಕರ್ ನಾಗ್ ಸಿನಿಮಾದಲ್ಲಿ ಯಾವುದೇ ಚಾನ್ಸ್ ಸಿಕ್ಕದಿದ್ದಾಗ, ಬೇರೆ ದಾರಿ ಇಲ್ಲದೆ ಮೆಟಡೋರ್ ಕ್ಯಾಂಟೀನ್ ಶುರು ಮಾಡಿದ್ದರಂತೆ. ಹೌದು. ಬೆಂಗಳೂರಿನ ಕಬ್ಬನ್ ​ಪಾರ್ಕ್​ನಲ್ಲಿರುವ ಕ್ವೀನ್ಸ್​ ಪ್ರತಿಮೆಯ ಬಳಿ ತಮ್ಮ ವ್ಯಾನ್​ನಲ್ಲಿ ಮೆಟಡೋರ್ ಕ್ಯಾಂಟೀನ್ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದರು ಶಂಕರ್​ನಾಗ್. ಅದರಿಂದಲೇ ಅವರು ಮತ್ತೆ ಆರ್ಥಿಕವಾಗಿ ಅನುಕೂಲಸ್ಥರಾಗಲು ಸಾಧ್ಯವಾಯಿತು. ಕೈಯಲ್ಲಿ ಹಣವಿಲ್ಲದಿದ್ದಾಗ ಯಾರ ಬಳಿಯೂ ಕೇಳದ ಶಂಕರ್​ನಾಗ್ ತಾವೇ ಕ್ರಿಯೇಟಿವ್ ಆಗಿ ಏನಾದರೂ ಯೋಚಿಸಿ ಯಶಸ್ವಿಯಾದ ಹಲವು ಉದಾಹರಣೆಗಳಿವೆ ಎಂದು ಜೈಜಗದೀಶ್ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ನಿಜಕ್ಕೂ ಶಂಕರ್ ನಾಗ್ ಅವರ ಕೆಲವು ವಿಚಾರಗಳನ್ನು ಕೇಳಿದಾಗ ಮನಸ್ಸಿಗೆ ಏನೋ ಒಂದು ರೀತಿ ಸಂತಸವಾಗುತ್ತದೆ. ಜೊತೆಗೆ ನಮ್ಮ ನಾಯಕ ಎಂಬ ಹೆಮ್ಮೆಯೂ ಉಂಟಾಗುತ್ತದೆ. ಯಾಕಂದ್ರೆ ಪರರ ಬಳಿ ಕೈ ಚಾಚಲು ಇಷ್ಟವಿಲ್ಲದ ಶಂಕರ್ ನಾಗ್ ಅವರು, ಕ್ಯಾಂಟೀನ್ ನಡೆಸಿ ತಮ್ಮ ಖರ್ಚನ್ನು ನೋಡಿಕೊಂಡಿರುವುದು ಒಂದು ಕಡೆ ಬೇಸರವಾದರೂ, ಮನಕಲಕುವ ವಿಷಯವಾಗಿದೆ.

LEAVE A REPLY

Please enter your comment!
Please enter your name here